507 ಮನೆಗಳ ಪರಿಹಾರ ವಿತರಣೆ ಕಾರ್ಯ ಪೂರ್ಣ

ಬಂಟ್ವಾಳ ತಾಲೂಕು ನೆರೆ ಪ್ರಕರಣ

Team Udayavani, Sep 10, 2019, 5:42 AM IST

y-28

ಸಾಂದರ್ಭಿಕ ಚಿತ್ರ

ಬಂಟ್ವಾಳ: ತಾಲೂಕಿನಲ್ಲಿ ಕಳೆದ ತಿಂಗಳಿನ ಪ್ರವಾಹದಿಂದ ತೊಂದರೆಗೊಳಗಾದ ಒಟ್ಟು 507 ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ವಿತರಿಸಲಾಗಿದೆ. ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಿಂದ 133 ಮನೆಗಳಿಗೆ ಹಾನಿಯಾದ ಪ್ರಕರಣಗಳನ್ನು ಗುರುತಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪ್ರವಾಹ ಪ್ರದೇಶಗಳ ಅಧ್ಯಯನಕ್ಕಾಗಿ ಬೆಳ್ತಂಗಡಿ ತಾಲೂಕಿಗೆ ಆಗಮಿಸಿದ ಸಂದರ್ಭ, ಪ್ರವಾಹದ ನೀರು ಮನೆಗೆ ನುಗ್ಗಿ ತೊಂದರೆಯಾದವರಿಗೆ ತತ್‌ಕ್ಷಣ 10 ಸಾವಿರ ರೂ.ಗಳ ಪರಿಹಾರ ವಿತರಿಸುವಂತೆ ಆದೇಶಿಸಿದ್ದರು. ಅದರಂತೆ ಬಂಟ್ವಾಳದ 14 ಗ್ರಾಮಗಳ ಒಟ್ಟು 507 ಮನೆಗಳ 2,339 ಮಂದಿ ತೊಂದರೆ ಅನುಭವಿಸಿದ್ದು, ಅಂತಹ ಕುಟುಂಬಗಳಿಗೆ ತತ್‌ಕ್ಷಣ ಪರಿಹಾರ ತಲುಪಿದೆ.

ನೀರು ಬಂದು ತೊಂದರೆ
ಬಂಟ್ವಾಳ ತಾಲೂಕು ಆಡಳಿತ ಹೇಳುವ ಪ್ರಕಾರ, ತತ್‌ಕ್ಷಣದ ಪರಿಹಾರ ಪಡೆ ದಿರುವ ಬಹುತೇಕ ಮನೆ ಗಳಿಗೆ ನೀರು ಬಂದು ತೊಂದರೆಯಾಗಿರುವುದು ಬಿಟ್ಟರೆ ಯಾವುದೇ ರೀತಿಯ ಹಾನಿಯಾಗಿಲ್ಲ. ಹೀಗಾಗಿ ಪ್ರಾಕೃತಿಕ ವಿಕೋಪದಿಂದ ಹಾನಿಯಾಗಿರುವ ಮನೆ ಗಳಿಗೆ ಪರಿಹಾರ ಬಾಕಿ ಇದೆ. ತಾಲೂಕಿನಲ್ಲಿ ಜೂನ್‌ ಅಂತ್ಯ ದವರೆಗೆ ಒಟ್ಟು 91 ಸಣ್ಣಪುಟ್ಟ ಪ್ರಕರಣ ಗಳಿಗೆ 5.06 ಲ.ರೂ. ಪರಿಹಾರ ವಿತರಿಸಲಾಗಿದೆ. ಆದರೆ ಜುಲೈ ತಿಂಗಳ ಕೊನೆಯ ವಾರ ಹಾಗೂ ಆಗಸ್ಟ್‌ ತಿಂಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ.

