ಮೆಸ್ಕಾಂ ಬಂಟ್ವಾಳ ವಿಭಾಗ : ಅಪಾಯಕಾರಿ ರೆಂಬೆಗಳ ತೆರವು; ಮಳೆಗಾಲಕ್ಕೆ ಸಿದ್ಧ
Team Udayavani, Jun 9, 2020, 10:18 AM IST
ಸಾಂದರ್ಭಿಕ ಚಿತ್ರ
ಬಂಟ್ವಾಳ: ಮಳೆಗಾಲದಲ್ಲಿ ವಿದ್ಯುತ್ ಪೂರೈಕೆಯ ಎನ್ನುವುದು ಸವಾಲಿನ ಕೆಲಸ. ಗಾಳಿ ಮಳೆಗೆ ಎಲ್ಲಿ ಹಾನಿ ಸಂಭವಿಸುತ್ತದೆ ಎಂದು ಹೇಳುವಂತಿಲ್ಲ. ಇದಕ್ಕಾಗಿ ಮೆಸ್ಕಾಂ ಬಂಟ್ವಾಳ ವಿಭಾಗದಲ್ಲಿ ಈಗಾಗಲೇ ಸಿದ್ಧತಾ ಕಾರ್ಯ ಆರಂಭಗೊಂಡಿದ್ದು, ಮರಗಳ ರೆಂಬೆಗಳ ತೆರವು ಕಾರ್ಯ ನಡೆಯುತ್ತಿದೆ. ಮೆಸ್ಕಾಂ ಬಂಟ್ವಾಳ ವಿಭಾಗ ವ್ಯಾಪ್ತಿಗೆ ಬಂಟ್ವಾಳ, ಬೆಳ್ತಂಗಡಿ ತಾಲೂಕು ಬರುದ್ದು, ಎರಡೂ ಕಡೆಗಳಲ್ಲೂ ಸಿದ್ಧತ ಕಾರ್ಯ ನಡೆಯುತ್ತದೆ. ಜತೆಗೆ ಹಾನಿ ಸಂಭವಿಸಿದ ವೇಳೆ ವಿದ್ಯುತ್ ಮರು ಸಂಪರ್ಕಕ್ಕಾಗಿ ಅಗತ್ಯ ಸಾಮಗ್ರಿಗಳನ್ನೂ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಸೋಮವಾರ(ಜೂ. 8ರಂದು) ಮೆಸ್ಕಾಂ ಸಿಬಂದಿ ಬಂಟ್ವಾಳ ಬಸ್ತಿಪಡ್ಪು ಪ್ರದೇಶದಲ್ಲಿ ಬೃಹತ್ ಗಾತ್ರದ ರೆಂಬೆಗಳ ತೆರವು ಕಾರ್ಯ ನಡೆಸಿದ್ದಾರೆ.
ವಿದ್ಯುತ್ ತಂತಿಗೆ ಬೀಳುವ ಸ್ಥಿತಿಯಲ್ಲಿರುವ, ತಾಗಿಕೊಂಡಿರುವ ಎಲ್ಲ ಮರದ ರೆಂಬೆಗಳನ್ನು ತೆರವುಗೊಳಿಸಲು ಹೆಚ್ಚಿನ ಸಿಬಂದಿ ಆವಶ್ಯಕತೆ ಇದ್ದು, ಮೆಸ್ಕಾಂ ಕೇಂದ್ರ ಕಚೇರಿಯಿಂದ ಈ ಕಾರ್ಯಕ್ಕೆ ಮಾನ್ಸೂನ್ ಗ್ಯಾಂಗ್‌ನ್ನು ಕಳುಹಿಸಿಕೊಡಲಾಗುತ್ತದೆ. ಬಂಟ್ವಾಳ ವಿಭಾಗ ವ್ಯಾಪ್ತಿಯಲ್ಲಿ ಮೇ ತಿಂಗಳ ಪ್ರಾರಂಭ ದಿಂದಲೇ ಮಾನ್ಸೂನ್ ಗ್ಯಾಂಗ್‌ನ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಈ ಬಾರಿ ಕೇಂದ್ರ ಕಚೇರಿಯಿಂದ ಎರಡು ತಾಲೂಕಿಗೆ 54 ಮಂದಿಯನ್ನು ಕಳುಹಿಸಿ ಕೊಟ್ಟಿದ್ದಾರೆ. ಈ ಸಿಬಂದಿ ವಿಭಾಗದಲ್ಲಿರುವ ರೆಗ್ಯುಲರ್ ಸಿಬಂದಿಯ ಜತೆ ಸೇರಿ ಕೆಲಸ ನಿರ್ವಹಿಸುತ್ತಾರೆ. ರೆಂಬೆ ಕಡಿಯುವುದಕ್ಕೆ ಆಯಾಯ ಊರಿನವರು ಕೂಡ ಸಹಕಾರ ನೀಡುತ್ತಾರೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.
