ಬೆಳ್ತಂಗಡಿ: ಗ್ರಾ.ಪಂ. ಚುನಾವಣೆ ಹಿನ್ನೆಲೆ ಮಸ್ಟರಿಂಗ್; ಮತಪೆಟ್ಟಿಗೆ ಹಿಡಿದು ನಡೆದ ಸಿಬ್ಬಂದಿ

Team Udayavani, Dec 26, 2020, 4:03 PM IST

ಬೆಳ್ತಂಗಡಿ: ಗ್ರಾ.ಪಂ. ಚುನಾವಣೆ ಹಿನ್ನೆಲೆ ಮಸ್ಟರಿಂಗ್ ಮತಪೆಟ್ಟಿಗೆ ಹಿಡಿದು ನಡೆದ ಸಿಬ್ಬಂದಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ 48 ಗ್ರಾ.ಪಂ.ಗಳ ಪೈಕಿ ಅವಧಿ ಪೂರ್ಣಗೊಂಡ 46 ಗ್ರಾ.ಪಂ.ಗಳ 634 ಸ್ಥಾನಗಳಿಗೆ ಡಿ.27ರಂದು ಚುನಾವಣೆ ನಡೆಯಲಿದೆ. ಈ ಪ್ರಯುಕ್ತ ಶನಿವಾರ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಸಕಲ ಪೊಲೀಸ್ ಬಂದೋಬಸ್ತುನಿಂದ ಮುಂಜಾನೆ 6 ಗಂಟೆಯಿಂದ ತಯಾರಿ ನಡೆದು, 10 ಗಂಟಯಿಂದ ಮಸ್ಟರಿಂಗ್ ಆರಂಭಗೊಂಡಿತ್ತು. ಸಂಜೆ 3 ಗಂಟೆಗೆ ಬಹುತೇಕ ಸಿಬ್ಬಂದಿ ಮತಪೆಟ್ಟಿಗೆ ಹಿಡಿದು ತಮ್ಮ ತಮ್ಮ ಮತಗಟ್ಟೆಗೆ ತೆರಳಿದರು.

46 ಗ್ರಾ.ಪಂ.ಗಳ ಒಟ್ಟು 631 ಸ್ಥಾನಗಳ ಪೈಕಿ ಒಟ್ಟು 6 ಗ್ರಾ.ಪಂ.ಗಳ 7 ಸ್ಥಾನಗಳಿಗೆ  ಅವಿರೋಧವಾಗಿ ಆಯ್ಕೆ ನಡೆದಿದ್ದು, ಪ್ರಸಕ್ತ 624 ಸ್ಥಾನಗಳಿಗೆ ರವಿವಾರ ಚುನಾವಣೆ ನಡೆಯಲಿದೆ. ಒಟ್ಟು 1439 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

1605 ಮಂದಿ ಸಿಬ್ಬಂದಿ ನೇಮಕ

ಉಜಿರೆ ಎಸ್.ಡಿ.ಎಂ ಪಿ.ಯು.ಕಾಲೇಜು ಹಾಗೂ ಎಸ್.ಡಿ.ಎಂ. ಪದವಿ ಕಾಲೇಜಿನ 2 ಕಡೆ ಮಸ್ಟರಿಂಗ್ ಕೇಂದ್ರ ಸಿದ್ಧಪಡಿಸಲಾಗಿತ್ತು. ಒಟ್ಟು 1605 ಮಂದಿ ಮತಗಟ್ಟೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಮತಗಟ್ಟೆ ಅಧಿಕಾರಿ-321 (ಪಿಆರ್‌ಒ), ಒಂದನೇ ಮತಗಟ್ಟೆ ಅಧಿಕಾರಿ-321 (ಎಪಿಆರ್‌ಒ), 2ನೇ, 3ನೇ ಮತಗಟ್ಟೆ ಅಧಿಕಾರಿ- 642, ಡಿ ಗ್ರೂಪ್ ಸಿಬಂದಿ- 321 ಒಟ್ಟು 1605 ಮಂದಿ ನೇಮಿಸಲಾಗಿದೆ.

ಇದನ್ನೂ ಓದಿ:ನಗರದಲ್ಲಿ ನಕಲಿ ಮಾರ್ಷಲ್‌ನಿಂದ ದಂಡ ಸಂಗ್ರಹ ! ಹಿಡಿದು ಪೊಲೀಸರಿಗೊಪ್ಪಿಸಿದ ಅಸಲಿ ಮಾರ್ಷಲ್ಸ್

ಮುಂಜಾನೆಯಿಂದ ಮತಗಟ್ಟೆ ಸಿಬ್ಬಂದಿಗಳ 5 ಮಂದಿಯ ತಂಡವನ್ನು ಒಂದೆಡೆ ಸೇರಿಸಿ, ಬ್ಯಾಲೆಟ್ ಪೇಪರ್ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಜೋಡಿಸಲಾಯಿತು.

ಬೆಳ್ತಂಗಡಿ: ಗ್ರಾ.ಪಂ. ಚುನಾವಣೆ ಹಿನ್ನೆಲೆ ಮಸ್ಟರಿಂಗ್ ಮತಪೆಟ್ಟಿಗೆ ಹಿಡಿದು ನಡೆದ ಸಿಬ್ಬಂದಿ

ಸ್ಥಳಕ್ಕೆ ಎಡಿಸಿ ರೂಪಾ, ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್ ಜೆ. ಮತ್ತು ಚುನಾವಣಾ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಭದ್ರತೆ ಹಾಗೂ ಸಿಬಂದಿಗಳ ಪೂರ್ವ ತಯಾರಿಯನ್ನು ಪರಿಶೀಲಿಸಿದರು.

ಮತಗಟ್ಟೆಗಳಿಗೆ ತೆರಳಲು 58 ಸಾರಿಗೆ ಬಸ್, 15 ಮ್ಯಾಕ್ಸಿಕ್ಯಾಬ್, 14 ಜೀಪ್ ಗಳನ್ನು ನಿಯೋಜಿಸಲಾಗಿತ್ತು. ಬಾಂಜಾರುಮಲೆ, ಎಳನೀರು ಹಾಗೂ ಶಿಶಿಲ ಮತಗಟ್ಟೆ ಸಿಬ್ಬಂದಿಗೆ ಪ್ರಥಮ ಆದ್ಯತೆ ನೀಡಲಾಗಿತ್ತು. ಬಾಂಜಾರುಮಲೆ ಹಾಗೂ ಎಳನೀರು ಮತಗಟ್ಟೆಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.

ಎಲ್ಲಾ ಸಿಬ್ಬಂದಿಗಳಿಗೆ ಎಸ್.ಡಿ.ಎಂ.ಕಾಲೇಜು ಆವರಣದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಟಾಪ್ ನ್ಯೂಸ್

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.