ಮಹಾಮಜ್ಜನಕ್ಕೆ ಪಂಚ ಮಹಾವೈಭವದ ಸೊಬಗು!


Team Udayavani, Feb 8, 2019, 12:30 AM IST

d-31.jpg

ಮಸ್ತಕಾಭಿಷೇಕದಲ್ಲಿ  ಬಾಹುಬಲಿಯ ಬಾಲ್ಯ, ಯೌವನ, ಯುದ್ಧ, ತ್ಯಾಗ, ವೈರಾಗ್ಯಗಳನ್ನು ಅನಾವರಣಗೊಳಿಸುವ ಪಂಚ ಮಹಾವೈಭವ ನಡೆಯಲಿದೆ.

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಫೆ. 9ರಿಂದ 18ರ ವರೆಗೆ ನಡೆಯುವ ಚತುರ್ಥ ಮಹಾಮಸ್ತಕಾಭಿಷೇಕವು ಪಂಚ ಮಹಾವೈಭವ ಎಂಬ ಐತಿಹಾಸಿಕ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಗಲಿದೆ. ಬಾಹುಬಲಿಯ ಪಾವನ ಚರಿತೆಯನ್ನು ವಿವರಿಸುವ ಧಾರ್ಮಿಕ ಕಲಾವೈಭವದಲ್ಲಿ 300 ಕಲಾವಿದರು ಭಾಗಿಯಾಗಲಿದ್ದಾರೆ.

ಮಸ್ತಕಾಭಿಷೇಕ ಸಂದರ್ಭ ತೀರ್ಥಂಕರರ ಪಂಚಕಲ್ಯಾಣ ನಡೆಸುವುದು ಸಂಪ್ರದಾಯ. ಆದರೆ ಈ ಬಾರಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಕಲ್ಪನೆಯಂತೆ ಅವರ ಒಪ್ಪಿಗೆ ಪಡೆದು ಬಾಹುಬಲಿಯ ಜೀವನ ವಿಶೇಷಗಳಾದ ಬಾಲ್ಯ, ಯೌವನ, ಯುದ್ಧ, ತ್ಯಾಗ, ವೈರಾಗ್ಯಗಳನ್ನು ಅನಾವರಣಗೊಳಿಸುವ ಪಂಚ ಮಹಾವೈಭವ ನಡೆಯಲಿದೆ.

ಹೇಮಾವತಿ ವೀ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಪ್ರಮುಖರ ತಂಡ ಮೂರು ತಿಂಗಳುಗಳಿಂದ ಇದರ ತಯಾರಿಗೆ ಶ್ರಮಿಸುತ್ತಿದೆ. ಅಭೂತಪೂರ್ವ ಎನ್ನುವಂತೆ ಪಂಚ ಮಹಾವೈಭವ ಫೆ. 11ರಿಂದ 15ರ ವರೆಗೆ ನಡೆಯಲಿದೆ. ಫೆ. 15ರಂದು ಬೆಳಗ್ಗೆ ಸಮವಸರಣ ವೈಭವವೂ ವಿಜೃಂಭಣೆಯಿಂದ ನಡೆಯಲಿದೆ.

ರಂಗ ನಿರ್ದೇಶಕ ಜೀವನ್‌ರಾಂ ಸುಳ್ಯ ಹಾಗೂ ಬೆಂಗಳೂರಿನ ಅಶೋಕ್‌ ಮತ್ತು ತಂಡ, ಕ್ಷೇತ್ರದ ಪ್ರಮುಖರ ತಂಡ ಇದರ ಹಿಂದಿದೆ. ಇದಕ್ಕಾಗಿಯೇ ಪ್ರತ್ಯೇಕ ರೆಕಾರ್ಡಿಂಗ್‌ಗಳು ನಡೆದಿವೆ. ಪಂಚಮಹಾವೈಭವಕ್ಕಾಗಿ ನಿರ್ಮಿಸಿದ ವೇದಿಕೆಯ ಜತೆಗೆ ಬಯಲು ರಂಗಮಂಟಪವಾಗಿ ಧರ್ಮಸ್ಥಳದ ಬೀದಿಗಳು ಬಳಕೆಯಾಗಲಿವೆ.

