ಉದನೆ: ಹೆದ್ದಾರಿಯಲ್ಲಿ ಆನೆ ಸಂಚಾರ!
Team Udayavani, Jan 23, 2022, 4:26 AM IST
ಉಪ್ಪಿನಂಗಡಿ: ಉದನೆ ಪೇಟೆಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಜ. 21ರಂದು ಬೆಳ್ಳಂಬೆಳಗ್ಗೆ ಒಂಟಿ ಸಲಗ ಓಡಾಟ ನಡೆಸಿದ್ದು, ವಾಹನ ಚಾಲಕರು ಮತ್ತು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಹೆದ್ದಾರಿ ಅಂಚಿನಲ್ಲಿರುವ ಶಿರಾಡಿ ರಕ್ಷಿತಾರಣ್ಯದಿಂದ ಬಂದ ಕಾಡಾನೆ ಉದನೆ ಪೇಟೆಯಿಂದ ತುಸು ದೂರದಲ್ಲಿ ಹೆದ್ದಾರಿಯ ದಾಟಿ ಗುಂಡ್ಯ ಹೊಳೆಯ ಕಡೆಗೆ ಸಂಚರಿಸಿದೆ. ಆನೆ ಹೆದ್ದಾರಿಗೆ ಬರುತ್ತಿದ್ದಂತೆ ದ್ವಿಚಕ್ರ ಮತ್ತು ಘನ ವಾಹನ ಚಾಲಕರು ಅಚ್ಚರಿಗೊಂಡಿದ್ದು, ಸಂಚಾರ ಸ್ಥಗಿತಗೊಳಿಸಿ ಮೊಬೈಲ್‌ಗಳಲ್ಲಿ ಫೋಟೋ, ವೀಡಿಯೋ ಸೆರೆಹಿಡಿದಿದ್ದಾರೆ.
ವಾಹನ ಸವಾರರು, ಜನರು ಭಯಭೀತರಾಗಿದ್ದರೂ ಆನೆ ಮಾತ್ರ ಏನೂ ಹಾನಿ ಮಾಡದೆ ಗುಂಡ್ಯ ಹೊಳೆ ಕಡೆಗೆ ತನ್ನಪಾಡಿಗೆ ತೆರಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಹಿಂದೆ ಶಿರಾಡಿ, ಪೆರಿಯಶಾಂತಿ, ಉದನೆ ಭಾಗದಲ್ಲಿ ಕಾಡಾನೆಗಳು ಪದೇ ಪದೆ ತೋಟಗಳಿಗೆ ನುಗ್ಗಿ ಹಾನಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ
ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು
ಬಂಟ್ವಾಳ: ಅಜ್ಜಿ ಮನೆಗೆಂದು ಹೋದ ತಾಯಿ, ಮಗ ನಾಪತ್ತೆ
ಐವರ್ನಾಡು: ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ವಾಹನ ಪಲ್ಟಿ
ಕಡೆಗೋಳಿ: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