Udayavni Special

ಮಾಣಿಲ ಶ್ರೀಧಾಮ-ಧರ್ಮಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಬಸ್‌

Team Udayavani, Jun 16, 2019, 5:00 AM IST

z-16

ವಿಟ್ಲ: ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ನೂತನವಾಗಿ ಪ್ರಾರಂಭ ಗೊಂಡ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಮಾಣಿಲ ಗ್ರಾಮದ ಪಕಳಕುಂಜದಿಂದ ಧರ್ಮಸ್ಥಳಕ್ಕೆ ಪ್ರತಿನಿತ್ಯ ಬಸ್‌ ಸಂಚಾರ ಪ್ರಾರಂಭಿಸಬೇಕೆಂದು ಮಾಣಿಲ ಶ್ರೀಧಾಮ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿತ್ತು. ಸಂಚಾರಕ್ಕೆ ಹಲವು ಅಡೆತಡೆಗಳು ಎದುರಾಗಿತ್ತು. ಬಳಿಕ ಹಲವು ಅಧಿಕಾರಿ ಗಳ, ಜನಪ್ರತಿನಿಧಿಗಳ, ಸಚಿವರ ಜತೆ ಮಾತುಕತೆ ಮಾಡಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್‌ಕುಮಾರ್‌ ಮೂಲಕ ಮನವಿ ಮಾಡಲಾಯಿತು. ಕೊನೆಗೂ ಬಸ್‌ ಸಂಚಾರಕ್ಕೆ ಅನುಮತಿ ದೊರಕಿದೆ.

ಬಸ್ಸಿಗೆ ಪೂಜೆ
ಬೆಳಗ್ಗೆ ಮಾಣಿಲ ಕ್ಷೇತ್ರದಲ್ಲಿ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಬಸ್ಸಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಪಕಳಕುಂಜ ದಲ್ಲಿ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಿಶಾಲ್‌ ಮೋನಿಸ್‌, ಮಾಣಿಲ ಶ್ರೀಗಳು ಪ್ರಥಮ ಸಂಚಾರಕ್ಕೆ ಚಾಲನೆ ನೀಡಿದರು.

ಮಾಣಿಲ ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ಕುಮಾರ್‌ ಬಾಳೆಕಲ್ಲು, ಉಪಾಧ್ಯಕ್ಷೆ ವಿಶಾಲಾಕ್ಷಿ, ಪೆರುವಾಯಿ ಗ್ರಾ.ಪಂ. ಅಧ್ಯಕ್ಷ ರಾಲ್ಫ್ ಡಿ’ಸೋಜಾ, ಜುಮಾ ಮಸೀದಿ ಅಧ್ಯಕ್ಷ ಮೊಹಿದು ಕುಟ್ಟಿ, ಸಾಮಾಜಿಕ ಹೋರಾಟಗಾರ್ತಿ ಕುಂಞಿಪಾತು, ಗೋಪಾಲಕೃಷ್ಣ ನಾಯಕ್‌, ತಾ.ಪಂ. ಮಾಜಿ ಸದಸ್ಯ ರಾಜೇಂದ್ರನಾಥ ರೈ, ನ್ಯಾಯವಾದಿ ವಿನೋದ್‌ ಪಕಳಕುಂಜ, ಅಶ್ರಫ್‌ ಕಾಮಜಲು, ಉದಯಕುಮಾರ್‌ ಪಕಳಕುಂಜ, ಚಂದ್ರಶೇಖರ್‌, ಪ್ರಭಾಕರ, ರಾಮ ಕುಲಾಲು ಸಾಯ, ವಿನಯ್‌, ಶ್ರೀಧರ್‌ ಬಾಳೆಕಲ್ಲು, ಸುಶೀಲ್‌ ಬಾಳೆಕಾನ, ಸತ್ಯಶಂಕರ್‌ ಭಟ್‌, ಮೀನಾಕ್ಷಿ ಸಾಯ, ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ, ಕಾರ್ಯದರ್ಶಿ ಗೀತಾ ಪುರುಷೋತ್ತಮ, ವಿಟ್ಟಲ ಶೆಟ್ಟಿ ಸುಣ್ಣಂಬಳ, ಶ್ರೀಧಾಮ ಮಿತ್ರ ಮಂಡಳಿ ಅಧ್ಯಕ್ಷ ಯೋಗೀಶ್‌ ಬಾಳೆಕಾನ ಉಪಸ್ಥಿತರಿದ್ದರು.

