“ಜನಸಾಮಾನ್ಯರಿಗೆ ಪ್ರಯೋಜನ ಸಿಗುವಂತಾಗಲಿ’

 ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋ. ಉದ್ಘಾಟನೆ

Team Udayavani, Nov 9, 2019, 3:44 AM IST

ss-7

ಮಾಣಿ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆರು ಗ್ರಾಮಗಳಿಗೆ ಜಲಪೂರಣದ ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ನ. 8ರಂದು ನೇತ್ರಾವತಿ ನದಿ ಕಡೇಶ್ವಾಲ್ಯ ನೀರೆತ್ತುವ ಸ್ಥಾವರ ದಲ್ಲಿ ಟೇಪ್‌ ಕತ್ತರಿಸಿ, ಪಂಪ್‌ ಚಾಲನೆ ಹಾಗೂ ನಾಮಫಲಕ ಅನಾವರಣ ಮಾಡುವ ಮೂಲಕ ಉದ್ಘಾಟಿಸಿದರು.

ಸುಮಾರು 19.18 ಕೋಟಿ ರೂ. ವೆಚ್ಚದಲ್ಲಿ ಪೂರ್ಣ ಗೊಂಡಿರುವ ಯೋಜನೆಯ ಪ್ರಯೋಜನ ಜನಸಾಮಾನ್ಯ ರಿಗೆ ಸಿಗುವಂತಾಗಬೇಕು. ಯೋಜನೆಯನ್ನು ಇನ್ನಷ್ಟು ವಿಸ್ತರಿಸಿ ಆಸುಪಾಸಿನಿ ಜನರಿಗೂ ಪೂರೈಸಲು ಸಾಧ್ಯ. ಗ್ರಾಮೀಣ ಅಭಿವೃದ್ಧಿ ಯೋಜನೆ ಪೂರ್ಣಗೊಳಿಸಿ ಬಡ ವರ ಪರವಾಗಿ ಸರಕಾರ ಕೆಲಸ ಮಾಡುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯೆಯರಾದ ಮಂಜುಳಾ ಮಾಧವ ಮಾವೆ, ಕಮಲಾಕ್ಷಿ ಕೆ. ಪೂಜಾರಿ, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಸದಸ್ಯೆಯರಾದ ಗೀತಾ ಚಂದ್ರಶೇಖರ್‌, ಮಂಜುಳಾ ಕುಶಲ ಎಂ., ಲಕ್ಷ್ಮೀ ಗೋಪಾಲ ಆಚಾರ್ಯ, ಕಡೇಶ್ವಾಲ್ಯ ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲಾ ಶೆಟ್ಟಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ, ಮಾಣಿ ಗ್ರಾ.ಪಂ. ಅಧ್ಯಕ್ಷೆ ಮಮತಾ ಎಸ್‌. ಶೆಟ್ಟಿ, ಅನಂತಾಡಿ ಗ್ರಾ.ಪಂ. ಅಧ್ಯಕ್ಷ ಸನತ್‌ ಕುಮಾರ್‌ ರೈ, ನೆಟ್ಲಮುಟ್ನೂರು ಗ್ರಾ.ಪಂ. ಅಧ್ಯಕ್ಷೆ ವಿಜಯಾ, ಬರಿಮಾರು ಗ್ರಾ.ಪಂ. ಅಧ್ಯಕ್ಷ ವಸಂತ ಪೂಜಾರಿ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಪ್ರಮುಖರಾದ ಕೆ. ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ.ಕೆ.ಭಟ್‌, ಪುಷ್ಪರಾಜ ಚೌಟ, ಗಣೇಶ್‌ ರೈ ಮಾಣಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.

ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌., ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾ.ನಿ. ಎಂಜಿನಿಯರ್‌ ಜಿ. ನರೇಂದ್ರ ಬಾಬು, ಬಂಟ್ವಾಳ ಉಪವಿಭಾಗದ ಕಾ.ನಿ. ಎಂಜಿನಿಯರ್‌ ಮಹೇಶ್‌, ಕಿರಿಯ ಎಂಜಿನಿಯರ್‌ ಕೃಷ್ಣ ಮಾನಪ್ಪ, ರವಿಚಂದ್ರ ಎ., ನಾಗೇಶ್‌, ಜಗದೀಶಚಂದ್ರ ನಿಂಬಾಳ್ಕರ್‌, ಪದ್ಮರಾಜ್‌ ಎನ್‌. ಗೌಡ, ಗುತ್ತಿಗೆದಾರ ಅನಿಲ್‌ ಶೆಟ್ಟಿ ಉಪಸ್ಥಿತರಿದ್ದರು.