ಕಾರ್ಯಕ್ರಮದಲ್ಲಿ ಫೆ. 11ರಂದು ಬೆಳಗ್ಗೆ ನವಯುಗಾರಂಭ, ಸಂಜೆ ನೂರು ಮಕ್ಕಳ ಸಮ್ಮುಖದಲ್ಲಿ ನಾಮಕರಣ ಮಹೋತ್ಸವ, ಬಾಲಲೀಲೋತ್ಸವ, ಫೆ. 12ರಂದು ಸ್ತ್ರೀ-ಶಿಕ್ಷಣ-ಕಲೆ-ಸಂಸ್ಕೃತಿ, ಸಂಜೆ ಭೋಗದಿಂದ ತ್ಯಾಗದೆಡೆಗೆ, ಫೆ. 13ರಂದು ಬೆಳಗ್ಗೆ ಭರತೇಶನ ದಿಗ್ವಿಜಯ ಮೆರವಣಿಗೆ, ಫೆ. 14ರಂದು ಬೆಳಗ್ಗೆ ಬಾಹುಬಲಿಯ ಆಸ್ಥಾನ ವೈಭವ, ಸಂಜೆ ಭರತ ಬಾಹುಬಲಿಯ ಧರ್ಮಯುದ್ಧ, ಬಾಹುಬಲಿಯ ವೈರಾಗ್ಯ, ಫೆ. 15ರಂದು ಬೆಳಗ್ಗೆ ಸಮವಸರಣ ಪೂಜೆ, ಸಂಜೆ ಬಾಹುಬಲಿಯ ಕೇವಲ ಜ್ಞಾನ ಕಲ್ಯಾಣ ಕಾರ್ಯಕ್ರಮಗಳು ವಿಶೇಷವಾಗಿ ನಡೆಯಲಿವೆ ಎಂದು ಸಂಯೋಜಕ ಮಲ್ಲಿನಾಥ್‌ ಜೈನ್‌ ವಿವರಿಸಿದ್ದಾರೆ.

ವೈಭವದ ಮೆರವಣಿಗೆ
ಪಂಚ ಮಹಾವೈಭವದ ಹಿನ್ನೆಲೆಯಲ್ಲೇ ಫೆ. 13ರಂದು ಬೆಳಗ್ಗೆ ಐತಿಹಾಸಿಕ ಮೆರವಣಿಗೆಗೆ  ಧರ್ಮಸ್ಥಳ ಸಾಕ್ಷಿಯಾಗಲಿದೆ. ಧರ್ಮಸ್ಥಳ – ಶಾಂತಿವನ ನಡುವೆ ಮೆರವಣಿಗೆ ಸಾಗಲಿದೆ. ಸುಡುಮದ್ದು ಪ್ರದರ್ಶನ, ತಾಲೀಮು, ಕೊಂಬು ಕಹಳೆ, ಬಿರುದಾವಳಿ, ಘಟೋತ್ಕಚ, ಕಿಂಗ್‌ ಕಾಂಗ್‌, ಸೈನಿಕರು, ನಗಾರಿ, ಜಟ್ಟಿಗಳು, ಡೊಳ್ಳು ಕುಣಿತ, ಕಾಡು ಮನುಷ್ಯರು, ಚೆಂಡೆ, ಕತ್ತಿ ಗುರಾಣಿಯ ಸೈನಿಕರು, ಪುರವಂತಿಕೆ, ನಾಸಿಕ್‌ ಬ್ಯಾಂಡ್‌, ಮರಾಠರು, ಜಗ್ಗಳಿಕೆ, ಶಂಖ, ಬಣ್ಣದ ಕೊಡೆಗಳು, ದೇವರ ಟ್ಯಾಬ್ಲೋ, ಧ್ವಜಗಳು, ಭಾರತ ರತ್ನ-ಚಕ್ರ ರತ್ನಗಳು ಮೆರವಣಿಗೆಯಲ್ಲಿ ಇರಲಿವೆ. ಶಾಂತಿವನದಿಂದ ಧರ್ಮಸ್ಥಳಕ್ಕೆ ಸಾಗುವ ಮೆರವಣಿಗೆಯಲ್ಲಿ ಸುಲ್ತಾನ್‌ ಹೋರಿ, ಗಿರೀಶ, ಪೂಜಾ ಕುಣಿತ, ರಾಜಸ್ಥಾನ, ಗುಜರಾತ್‌, ನಾಗಾಲ್ಯಾಂಡ್‌, ಪಂಜಾಬ್‌, ಬಂಗಾಲ, ಮಣಿಪುರ ಹಾಗೂ ಕೊಡಗಿನ ಕಲಾತಂಡಗಳು, ಜಪಾನ್‌, ಈಜಿಪ್ಟ್, ಚೀನ, ಶ್ರೀಲಂಕಾ ಮತ್ತು ಭೂತಾನ್‌ಗಳ ಕಲಾತಂಡಗಳು ಪಾಲ್ಗೊಳ್ಳಲಿವೆ.

