ಕಲ್ಲಪಣೆ: ಪಾಳು ಬಿದ್ದಿದೆ ಬಸ್‌ ತಂಗುದಾಣ


Team Udayavani, Nov 5, 2019, 4:17 AM IST

zz-46

ಕುಸಿದು ಬೀಳುವ ಸ್ಥಿತಿಯಲ್ಲಿರುವ ಕೊಡಿಯಾಲ ಬಸ್‌ ನಿಲ್ದಾಣ.

ಬೆಳ್ಳಾರೆ: ಕೊಡಿಯಾಲ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಕಲ್ಲಪಣೆ ಎಂಬಲ್ಲಿನ ಪ್ರಯಾಣಿಕರ ಬಸ್‌ ತಂಗುದಾಣ ಪಾಳು ಬಿದ್ದ ಸ್ಥಿತಿಯಲ್ಲಿದ್ದು, ಛಾವಣಿ ಕುಸಿದು ನಿಂತಿದೆ.

ಬಸ್‌ ನಿಲ್ದಾಣದ ಛಾವಣಿಯ ಮರದ ಪಕ್ಕಾಸು ಮುರಿದು ಹೋಗಿದೆ. ಹೆಂಚಿನ ಛಾವಣಿಯ ಒಂದು ಭಾಗ ಕುಸಿದು ಹೋಗಿದ್ದು, ಪ್ರಯಾಣಿಕರಿಗೆ ಬಸ್‌ ನಿಲ್ದಾಣದೊಳಗೆ ಕುಳಿತುಕೊಳ್ಳದ ರೀತಿಯಲ್ಲಿದೆ. ಕಲ್ಲಪಣೆಗೆ ದಿನಂಪ್ರತಿ ಸರಕಾರಿ ಬಸ್‌ ಹೋಗುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಇಲ್ಲಿ ಬಸ್‌ ನಿಲ್ದಾಣ ನಿರ್ಮಿಸಲಾಗಿತ್ತು. ಆದರೆ ಬಸ್‌ ನಿಲ್ದಾಣದ ದುಃಸ್ಥಿತಿಯಿಂದಾಗಿ ಪ್ರಯಾಣಿಕರು ರಸ್ತೆಯಲ್ಲೇ ಬಸ್‌ಗಳಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಳಿ ಮಳೆಗೆ ಮರದ ಛಾವಣಿಯ ಪಕ್ಕಾಸು ಶಿಥಿಲಗೊಂಡು ಭಾಗಶಃ ಕುಸಿದು ಹೋಗಿದ್ದು, ಛಾವಣಿ ಪೂರ್ಣವಾಗಿ ಕುಸಿದು ಬೀಳುವ ಅಪಾಯದಲ್ಲಿದೆ. ಮುಖ್ಯ ರಸ್ತೆಯ ಬದಿಯಲ್ಲೇ ಇರುವ ಈ ಬಸ್‌ ನಿಲ್ದಾಣದಲ್ಲಿ ಅಂಗಡಿ ಕೋಣೆ ಸಹಿತ ಪ್ರಯಾಣಿಕರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಪ್ರಯಾಣಿಕರು ಬಿಸಿಲಿಗೆ ನಿಂತು ಕಾಯುವುದನ್ನು ತಪ್ಪಿಸಲು ಛಾವಣಿಗೆ ಸಿಮೆಂಟ್‌ ಶೀಟ್‌ ಹಾಕಿಯಾದರೂ ಸರಿಪಡಿಸಿಕೊಡಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಛಾವಣಿ ದುರಸ್ತಿಗೊಳಿಸಿ
ಬಸ್‌ ನಿಲ್ದಾಣದ ಛಾವಣಿ ರಿಪೇರಿ ಮಾಡಿದಲ್ಲಿ ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಹಲವು ವರ್ಷಗಳಿಂದ ಸಾರ್ವಜನಿಕ ಬಸ್‌ ನಿಲ್ದಾಣ ರಿಪೇರಿಯಾಗದೆ ಬೀಳುವ ಸ್ಥಿತಿಯಲ್ಲಿದೆ. ಛಾವಣಿ ಸಂಪೂರ್ಣ ಕುಸಿದು ಬೀಳುವ ಮೊದಲು ಸರಿಪಡಿಸಬೇಕಿದೆ.
– ಸಂತೋಷ್‌ ಕೊಡಿಯಾಲ, ಸ್ಥಳೀಯರು

ಶೀಘ್ರ ದುರಸ್ತಿ
ಬಸ್‌ ನಿಲ್ದಾಣವನ್ನು ದುರಸ್ತಿಗೊಳಿಸಲು ನಮ್ಮ ಗ್ರಾಮ ನಮ್ಮ ಯೋಜನೆಯಲ್ಲಿ ಕ್ರಿಯಾ ಯೋಜನೆ ರೂಪಿಸಿದ್ದೇವೆ. ಪಂಚಾಯತ್‌ ಸಭೆಯಲ್ಲೂ ಬಸ್‌ ನಿಲ್ದಾಣದ ದುರಸ್ತಿ ಬಗ್ಗೆ ಪ್ರಸ್ತಾವಿಸಿದ್ದೇವೆ. ಅನುದಾನ ಬಂದ ಕೂಡಲೇ ಛಾವಣಿ ದುರಸ್ತಿಪಡಿಸಲಾಗುವುದು.
 - ಹೂವಪ್ಪ , ಪಿಡಿಒ, ಕೊಡಿಯಾಲ ಗ್ರಾ.ಪಂ.