ವಿಟ್ಲ ಪರಿಸರದವರಿಗೂ ಪ್ರಯೋಜನ
ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಮಾಣಿಲ ಕ್ಷೇತ್ರಕ್ಕೂ ಧರ್ಮಸ್ಥಳ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಹಲವು ಜನರು ತಮ್ಮ ಕಷ್ಟಗಳನ್ನು ನಿವಾರಿಸಲು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ. ಈ ಬಸ್‌ ಸೇವೆ ಭಕ್ತರಿಗೆ ಇನ್ನಷ್ಟು ಪ್ರಯೋಜನವಾಗಲಿದೆ. ಇದರಿಂದ ವಿಟ್ಲ ಪರಿಸರದವರಿಗೂ ಪ್ರಯೋಜನವಾಗಲಿದೆ. ಗ್ರಾಮದ ಅಭಿವೃದ್ಧಿಯಾಗಬೇಕಾದರೆ ಎಲ್ಲರೂ ಒಗ್ಗೂಟ್ಟಿನಿಂದ ಕೆಲಸ ಮಾಡಿದಾಗ ಸಾಧ್ಯವಾಗುತ್ತದೆ. ಸಮಾಜದಲ್ಲಿ ಏಕತೆ-ಸಾಮರಸ್ಯ ಉಂಟು ಮಾಡುವ ಕೆಲಸಗಳು ನಡೆಯಬೇಕು ಎಂದರು.

ವೇಳಾಪಟ್ಟಿ
ಪ್ರತಿದಿನ ಬೆಳಗ್ಗೆ 7.30ಕ್ಕೆ ಪಕಳಕುಂಜದಿಂದ ಹೊರಟು ವಿಟ್ಲ, ಉಪ್ಪಿನಂಗಡಿ ರಸ್ತೆಯಾಗಿ ಧರ್ಮಸ್ಥಳಕ್ಕೆ ತಲುಪಲಿದೆ. ಸಂಜೆ 5.30ಕ್ಕೆ ಪಕಳಕುಂಜಕ್ಕೆ ಹಿಂದಿರುಗಲಿದೆ ಎಂದು ಬಸ್ಸಿನ ನಿರ್ವಾಹಕರು ತಿಳಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸೌಥಂಪ್ಟನ್ ಟೆಸ್ಟ್: ಮಳೆಯ ನಡುವೆ ಬ್ಯಾಟಿಂಗ್ ನಡೆಸಲು ಪಾಕ್ ಪರದಾಟ

ಸೌಥಂಪ್ಟನ್ ಟೆಸ್ಟ್: ಮಳೆಯ ನಡುವೆ ಬ್ಯಾಟಿಂಗ್ ನಡೆಸಲು ಪಾಕ್ ಪರದಾಟ

ಶಿಕ್ಷಣ ಸಂವಾದ: ದೇಸೀ ಜ್ಞಾನದತ್ತ ಹೊರಳಿದ ಭಾರತದ ಹೊಸ ಶಿಕ್ಷಣ ನೀತಿ…

ಶಿಕ್ಷಣ ಸಂವಾದ: ದೇಸೀ ಜ್ಞಾನದತ್ತ ಹೊರಳಿದ ಭಾರತದ ಹೊಸ ಶಿಕ್ಷಣ ನೀತಿ…

ಇನ್ನೂ ಮುಗಿದಿಲ್ಲ ವಸತಿ ನಿಲಯ ಗೊಂದಲ!

ಇನ್ನೂ ಮುಗಿದಿಲ್ಲ ವಸತಿ ನಿಲಯ ಗೊಂದಲ!

ಹೊಸ ಸಮುದ್ರದ ಸೃಷ್ಟಿಗೆ ಕಾರಣವಾಗಲಿದೆಯೇ ಆಫ್ರಿಕಾದ ಬಿರುಕು?

ಹೊಸ ಸಮುದ್ರದ ಸೃಷ್ಟಿಗೆ ಕಾರಣವಾಗಲಿದೆಯೇ ಆಫ್ರಿಕಾದ ಬಿರುಕು?

ಕೈಸೇರಲಿದೆ ಇ-ಪಾಸ್‌ಪೋರ್ಟ್‌

ಕೈಸೇರಲಿದೆ ಇ-ಪಾಸ್‌ಪೋರ್ಟ್‌

ಎಸೆಸೆಲ್ಸಿ ಪೂರಕ ಪರೀಕ್ಷೆ: ಅರ್ಜಿ ಆಹ್ವಾನ

ಎಸೆಸೆಲ್ಸಿ ಪೂರಕ ಪರೀಕ್ಷೆ: ಅರ್ಜಿ ಆಹ್ವಾನ

ಖಾಸಗಿ ರೈಲುಗಳಿಗೆ ಇರಲಿದೆ ಕೇಂದ್ರದ ನಿಗಾ; ನಿಯಮಗಳ ಪ್ರಕಟ; ಸಮಯ ಪಾಲನೆಗೆ ಇರಲಿದೆ ಬಿಗಿ ಕ್ರಮ

ಖಾಸಗಿ ರೈಲುಗಳಿಗೆ ಇರಲಿದೆ ಕೇಂದ್ರದ ನಿಗಾ; ನಿಯಮಗಳ ಪ್ರಕಟ; ಸಮಯ ಪಾಲನೆಗೆ ಇರಲಿದೆ ಬಿಗಿ ಕ್ರಮ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6,956 ಅನರ್ಹ ಪಡಿತರ ಚೀಟಿ ಪತ್ತೆ

