Engineer Bantwal ಜಯಂತ್ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ
Team Udayavani, Sep 6, 2024, 11:20 PM IST
ಬಂಟ್ವಾಳ: ಬಂಟ್ವಾಳ ಮೂಲದ ಎಲೆಕ್ಟ್ರಿಕಲ್ ಎಂಜಿನಿಯರ್, 76ರ ಹರೆಯದ ಪ್ರೊ| ಜಯಂತ್ ಬಾಳಿಗ ಅವರು ಮಾಲಿನ್ಯ ತಡೆಯುವ ದೃಷ್ಟಿಯಿಂದ 1980ರಲ್ಲಿ ಅಭಿವೃದ್ಧಿಪಡಿಸಿದ ಇನ್ಸುಲೇಟೆಡ್ ಗೇಟ್ ಬೈಪೋಲಾರ್ ಟ್ರಾನ್ಸಿಸ್ಟರ್(ಐಜಿಬಿಟಿ)ಗೆ 2024ನೇ ಸಾಲಿನ ಜಾಗತಿಕ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ ಒಲಿದಿದ್ದು, ಫಿನ್‌ಲ್ಯಾಂಡ್ ನ ಟೆಕ್ನೋಲಜಿ ಅಕಾಡೆಮಿ ಘೋಷಿಸಿರುವ ಈ ಪ್ರಶಸ್ತಿಯು 9.30 ಕೋ.ರೂ.(1 ಮಿಲಿಯನ್ ಯೂರೊ) ನಗದು ಹೊಂದಿದೆ!
ಅ. 30ರಂದು ಫಿನ್‌ಲ್ಯಾಂಡ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ. ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವ ಐಜಿಬಿಟಿ ಸೆಮಿಕಂಡಕ್ಟರ್ ಸಾಧನವು ಜಾಗತಿಕವಾಗಿ ವಿದ್ಯುತ್ ಶಕ್ತಿ ಮತ್ತು ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದ್ದು, ಇದನ್ನು ಪವನ ಮತ್ತು ಸೌರ ವಿದ್ಯುತ್ ಸ್ಥಾಪನೆಗಳು, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್-ಎಲೆಕ್ಟ್ರಿಕ್ ಕಾರುಗಳು, ವೈದ್ಯಕೀಯ ಯಂತ್ರಗಳು, ಗೃಹೋಪಯೋಗಿ ಉಪಕರಣಗಳಲ್ಲಿ ಬಳಸಬಹುದಾಗಿದೆ. ಇವರ ಸಂಶೋಧನೆಯು ಕಳೆದ 30 ವರ್ಷಗಳಲ್ಲಿ ಸರಿಸುಮಾರು 82 ಗಿಗಾಟನ್ ಕಾರ್ಬನ್ ಹೊರ ಸೂಸುವಿಕೆಯನ್ನು ಕಡಿಮೆ ಮಾಡಿದೆ.
ಚೆನ್ನೈಯಲ್ಲಿ ಹುಟ್ಟಿದ್ದ ಜಯಂತ್ ಬಾಳಿಗರು ಬೆಂಗಳೂರು ಬಿಷಪ್ ಕಾಟನ್ ಬಾಯ್ಸ ಸ್ಕೂಲ್‌ನಲ್ಲಿ ಓದಿ, ಐಐಟಿ ಮದ್ರಾಸ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ, ನ್ಯೂಯಾರ್ಕ್‌ನ ರೆನ್ಸೆಲೇರ್ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್ ನಲ್ಲಿ ಸ್ನಾತಕೋತ್ತರ ಹಾಗೂ ಯುಎಸ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. ಉತ್ತರ ಕೊರೊಲಿಯಾ ಸ್ಟೇಟ್ ಯೂನಿ ವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ನಿರ್ವಹಿಸಿದ್ದರು. ಇವರ ತಂದೆ ಬಂಟ್ವಾಳ ವಿಠಲ್ ಮಂಜುನಾಥ ಬಾಳಿಗರು ಸ್ವತಂತ್ರ ಭಾರತದಲ್ಲಿ ಆಲ್ ಇಂಡಿಯಾ ರೇಡಿಯೋದ ಮೊದಲ ಚೀಫ್ ಎಂಜಿನಿಯರ್ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.