30 ಸಾವಿರ ಶ್ರಮಿಕ ನೆರವು ಕಿಟ್ ವಿತರಣೆ
ಶಾಸಕರ ಸಮಯೋಚಿತ ನಿರ್ಧಾರಕ್ಕೆ ಡಾ| ವೀರೇಂದ್ರ ಹೆಗ್ಗಡೆ ಶ್ಲಾಘನೆ
Team Udayavani, Apr 24, 2020, 5:55 AM IST
ಬೆಳ್ತಂಗಡಿ: ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾದ ಅರ್ಹ 30 ಸಾವಿರ ಕುಟುಂಬಗಳಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಶ್ರಮಿಕ ನೆರವು ಕಿಟ್ ವಿತರಣೆಗೆ ಗುರುವಾರ ಧರ್ಮಸ್ಥಳ ಕ್ಷೇತ್ರದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.
ಕಿಟ್ ಹಸ್ತಾಂತರಿಸಿ ಮಾತನಾಡಿದ ಡಾ| ಹೆಗ್ಗಡೆ ಅವರು, ಕೋವಿಡ್ 19 ಸೋಂಕಿನಿಂದ ಸದ್ಯ ಭಾರತ ಬೀಸುವ ಏಟಿನಿಂದ ತಪ್ಪಿಸಿಕೊಂಡಂತಿದೆ. ಪ್ರಧಾನ ಮಂತ್ರಿಗಳ ಸಮಯೋಚಿತ ಸೂಚನೆ, ರಾಜ್ಯ ಸರಕಾರ ನಿರ್ಧಾರ, ಪ್ರಜೆಗಳ ಸಹಕಾರ ಇವೆಲ್ಲದರ ಫಲವಾಗಿ ಲಾಕ್‌ಡೌನ್ ಯಶಸ್ವಿಯಾಗಿದೆ ಎಂದರು.
ಶಾಸಕ ಹರೀಶ್ ಪೂಂಜ ಜನರ ಉತ್ತಮ ಸೇವೆ ಮಾಡುತ್ತಿದ್ದಾರೆ. ಸಂಕಷ್ಟಕ್ಕೊಳಗಾದವರ ನೆರವಿಗೆ ಸ್ಪಂದಿಸು ವುದು ನಮ್ಮೆಲ್ಲ ಕರ್ತವ್ಯ; ಸಂಕಷ್ಟಕ್ಕೊಳಗಾದವರಿಗೆ ದೇವರ ಆಶೀರ್ವಾದ ಇರಲಿ ಎಂದು ಹಾರೈಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರ ರಕ್ಷಣೆಗೆ ಸರಕಾರ ಬದ್ಧವಾಗಿದೆ. ಜಗತ್ತೇ ಸಂಕಷ್ಟಕ್ಕೊಳಗಾಗಿರುವಾಗ ನಾವು ಧೃತಿಗೆಡದೆ ಸೋಂಕು ನಿವಾರಣೆ ಹೋರಾಟಕ್ಕೆ ಬೆಂಬಲ ಕೊಡಬೇಕಾಗಿದೆ ಎಂದರು.
ಎಲ್ಲರ ಸಹಕಾರದಿಂದ ಸಾಧ್ಯ
ಡಾ| ಹೆಗ್ಗಡೆ ಅವರ ಆಶೀರ್ವಾದ, ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಅವರ ಸಹಕಾರದೊಂದಿಗೆ ಬರೋಡ ಉದ್ಯಮಿ ಶಶಿಧರ ಶೆಟ್ಟಿ ಅವರ ನೆರವಿನಿಂದ, ಪಕ್ಷದ ಹಿರಿಯ ಕಾರ್ಯಕರ್ತರು, ಜನಪ್ರತಿನಿಧಿಗಳ ಮತ್ತು ಬದುಕು ಕಟ್ಟೋಣ ತಂಡದ ಮೋಹನ್ ಕುಮಾರ್, ರಾಜೇಶ್ ಪೈ ತಂಡದ ಯುವಕರ ಸೇವಾ ಕಾರ್ಯ ಒದಗಿಸಿದ್ದಾರೆ. ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಹಾಗೂ ಪದಾಧಿಕಾರಿಗಳಿಂದ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಲು ಸಹಕಾರಿಯಾಗಿದೆ. ಮುಂದೆಯೂ ಕ್ಷೇತ್ರ ಜನತೆಯ ಕಷ್ಟದಲ್ಲಿ ಭಾಗಿಯಾಗುತ್ತೇನೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಶಾಸಕ ಹರೀಶ್ ಪೂಂಜ, ಧರ್ಮಸ್ಥಳದ ಸುರೇಂದ್ರ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಎಂ. ಕಲ್ಮಂಜ, ತಾ.ಪಂ. ಸದಸ್ಯರಾದ ಧನಲಕ್ಷಿ$¾à, ಸುಧೀರ್ ಆರ್. ಸುವರ್ಣ, ಪ್ರಮುಖರಾದ ಸದಾನಂದ ಪೂಜಾರಿ ಉಂಗಿಲಬೈಲು, ಪ್ರಶಾಂತ ಪಾರೆಂಕಿ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಉಪಸ್ಥಿತರಿದ್ದರು.
ಸಚಿವ ಬೊಮ್ಮಾಯಿ ಭೇಟಿ; ಮೆಚ್ಚುಗೆ
ತಾಲೂಕಿನ 81 ಗ್ರಾಮಗಳ 241 ಬೂತ್‌ಗಳ ಅರ್ಹ ಕುಟುಂಬಗಳಿಗೆ ಹಾಗೂ ಆಟೋ ಚಾಲಕರು, ಗೃಹರಕ್ಷಕ ದಳದವರಿಗೆ 30 ಸಾವಿರ ಶ್ರಮಿಕ ನೆರವಿನ ಕಿಟ್ ಸಿದ್ಧಗೊಳಿಸಲಾಗಿದೆ. 81 ಬೂತ್‌ಗಳಿಂದ 241 ವಾಹನಗಳಲ್ಲಿ ಬಂದವರಿಗೆ ಅಂತರ ಕಾಯ್ದು ಕಿಟ್ ಹಸ್ತಾಂತರಿಸಲಾಯಿತು. ಈ ಸಂದರ್ಭ ಉಡುಪಿಯತ್ತ ತೆರಳುತ್ತಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕ್ರೀಡಾಂಗಣಕ್ಕೆ ಭೇಟಿ ನೀಡಿ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.