ಐದೇ ತಿಂಗಳಲ್ಲಿ ಕಳಪೆ ಕಾಮಗಾರಿ ಬಯಲು

ಕುಂಡಡ್ಕ -ಚೆನ್ನಾವರ ಸಂಪರ್ಕ ರಸ್ತೆ ಕಾಮಗಾರಿ

Team Udayavani, Oct 7, 2022, 10:54 AM IST

6

ಬೆಳ್ಳಾರೆ: ಪೆರುವಾಜೆ ಗ್ರಾಮದ ಕುಂಡಡ್ಕ-ಚೆನ್ನಾವರ ತನಕದ ರಸ್ತೆಗೆ ಡಾಮರು ಹಾಕಿದ ಐದೇ ತಿಂಗಳಲ್ಲಿ ಅಲ್ಲಲ್ಲಿ ಬಿರುಕು ಬಿಡುವ ಹಂತಕ್ಕೆ ತಲುಪಿದ್ದು ಕಳಪೆ ಕಾಮಗಾರಿಯ ನಿಜ ಬಣ್ಣವನ್ನು ತೆರೆದಿಟ್ಟಿದೆ.

ಲಕ್ಷಾಂತರ ರೂ.ಖರ್ಚು ಮಾಡಿ ನಿರ್ಮಿಸಿದ ರಸ್ತೆ ಕೆಲವು ತಿಂಗಳಲ್ಲಿಯೇ ಬಿರುಕು ಬಿಡುವ ಹಂತದಲ್ಲಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

20 ಲಕ್ಷ ರೂ. ವೆಚ್ಚ

ಜಿ.ಪಂ. ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪವಿಭಾಗದ ವ್ಯಾಪ್ತಿಯ ಕುಂಡಡ್ಕದಿಂದ ಚೆನ್ನಾವರದ ಮೂಲಕ ಪಾಲ್ತಾಡಿಯನ್ನು ಬೆಸೆಯುವ ರಸ್ತೆ ಇದಾಗಿದೆ. ತೀರಾ ಹದಗೆಟ್ಟಿದ್ದ ರಸ್ತೆಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಪ್ರಯತ್ನದ ಫಲವಾಗಿ 2020- 21ನೇ ಸಾಲಿನ ಪ್ರಾಕೃತಿಕ ವಿಕೋಪ ಮಳೆ ಹಾನಿಯಡಿ 20 ಲಕ್ಷ ರೂ. ಮಂಜೂರಾಗಿತ್ತು. ಗುದ್ದಲಿ ಪೂಜೆ ನಡೆದು ಕಳೆದ ಎಪ್ರಿಲ್‌ನಲ್ಲಿ ಕಾಮಗಾರಿ ಪ್ರಾರಂಭಗೊಂಡಿತು. ಸುಮಾರು 1 ಕಿ.ಮೀ.ದೂರ ರಸ್ತೆ ಹೊಸದಾಗಿ ಡಾಮರೀಕರಣಗೊಂಡಿತು.

ಸಂಚಾರಕ್ಕೆ ಸಂಕಟ

ಕಾಮಗಾರಿ ನಡೆದು ನಾಲ್ಕೇ ತಿಂಗಳಲ್ಲಿ ರಸ್ತೆಯ ನಿಜ ಸ್ಥಿತಿ ಬೆಳಕಿಗೆ ಬಂದಿದೆ. ಚೆನ್ನಾವರ ಸೇತುವೆ ಬಳಿಯಿಂದ ಅಲ್ಲಲ್ಲಿ ಡಾಮರು ಎದ್ದೇಳುತ್ತಿದ್ದು ರಸ್ತೆಯಿಡಿ ಜಲ್ಲಿ ಹುಡಿ ಆವರಿಸಿದೆ. ಇದರಿಂದ ದ್ವಿ-ಚಕ್ರ ವಾಹನ ಸಂಚಾರದ ವೇಳೆ ಸ್ಕಿಡ್‌ ಆಗುವ ಆತಂಕ ಮೂಡಿದೆ. ಒಟ್ಟಿನಲ್ಲಿ 20 ಲಕ್ಷ ರೂ. ವೆಚ್ಚ ಭರಿಸಿದ್ದು ಬಂಡೆ ಕಲ್ಲಿನ ಮೇಲೆ ನೀರು ಹೊಯ್ದಂತಹ ಕಥೆಯಂತಾಗಿದೆ. ತೀರಾ ನಾದುರಸ್ತಿ ಯಲ್ಲಿದ್ದ ರಸ್ತೆ ದಶಕಗಳ ಬಳಿಕ ಮರು ಡಾಮರೀಕರಣಗೊಂಡಾಗ ರಸ್ತೆ ಫಲಾನುಭವಿಗಳು ಸಮಸ್ಯೆಗೆ ಮುಕ್ತಿ ಸಿಕ್ಕಿತು ಎಂದು ಭಾವಿಸಿದ್ದರು. ಇದು ಐದೇ ತಿಂಗಳಲ್ಲಿ ಸುಳ್ಳಾಗಿದೆ.