ಟಾಪ್ ನ್ಯೂಸ್

ಮಾಸ್ಕ್ ಧರಿಸಿ ಫೇಸ್ ಐಡಿ ಲಾಕ್ ತೆಗೆಯಲು ಕಷ್ಟವೇ..? ಐಫೋನ್ ತಂದಿದೆ ಹೊಸ ಫೀಚರ್

ಮಾಸ್ಕ್ ಧರಿಸಿ ಫೇಸ್ ಐಡಿ ಲಾಕ್ ತೆಗೆಯಲು ಕಷ್ಟವೇ..? ಐಫೋನ್ ತಂದಿದೆ ಹೊಸ ಫೀಚರ್

siddaramaiah

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಇಬ್ರಾಹಿಂ ಅವರಿಗೂ ಗೊತ್ತಿದೆ : ಸಿದ್ದರಾಮಯ್ಯ

1-dsad

ಗಯಾ: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಸೇನಾ ವಿಮಾನ ಪತನ

mafia

ಮಾಫಿಯಾ ಟೀಸರ್‌ ಗೆ ಮೆಚ್ಚುಗೆ: ನಿರೀಕ್ಷೆ ಹೆಚ್ಚಿಸುತ್ತಿದೆ ಪ್ರಜ್ವಲ್‌ ಚಿತ್ರ

19kagodu-timmapppa

ಲಘು ಮಾತು ವಾಪಸ್ ಪಡೆಯಲಿ: ಹಾಲಪ್ಪ ವಿರುದ್ದ ಕಾಗೋಡು ಪುತ್ರಿಯ ಆಕ್ರೋಶ

ಹಣದ ಆಸೆಗೆ ತಾಯಿಯನ್ನೇ ಬೀದಿಪಾಲು ಮಾಡಿದ್ದ: ಸಿಧು ವಿರುದ್ಧ ಸಹೋದರಿ ಹೇಳಿದ್ದೇನು?

ಹಣದ ಆಸೆಗೆ ತಾಯಿಯನ್ನೇ ಬೀದಿಪಾಲು ಮಾಡಿದ್ದ: ಸಿಧು ವಿರುದ್ಧ ಸಹೋದರಿ ಹೇಳಿದ್ದೇನು?

1-ewrwr

ಹುಮನಾಬಾದ್ ತಹಶೀಲ್ದಾರ್ ಮೇಲೆ ಪ್ರತಿಭಟನಾ ನಿರಂತರಿಂದ ಹಲ್ಲೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10death

ಬಂಟ್ವಾಳ: ಶೇಂದಿ ತೆಗೆಯುತ್ತಿದ್ದ ವ್ಯಕ್ತಿ ಮರದಿಂದ ಬಿದ್ದು ಸಾವು

ನೆಕ್ಕಿಲಾಡಿಯಲ್ಲಿ ಮಳೆ ನೀರು ಕಾಲುವೆ ವಿವಾದ: ನೋಟಿಸ್‌

ನೆಕ್ಕಿಲಾಡಿಯಲ್ಲಿ ಮಳೆ ನೀರು ಕಾಲುವೆ ವಿವಾದ: ನೋಟಿಸ್‌

ನೂತನ ಕಿಂಡಿ ಅಣೆಕಟ್ಟಿನಿಂದ ಸಮೃದ್ಧ ಜಲ

ನೂತನ ಕಿಂಡಿ ಅಣೆಕಟ್ಟಿನಿಂದ ಸಮೃದ್ಧ ಜಲ

ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

sdghgjhg

ಸುಳ್ಯ: ನಾಪತ್ತೆಯಾಗಿದ್ದ ಅಸ್ಸಾಂ ಮೂಲದ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಪತ್ತೆ

MUST WATCH

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

ಹೊಸ ಸೇರ್ಪಡೆ

ಮಾಸ್ಕ್ ಧರಿಸಿ ಫೇಸ್ ಐಡಿ ಲಾಕ್ ತೆಗೆಯಲು ಕಷ್ಟವೇ..? ಐಫೋನ್ ತಂದಿದೆ ಹೊಸ ಫೀಚರ್

ಮಾಸ್ಕ್ ಧರಿಸಿ ಫೇಸ್ ಐಡಿ ಲಾಕ್ ತೆಗೆಯಲು ಕಷ್ಟವೇ..? ಐಫೋನ್ ತಂದಿದೆ ಹೊಸ ಫೀಚರ್

siddaramaiah

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಇಬ್ರಾಹಿಂ ಅವರಿಗೂ ಗೊತ್ತಿದೆ : ಸಿದ್ದರಾಮಯ್ಯ

sagara news

ಜನರಲ್‌ ಬಿಪಿನ್‌ ರಾವ್‌ ವೃತ್ತ ನಾಮಕರಣ

ballari news

ಎಸ್ಸಿ-ಎಸ್ಟಿ ಕಾಲೋನಿ ಅಭಿವೃದ್ದಿಗೆ ಆದ್ಯತೆ ನೀಡಿ

1-dsad

ಗಯಾ: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಸೇನಾ ವಿಮಾನ ಪತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.