Udayavni Special

ಬಂಟ್ವಾಳ ಪೇಟೆ ರಸ್ತೆಯಲ್ಲಿ ಪಾರ್ಕಿಂಗ್‌ ಅವಕಾಶವಿಲ್ಲ

 ಸಂಚಾರ ದಟ್ಟಣೆ: ವರ್ತಕರು-ಪೊಲೀಸರ ಸಭೆಯಲ್ಲಿ ತೀರ್ಮಾನ

Team Udayavani, Feb 21, 2020, 9:45 PM IST

kala-23

ಬಂಟ್ವಾಳ : ಬಂಟ್ವಾಳ ಪೇಟೆಯಲ್ಲಿ ಟ್ರಾಫಿಕ್‌ ಜಾಮ್‌ ಆಗದಂತೆ ಸುಗಮ ಸಂಚಾರಕ್ಕೆ ಅವಕಾಶ ನಿಟ್ಟಿನಲ್ಲಿ ಬಂಟ್ವಾಳ ಬಡ್ಡಕಟ್ಟೆ ನಿತ್ಯಾನಂದ ಭಜನ ಮಂದಿರದ ಬಳಿಯಿಂದ ಸರಕಾರಿ ಆಸ್ಪತ್ರೆ ಬಳಿಯ ನೆರೆ ವಿಮೋಚನ ರಸ್ತೆವರೆಗೆ ಮುಖ್ಯ ರಸ್ತೆಯಲ್ಲಿ ಯಾವುದೇ ವಾಹನ ಪಾರ್ಕಿಂಗ್‌ಗೆ ಅವಕಾಶವಿಲ್ಲ ಎಂದು ಬಂಟ್ವಾಳ ಪೇಟೆಯ ವರ್ತಕರ ಅಭಿಪ್ರಾಯ ಪಡೆದು ಪೊಲೀಸ್‌ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಗುರುವಾರ ಸಂಜೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್‌ ಡಿ’ಸೋಜಾ ಅವರ ನೇತೃತ್ವದಲ್ಲಿ ಬಂಟ್ವಾಳ ಪೇಟೆಯ ಸಂಚಾರ ದಟ್ಟಣೆ ನಿಯಂತ್ರಣದ ಉದ್ದೇಶದಿಂದ ನಡೆದ ವರ್ತಕರು ಹಾಗೂ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯ ರಸ್ತೆಯಲ್ಲಿ ಪಾರ್ಕಿಂಗ್‌ ಮಾಡಿದರೆ ಪ್ರಸ್ತುತ ಒಂದು ವಾರದವರೆಗೆ ಯಾವುದೇ ದಂಡ ವಿಧಿಸದೆ ಎಚ್ಚರಿಕೆ ನೀಡಲಾಗುತ್ತದೆ. ಬಳಿಕ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಯಿತು.

ಸರಕು ವಾಹನಕ್ಕೆ ಸಮಯ ನಿಗದಿ
ಬಂಟ್ವಾಳ ಪೇಟೆಯ ಅಂಗಡಿಗಳಿಂದ ಸರಕು ಕೊಂಡುಹೋಗಲು, ಸರಕನ್ನು ತರುವ (ಲೋಡ್‌ – ಅನ್‌ಲೋಡಿಂಗ್‌) ಲಾರಿ/ಇತರ ವಾಹನಗಳಿಗೆ ಸಮಯ ನಿಗದಿ ಕುರಿತು ವರ್ತಕರಿಂದ ಅಭಿಪ್ರಾಯ ಪಡೆದು, ಬೆಳಗ್ಗೆ 8ರ ಮೊದಲು, ಅಪರಾಹ್ನ 1ರಿಂದ 3 ಹಾಗೂ ರಾತ್ರಿ 7ರ ಬಳಿಕ ಸರಕು ವಾಹನಗಳಿಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು.

ಕೆಲವು ವರ್ತಕರು ತಮ್ಮ ಅಂಗಡಿಯ ಹೊರಗೆ, ವಾಹನ ಸಂಚಾರಕ್ಕೆ ತೊಂದರೆ ಯಾಗುವ ರೀತಿಯಲ್ಲಿ ವ್ಯಾಪಾರ ಮಾಡು ತ್ತಿದ್ದಾರೆ. ಜತೆಗೆ ಅಂಗಡಿಗಳ ಮುಂಭಾಗ ಛಾವಣಿ ಶೀಟ್‌ಗಳು ರಸ್ತೆಗೆ ಬಂದಿವೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಂಥವರ ವಿರುದ್ಧ ಕ್ರಮಕ್ಕೆ ಡಿವೈಎಸ್‌ಪಿ ಅವರು ಸಂಚಾರ ಠಾಣೆಯ ಪಿಎಸ್‌ಐ ರಾಮ ನಾಯ್ಕ ಅವರಿಗೆ ತಿಳಿಸಿದರು.