ಲೋಕಾಯುಕ್ತಕ್ಕೆ ದೂರು ಪ್ರತಿಭಟನೆಯ ಎಚ್ಚರಿಕೆ

ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದ್ದು ಹೀಗಾಗಿ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಸ್ಥಳೀಯ ನಿವಾಸಿಗಳು ನಿರ್ಧರಿಸಿ ದ್ದಾರೆ. ತತ್‌ಕ್ಷಣ ಕಾಮಗಾರಿ ನಿರ್ವ ಹಣೆಯ ಇಲಾಖೆಯ ಅಧಿ ಕಾರಿ ಗಳನ್ನು, ಗುತ್ತಿಗೆದಾರನನ್ನು ಕರೆಯಿಸಿ ರಸ್ತೆ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳ ಬೇಕು. ಇಲ್ಲದಿದ್ದರೆ ಸಂಬಂಧಿಸಿ ಇಲಾಖೆ ಮುಂಭಾಗ ಪ್ರತಿ ಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ದೂರು ಬಂದಿದೆ: ಹೊಸದಾಗಿ ಡಾಮರು ಹಾಕಿರುವ ರಸ್ತೆ ಇದಾಗಿದ್ದು ಕಳಪೆಯ ಬಗ್ಗೆ ಸ್ಥಳೀಯರಿಂದ ಗ್ರಾ.ಪಂ.ಗೆ ದೂರು ಬಂದಿದೆ. ಕಾಮಗಾರಿಯಲ್ಲಿ ಕಮಿಷನ್‌ ವ್ಯವಹಾರ ನಡೆದಿರುವ ಆರೋಪವು ಇದೆ. ಹೀಗಾಗಿ ತನಿಖೆಗೆ ಸಂಬಂಧಿಸಿ ಲೋಕಾಯುಕ್ತಕ್ಕೆ ದೂರು ನೀಡಬೇಕು ಎನ್ನುವ ಆಗ್ರಹ ಬಂದಿದೆ. ಪಂಚಾಯತ್‌ ಸಭೆಗಳಲ್ಲಿ ಈ ಬಗ್ಗೆ ಚರ್ಚಿಸಿ ತನಿಖೆಗೆ ಕ್ರಮ ಕೈಗೊಳ್ಳಲಾಗುವುದು. – ಜಗನ್ನಾಥ ಪೂಜಾರಿ ಮುಕ್ಕೂರು ಅಧ್ಯಕ್ಷರು ಪೆರುವಾಜೆ ಗ್ರಾಮ

ಪ್ರತಿಭಟನೆ: ಐದೇ ತಿಂಗಳಲ್ಲಿ ರಸ್ತೆ ಹಾಳಾಗಿದೆ. ಮೊದಲ ಮಳೆಯಲ್ಲಿ ಬಿರುಕು ಬಿಟ್ಟಿದ್ದ ರಸ್ತೆಯು ಈಗ ವಿವಿಧ ಭಾಗಗಳಲ್ಲಿ ಕಳಪೆ ಕಾಮಗಾರಿಯನ್ನು ತೆರೆದಿಟ್ಟಿದೆ. ರಸ್ತೆಯ ಸಮಗ್ರ ತನಿಖೆಯ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು. ಕಳೆಪೆ ಕಾಮಗಾರಿ ವಿರುದ್ಧ ಪ್ರತಿಭಟನೆ ನಡೆಸ ಲಾಗುವುದು. – ಇಕ್ಬಾಲ್‌ ಚೆನ್ನಾವರ ರಸ್ತೆ ಫಲಾನುಭವಿ