6,956 ಅನರ್ಹ ಪಡಿತರ ಚೀಟಿ ಪತ್ತೆ

ಉದಯವಾಣಿ ಫಾಲೋಅಪ್‌: ಆಫ್ರಿಕನ್‌ ಬಸವನ ಹುಳು: ಅಧಿಕಾರಿಗಳಿಂದ‌ ಅಧ್ಯಯನ

ಉದಯವಾಣಿ ಫಾಲೋಅಪ್‌: ಆಫ್ರಿಕನ್‌ ಬಸವನ ಹುಳು: ಅಧಿಕಾರಿಗಳಿಂದ‌ ಅಧ್ಯಯನ

ಬಿಳಿನೆಲೆ ಅಕ್ರಮ ಶೆಡ್ ನಿರ್ಮಾಣ ವಿಚಾರ: ಇಂದಿನಿಂದ ರಾತ್ರಿಯೂ ಸತ್ಯಾಗ್ರಹ ಮುಂದುವರಿಕೆ !

ಬಿಳಿನೆಲೆ ಅಕ್ರಮ ಶೆಡ್ ನಿರ್ಮಾಣ ವಿಚಾರ: ಇಂದಿನಿಂದ ರಾತ್ರಿಯೂ ಸತ್ಯಾಗ್ರಹ ಮುಂದುವರಿಕೆ !

ರೈತರ ಗೋಳು; ಬೆಳೆ ಭಕ್ಷಕ ಆಫ್ರಿಕನ್‌ ಬಸವನ ಹುಳುಗಳ ಕಾಟ

ರೈತರ ಗೋಳು; ಬೆಳೆ ಭಕ್ಷಕ ಆಫ್ರಿಕನ್‌ ಬಸವನ ಹುಳುಗಳ ಕಾಟ

ಪಟ್ಟೆ: ಸೀರೆ ಹೊಳೆ ಸೇತುವೆ ತಡೆಗೋಡೆ ಕುಸಿತ ಭೀತಿಯಲ್ಲಿ

ಪಟ್ಟೆ: ಸೀರೆ ಹೊಳೆ ಸೇತುವೆ ತಡೆಗೋಡೆ ಕುಸಿತ ಭೀತಿಯಲ್ಲಿ

MUST WATCH

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik

udayavani youtube

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Making

udayavani youtube

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆಹೊಸ ಸೇರ್ಪಡೆ

ಸೌಥಂಪ್ಟನ್ ಟೆಸ್ಟ್: ಮಳೆಯ ನಡುವೆ ಬ್ಯಾಟಿಂಗ್ ನಡೆಸಲು ಪಾಕ್ ಪರದಾಟ

ಸೌಥಂಪ್ಟನ್ ಟೆಸ್ಟ್: ಮಳೆಯ ನಡುವೆ ಬ್ಯಾಟಿಂಗ್ ನಡೆಸಲು ಪಾಕ್ ಪರದಾಟ

ಶಿಕ್ಷಣ ಸಂವಾದ: ದೇಸೀ ಜ್ಞಾನದತ್ತ ಹೊರಳಿದ ಭಾರತದ ಹೊಸ ಶಿಕ್ಷಣ ನೀತಿ…

ಶಿಕ್ಷಣ ಸಂವಾದ: ದೇಸೀ ಜ್ಞಾನದತ್ತ ಹೊರಳಿದ ಭಾರತದ ಹೊಸ ಶಿಕ್ಷಣ ನೀತಿ…

ಇನ್ನೂ ಮುಗಿದಿಲ್ಲ ವಸತಿ ನಿಲಯ ಗೊಂದಲ!

ಇನ್ನೂ ಮುಗಿದಿಲ್ಲ ವಸತಿ ನಿಲಯ ಗೊಂದಲ!

ವೀಸಾ ನಿಯಮ ರಿಯಾಯಿತಿ; ಹೊಸ ಕ್ರಮಗಳನ್ನು ಪ್ರಕಟಿಸಿದ ಅಮೆರಿಕ ಸರಕಾರ

ವೀಸಾ ನಿಯಮ ರಿಯಾಯಿತಿ; ಹೊಸ ಕ್ರಮಗಳನ್ನು ಪ್ರಕಟಿಸಿದ ಅಮೆರಿಕ ಸರಕಾರ

ಸುಪ್ರೀಂ ತೀರ್ಪು ಸಮಾನತೆಯ ಹಾದಿಯಲ್ಲಿ

ಸುಪ್ರೀಂ ತೀರ್ಪು ಸಮಾನತೆಯ ಹಾದಿಯಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.