50 ಸಾವಿರ ಚ.ಅಡಿ ಸಭಾಂಗಣ
ಅಮೃತವರ್ಷಿಣಿ ಸಭಾಂಗಣದ ಹಿಂಭಾಗದಲ್ಲಿ ಪಂಚ ಮಹಾವೈಭವಕ್ಕಾಗಿ ವಿಶಾಲವಾದ ಸಭಾಂಗಣ ನಿರ್ಮಾಣವಾಗಿದೆ. ಸುಮಾರು 50 ಸಾವಿರ ಚದರಡಿ ವಿಸ್ತೀರ್ಣದ ಈ ಸಭಾಂಗಣದಲ್ಲಿ ನಾಲ್ಕು ಸಾವಿರ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ಸಾಧ್ಯವಿದೆ.
ಆರು ಸಾವಿರ ಚದರಡಿ ವಿಸ್ತೀರ್ಣದ ವಿಶೇಷ ಅಲಂಕೃತ ವೇದಿಕೆ ನಿರ್ಮಾಣವಾಗಿದೆ. ಅದರ ಹಿಂದೆ ಗ್ರೀನ್‌ರೂಮ್‌, ಶೌಚಾಲಯದ ವ್ಯವಸ್ಥೆ ಇದೆ. ಇಡೀ ಸಭಾಂಗಣವನ್ನು ವಿವಿಧ ಅಲಂಕಾರಗಳಿಂದ ಸಿಂಗರಿಸಲಾಗಿದೆ. ಸಮವಸರಣ ಪೂಜೆಗಾಗಿ ಪ್ರತ್ಯೇಕ 13 ಸಾವಿರ ಚದರಡಿ ವಿಸ್ತೀರ್ಣದ ಸಭಾಂಗಣವಿದ್ದು, ಅಲ್ಲಿ 1,500ಕ್ಕೂ ಅಧಿಕ ಮಂದಿ ಆಸೀನರಾಗಬಹುದು. ಸಮವಸರಣಕ್ಕಾಗಿ 12 ಸೋಪಾನಗಳನ್ನು ಸುಂದರವಾಗಿ ನಿರ್ಮಿಸಲಾಗಿದೆ.

