ಸುಬ್ರಹ್ಮಣ್ಯ: RTO ಅಧಿಕಾರಿಗಳಿಂದ 20ಕ್ಕೂ ಹೆಚ್ಚು ವೈಟ್ ಬೋರ್ಡ್ ಟ್ಯಾಕ್ಸಿಗಳಿಗೆ ದಂಡ
Team Udayavani, Jun 30, 2022, 5:45 PM IST
ಸುಬ್ರಹ್ಮಣ್ಯ: ಪುತ್ತೂರಿನ ಆರ್.ಟಿ.ಒ. ಅಧಿಕಾರಿಗಳು ಸುಬ್ರಹ್ಮಣ್ಯದಲ್ಲಿ ಕಾರ್ಯಾಚರಣೆ ನಡೆಸಿ 20ಕ್ಕೂ ಹೆಚ್ಚು ವೈಟ್ ಬೋರ್ಡ್ ಟ್ಯಾಕ್ಸಿಗಳ ಮೇಲೆ ದಂಡ ವಿಧಿಸಿದ್ದಾರೆ.
ಕಾನೂನಿನಂತೆ ವೈಟ್ ಬೋರ್ಡ್ ವಾಹನಗಳು ಬಾಡಿಗೆಗೆ ತೆರಳುವಂತಿಲ್ಲ. ಆದರೆ ಸುಬ್ರಹ್ಮಣ್ಯಕ್ಕೆ ಬರುವ, ಸುಬ್ರಹ್ಮಣ್ಯದಿಂದ ಹೋಗುವ ಹಲವಾರು ವೈಟ್ ಬೋರ್ಡ್‌ನ ವಾಹನಗಳು ಬಾಡಿಗೆ ನೆಲೆಯಲ್ಲಿ ಸಂಚರಿಸುತ್ತವೆ. ಇದು ಕಾನೂನಿಗೆ ವಿರುದ್ಧವಾಗಿದೆ. ಈ ಬಗ್ಗೆ ಮಾಹಿತಿ ಅರಿತ ಅಧಿಕಾರಿಗಳು ಬಾಡಿಗೆ ನೆಲೆಯಲ್ಲಿ ಬಂದ ವೈಟ್ ಬೋರ್ಡ್ ವಾಹನಗಳಿಗೆ ದಂಡ ವಿಧಿಸಿ ಬಾಡಿಗೆ ಮಾಡದಂತೆ ತಾಕೀತು ಮಾಡಿದ್ದಾರೆ.
ಸುಬ್ರಹ್ಮಣ್ಯಕ್ಕೆ ದೂರದ ಊರಿನಿಂದ ಬಂದವರಿದ್ದ ಕಾರಣ ವಾಹನ ವಶಕ್ಕೆ ಪಡೆದಿಲ್ಲವಾದರೂ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಕಾರ್ಯಾಚರಣೆ ನಡೆಸಿ ವೈಟ್ ಬೋರ್ಡ್ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ, ಆರೋಪಿ ಮುಂಬೈ ಪೊಲೀಸ್ ವಶಕ್ಕೆ
ಹಣ ಕೊಡದ ಲಾರಿ ಚಾಲಕನನ್ನು ಬಂದೂಕಿನಿಂದ ಸುಡುತ್ತೇನೆಂದ ಅರಣ್ಯ ಇಲಾಖೆ ನೌಕರ : ವಿಡಿಯೋ ವೈರಲ್
ಒಂದು ಲಕ್ಷ ಜನ, ಒಂದು ಲಕ್ಷ ರಾಷ್ಟ್ರಧ್ವಜಗಳೊಂದಿಗೆ ಕಾಂಗ್ರೆಸ್ ಫ್ರೀಡಂ ಮಾರ್ಚ್ ಶುರು
ಕಾಡುಗೊಲ್ಲರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಿ
ಸ್ವಾತಂತ್ರ್ಯೋತ್ಸವ- ಒಂದು ಲಕ್ಷ ಸಣ್ಣ ಪ್ರಕರಣಗಳನ್ನು ಹಿಂಪಡೆದ ಅಸ್ಸಾಂ ಸರ್ಕಾರ: ಸಿಎಂ ಶರ್ಮಾ