Udayavni Special

ಕನಿಷ್ಠ ಕೂಲಿ, ತುಟ್ಟಿ ಭತ್ತೆ : ಸಿಐಟಿಯು ಆಗ್ರಹ 


Team Udayavani, Jun 3, 2018, 3:21 PM IST

3-june-14.jpg

ಬೆಳ್ತಂಗಡಿ : ದ.ಕ. ಜಿಲ್ಲೆಯ ಜೀವನಾಧಾರವಾಗಿರುವ ಬೀಡಿ ಉದ್ಯಮವನ್ನು ಕೇಂದ್ರ ಸರಕಾರ ನಿರ್ನಾಮ ಮಾಡಲು ಪ್ರಯತ್ನಿಸುತ್ತಿದೆ. ಕಾರ್ಮಿಕ ವರ್ಗದ ಸವಲತ್ತುಗಳನ್ನು ಮಾಲಕರ ಪರವಾಗಿ ಬದಲಾವಣೆ ಮಾಡುವ ಮೂಲಕ ಕಾರ್ಮಿಕ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ, ಹಿರಿಯ ನಾಯಕ ವಸಂತ ಆಚಾರಿ ಆರೋಪಿಸಿದರು. 

ಅವರು ಮಿನಿ ವಿಧಾನಸೌಧ ಮುಂಭಾಗ ಸಿಐಟಿಯು ನೇತೃತ್ವದಲ್ಲಿ ಬೀಡಿ ಕಾರ್ಮಿಕರ ಕನಿಷ್ಠ ಕೂಲಿ, ತುಟ್ಟಿ ಭತ್ತೆ ತತ್‌ಕ್ಷಣ ನೀಡಲು ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಬೀಡಿ ಕಾರ್ಮಿಕರಿಗೆ 2015ರಿಂದ ತುಟ್ಟಿ ಭತ್ತೆ ನೀಡದೆ ವಂಚನೆ ಮಾಡಲಾಗಿದೆ. ಇದರ ವಿರುದ್ಧ ಸಿಐಟಿಯು ತೀವ್ರ ಪ್ರತಿಭಟನೆ ಜತೆಗೆ ಹೈಕೋರ್ಟಿನಲ್ಲಿ ದಾವೆ ಹೂಡಲಾಗಿದೆ. ಸಿಐಟಿಯುನ ನಿರಂತರ ಹೋರಾಟದಿಂದ ಹಲವು ಸವಲತ್ತು ಪಡೆಯುವಂತಾಗಿದೆ. ಇದೀಗ ಎಲ್ಲ ಸವಲತ್ತುಗಳನ್ನು ರದ್ದುಗೊಳಿಸಲು ನಮ್ಮನ್ನಾಳುವ ಸರಕಾರಗಳು ಪ್ರಯತ್ನಿಸುತ್ತಿವೆ. ಅವಿಭಜಿತ ದ.ಕ. ಜಿಲ್ಲೆಯ ಸಂಸದರು, ಶಾಸಕರು ತಮ್ಮ ಕ್ಷೇತ್ರದ ಬೀಡಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬದಲಾಗಿ ಕೇವಲ ಓಟಿಗಾಗಿ ಬಳಸುತ್ತಾರೆ ಎಂದು ಆರೋಪಿಸಿದರು.