ಹಾನಿಯಾದ ಮನೆಗಳ ವಿವರ
ಸರಕಾರವು ಪ್ರವಾಹ ಹಾಗೂ ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಮನೆಗಳಿಗೆ ಅದರ ಹಾನಿಯ ಪ್ರಮಾಣದ ಶೇಕಡಾವಾರು ಲೆಕ್ಕಾಚಾರದಲ್ಲಿ ಪರಿಹಾರ ಮೊತ್ತವನ್ನು ನಿಗದಿಪಡಿಸಿದ್ದು, ಶೇ. 15ರಿಂದ ಶೇ. 25 ಮನೆ ಹಾನಿಯಾದವರಿಗೆ 25 ಸಾವಿರ ರೂ., ಶೇ. 75 ವರೆಗೆ ಹಾನಿಯಾದವರಿಗೆ 1 ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಹಾನಿಯಾದವರಿಗೆ 5 ಲಕ್ಷ ರೂ. ಪರಿಹಾರ ಸಿಗಲಿದೆ. ತಾಲೂಕಿನಲ್ಲಿ ಪ್ರಸ್ತುತ ಶೇ. 15 ರಿಂದ ಶೇ. 25 ಹಾನಿಯಾದ 66 ಮನೆಗಳು, ಶೇ. 26ರಿಂದ ಶೇ. 75ರ ವರೆಗೆ ಹಾನಿಯಾದ 46 ಮನೆಗಳು ಹಾಗೂ ಶೇ. 75ರಿಂದ ಶೇ. 100 ಹಾನಿಯಾದ ಒಟ್ಟು 21 ಮನೆಗಳನ್ನು ಗುರುತಿಸಿದ್ದು, ಒಟ್ಟು 133 ಮನೆಗಳಿಗೆ ಹಾನಿಯಾಗಿದೆ ಎಂದು ತಾಲೂಕು ಆಡಳಿತ ವಿವರ ನೀಡುತ್ತದೆ.

ತತ್‌ಕ್ಷಣ ಪರಿಹಾರ ವಿವರ
ಪ್ರವಾಹದಿಂದ ನೀರು ನುಗ್ಗಿ ತೊಂದರೆಗೊಳಗಾದ ಕುಟುಂಬಗಳಿಗೆ ತತ್‌ಕ್ಷಣದ ಪರಿಹಾರ ವಿತರಿಸಲಾಗಿದ್ದು, ಪಾಣೆಮಂಗಳೂರು ಗ್ರಾಮದಲ್ಲಿ 138 ಮನೆಗಳು, ಬಂಟ್ವಾಳ ಕಸ್ಬಾದಲ್ಲಿ 105, ಕಡೇಶ್ವಾಲ್ಯದಲ್ಲಿ 9, ಬರಿಮಾರಿನಲ್ಲಿ 3, ಅಮಾಡಿಯಲ್ಲಿ 17, ಬಂಟ್ವಾಳ ಮೂಡದಲ್ಲಿ 101, ಪುದುವಿನಲ್ಲಿ 15, ಸಜಿಪನಡುವಿನಲ್ಲಿ 27, ಸಜಿಪಮುನ್ನೂರಿನಲ್ಲಿ 8, ಪೆರ್ನೆ/ಬಿಳಿಯೂರಿನಲ್ಲಿ 10, ಮಣಿನಾಲ್ಕೂರಿನಲ್ಲಿ 3, ನಾವೂರಿನಲ್ಲಿ 56, ತುಂಬೆಯಲ್ಲಿ 13 ಹಾಗೂ ಸಜಿಪಮೂಡದಲ್ಲಿ 2 ಮನೆಗಳು ಸಹಿತ ಒಟ್ಟು 507 ಮನೆಗಳಿಗೆ ತಲಾ 10 ಸಾವಿರ ರೂ.ಗಳ ಪರಿಹಾರ ಮೊತ್ತವನ್ನು ನೀಡಲಾಗಿದೆ.

 ಹಾನಿ ವಿವರ ದಾಖಲೀಕರಣ
ತಾಲೂಕಿನಲ್ಲಿ ಪ್ರವಾಹ ಬಂದು ತೊಂದರೆಯಾದ 507 ಕುಟುಂಬಗಳಿಗೆ ಪರಿಹಾರ ಮೊತ್ತ ಹಾಗೂ ಕಿಟ್‌ ವಿತರಣೆ ನಡೆದಿದೆ. ಉಳಿದಂತೆ ತಾಲೂಕಿನಲ್ಲಿ ಹಾನಿಯಾದ ಮನೆಗಳ ವಿವರವನ್ನು
ಪೋರ್ಟಲ್‌ಗೆ ದಾಖಲೀಕರಣ ಮಾಡಲಾಗಿದ್ದು, ರಾಜೀವ್‌ ಗಾಂಧಿ ವಸತಿ ನಿಗಮದಿಂದ ಅನುದಾನ ಹಂತ ಹಂತವಾಗಿ ಬಿಡುಗಡೆಯಾಗುತ್ತದೆ.
 -ರಶ್ಮಿ ಎಸ್‌.ಆರ್‌., ತಹಶೀಲ್ದಾರ್‌, ಬಂಟ್ವಾಳ

  ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.