ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
Team Udayavani, Jan 27, 2022, 7:06 PM IST
ಬಂಟ್ವಾಳ: ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಅಂದಾಜು 35 ವರ್ಷದ ವ್ಯಕ್ತಿಯ ಶವ ಪಾಣೆಮಂಗಳೂರು ನೇತ್ರಾವತಿ ಹಳೆ ಸೇತುವೆ ಕೆಳಭಾಗದಲ್ಲಿ ನದಿಯಲ್ಲಿ ತೇಲಾಡುವ ಸ್ಥಿತಿಯಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಪೋಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು.
ಸ್ಥಳೀಯರು ನಾಡದೋಣಿ ನಾವಿಕ ಮಹಮ್ಮದ್ ಗೂಡಿನಬಳಿ ಅವರ ತಂಡ ಶವವನ್ನು ನದಿಯಿಂದ ಮೇಲಕ್ಕೆ ಎತ್ತಿ ಹಾಕಿದ್ದಾರೆ.
ಬುಧವಾರ ನದಿಗೆ ಬಿದ್ದಿರಬಹುದು ಎಂಬ ಶಂಕೆಯನ್ನು ಶವವನ್ನು ಮೇಲಕ್ಕೆ ಎತ್ತಿ ದ ಈಜುಗಾರರು ಶಂಕೆ ವ್ಯಕ್ತಪಡಿಸಿದ್ದಾರೆ.
ಯಾವುದೇ ಗುರುತು ಪತ್ತೆ ಯಾಗದ ಹಿನ್ನಲೆಯಲ್ಲಿ ಪೋಲೀಸರು ಶವವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡುವ ವ್ಯವಸ್ಥೆ ಮಾಡಿದ್ದಾರೆ.