ನಕಲಿ ವಿಮೆ: ಉದಯವಾಣಿ ವರದಿ ಮೂಡಿಸಿದ ಸಂಚಲನ: ಓರ್ವನ ವಿಚಾರಣೆ, ತಪ್ಪೊಪ್ಪಿಗೆ

ನಕಲಿ ವಿಮೆ: ಉದಯವಾಣಿ ವರದಿ ಮೂಡಿಸಿದ ಸಂಚಲನ

Team Udayavani, Oct 16, 2020, 1:44 AM IST

ನಕಲಿ ವಿಮೆ: ಉದಯವಾಣಿ ವರದಿ ಮೂಡಿಸಿದ ಸಂಚಲನ: ಓರ್ವನ ವಿಚಾರಣೆ, ತಪ್ಪೊಪ್ಪಿಗೆ

ಸಾಂದರ್ಭಿಕ ಚಿತ್ರ

ಪುತ್ತೂರು: ಅಧಿಕೃತ ಏಜೆನ್ಸಿಗಳ ಕೋಡ್‌ ಬಳಸಿ ನಕಲಿ ವಾಹನ ವಿಮೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಅಧಿಕೃತ ಏಜೆಂಟ್‌ ನೀಡಿದ ದೂರಿನ ಅನ್ವಯ ನಗರ ಪೊಲೀಸರು ಓರ್ವ ಆರ್‌ಟಿಒ ದಲ್ಲಾಳಿಯನ್ನು ವಿಚಾರಣೆ ನಡೆಸಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ.

“ಅಧಿಕೃತ ಏಜೆನ್ಸಿಗಳ ಕೋಡ್‌ ಬಳಸಿ ನಕಲಿ ವಾಹನ ವಿಮೆ’ ಶೀರ್ಷಿಕೆಯಡಿ ಅ. 15ರಂದು ಉದಯವಾಣಿ ವರದಿ ಪ್ರಕಟಿಸಿದ ಬೆನ್ನಲ್ಲೇ ಈ ನಕಲಿ ವ್ಯವಹಾರದ ಕರಾಳ ಮುಖ ಹೊರ ಬರಲಾರಂಭಿಸಿದೆ. ಆರ್‌ಟಿಒ ದಲ್ಲಾಳಿ ಪುತ್ತೂರಿನ ಹೊರವಲಯದ ಅಶ³ಕ್‌ ತಪ್ಪೊಪ್ಪಿಕೊಂಡಿರುವ ವ್ಯಕ್ತಿ.

ಆರ್‌ಸಿ ಬದಲಾವಣೆಗೆ ನಕಲಿ ವಿಮೆ ಬಳಕೆ
ಅಬ್ದುಲ್‌ ಖಾದರ್‌ ಅವರು ಜಲೀಲ್‌ಗೆ ಅಟೋ ರಿಕ್ಷಾ ಮಾರಾಟ ಮಾಡಿದ್ದು, ಜಲೀಲ್‌ ಅ. 12ರಂದು ಪುತ್ತೂರು ವಿಮಾ ಕಚೇರಿಗೆ ಬಂದು ವಿಮೆಯನ್ನು ತನ್ನ ಹೆಸರಿಗೆ ಬದಲಾಯಿಸಲು ಮುಂದಾದ ಸಂದರ್ಭ ಈ ಆವಾಂತರ ಬೆಳಕಿಗೆ ಬಂದಿದೆ. ಆರ್‌ಸಿ ಬದಲಾವಣೆಗೆ ಆರ್‌ಟಿಒ ಕಚೇರಿಗೆ ವಿಮಾ ಪ್ರತಿ ಸಲ್ಲಿಸಬೇಕು. ಇದಕ್ಕಾಗಿ ನಕಲಿ ವಿಮೆ ತಯಾರಿಸಿ ನೀಡಲಾಗಿದೆ. ಇಲ್ಲಿ ಅಶ³ಕ್‌ನು ಖಾದರ್‌ ಅವರಿಗೆ ಆರ್‌ಸಿ ಬದಲಾವಣೆ ಸಂದರ್ಭ ಅಧಿಕೃತ ಸಂಸ್ಥೆಯ ಏಜೆನ್ಸಿ ಕೋಡ್‌ ಬಳಸಿ ಖಾದರ್‌ ಹೆಸರಿನಲ್ಲಿ ವಿಮೆ ನೀಡಿದ್ದಾರೆ. ಇದು ನಕಲಿ ಅನ್ನುವ ವಿಚಾರ ಖಾದರ್‌ ಅವರ ಗಮನಕ್ಕೂ ಬಂದಿರಲಿಲ್ಲ. ಅವರು ಅಸಲಿ ವಿಮೆಯೆಂದೇ ಭಾವಿಸಿ ವಿಮೆ ಸಹಿತ ಜಲೀಲ್‌ಗೆ ಅಟೋ ಮಾರಾಟ ಮಾಡಿದ್ದರು. ವಿಮೆ ನಕಲಿಯೆಂದು ತಿಳಿದಾಗ ಅಧಿಕೃತ ಸಂಸ್ಥೆಯ ಏಜೆಂಟ್‌ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ವಾಹನದ ಮಾಲಕನನ್ನು ವಿಚಾರಿಸಿದಾಗ ಆತ ತನಗೆ ವಿಮೆ ಮಾಡಿಕೊಟ್ಟ ದಲ್ಲಾಳಿ ಅಶ³ಕ್‌ನ ಮಾಹಿತಿ ನೀಡಿದರು.