ಟಾಪ್ ನ್ಯೂಸ್

ಮಿವಿ ಯಿಂದ ಹೊಸ ಸ್ಮಾರ್ಟ್ ವಾಚ್‍ ‘ಮಾಡೆಲ್‍ ಇ’ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

ಮಿವಿ ಯಿಂದ ಹೊಸ ಸ್ಮಾರ್ಟ್ ವಾಚ್‍ ‘ಮಾಡೆಲ್‍ ಇ’ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

1-wadasdad

ಮಣಿಕಂಠ, ಪೊಲೀಸ್ ಆಯುಕ್ತರ ಪತ್ನಿ ವಿರುದ್ಧ ಪ್ರಕರಣಕ್ಕೆ ಕಾಂಗ್ರೆಸ್ ಆಗ್ರಹ

Reddy

ರಾಜಕೀಯ ಪುನರ್ ಜನ್ಮ?; ಸರ್ವ ಸಿದ್ಧತೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ

ಜೆಇ ಲಸಿಕೆ ಪಡೆದ ಇಬ್ಬರು‌ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಜೆಇ ಲಸಿಕೆ ಪಡೆದ ಇಬ್ಬರು‌ ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Exam

ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

strress and walking web exclusive

ಒತ್ತಡದ ಜೀವನ: ಪ್ರತಿದಿನ ವಾಕಿಂಗ್ ನಿಂದ ಆರೋಗ್ಯಕ್ಕೆ ಹಲವಾರು ಉಪಯೋಗ…

1-sdsdsad

ಜಿ20 ಶೃಂಗಸಭೆಗೆ ಸಲಹೆಗಳನ್ನು ಕೋರಲು ಸರ್ವಪಕ್ಷಗಳ ಸಭೆ; ಕಮಲದ ಚಿಹ್ನೆ ಏಕೆ ಎಂದು ಮಮತಾ ಪ್ರಶ್ನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಪಲ್ಟಿ; ವೈದ್ಯ ಸೇರಿ ಮೂವರಿಗೆ ಗಾಯ

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಪಲ್ಟಿ; ವೈದ್ಯ ಸೇರಿ ಮೂವರಿಗೆ ಗಾಯ

11

ಬಂಟ್ವಾಳ: ಲಾರಿಯಡಿಗೆ ಬಿದ್ದು ಮಹಿಳೆ ಮೃತ್ಯು

tdy-37

ಪಶು ಸಂಜೀವಿನಿ: ದಕ್ಷಿಣ ಕನ್ನಡ ಜಿಲ್ಲೆಗೆ 9 ವಾಹನ 

ಪ್ರಾಥಮಿಕ ಶಿಕ್ಷಣ ಮೌಲ್ಯಯುತ: ಡಾ| ಹೆಗ್ಗಡೆ

ಪ್ರಾಥಮಿಕ ಶಿಕ್ಷಣ ಮೌಲ್ಯಯುತ: ಡಾ| ಹೆಗ್ಗಡೆ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಸುಳ್ಯ ಕ್ಷೇತ್ರದಲ್ಲಿ 22 ಕೋ. ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಸುಳ್ಯ ಕ್ಷೇತ್ರದಲ್ಲಿ 22 ಕೋ. ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ

MUST WATCH

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

ಹೊಸ ಸೇರ್ಪಡೆ

ಮಿವಿ ಯಿಂದ ಹೊಸ ಸ್ಮಾರ್ಟ್ ವಾಚ್‍ ‘ಮಾಡೆಲ್‍ ಇ’ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

ಮಿವಿ ಯಿಂದ ಹೊಸ ಸ್ಮಾರ್ಟ್ ವಾಚ್‍ ‘ಮಾಡೆಲ್‍ ಇ’ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

1-wadasdad

ಮಣಿಕಂಠ, ಪೊಲೀಸ್ ಆಯುಕ್ತರ ಪತ್ನಿ ವಿರುದ್ಧ ಪ್ರಕರಣಕ್ಕೆ ಕಾಂಗ್ರೆಸ್ ಆಗ್ರಹ

Reddy

ರಾಜಕೀಯ ಪುನರ್ ಜನ್ಮ?; ಸರ್ವ ಸಿದ್ಧತೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ

ಜೆಇ ಲಸಿಕೆ ಪಡೆದ ಇಬ್ಬರು‌ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಜೆಇ ಲಸಿಕೆ ಪಡೆದ ಇಬ್ಬರು‌ ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Exam

ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.