‘ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಿದರೆ ಅಂತರ್ಜಲ ಹೆಚ್ಚಳ’

ವೇಣೂರು: ಐಸಿವೈಎಂನಿಂದ ಅಜಿಲಕೆರೆಯ ಅಭಿವೃದ್ಧಿ

Team Udayavani, May 30, 2019, 6:00 AM IST

x-15

ತಹಶೀಲ್ದಾರ್‌ ಗಣಪತಿ ಶಾಸ್ತ್ರಿಯವರು ಹೂಳೆತ್ತುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು.

ವೇಣೂರು: ಐತಿಹಾಸಿಕ ಹಿನ್ನೆಲೆಯಿರುವ ವೇಣೂರು ಅಜಿಲ ಕೆರೆಯನ್ನು ಮಂಗಳೂರು ಧರ್ಮಪ್ರಾಂತದ ಭಾರತೀಯ ಕೆಥೋಲಿಕ್‌ ಯುವ ಸಂಚಲನ (ಐಸಿವೈಎಂ) ಆಶ್ರಯದಲ್ಲಿ ವೇಣೂರು ಗ್ರಾ.ಪಂ. ಸಹಕಾರದೊಂದಿಗೆ ಯುವಜನರ ವರ್ಷದ ಪ್ರಯುಕ್ತ ವೇಣೂರು ಕ್ರಿಸ್ತರಾಜ ದೇವಾಲಯದ ಐಸಿವೈಎಂ ಘಟಕದ ಸಹಭಾಗಿತ್ವದಲ್ಲಿ ಬುಧವಾರ ಶ್ರಮದಾನದ ಮೂಲಕ ಹೂಳೆತ್ತ‌ಲಾಯಿತು.

ಬೆಳ್ತಂಗಡಿ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪುರಾತನ ಕೆರೆ, ಬಾವಿಗಳ ಅಭಿವೃದ್ಧಿಗೆ ಪ್ರತಿಬಂಧಿಸುವುದು ಸರಿಯಲ್ಲ. ಜಾಗದ ಮೋಹದಿಂದ ಇಂತಹ ಕೆರೆ, ಬಾವಿಗಳು ಪಾಳು ಬೀಳಲು ಕಾರಣವಾಗುತ್ತಿವೆ. ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸುವುದರಿಂದ ಅಂತ ರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಇದೊಂದು ಪುಣ್ಯದ ಕಾರ್ಯ. ಜಲಸಂರಕ್ಷಣೆಗೆ ಸಹಕಾರ ನಿರಂತರ ನೀಡುತ್ತೇನೆ ಎಂದರು.

ಮಂಗಳೂರು ಧರ್ಮಪ್ರಾಂತದ ಐಸಿವೈಎಂ ಯುವ ನಿರ್ದೇಶಕ ವಂ| ರೊನಾಲ್ಡ್ ಡಿ’ಸೋಜಾ ಅಧ್ಯಕ್ಷತೆ ವಹಿಸಿ ದ್ದರು. ಬೆಳ್ತಂಗಡಿ ವಲಯದ ಐಸಿವೈಎಂ ಯುವ ನಿರ್ದೇಶಕರಾದ ವಂ| ಬೇಸಿಲ್ ವಾಸ್‌ ಸಂದೇಶ ನೀಡಿ, ನೂರಾರು ಜನತೆಗೆ ಉಪಯೋಗವಾಗುವ ಇಂತಹ ಕಾರ್ಯಗಳು ಯುವಶಕ್ತಿಯಿಂದ ನಿರಂತರ ವಾಗಿ ನಡೆಯಲಿ ಎಂದರು.

ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಪೀಟರ್‌ ಅರನ್ಹಾ, ಮಂಗಳೂರು ಧರ್ಮಪ್ರಾಂತದ ಐಸಿವೈಎಂ ಸಹಾಯಕ ನಿರ್ದೇಶಕ ವಂ| ಅಶ್ವಿ‌ನ್‌ ಕರ್ಡೊಜಾ, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ತಾ.ಪಂ. ಸದಸ್ಯ ಕೆ. ವಿಜಯ ಗೌಡ, ಬೆಳ್ತಂಗಡಿ ಲೋಕೋ ಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತ ಶಿವಪ್ರಸಾದ್‌ ಅಜಿಲ, ವೇಣೂರಿನ ವೈದ್ಯ ಡಾ| ಶಾಂತಿಪ್ರಸಾದ್‌, ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್‌ ಕ್ರಾಸ್ತ, ವೇಣೂರು ಚರ್ಚ್‌ನ ಪಾಲನ ಪರಿಷತ್‌ ಉಪಾಧ್ಯಕ್ಷ ರೊನಾಲ್ಡ್ ಡಿ’ಸೋಜಾ, ಕಾರ್ಯದರ್ಶಿ ಸ್ಟೀವನ್‌ ಡಿ’ಕುನ್ಹಾ, ವೇಣೂರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣರಾಜ, ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ದಾಖಲಾತಿ ಅಧಿಕಾರಿ ಎಲ್.ಜೆ. ಫೆರ್ನಾಂಡಿಸ್‌, ಉದ್ಯಮಿ ಜೇಮ್ಸ್‌ ಮೆಂಡೊನ್ಸಾ, ವೇಣೂರು ನವಚೇತನ ಶಾಲೆಯ ಮುಖ್ಯ ಶಿಕ್ಷಕಿ ಭ| ಶಾಲಿನಿ ಡಿ’ಸೋಜಾ, ಮೂಡುಕೋಡಿ ಹಾಲು ಉ.ಸ. ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ವೇಣೂರು ಐಸಿವೈಎಂ ಅಧ್ಯಕ್ಷ ಡೆಲ್ಸನ್‌ ಡಿ’ಸೋಜಾ, ಸಚೇತಕಿ ಭ| ವಿಲ್ಮಾ ಡೇಸಾ, ಸಚೇತಕ ಅರುಣ್‌ ಡಿ’ಸೋಜಾ, ಕಾರ್ಯದರ್ಶಿ ರೇಶ್ಮಾ ಫೆರ್ನಾಂಡಿಸ್‌, ಡೆನ್ನಿಸ್‌ ಸಿಕ್ವೇರಾ, ಆಲ್ಬರ್ಟ್‌ ಫೆರ್ನಾಂಡಿಸ್‌, ವಿಲ್ಸಾ ಮೊಂತೇರೋ, ವೇಣೂರು ಗ್ರಾ.ಪಂ. ಸದಸ್ಯರು, ಐಸಿವೈಎಂ ನಿರ್ದೇಶಕರು, ಸದಸ್ಯರು, ವೇಣೂರು ಹೋಬಳಿಯ ಗ್ರಾಮ ಲೆಕ್ಕಿಗರು ಹಾಗೂ ಸಹಾಯಕರು ಶ್ರಮದಾನದಲ್ಲಿ ಕೈಜೋಡಿಸಿದರು. ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್‌ ಕ್ರಾಸ್ತ ಪ್ರಸ್ತಾವಿಸಿ, ಅನೂಪ್‌ ಜೆ. ಪಾಯಸ್‌ ಸ್ವಾಗತಿಸಿದರು. ಸ್ಟಾನಿ ಡಿ’ಸೋಜಾ ನಿರೂಪಿಸಿ, ಮಂಗಳೂರು ಧರ್ಮಪ್ರಾಂತದ ಐಸಿವೈಎಂ ಕಾರ್ಯದರ್ಶಿ ಪೆವಿಶಾ ಮೊಂತೇರೋ ವಂದಿಸಿದರು. 60 ಐಸಿವೈಎಂ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.