ಸಿಐಟಿಯು ತಾ| ಅಧ್ಯಕ್ಷ ಶಿವಕುಮಾರ್‌ ಎಸ್‌.ಎಂ. ಮಾತನಾಡಿ, ಬೆಲೆ ಏರಿಕೆ ವಿಪರೀತವಾದರೂ ಬೀಡಿ ಕಾರ್ಮಿಕರ ತುಟ್ಟಿಭತ್ತೆ ಮಾತ್ರ ಮೂರು ವರ್ಷಗಳಿಂದ ನೀಡಲಾಗಿಲ್ಲ. ಸರಕಾರಗಳು ಬೀಡಿ ಮಾಲಕರ ಗುಲಾಮರಂತೆ ವರ್ತಿಸುತ್ತಿವೆ ಎಂದರು. ಸಿಐಟಿಯು ತಾ| ಕಾರ್ಯದರ್ಶಿ ವಸಂತ ನಡ ಮಾತನಾಡಿ, ಜಿಲ್ಲೆಯ ಲಕ್ಷಾಂತರ ಬೀಡಿ ಕಾರ್ಮಿಕರ ಅನ್ನದ ಪಾತ್ರೆ ಉಳಿಸಲು ಸಿಐಟಿಯು ಯಾವುದೇ ಹೋರಾಟಕ್ಕೆ ಸಿದ್ಧ. ಬೀಡಿ ಕಾರ್ಮಿಕರ ಕನಿಷ್ಠ ಕೂಲಿ, ತುಟ್ಟಿಭತ್ತೆ ನೀಡದಿದ್ದರೆ ಜೂ. 25ರಂದು ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದರು.

ತಹಶೀಲ್ದಾರ್‌ ಟಿ.ಸಿ. ಹಾದಿಮನಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ನೇತೃತ್ವವನ್ನು ವೇಣೂರು ವಲಯ ಬೀಡಿ ಕೆಲಸಗಾರರ ಸಂಘದ ಕಾರ್ಯದರ್ಶಿ ರೋಹಿಣಿ ಪೆರಾಡಿ, ಕೋಶಾ ಧಿಕಾರಿ ಜಯಂತಿ ನೆಲ್ಲಿಂಗೇರಿ, ಪದ್ಮನಾಭ ಗರ್ಡಾಡಿ, ಸಿಐಟಿಯು ಮುಖಂಡ ಶೇಖರ್‌ ಎಲ್‌ ಲಾೖಲ, ಸುಕನ್ಯಾ ಎಚ್‌., ಪದ್ಮಾವತಿ, ಸುಧಾ ಕೆ. ರಾವ್‌, ಅನಿಲ್‌ ಎಂ. ಉಪಸ್ಥಿತರಿದ್ದರು.

ಅನಿರ್ದಿಷ್ಟಾವಧಿ ಮುಷ್ಕರ
ಬೀಡಿ ಕಾರ್ಮಿಕರಿಗೆ 15 ದಿನಗಳ ಒಳಗಾಗಿ ಕನಿಷ್ಠ ಕೂಲಿ, ತುಟ್ಟಿಭತ್ತೆ ನೀಡದಿದ್ದರೆ ಬೀಡಿ ಕಂಪೆನಿಗಳ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ.
– ವಸಂತ ಆಚಾರಿ
ಸಿಐಟಿಯು ರಾಜ್ಯ ಉಪಾಧ್ಯಕ್ಷರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಯಾದಗಿರಿಗೆ ನಿರಂತರ ಕೋವಿಡ್ ಆಘಾತ! ಮತ್ತೆ18 ಜನರಲ್ಲಿ ಸೋಂಕು ದೃಢ

