ಪುತ್ತೂರು: ಜಾಗದ ವಿವಾದ,ಹಲ್ಲೆ: ಮೂವರು ಆಸ್ಪತ್ರೆಗೆ
Team Udayavani, Dec 1, 2022, 6:19 PM IST
ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಲ್ಲಡ್ಕದಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿ ಎರಡು ತಂಡಗಳ ನಡುವೆ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಮೂವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕೆಮ್ಮಿಂಜೆ ಗ್ರಾಮದ ಕೊಂಬಾರೆಟ್ಟು ನಿವಾಸಿ ಶಕುಂತಲಾ ರೈ, ಬೆಳ್ಳಿಪ್ಪಾಡಿ ಗ್ರಾಮದ ಕಲ್ಲಡ್ಕ ನಿವಾಸಿಗಳಾದ ಶಿವಮ್ಮ ಹಾಗೂ ಚೆನ್ನಮ್ಮ ಪುತ್ತೂರಿನ ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
ಪಿತ್ರಾರ್ಜಿತ ಆಸ್ತಿ: ಶಕುಂತಲಾ ರೈ:
ನನ್ನ ತಾಯಿಯಿಂದ ಪಿತ್ರಾರ್ಜಿತವಾಗಿ ಬಂದ ಸುಮಾರು 50.80 ಎಕ್ರೆ ಜಾಗದಲ್ಲಿ 50 ವರ್ಷಗಳಿಂದ ನಾನು, ಸಹೋದರಿಯರಾದ ಶ್ವೇತಾ ಪ್ರಕಾಶ್ ರೈ, ನವೀನಾ ರೈ, ಜಯಲತಾ ರೈ ಅವರು ಸಾಗುವಳಿ ಮಾಡುತ್ತಿದ್ದೆವು. ಸದ್ರಿ ಜಾಗದಲ್ಲಿ ಸಂಜೀವ ಗೌಡ ಯಾನೆ ರಾಮಣ್ಣ ಗೌಡ, ಸುಭಾಶ್, ಹರೀಶ್, ಪದ್ಮನಾಭ ಗೌಡ ಅವರೊಂದಿಗೆ ತಕರಾರು ಇತ್ತು. ಈ ಕುರಿತು ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ನ.9ರಂದು ನಮ್ಮ ಪರವಾಗಿ ತೀರ್ಪು ಆಗಿದೆ. ನ.29ರಂದು ಮಧ್ಯಾಹ್ನ ಜೆಸಿಬಿಯಲ್ಲಿ ಜಾಗವನ್ನು ಸಮತಟ್ಟು ಮಾಡುತ್ತಿದ್ದಾಗ ಹರೀಶ್, ಪದ್ಮನಾಭ ಗೌಡ, ಸಂಜೀವ ಗೌಡ ಯಾನೆ ರಾಮಣ್ಣ ಗೌಡ, ಪೆರ್ನುಗೌಡ, ಸುಭಾಶ್ ಮತ್ತು ಇತರರು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಶಕುಂತಲಾ ರೈ ಆರೋಪಿಸಿದ್ದಾರೆ.
ಡಿಕ್ಲರೇಶನ್ ಜಾಗ: ಶಿವಮ್ಮ, ಚೆನ್ನಮ್ಮ
ಹಲವು ವರ್ಷಗಳ ಹಿಂದೆಯೇ ಡಿಕ್ಲರೇಶನ್ ಮೂಲಕ ನಮ್ಮ ಹಿರಿಯರಿಗೆ ಸಿಕ್ಕಿದ ಜಾಗದಲ್ಲಿ ನಾವು ಕೃಷಿ ಮಾಡುತ್ತಿದ್ದೆವು. ಅದರಲ್ಲಿ ಅಡಿಕೆ ಗಿಡ ನೆಡಲಾಗಿದೆ. ಈ ಜಾಗದಲ್ಲಿ ಶಂಕರ ಗೌಡ, ಅಂಗಾರ ಗೌಡ, ಪಕೀರ ಗೌಡ, ಬಿರ್ಮಣ್ಣ ಗೌಡ, ಪದ್ಮನಾಭ ಗೌಡ, ಕೊರಗಪ್ಪ ಗೌಡ ಅವರಿಗೂ ಪಾಲು ಇದೆ. ಇತ್ತೀಚೆಗೆ ನಾವು ಮನೆಗೆ ಬೀಗ ಹಾಕಿ ಕ್ಷೇತ್ರ ದರ್ಶನಕ್ಕೆ ಹೋಗಿದ್ದೆವು. ಮರಳಿ ಬಂದು ನೋಡಿದಾಗ ನಮ್ಮ ಮನೆಯನ್ನು ನೆಲಸಮ ಮಾಡಲಾಗಿತ್ತು. ತೋಟಕ್ಕೆ ಹೋಗಿ ನೋಡಿದಾಗ ಅಲ್ಲಿ ಶ್ವೇತಾ ಪ್ರಕಾಶ್ ರೈ, ಶಕುಂತಲಾ ರೈ, ನವೀನಾ, ಜಯಲತಾ ಸಹಿತ 20ಕ್ಕೂ ಅಧಿಕ ಮಂದಿ ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಶಿವಮ್ಮ ಮತ್ತು ಚೆನ್ನಮ್ಮ ಆರೋಪಿಸಿದ್ದಾರೆ.
