ಕಡೆಗೋಳಿ: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ
Team Udayavani, May 18, 2022, 5:55 PM IST
ಬಂಟ್ವಾಳ: ಫರಂಗಿಪೇಟೆ ಸಮೀಪದ ಕಡೆಗೋಳಿ ದ್ವಾರದ ಬಳಿ ಯುವಕನೋರ್ವ ಬೈಕನ್ನು ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಮೂವರು ಯುವಕರು ಆಗಮಿಸಿ ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ ಘಟನೆ ಮೇ 17ರಂದು ನಡೆದಿದೆ.
ತುಂಬೆ ಗ್ರಾಮದ ರೊಟ್ಟಿಗುಡ್ಡೆ ನಿವಾಸಿ ನಫಿಲ್(18) ಹಲ್ಲೆಗೊಳಗಾದ ಯುವಕ. ಅವರು ಮೇ 17ರಂದು ರಾತ್ರಿ 11ರ ಸುಮಾರಿಗೆ ಕೂಲಿ ಕೆಲಸ ಮುಗಿಸಿಕೊಂಡು ಫರಂಗಿಪೇಟೆಯಿಂದ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮೊಬೈಲ್‌ಗೆ ಕರೆ ಬಂದ ಹಿನ್ನೆಲೆಯಲ್ಲಿ ಕಡೆಗೋಳಿ ದ್ವಾರದ ಬಳಿ ಬೈಕನ್ನು ನಿಲ್ಲಿಸಿ ಮೊಬೈಲ್ ಮಾತನಾಡುತ್ತಿದ್ದರು.
ಆ ವೇಳೆ ಕಡೆಗೋಳಿ ಪರಿಸರದ ಮೂವರು ಯುವಕರು ಬಂದು ಮೊಬೈಲ್ ಎಳೆಯಲು ನೋಡಿ ಬೈದರಿಕೆ ಒಡ್ಡಿ ಪಕ್ಕದ ಅಂಗಡಿಯ ಬಳಿಗೆ ಕರೆದುಕೊಂಡು ಹೋಗಿ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಯುವಕರು ತುಳುವಿನಲ್ಲಿ ಬೈದಿದ್ದು, ಮುಂದೆ ನೋಡಿದರೆ ಅವರನ್ನು ಗುರುತಿಸುತ್ತೇನೆ ಎಂದು ನಫಿಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಂಗಳೂರು: ಗುಡ್ಡ ಕುಸಿದು ಮನೆಗಳಿಗೆ ಹಾನಿ; 5 ಮನೆಯವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ
ಮಾಡು ಇಲ್ಲವೇ ಮಡಿ: ವಿರಾಟ್ ಕೊಹ್ಲಿಗೆ ಎರಡೇ ಪಂದ್ಯಗಳ ಗಡುವು ನೀಡಿದ ಬಿಸಿಸಿಐ!
ಉಡುಪಿ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲು
ಮೂರು ದಿನವಾದರೂ ಪತ್ತೆಯಾಗಿಲ್ಲ ಕೊಚ್ಚಿಹೋದ ಚಿಕ್ಕಮಗಳೂರಿನ ಬಾಲಕಿ ಸುಪ್ರೀತ