ಬೆಳ್ತಂಗಡಿ: ಆಶಾ ಕಾರ್ಯಕರ್ತೆಯರಿಗೆ ಕಿಟ್‌ವಿತರಣೆ
Team Udayavani, Apr 15, 2020, 9:22 AM IST
ಬೆಳ್ತಂಗಡಿ: ಡಿಕೆಡಿಆರ್‌ಎಸ್ ಸಂಸ್ಥೆಯಿಂದ ಅರ್ಹರಿಗೆ ನೀಡಲು ಉದ್ದೇಶಿಸಿರುವ 1,000 ಆಹಾರ ಕಿಟ್‌ಗಳ ವಿತರಣೆಗೆ ಮಂಗಳವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ತಾಲೂಕಿನ 250 ಆಶಾ ಕಾರ್ಯಕರ್ತೆಯರಿಗೆ 20 ಕೆ.ಜಿ. ಅಕ್ಕಿ ಸಹಿತ ದಿನಸಿ ಸಾಮಗ್ರಿ, ಮಾಸ್ಕ್, ಫಿನಾಯಿಲ್ ವಿತರಿಸಲಾಯಿತು.
ಬೆಳ್ತಂಗಡಿ ಸೈಂಟ್ ಥೋಮಸ್ ಕಾಲೇಜನ್ನು ಕ್ವಾರಂಟೈನ್ ಆವಶ್ಯಕತೆಗೆ ತಾಲೂಕು ಆಡಳಿತಕ್ಕೆ ಬಿಟ್ಟುಕೊಡಲು ಸಿದ್ಧ ಎಂದು ಈ ಸಂದರ್ಭ ಫಾ| ಅಬ್ರಹಾಂ ಮತ್ತು ಪಿಆರ್‌ಒ ಫಾ| ಟೋಮಿ ತಿಳಿಸಿದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರೊಕ್ರೇಟರ್ ಫಾ| ಅಬ್ರಹಾಂ ಪಟ್ಟೇರಿಲ್, ಸಾರ್ವಜನಿಕ ಸಂಪರ್ಕಾ ಧಿಕಾರಿ ಫಾ| ಟೋಮಿ ಕಲ್ಲಿಕಾಟ್, ಡಿಕೆಡಿಆರ್‌ಎಸ್ ನಿರ್ದೇಶಕ ಫಾ| ಬಿನೋಯ್ ಎ.ಜೆ., ಫ್ಯಾಮಿಲಿ ಅಸೋಸಿಯೇಟ್ ನಿರ್ದೇಶಕ ಫಾ| ಥೋಮಸ್ ಪುದಿಯೆರ, ಕೆ.ಎಸ್.ಎಂ.ಸಿ. ಸಂಘಟಕ ಫಾ| ಬಿನೋಯ್ ಜೋಸೆಫ್ ಅವರು ಆಶಾ ಕಾರ್ಯಕರ್ತೆಯರಿಗೆ ಕಿಟ್ ಹಸ್ತಾಂತರಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ, ಸಮು ದಾಯ ಆಸ್ಪತ್ರೆ ಆಡಳಿತ ವೈದ್ಯಾ ಧಿಕಾರಿ ಡಾ| ವಿದ್ಯಾವತಿ, ಆಶಾ ಕಾರ್ಯಕರ್ತೆಯರ ಮೇಲ್ವಿ ಚಾರಕಿ ಹರಿಣಿ, ಹಿರಿಯ ಪುರುಷ ಆರೋಗ್ಯ ಕಾರ್ಯಕರ್ತ ಗಿರೀಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪುಷ್ಪಾ, ಫಾ| ಜೋಯ್ ಪಝಯಪರಂಬಿಲ್ ಉಪಸ್ಥಿತರಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಿಸ್ಟರ್ ಅಮ್ಮಿ ಸ್ವಾಗತಿಸಿ, ಬ್ಲಾಕ್ ಪ್ರಾಜೆಕ್ಟ್ ಮ್ಯಾನೇಜರ್ ಅಜಯ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ
ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು
ಬಂಟ್ವಾಳ: ಅಜ್ಜಿ ಮನೆಗೆಂದು ಹೋದ ತಾಯಿ, ಮಗ ನಾಪತ್ತೆ
ಐವರ್ನಾಡು: ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ವಾಹನ ಪಲ್ಟಿ
ಕಡೆಗೋಳಿ: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