ಶಾಸಕರ ವಿರುದ್ಧ ಆರೋಪ:
ಎಸಿ ಕೋರ್ಟ್‌ನಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದ್ದು, ಅದನ್ನು ತಪ್ಪಿಸಲು ಶಾಸಕರಾದ ಸಂಜೀವ ಮಠಂದೂರು ಹಲವಾರು ರೀತಿಯಲ್ಲಿ ಒತ್ತಡ ಹಾಕಿದ್ದಾರೆ. ಸಹಾಯಕ ಕಮಿಷನರ್ ಅವರು ನಮ್ಮ ದಾಖಲೆ ಪತ್ರ ನೋಡಿ ನಮಗೆ ನ್ಯಾಯ ಕೊಡಿಸಿದ್ದಾರೆ. ನ್ಯಾಯ ಕೊಟ್ಟ ಮರುದಿನವೇ ನ್ಯಾಯ ಮಂಡಳಿ ಸಮಿತಿ ಸದಸ್ಯರನ್ನು ತೆಗೆದು ಹಾಕಿ. ಬೇರೊಬ್ಬರನ್ನು ನೇಮಿಸಲಾಗಿದೆ. ಈ ರೀತಿ ಜನಸಾಮಾನ್ಯರಿಗೆ ಶಾಸಕರು ಅನ್ಯಾಯ ಮಾಡುತ್ತಿದ್ದಾರೆ ಎಂದು ಶಕುಂತಲಾ ರೈ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಳೆ ಬಂದಾಗ ಅಣಬೆ ಹುಟ್ಟುತ್ತದೆ…. ಶಾಸಕ ಮಠಂದೂರು ಹೇಳಿಕೆಗೆ ಪುತ್ತಿಲ ಬೆಂಬಲಿಗರ ಆಕ್ರೋಶ
ಅನುಮತಿ ರಹಿತ ಪ್ರವಾಸ ಆಯೋಜನೆ: ಶಿಕ್ಷಕಿಯ ಪರ ನಿಂತ ಪೋಷಕರು
ಬೆಳ್ತಂಗಡಿ: ಪೊಲೀಸರ ಎಚ್ಚರಿಕೆ ಬೆನ್ನಲೇ ವೇಶ್ಯಾವಾಟಿಕೆ: ಐವರು ಮಹಿಳೆಯರು ಸೇರಿ 7 ಮಂದಿ ಬಂಧನ
ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ
ಬಂಟ್ವಾಳ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
ವಾಡಿ: ಮರಳು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಬಾಲಕ ಸಾವು
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಓವಲ್ ಆತಿಥ್ಯ
ರಣಜಿ ಟ್ರೋಫಿ ಸೆಮಿಫೈನಲ್: ಕಾಡಿದ ಸೌರಾಷ್ಟ್ರ; ಕಾಪಾಡಿದ ಅಗರ್ವಾಲ್
ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ: ಪೊಲೀಸ್ ಬಿಗಿ ಬಂದೋಬಸ್ತ್
ಸಂಸತ್ನಲ್ಲಿ ಅದಾನಿ ವಿಚಾರ ಸದ್ದು, ಮೋದಿ ವಿರುದ್ಧ ಖರ್ಗೆ ಗುಡುಗು