ಯಾದಗಿರಿಗೆ ನಿರಂತರ ಕೋವಿಡ್ ಆಘಾತ! ಮತ್ತೆ18 ಜನರಲ್ಲಿ ಸೋಂಕು ದೃಢ

ರಾಜ್ಯದಲ್ಲಿ ಮತ್ತೆ 141 ಜನರಿಗೆ ಕೋವಿಡ್-19 ಸೋಂಕು ದೃಢ

ರಾಜ್ಯದಲ್ಲಿ ಮತ್ತೆ 141 ಜನರಿಗೆ ಕೋವಿಡ್-19 ಸೋಂಕು ದೃಢ

ಕ್ವಾರಂಟೈನ್ ಮುಗಿಸಿ ಬಂದವರಿಗೂ ಸೋಂಕು ದೃಢ: ಉಡುಪಿಯಲ್ಲಿಂದು ಜನರಿಗೆ ಸೋಂಕು ಪತ್ತೆ

ಕ್ವಾರಂಟೈನ್ ಮುಗಿಸಿ ಬಂದವರಿಗೂ ಸೋಂಕು ದೃಢ: ಉಡುಪಿಯಲ್ಲಿಂದು 13 ಜನರಿಗೆ ಸೋಂಕು ಪತ್ತೆ

ಬಿಎಸ್ ವೈ ಅವರಿಂದ ಯತ್ನಾಳ್ ಶಾಸಕರಾಗಿದ್ದು, ಮಾತನಾಡುವ ಮೊದಲು ಯೋಚಿಸಲಿ: ಅಯನೂರು

ಬಿಎಸ್ ವೈ ಅವರಿಂದ ಯತ್ನಾಳ್ ಶಾಸಕರಾಗಿದ್ದು, ಮಾತನಾಡುವ ಮೊದಲು ಯೋಚಿಸಲಿ: ಅಯನೂರು

ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಮುಂದುವರಿಯುತ್ತದೆ: ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಮುಂದುವರಿಯುತ್ತದೆ: ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಉಡುಪಿ: ಕೋವಿಡ್ ಗೆದ್ದ ನಾಲ್ವರು ಪೊಲೀಸರು ಆಸ್ಪತ್ರೆಯಿಂದ ಬಿಡುಗಡೆ

ಉಡುಪಿ: ಕೋವಿಡ್ ಗೆದ್ದ ನಾಲ್ವರು ಪೊಲೀಸರು ಆಸ್ಪತ್ರೆಯಿಂದ ಬಿಡುಗಡೆ

ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದಿದ್ದಲ್ಲಿ ಕಠಿಣ ಕ್ರಮ: ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದಿದ್ದಲ್ಲಿ ಕಠಿಣ ಕ್ರಮ: ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

breadfruit

ದೀವಿ ಹಲಸು ಆದಾಯಕ್ಕೂ ಲೇಸು

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

30-May-25

ಕೋವಿಡ್ ವಾರಿಯರ್ಸ್ ಗಳ ಸೇವೆ ಅನನ್ಯ: ಸುರೇಶಗೌಡ

ಜೂ.1ರಿಂದ ಉಡುಪಿಯಲ್ಲಿ ನಿರಂತರವಾಗಿ ಖಾಸಗಿ ಬಸ್ಸು ಓಡಾಟ:  ಶಾಸಕ ರಘುಪತಿ ಭಟ್

ಜೂ.1ರಿಂದ ಉಡುಪಿಯಲ್ಲಿ ನಿರಂತರವಾಗಿ ಖಾಸಗಿ ಬಸ್ಸು ಓಡಾಟ:  ಶಾಸಕ ರಘುಪತಿ ಭಟ್

1,036 ಕೋಟಿ ರೂ. ಬಜೆಟ್‌ ಮಂಡನೆ

1,036 ಕೋಟಿ ರೂ. ಬಜೆಟ್‌ ಮಂಡನೆ

ಯಾದಗಿರಿಗೆ ನಿರಂತರ ಕೋವಿಡ್ ಆಘಾತ! ಮತ್ತೆ18 ಜನರಲ್ಲಿ ಸೋಂಕು ದೃಢ

ಯಾದಗಿರಿಗೆ ನಿರಂತರ ಕೋವಿಡ್ ಆಘಾತ! ಮತ್ತೆ18 ಜನರಲ್ಲಿ ಸೋಂಕು ದೃಢ

ವಿದ್ಯುತ್ ಶಾಕ್ ನಿಂದ ಓರ್ವ ಸಾವು; ಮತ್ತೋರ್ವ ಗಂಭೀರ ಗಾಯ

ವಿದ್ಯುತ್ ಶಾಕ್ ನಿಂದ ಓರ್ವ ಸಾವು; ಮತ್ತೋರ್ವ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.