ಮನಕ್ಲೇಶ ತೊಲಗಿತು
 ಚಾರು
ಆದಿತೀರ್ಥಂಕರರಿಂದ ನಿರೂಪವನ್ನು ಪಡೆದ ಬಳಿಕ ಭರತೇಶ ವಿಳಂಬಿಸಲಿಲ್ಲ. ಅಷ್ಟವಿಧಾರ್ಚನೆಯ ಪರಿಕರ ಸನಿಹಿತನಾಗಿ ಪರಿಜನರೊಡಗೂಡಿ ಬಂದು ಬಾಹುಬಲಿ ಮುನೀಂದ್ರನ ಪಾದಪದ್ಮಗಳಿಗೆ ಎರಗಿದನು. ಪಾದಪೂಜೆಯನ್ನು ನಡೆಸಿದನು.

ಮಾನನಿಧಿಯೇ, ಈ ರಾಜ್ಯ ನೀನು ನನಗೆ ಅನುಗ್ರಹಿಸಿದ್ದು. ಇದನ್ನು ಭರತನದು ಎಂದು ನೀನು ಭಾವಿಸಬಹುದೆ? ಆ ಕ್ಲೇಶವು ನಿನ್ನ ಕೇವಲ ಜ್ಞಾನಕ್ಕೆ ತಡೆಯಾಗುವುದುಂಟೇ! ನೀನು ಭೇದವಿವೇಕಿ ಆಗಬೇಕು, ಕ್ಲೇಶವನ್ನು ಬಿಡಬೇಕು. ಪರಸ್ವಭಾವವನ್ನು ತ್ಯಜಿಸಬೇಕು ಎಂದು ಧರ್ಮ ರಹಸ್ಯವನ್ನು ಭರತ ಕೈಮುಗಿದು ಬಿನ್ನವಿಸಿಕೊಂಡನು.

ಭರತೋಕ್ತಿಗಳನ್ನು ಆಲಿಸುತ್ತಿದ್ದಂತೆ ಬಾಹುಬಲಿಯನ್ನು ಮುಸುಕಿದ್ದ ಕ್ಲೇಶದ ಕೊನೆಯ ಎಳೆಯೂ ಕರಗಿತು. ಅನಂತವಸ್ತು ಪ್ರಕಾಶಿಯಾದ ಕೇವಲಜ್ಞಾನ ಉದಯಿಸಿತು. ಆ ಮಂಗಲ ಕ್ಷಣಕ್ಕೆ ಸಾಕ್ಷಿಯಾಗಲು ಚಿತ್ರಾ ನಕ್ಷತ್ರದ ಹೂಮಳೆಯಂತೆ ದೇವತೆಗಳೇ ಇಳಿದುಬಂದು ಬಾಹುಬಲಿಗೆ ಎರಗಿದರು. ಕೇವಲಿಯಾದ ಬಾಹುಬಲಿಗೆ ಬೆಳೊಡೆ ಯನ್ನು ಹಿಡಿದರು. ದಿಗೆªಸೆಗಳಿಂದ ಜಯ ಕಾರ ಮೊಳಗಿತು. ದೇವದುಂದುಭಿ ಸುನಾದ ಹರಿಸಿತು. ದೇವೋತ್ತಮರು ಬಾಹುಬಲಿ ಯನ್ನು ರತ್ನಖಚಿತ ಸಿಂಹಾಸನದಲ್ಲಿ ಕುಳ್ಳಿರಿಸಿ ಚಾಮರ ಬೀಸಿದರು.  (ಇನ್ನೂ ಇದೆ)