ವಿಮೆ ಅಧಿಕಾರಿಗಳ ನಿರ್ಲಕ್ಷ ಕಾರಣ
ಆರ್‌ಸಿ ಬದಲಾವಣೆ ಸಂದರ್ಭ ಆ ವಾಹನದ ವಿಮೆ ಪ್ರತಿಯನ್ನು ಆರ್‌ಟಿಒ ಕಚೇರಿಗೆ ಸಲ್ಲಿಸಬೇಕು. ಆರ್‌ಟಿಒ ಅಧಿಕಾರಿಗಳು ಪರಿಪೂರ್ಣವಾಗಿ ಪರಿಶೀಲಿಸದೆ ವಿಮೆ ಪಾಲಿಸಿ ಪತ್ರದಲ್ಲಿ ವಾಹನದ ಮಾಹಿತಿ ಮತ್ತು ದಿನಾಂಕ ಮಾತ್ರ ನೋಡಿ ಒಪ್ಪಿಗೆ ನೀಡುತ್ತಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಅನಧಿಕೃತ ದಲ್ಲಾಳಿಗಳು ಆರ್‌ಸಿ ವರ್ಗಾವಣೆಗೆ ವಿಮೆ ಕಟ್ಟುವ ಹೆಸರಿನಲ್ಲಿ ವಾಹನ ಮಾಲಕರಿಂದ ಹಣ ವಸೂಲಿ ಮಾಡಿ, ಅನಂತರ ನಕಲಿ ವಿಮೆ ಸೃಷ್ಟಿಸುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇಂತಹ ಜಾಲ ಸಕ್ರಿಯವಾಗಲು ಕಾರಣ ಎನ್ನುವ ಅಂಶವೀಗ ಸ್ಪಷ್ಟವಾಗಿದೆ.

ಕ್ಯುಆರ್‌ ಕೋಡ್‌ ಸ್ಕ್ಯಾನ್‌
ವಿಮೆ ಅಸಲಿ/ನಕಲಿ ಬಯಲು ತಾನು ಹೊಂದಿರುವ ವಿಮೆ ನಕಲಿಯೊ ಅಥವಾ ಅಸಲಿಯೋ ಎಂದು ಅರಿಯಲು ಸ್ಮಾರ್ಟ್‌ ಫೋನ್‌ ಹೊಂದಿರುವ ವಿಮಾದಾರರು ವಿಮಾ ಪ್ರತಿಯಲ್ಲಿರುವ ಕ್ಯುಆರ್‌ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದರೆ ಖಾತರಿ ಆಗುತ್ತದೆ. ಆದರೆ ಈ ಕಾರ್ಯವನ್ನು ಆರ್‌ಟಿಒ ಅಧಿಕಾರಿಗಳಾಗಲಿ, ಸಂಚಾರ ಪೊಲೀಸರಾಗಲಿ ಮಾಡುತ್ತಿಲ್ಲ.

