‘ವಾಹನ ಚಾಲಕರ ಸೇವಾ ಮನೋಭಾವ ಅಭಿನಂದನಾರ್ಹ’

Team Udayavani, Aug 5, 2018, 4:09 PM IST

5-agust-15.jpg

ಉಪ್ಪಿನಂಗಡಿ : ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ವಾಹನ ಚಾಲಕರು ಕಾಯಕವನ್ನು ಸೇವಾ ಮನೋಭಾವದಡಿ ನಿರ್ವಹಿಸುತ್ತಿರುವುದು ಸಂತಸದ ವಿಚಾರ. ರಸ್ತೆ ಸುರಕ್ಷತಾ ನಿಯಮಾವಳಿಗಳ ಸಮರ್ಪಕ ಪಾಲನೆಯೊಂದಿಗೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಇಲ್ಲಿನ ಸುಧೀಂದ್ರ ಕಲಾ ಮಂದಿರದಲ್ಲಿ ನಡೆದ ಉಪ್ಪಿನಂಗಡಿ ಶಾಲಾ ಮಕ್ಕಳ ವಾಹನಗಳ ಚಾಲಕ ಮಾಲಕರ ಸಂಘದ ಆಶ್ರಯದಲ್ಲಿ ಚಾಲಕರ ಹಾಗೂ ಹೆತ್ತವರ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಮೂರು-ನಾಲ್ಕು ವರ್ಷದ ಎಳೆಯ ಮಕ್ಕಳಿಂದ ಹಿಡಿದು ಪ್ರೌಢ ವಿದ್ಯಾರ್ಥಿಗಳನ್ನು ಕರೆ ತರುವ ಮತ್ತು ಹಿಂದಕ್ಕೆ ಕರೆದೊಯ್ಯುವ ವಾಹನ ಚಾಲಕರ ತಾಳ್ಮೆ, ಸಹನೆ ಶ್ಲಾಘನೀಯವಾಗಿದೆ. ಆದಾಗ್ಯೂ ಒಂದಿಬ್ಬರು ಚಾಲಕರ ತಪ್ಪು ನಡೆಯಿಂದಾಗಿ ಇಡೀ ಚಾಲಕ ಸಮೂಹಕ್ಕೆ ಕೆಟ್ಟ ಹೆಸರು ಮೂಡುತ್ತಿದೆ. ಜಾಗೃತಿ ಸಮಾವೇಶದಂತಹ ಕಾರ್ಯಕ್ರಮಗಳಿಂದ ನಿಯಮ ಮೀರಿ ನಡೆವ ಚಾಲಕರನ್ನು ಸರಿದಾರಿಗೆ ತರಲು ಸಹಕಾರಿಯಾಗುತ್ತದೆ ಎಂದರು.

ಸುರಕ್ಷಾ ನಿಯಮ ಪಾಲಿಸಿ
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್‌ ರಹಿಮಾನ್‌ ಮಾತನಾಡಿ, ದೇವರ ಅಮೂಲ್ಯ ರತ್ನಗಳನ್ನು ತಾವು ಕರೆಯೊಯ್ಯುವ ಕಾಯಕದಲ್ಲಿ ತೊಡಗಿದ್ದೇವೆ ಎಂಬ ಅರಿವು ಚಾಲಕರಲ್ಲಿ ಇರಬೇಕು. ಚಾಲನೆಯ ವೇಳೆ ಮೊಬೈಲ್‌ ಸಂಭಾಷಣೆ, ರಣವೇಗದ ಚಾಲನೆ, ಸುರಕ್ಷಾ ನಿಯಮಗಳ ಕಡೆಗಣಿಸುವಿಕೆ, ವಾಹನಗಳ ಸುಸ್ಥಿತಿಯ ಬಗ್ಗೆ ನಿರ್ಲಕ್ಷ್ಯ ಇದೆಲ್ಲವೂ ಅನಾಹುತಗಳಿಗೆ ಕಾರಣವಾಗುತ್ತದೆ. ತಮ್ಮ ವಾಹನದಲ್ಲಿರುವ ಮಕ್ಕಳು ನಮ್ಮ ಮಕ್ಕಳೆಂಬ ಭಾವನೆಯಿಂದ ವಾಹನ ಚಲಾಯಿಸಿದರೆ ಸಮಸ್ಯೆ ಮೂಡದು ಎಂದರು. 

ಸಭಾಧ್ಯಕ್ಷತೆ ವಹಿಸಿದ್ದ ವಾಹನ ಚಾಲಕ ಮಾಲಕ ಸಂಘದ ಅಧ್ಯಕ್ಷ ಮಹಮ್ಮದ್‌ ಹನೀಫ್‌, ಸಕಾಲಕ್ಕೆ ಮಕ್ಕಳನ್ನು ಶಾಲೆಗೆ ಸಿದ್ಧಪಡಿಸುವ ಹೊಣೆಗಾರಿಕೆಯನ್ನು ಹೆತ್ತವರು ವಹಿಸುವುದರೊಂದಿಗೆ ಚಾಲಕರ ಬಗ್ಗೆಯೂ ನಿಗಾ ಇರಿಸುವ ಕೆಲಸವಾಗಬೇಕು. ರಾ.ಹೆ. 75ರಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಬೆಳಗ್ಗೆ ಹಾಗೂ ಸಾಯಂಕಾಲ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಚರ್ಚ್‌ ಶಾಲಾ ಹತ್ತಿರ ಪೊಲೀಸ್‌ ಸಿಬಂದಿ ನೇಮಿಸಬೇಕು ಎಂದು ಮನವಿ ಸಲ್ಲಿಸಿದರು.