ಗೊಮ್ಮಟ ಕಥೆ
ವೇಣೂರಿನಲ್ಲಿ ಐತಿಹಾಸಿಕ ಸಂಗಮ ಕಾರ್ಕಳದಿಂದ ಹೊರಟ ಮೂರ್ತಿ ಧರ್ಮಸ್ಥಳಕ್ಕೆ ತಲುಪಲು 23 ದಿನಗಳೇ ಬೇಕಾದವು. ದಾರಿಯುದ್ದಕ್ಕೂ ಜನರ ಸಂಭ್ರಮ ಮುಗಿಲು ಮುಟ್ಟಿತ್ತು. ಭವ್ಯ ಮೂರ್ತಿಯನ್ನು ಸಾಗಿಸುವ ದೃಶ್ಯ ಕಣ್ಣಾರೆ ಕಂಡು ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಬೇಕೆಂಬುದು ಪ್ರತಿಯೊಬ್ಬರ ಕನಸಾಗಿತ್ತು. ಕೆಲವು ಶಾಲೆಗಳಿಗೆ ರಜೆಯನ್ನೂ ಸಾರಲಾಗಿತ್ತು.
ದಾರಿಯಲ್ಲಿ ಐದು ಪ್ರಮುಖ ಸೇತುವೆಗಳನ್ನು ದಾಟಬೇಕಿತ್ತು. ಅದು ಸುಲಭವಿರಲಿಲ್ಲ, ಮೂರ್ತಿಯೋ 170 ಟನ್‌ ತೂಕದ್ದು. ಡಾ| ಹೆಗ್ಗಡೆಯವರ ಪರ್ಯಾಯ ಮಾರ್ಗಸೂಚಿಯಂತೆ ಭಾರತೀಯ ರೈಲ್ವೇ, ಸೇನೆಯ ಸಹಾಯದಿಂದ ತಾತ್ಕಾಲಿಕ ಉಕ್ಕಿನ ಸೇತುವೆ ನಿರ್ಮಿಸಲಾಯಿತು.

ಬಾಹುಬಲಿ ಪ್ರತಿಮೆ ವೇಣೂರು ತಲುಪಿದಾಗ ಅಲ್ಲಿ ಅಪೂರ್ವ ಸಡಗರ ಮನೆ ಮಾಡಿತ್ತು. ಅದೊಂದು ಅಪೂರ್ವ ಸಂಗಮ ಕ್ಷಣ. ಸುಮಾರು 400 ವರ್ಷಗಳ ಹಿಂದೆ ಪ್ರತಿಷ್ಠಾಪಿತನಾದ ವೇಣೂರು ಬಾಹುಬಲಿ ಸ್ವಾಮಿ ದಿಗಂತದೆಡೆ ದೃಷ್ಟಿ ನೆಟ್ಟಿದ್ದರೆ ಧರ್ಮಸ್ಥಳದೆಡೆ ಸಾಗುವ ಬಾಹುಬಲಿ ಸ್ವಾಮಿಯ ಮೂರ್ತಿ ಊಧ್ವì ದೃಷ್ಟಿ ನೆಟ್ಟಿತ್ತು. ಒಂದಿಡೀ ರಾತ್ರಿ ಈ ಆನುರೂಪ ಸನ್ನಿವೇಶವನ್ನು ಕಣ್ತುಂಬಿಕೊಳ್ಳುವ ಅವಕಾಶ ಭಕ್ತ ಜನರಿಗೆ ಒದಗಿತು. ಆ ರೋಮಾಂಚನ ದೃಶ್ಯ ನೋಡಲೆಂದೇ ಸಹಸ್ರಾರು ಜನರು ಆಗಮಿಸಿದರು, ಪಾವನ ಸಂದರ್ಭವನ್ನು ಸ್ಮ‌ರಣೀಯಗೊಳಿಸಲು ವಿವಿಧ ಆಚರಣೆಗಳನ್ನು ನಡೆಸಲಾಯಿತು. ವೇಣೂರಿನಲ್ಲಿ ವಿರಾಜಮಾನನಾಗಿ ನಿಂತಿದ್ದ 39 ಅಡಿ ಎತ್ತರದ ವಿರಾಗಿಗೆ ಮಹಾಮಜ್ಜನವೂ ನಡೆಯಿತು. ಸುಮಾರು ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿ ಜನರು ಮಜ್ಜನಕ್ಕೆ ಸಾಕ್ಷಿಯಾಗಿ ಪ್ರಸನ್ನರಾದರು.

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.