ಪೈಪೋಟಿ ನೆಪ; ಸೌಲಭ್ಯಕ್ಕೆ ಕುತ್ತು!
ವಾಹನ ವಿಮೆ ಮಾಡಿಸಿಕೊಡಲು ಹಲವು ಪೋರ್ಟಲ್‌ ಕಚೇರಿಗಳು ಕಾರ್ಯ ನಿರ್ವ ಹಿಸುತ್ತಿದ್ದು ಕೆಲವು ವಿಮಾ ಪ್ರತಿನಿಧಿಗಳು ಭಾರೀ ರಿಯಾಯಿತಿ ದರದಲ್ಲಿ ಪಾಲಿಸಿ ಮಾಡುವ ಆಫರ್‌ ನೀಡುತ್ತಿದ್ದಾರೆ. ಇದರ ನಿಜವಾದ ಅಸಲಿಯತ್ತು ಪರಿಶೀಲಿಸಿದರೆ ದರ ಕಡಿಮೆಯಿಂದ ವಿಮಾದಾರ ಹಲವು ಸೌಲಭ್ಯಗಳಿಂದ ವಂಚಿತನಾಗುತ್ತಿದ್ದಾನೆ ಎನ್ನುವುದು ಖಚಿತ. ಉದಾಹರಣೆಗೆ ವಾಹನದ ಡಿಎಲ್‌ ಹೊಂದಿರುವ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ ಅಥವಾ ಅಂಗ ಊನವಾಗಿ ಕೆಲಸ ಮಾಡುವ ಶಕ್ತಿ ಕಳೆದುಕೊಂಡರೆ ತನ್ನ ವಾಹನಕ್ಕೆ ಪಾವತಿಸಿದ ವಿಮೆಯಿಂದ 15 ಲಕ್ಷ ರೂ. ಪರಿಹಾರ ಕುಟುಂಬಕ್ಕೆ ದೊರೆಯುತ್ತದೆ. ಕಡಿಮೆ ದರದಲ್ಲಿ ಪಾಲಿಸಿ ಮಾಡಿಕೊಡುವ ಸಂದರ್ಭ ಇಂತಹ ಸೌಲಭ್ಯ ದೊರೆಯದಂತಹ ಪಾಲಿಸಿಯನ್ನು ನೀಡಲಾಗುತ್ತಿದೆ. ಈ ಬಗ್ಗೆ ವಿಮೆ ಕಂತು ಪಾವತಿಸುವ ಸಂದರ್ಭ ಫಲಾನುಭವಿ ಎಚ್ಚರಿಕೆಯಿಂದ ಇರಬೇಕು ಎಂದು ವಿಮಾ ತಜ್ಞರು ತಿಳಿಸಿದ್ದಾರೆ.

ಏಜೆಂಟ್‌ ನೀಡಿದ ದೂರಿನ ಆಧಾರದಲ್ಲಿ ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಆತ ಎರಡು ನಕಲಿ ವಿಮೆ ಮಾಡಿರುವ ಬಗ್ಗೆ ಒಪ್ಪಿದ್ದಾನೆ. ಎರಡು ದಿನದೊಳಗೆ ಅಸಲಿ ವಿಮೆ ಹಾಜರುಪಡಿಸುವಂತೆ ಸೂಚಿಸಲಾಗಿದೆ.
– ಜಂಬೂರಾಜ್‌,  ಎಸ್‌ಐ ಪುತ್ತೂರು ನಗರ ಠಾಣೆ

ಟಾಪ್ ನ್ಯೂಸ್

1-ff

ಬೆಂಗಳೂರಿನ ರಸ್ತೆ ಗುಂಡಿ: ಡೆಲಿವರಿ ಬಾಯ್ ಸಾವು; ಅಧಿಕಾರಿ ವಿರುದ್ಧವೇ ಕೇಸ್!