ಮಳೆಗಾಲದಲ್ಲಿ ಗಾಳಿ ಮಳೆಗೆ ಹಾನಿಯಾದರೆ ಅವುಗಳ ದುರಸ್ತಿ ಕಾರ್ಯಗಳನ್ನು ನಡೆಸುವುದಕ್ಕೆ ತಿರುಗಾಡಲು ಈ ಬಾರಿ ಬಂಟ್ವಾಳ ವಿಭಾಗಕ್ಕೆ ಮೂರು ವಾಹನಗಳನ್ನು ಕೂಡ ಮೆಸ್ಕಾಂ ನೀಡಿದೆ. ಮಳೆಗಾಲದ ಸುಮಾರು ಮೂರು ತಿಂಗಳುಗಳ ಅವಧಿಯಲ್ಲಿ ಈ ವಾಹನ ವಿಭಾಗ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಿದೆ. ಜತೆಗೆ ಮಳೆಗಾಲದಲ್ಲಿ ಹೆಚ್ಚಾಗಿ ಮರ ಬಿದ್ದು, ಸಾಕಷ್ಟು ವಿದ್ಯುತ್ ಕಂಬಗಳಿಗೆ ಹಾನಿಯಾಗುತ್ತಿದ್ದು, ಹೀಗಾಗಿ ಹೆಚ್ಚುವರಿ ಕಂಬಗಳ ಸ್ಟಾಕ್ ಇಟ್ಟುಕೊಳ್ಳಲಾಗಿದೆ. ಜತೆಗೆ ಇತರ ನಿರ್ವಹಣೆಯ ಮೆಟೀರಿಯಲ್‌ಗಳನ್ನೂ ಕೂಡ ಬಂಟ್ವಾಳ ವಿಭಾಗದಲ್ಲಿ ಸ್ಟಾಕ್ ಇಟ್ಟುಕೊಳ್ಳಲಾಗಿದೆ.
ಎಲ್ಲ ರೀತಿಯಲ್ಲೂ ಸನ್ನದ್ಧ
ವಿದ್ಯುತ್ ತಂತಿಗಳಿಗೆ ಅಡಚಣೆಯಾಗುವ ಮರದ ರೆಂಬೆಗಳ ತೆರವು ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಉಳಿದ ಕಾರ್ಯ ನಡೆಯುತ್ತಿದೆ. ಗಾಳಿ ಮಳೆಯಿಂದ ವಿದ್ಯುತ್ ಪೂರೈಕೆಗೆ ಹಾಕಿಯಾದರೆ, ಅವುಗಳ ದುರಸ್ತಿ ಮೆಸ್ಕಾಂ ಎಲ್ಲ ರೀತಿಯಲ್ಲೂ ಸನ್ನದ್ಧವಾಗಿದೆ. ಈ ಬಾರಿ ಮಳೆಯಿಂದ ತೊಂದರೆ ಆದಾಗ ಒಂದೂವರೆ ದಿನಗಳಲ್ಲಿ ದುರಸ್ತಿ ಕಾರ್ಯ ನಡೆಸಿಕೊಟ್ಟಿದ್ದೇವೆ.
– ರಾಮಚಂದ್ರ ಎಂ., ಕಾರ್ಯನಿರ್ವಾಹಕ ಎಂಜಿನಿಯರ್, ಮೆಸ್ಕಾಂ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ
ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು
ಬಂಟ್ವಾಳ: ಅಜ್ಜಿ ಮನೆಗೆಂದು ಹೋದ ತಾಯಿ, ಮಗ ನಾಪತ್ತೆ
ಐವರ್ನಾಡು: ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ವಾಹನ ಪಲ್ಟಿ
ಕಡೆಗೋಳಿ: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