ಉಪ್ಪಿನಂಗಡಿ ಶ್ರೀರಾಮ ವಿದ್ಯಾಲಯದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯಂತ ಪುರೋಳಿ, ಸಾಮಾಜಿಕ ಮುಂದಾಳು ಕೈಲಾರ್‌ ರಾಜಗೋಪಾಲ ಭಟ್‌ ಸಭೆಯನ್ನುದ್ದೇಶಿಸಿ ಮಾತನಾಡಿದರು. ಉದ್ಯಮಿ ಯು. ರಾಮ, ಎನ್‌. ಉಮೇಶ್‌ ಶೆಣೈ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ರಾವ್‌ ಸ್ವಾಗತಿಸಿ, ದಯಾನಂದ ವಂದಿಸಿದರು. ಮೋಹನ್‌ ಪಕಳ ಪ್ರಸ್ತಾವಿಸಿ, ನಿರೂಪಿಸಿದರು.

ದಾಖಲೆ ಅಗತ್ಯ
ಪುತ್ತೂರು ಟ್ರಾಫಿಕ್‌ ಠಾಣಾ ಎಸ್‌ಐ ನಾರಾಯಣ ರೈ ಮಾತನಾಡಿ, ವಾಹನಗಳ ದಾಖಲೆ ಸಮರ್ಪಕವಾಗಿರಬೇಕು, ವಿಮಾ ಕಂತು ಕಾಲಕಾಲಕ್ಕೆ ಪಾವತಿಸಿರಬೇಕು, ಸಮವಸ್ತ್ರ ಕಡ್ಡಾಯವಾಗಿ ಧರಿಸಬೇಕು, ವಾಹನಗಳ ಸುಸ್ಥಿತಿಯನ್ನು ಖಾತರಿಪಡಿಸುತ್ತಿರಬೇಕು, ಸುರಕ್ಷಾ ನೆಲೆಯಲ್ಲಿ ವಾಹನಗಳ ವೇಗದ ಮಿತಿಯನ್ನು ಪಾಲಿಸಬೇಕೆಂದು ಮಾಹಿತಿ ನೀಡಿದರು.

ಟಾಪ್ ನ್ಯೂಸ್

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

Rajeev Chandrashekhar

Corrupt ಡಿಕೆಶಿ ಸರ್ಟಿಫಿಕೆಟ್‌ ಬೇಕಾಗಿಲ್ಲ: ಕೇಂದ್ರ ಸಚಿವ ರಾಜೀವ್‌ ತಿರುಗೇಟು

1-wqewqe

2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ

mamata

CAA, NRC ರದ್ದು: ದೀದಿ ಶಪಥ ಪ್ರಣಾಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

Belthangady ಪಿಕಪ್‌ ಹಿಮ್ಮುಖವಾಗಿ ಚಲಿಸಿ ವ್ಯಕ್ತಿ ಸಾವು

Belthangady ಪಿಕಪ್‌ ಹಿಮ್ಮುಖವಾಗಿ ಚಲಿಸಿ ವ್ಯಕ್ತಿ ಸಾವು

Sullia ವಿದ್ಯುತ್‌ ಲೈನ್‌ಗೆ ಬಿದ್ದ ಮರ; ಹಾನಿ,ವಿದ್ಯುತ್‌ ವ್ಯತ್ಯಯ

Sullia ವಿದ್ಯುತ್‌ ಲೈನ್‌ಗೆ ಬಿದ್ದ ಮರ; ಹಾನಿ,ವಿದ್ಯುತ್‌ ವ್ಯತ್ಯಯ

Uppinangady ದ್ವಿಚಕ್ರ ವಾಹನಕ್ಕೆ ಟ್ಯಾಂಕರ್‌ ಢಿಕ್ಕಿ; ಮಗು ಸಹಿತ ದಂಪತಿಗೆ ಗಾಯ

Uppinangady ದ್ವಿಚಕ್ರ ವಾಹನಕ್ಕೆ ಟ್ಯಾಂಕರ್‌ ಢಿಕ್ಕಿ; ಮಗು ಸಹಿತ ದಂಪತಿಗೆ ಗಾಯ

Bantwal ಚೂರಿ ಇರಿತ ಪ್ರಕರಣ: ಆರೋಪಿಯ ಸೆರೆ

Bantwal ಚೂರಿ ಇರಿತ ಪ್ರಕರಣ: ಆರೋಪಿಯ ಸೆರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.