1-dddf

ಪರಿಷತ್ ಪ್ರಚಾರದಿಂದ ದೂರ : ಕಾರಣ ತಿಳಿಸಿದ ಸಂಸದ ಅನಂತಕುಮಾರ‌ ಹೆಗಡೆ

1-fewq3

ಆನ್ ಲೈನ್ ವಂಚನೆ : ವಿಜಯಪುರ ಪೊಲೀಸರಿಂದ ನೈಜೀರಿಯಾ ಪ್ರಜೆಯ ಬಂಧನ

1-gg

ಶಿಕ್ಷಣ ಕ್ಷೇತ್ರಕ್ಕೆ ಬಿಜಿಎಸ್ ಕೊಡುಗೆ ಅವಿಸ್ಮರಣೀಯ: ಸಚಿವ ಕೆ.ಗೋಪಾಲಯ್ಯ

1-r4w

ಹಸುವಿನ ಹೊಟ್ಟೆಯಲ್ಲಿತ್ತು 77 ಕೆಜಿ ಐಸ್ ಕ್ರೀಮ್ ಕಪ್ ಗಳು, ಚಮಚಗಳು

ತರಗತಿಯೊಳಗೆ ನುಗ್ಗಿದ ಚಿರತೆ, ವಿದ್ಯಾರ್ಥಿ ಮೇಲೆ ದಾಳಿ, ಪ್ರಾಣಾಪಾಯದಿಂದ ಪಾರು

ತರಗತಿಯೊಳಗೆ ನುಗ್ಗಿದ ಚಿರತೆ, ವಿದ್ಯಾರ್ಥಿ ಮೇಲೆ ದಾಳಿ, ಪ್ರಾಣಾಪಾಯದಿಂದ ಪಾರು

shivaram

ಹಿರಿಯ ಚಿತ್ರ ನಟ ಶಿವರಾಂ ಅರೋಗ್ಯ ಸ್ಥಿತಿ ಗಂಭೀರ ; ಐಸಿಯುನಲ್ಲಿ ಚಿಕಿತ್ಸೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ವರ್ಣಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ವಿಹಾರ

ಸ್ವರ್ಣಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ವಿಹಾರ

ಅರಂತೋಡು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಐರಾವತ ಬಸ್ : ತಪ್ಪಿದ ಭಾರಿ ದುರಂತ

ಅರಂತೋಡು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಐರಾವತ ಬಸ್ : ತಪ್ಪಿದ ಭಾರಿ ದುರಂತ

ಧರ್ಮಸ್ಥಳ ದೀಪೋತ್ಸವ: ಹೊಸಕಟ್ಟೆ ಉತ್ಸವ

ಧರ್ಮಸ್ಥಳ ದೀಪೋತ್ಸವ: ಹೊಸಕಟ್ಟೆ ಉತ್ಸವ

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

Untitled-2

ಪಾದಯಾತ್ರೆಯಿಂದ ಆರಂಭವಾಯಿತು ಲಕ್ಷದೀಪೋತ್ಸವ

MUST WATCH

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

udayavani youtube

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೊಲೆಗೆ ಸಂಚು ಮಾಡಿಲ್ಲ : ಗೋಪಾಲ ಕೃಷ್ಣ

udayavani youtube

ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್!

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

ಹೊಸ ಸೇರ್ಪಡೆ

nadhigiridama

3 ತಿಂಗಳ ಬಳಿಕ ನಂದಿಗಿರಿಧಾಮ ವೀಕ್ಷಣೆಗೆ ಮುಕ್ತ

1-ff

ಬೆಂಗಳೂರಿನ ರಸ್ತೆ ಗುಂಡಿ: ಡೆಲಿವರಿ ಬಾಯ್ ಸಾವು; ಅಧಿಕಾರಿ ವಿರುದ್ಧವೇ ಕೇಸ್!

stage play

10ರಿಂದ 10 ದಿನ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

1-dddf

ಪರಿಷತ್ ಪ್ರಚಾರದಿಂದ ದೂರ : ಕಾರಣ ತಿಳಿಸಿದ ಸಂಸದ ಅನಂತಕುಮಾರ‌ ಹೆಗಡೆ

1-fewq3

ಆನ್ ಲೈನ್ ವಂಚನೆ : ವಿಜಯಪುರ ಪೊಲೀಸರಿಂದ ನೈಜೀರಿಯಾ ಪ್ರಜೆಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.