ಕಾಪು: ರಾ.ಹೆದ್ದಾರಿ ಅಂಚಿನ ತಡೆಗೋಡೆ ಕುಸಿತ
Team Udayavani, May 9, 2022, 10:11 AM IST
ಬೆಳ್ತಂಗಡಿ: ಮಂಗಳೂರು- ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಮುಂಡಾಜೆ ಸಮೀಪದ ಕಾಪು ಬಳಿ ರಸ್ತೆ ಅಂಚಿನ ಮೋರಿಯೊಂದರ ತಡೆಗೋಡೆ ಕುಸಿದು ಬಿದ್ದಿದ್ದು ಅಧಿಕ ಸಂಚಾರ ವಿರುವ ರಸ್ತೆಯಾದ್ದರಿಂದ ಅಪಾಯಕ್ಕೆ ಕಾರಣವಾಗಿದೆ.
ತಡೆಗೋಡೆಗೆ ಪಿಕಪ್ ವಾಹನ ಬಡಿದು ಕಣಿವೆಗೆ ಬಿದ್ದಿತ್ತು. ಪಿಕಪ್ ಢಿಕ್ಕಿಯಾದ ರಭಸಕ್ಕೆ 15 ಮೀ. ಉದ್ದದ ತಡೆಗೋಡೆ ಸಂಪೂರ್ಣ ಧರಾಶಾಯಿಯಾಗಿದೆ. ಇಲ್ಲಿ ರಸ್ತೆ ಅಗಲ ಕಿರಿದಾಗಿದ್ದು ಇಳಿಜಾರು ಹಾಗೂ ತಿರುವು ಕೂಡ ಇರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ತಡೆಗೋಡೆ ಕುಸಿತ ಉಂಟಾದ ಕಡೆ ಸುಮಾರು 20 ಅಡಿ ಆಳದ ಕಂದಕವಿದೆ. ಘಾಟಿ ಪ್ರದೇಶದಿಂದ ಬರುವ ವಾಹನಗಳು ಮುಂದಿನಿಂದ ಆಗಮಿಸುವ ವಾಹನಗಳಿಗೆ ಸಂಚರಿಸಲು ಸ್ಥಳಾವಕಾಶ ನೀಡಲು ರಸ್ತೆಬದಿಗೆ ಬರಬೇಕಾದುದು ಅನಿವಾರ್ಯ. ಆ ಸಮಯ ಒಂದಿಷ್ಟು ಎಚ್ಚರ ತಪ್ಪಿದರೂ ಕಣಿವೆಗೆ ಬೀಳುವ ಸಾಧ್ಯತೆ ಇದೆ.
ಆಗಾಗ ಸುರಿಯುವ ಮಳೆಯಿಂದ ಮಂಜು ಕವಿದ ವಾತಾವರಣ ಉಂಟಾ ಗುತ್ತಿದೆ. ರಾತ್ರಿ ಕೆಲವೊಮ್ಮೆ ರಸ್ತೆ ಕಾಣದ ಸ್ಥಿತಿ ಇರುತ್ತದೆ. ಇಂತಹ ಸ್ಥಳದಲ್ಲಿ ಮೋರಿಯು ಕುಸಿದಿದ್ದು ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಮೋರಿ ಕುಸಿದ ಪಕ್ಕವೇ ವಿದ್ಯುತ್ ಕಂಬವು ಇದೆ. ಇದು ಕೂಡ ಅಪಾಯ ತಂದೊಡ್ಡುವ ಸಾಧ್ಯತೆ ಯಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಂಗಳೂರು ವಿಭಾಗದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಡೆಗೋಡೆಯನ್ನು ತತ್‌ಕ್ಷಣ ಪುನರ್ ನಿರ್ಮಿಸಬೇಕಾದ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕ್ಷೀರಭಾಗ್ಯ ಹಾಲಿನ ಪುಡಿ ಪ್ಯಾಕೆಟ್ ತ್ಯಾಜ್ಯವಾಗಿ ಪತ್ತೆ
ರೈತರಿಗೆ ಕುಮ್ಕಿ, ಬಾಣೆ ಜಮೀನು ಹಕ್ಕು ವಿತರಣೆ: ಸಂಪುಟ ಉಪಸಮಿತಿ ರಚನೆ : ಸಚಿವ ಸುನಿಲ್
ಸೆಪ್ಟಂಬರ್ ಅಂತ್ಯದೊಳಗೆ 1 ಸಾವಿರ ಚಾರ್ಜಿಂಗ್ ಸೆಂಟರ್: ಸಚಿವ ಸುನಿಲ್
ನಕಲಿ ದಾಖಲೆ ಮೂಲಕ ಹಕ್ಕುಪತ್ರ ಪಡೆದ ಪ್ರಕರಣ : ಹಕ್ಕುಪತ್ರ ರದ್ದುಪಡಿಸಿ ತಹಶೀಲ್ದಾರ್ ಆದೇಶ
ಕಬಕ: ರೈಲು ಢಿಕ್ಕಿ ಹೊಡೆದು ಯುವಕ ಸಾವು