ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
Team Udayavani, Jan 29, 2022, 1:47 PM IST
ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ಬಂಟ್ವಾಳ ಸಜಿಪಮುನ್ನೂರು ಗ್ರಾಮದ ಮಡಿವಾಳಪಡ್ಪು ನಿವಾಸಿ ದೇವಪ್ಪ ಮಡಿವಾಳ (60) ಮೃತ ದುರ್ಧೈವಿ. ಮುಗುಳ್ಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿರುವ ದೇವಪ್ಪ ಮಡಿವಾಳ ಪ್ರಗತಿಪರ ಕೃಷಿಕರಾಗಿದ್ದರು.
ಇದನ್ನೂ ಓದಿ: ಹಾಸನ: ಸಾಲ ತೀರಿಸಲಾಗದೆ ಸ್ನೇಹಿತನನ್ನು ಕೊಂದ ದಂಪತಿ
ಮನೆಯಿಂದ ಬೆಳಗ್ಗೆ ಪೇಟೆಯಿಂದ ಹೊರಟ ಅವರು ಪಾಣೆಮಂಗಳೂರು ಕಿರುಸೇತುವೆ ಬಳಿ ನೀರಿಗೆ ಹಾರಿದ್ದಾರೆ. ಸ್ಥಳೀಯರು ಇದನ್ನು ಗಮನಿಸಿ ಮಾಹಿತಿ ನೀಡಿದ್ದು, ಬಂಟ್ವಾಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.