ನೀರಿನ ಸಮಸ್ಯೆ ನೀಗಿದೆ
ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಯೋಜನೆಯ ಮಾಹಿತಿ ನೀಡಿ, 6 ಗ್ರಾಮಗಳ 25 ಸಾವಿರಕ್ಕೂ ಹೆಚ್ಚು ಮಂದಿಗೆ, 51 ಜನವಸತಿ ಕೇಂದ್ರಗಳಿಗೆ ನೀರು ಸರಬರಾಜು ಆಗಲಿದೆ. ಯೋಜನೆಗೆ ಆರಂಭದಲ್ಲಿ 16 ಕೋ. ರೂ.ಅನುದಾನ ಮಂಜೂರಾಗಿದ್ದು , ಪ್ರಗತಿ ಹಂತದಲ್ಲಿ ಹೆಚ್ಚುವರಿ 2 ಕೋ. ರೂ. ಅನು ದಾನ ನೀಡಲಾಗಿದೆ. ನದಿ ಸ್ಥಾವರದಿಂದ ಹರಿದು ಬರುವ ನೀರು ಪೆರಾಜೆ ಗ್ರಾಮದ ಗಡಿಯಾರ ಸನಿಹದ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧಗೊಂಡ ಬಳಿಕ ಜನರಿಗೆ ತಲುಪುವುದು. ಇದರಿಂದ ಈ ಪ್ರದೇಶದ ದೊಡ್ಡ ಸಂಖ್ಯೆಯ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿದಂತಾಗಿದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

ಪಿಎಸ್‌ಐ ನೇಮಕಾತಿ ಹಗರಣವನ್ನು ಸಿಬಿಐಗೆ ಒಪ್ಪಿಸಿ: ಬೇಳೂರು ಒತ್ತಾಯ

ಪಿಎಸ್‌ಐ ನೇಮಕಾತಿ ಹಗರಣವನ್ನು ಸಿಬಿಐಗೆ ಒಪ್ಪಿಸಿ: ಬೇಳೂರು ಒತ್ತಾಯ

Untitled-1

ಸಮವಸ್ತ್ರ ಸಮಾಚಾರ: ನಿಮ್ಮ ಮಕ್ಕಳ ಯೂನಿಫಾರಂ ಎಲ್ಲಿಂದ ಬರುತ್ತೆ?

thumb 7

ಬುದ್ಧನ ಜನ್ಮ ಸ್ಥಳದಲ್ಲಿ ಪ್ರಧಾನಿ ಮೋದಿ: ನೇಪಾಳದೊಂದಿದೆ ರಾಜತಾಂತ್ರಿಕ ಮಾತುಕತೆ

twenty one hours kannada movie

ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್

basavaraj horatti

ವಿಧಾನಪರಿಷತ್ ಸಭಾಪತಿ‌ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

jameer-ak

ರಾಷ್ಟ್ರಗೀತೆಯನ್ನು ನಮಗೆ ಮುತಾಲಿಕ್ ಹೇಳಿ ಕೊಡಬೇಕಾ?: ಜಮೀರ್ ಅಹ್ಮದ್ ಕಿಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

poonja

ರಾಹುಲ್‌ ಸ್ಪರ್ಧಿಸಿದರೂ ಬಿಜೆಪಿಗೆ ಗೆಲುವು: ಹರಿಕೃಷ್ಣ

ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

cow

ರಾಜಾಶ್ರಯ ನೀಡದ ಸರಕಾರ; ಸಂಕಷ್ಟದಲ್ಲಿ ಗೋಪಾಲಕರು

ಕೊಕ್ಕಡ: ರಿಕ್ಷಾ ಚಾಲಕನ ಮೇಲೆ ಹಲ್ಲೆ

ಕೊಕ್ಕಡ: ರಿಕ್ಷಾ ಚಾಲಕನ ಮೇಲೆ ಹಲ್ಲೆ

ಕುಕ್ಕೆ, ಶ್ರೀಕೃಷ್ಣ ಮಠ,ಕೊಲ್ಲೂರು ಕ್ಷೇತ್ರಗಳಲ್ಲಿ ಭಕ್ತರ ದಟ್ಟಣೆ

ಕುಕ್ಕೆ, ಶ್ರೀಕೃಷ್ಣ ಮಠ,ಕೊಲ್ಲೂರು ಕ್ಷೇತ್ರಗಳಲ್ಲಿ ಭಕ್ತರ ದಟ್ಟಣೆ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

ಐಪಿಎಲ್‌ ಟೈ ಮ್ಯಾಚ್‌-07: ಗುಜರಾತ್‌ ಲಯನ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಮೇಲುಗೈ

ಐಪಿಎಲ್‌ ಟೈ ಮ್ಯಾಚ್‌-07: ಗುಜರಾತ್‌ ಲಯನ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಮೇಲುಗೈ

ಪಿಎಸ್‌ಐ ನೇಮಕಾತಿ ಹಗರಣವನ್ನು ಸಿಬಿಐಗೆ ಒಪ್ಪಿಸಿ: ಬೇಳೂರು ಒತ್ತಾಯ

ಪಿಎಸ್‌ಐ ನೇಮಕಾತಿ ಹಗರಣವನ್ನು ಸಿಬಿಐಗೆ ಒಪ್ಪಿಸಿ: ಬೇಳೂರು ಒತ್ತಾಯ

unit

ರೈತರ ನೆರವಿಗಾಗಿ 11 ಶೀಥಲೀಕರಣ ಘಟಕ ಆರಂಭ

ತರಕಾರಿ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ

ತರಕಾರಿ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ

15

ಗೋಕಾಕ ಚಳವಳಿ ಕಿಚ್ಚು ಹೊತ್ತಿಸಿದ ಬೆಳಗಾವಿ ನೆಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.