ಮೂಡುಬಿದಿರೆ ಭಾಗಕ್ಕೆ ತೆರಳುವ ಬಸ್‌ಗಳು ಕೊಟ್ರಮನಗಂಡಿಯ ಬಸ್‌ ನಿಲ್ದಾಣದಲ್ಲೇ ನಿಲ್ಲಬೇಕು, ಜತೆಗೆ ಕಾಲೇಜು ರಸ್ತೆ ಜಂಕ್ಷನ್‌, ಬಡ್ಡಕಟ್ಟೆ ಪರಿಸರದಲ್ಲಿ ನಿಗದಿತ ಆಟೋಗಳನ್ನು ಹೊರತುಪಡಿಸಿ ಯಾವುದೇ ವಾಹನಕ್ಕೂ ನಿಲ್ಲುವುದಕ್ಕೆ ಅವಕಾಶ ನೀಡಬಾರದು. ರಸ್ತೆಗಳನ್ನು ಹೊರತುಪಡಿಸಿ ಪೇಟೆಯ ಸುತ್ತಮುತ್ತಲೂ ಇರುವ ಸರಕಾರಿ ಜಾಗಗಳಲ್ಲಿ ಪಾರ್ಕಿಂಗ್‌ ಮಾಡಲು ತೀರ್ಮಾನಿಸಲಾಯಿತು.

ಸಭೆಯ ತೀರ್ಮಾನಗಳನ್ನು ಬಂಟ್ವಾಳ ಪುರಸಭೆಯ ಗಮನಕ್ಕೆ ತರುವಂತೆ ವರ್ತ ಕರು ಪೊಲೀಸರಿಗೆ ಮನವಿ ಮಾಡಿ ದರು. ಸಂಚಾರ ನಿಯಂತ್ರಣಕ್ಕೆ ಹೋಂ ಗಾರ್ಡ್‌ ಬದಲು ಪೊಲೀಸ್‌ ಸಿಬಂದಿ ಯನ್ನೇ ನಿಯೋಜಿಸುವಂತೆ ಆಗ್ರಹಿಸಿದರು.

ಪ್ರೊಬೆಷನರಿ ಐಪಿಎಸ್‌ ಅಧಿಕಾರಿ ರಂಜಿತ್‌, ನಗರ ಠಾಣಾ ಪಿಎಸ್‌ಐ ಅವಿನಾಶ್‌, ಗ್ರಾಮಾಂತರ ಠಾಣಾ ಪಿಎಸ್‌ಐ ಪ್ರಸನ್ನ ಉಪಸ್ಥಿತರಿದ್ದರು.

ಹೆದ್ದಾರಿಯವರಿಗೆ ಸೂಚನೆ: ಡಿವೈಎಸ್‌ಪಿ ಭರವಸೆ
ಬಿ.ಸಿ. ರೋಡ್‌-ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ನಿರ್ವಹಿಸು ತ್ತಿರುವವರು ಬೇಕಾಬಿಟ್ಟಿ ರಸ್ತೆಯನ್ನು ಅಗೆದು ಹಾಕುವುದರಿಂದ ಯಾವುದೇ ವಾಹನ ತೆರಳದ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಅವರಿಗೆ ಎಚ್ಚರಿಕೆ ನೀಡುವಂತೆ ಪುರಸಭಾ ಸದಸ್ಯ ಎ. ಗೋವಿಂದ ಪ್ರಭು ಅವರು ಆಗ್ರಹಿಸಿದರು. ಈ ಕುರಿತು ಸಂಬಂಧಪಟ್ಟವರನ್ನು ಕರೆಸಿ ಸೂಚನೆ ನೀಡುವ ಕುರಿತು ಡಿವೈಎಸ್‌ಪಿ ಅವರು ಭರವಸೆ ನೀಡಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ರಾಮಸ್ಥರು ಸಹಕರಿಸಿ: ಖಾದರ್‌ ಮನವಿ

ಗ್ರಾಮಸ್ಥರು ಸಹಕರಿಸಿ: ಖಾದರ್‌ ಮನವಿ

ಸುಳ್ಯ: ಒಟಿಪಿ ಇಲ್ಲದೆ ನೀಡುತ್ತಿಲ್ಲ ಪಡಿತರ

ಸುಳ್ಯ: ಒಟಿಪಿ ಇಲ್ಲದೆ ನೀಡುತ್ತಿಲ್ಲ ಪಡಿತರ

ಸುಭಿಕ್ಷೆಯ ಸಂಕೇತವೇ ದೀಪದ ಬೆಳಕು

ಸುಭಿಕ್ಷೆಯ ಸಂಕೇತವೇ ದೀಪದ ಬೆಳಕು

ಲಾಕ್‌ಡೌನ್‌ನಿಂದ ಕೃಷಿ ನೀರಾವರಿಗೂ ಸಂಕಷ್ಟ

ಲಾಕ್‌ಡೌನ್‌ನಿಂದ ಕೃಷಿ ನೀರಾವರಿಗೂ ಸಂಕಷ್ಟ

ಸೆಲೂನ್‌ ಬಂದ್‌, ಬಿಸಿಲ ಧಗೆ:ಪೊಲೀಸರಿಂದ ರಕ್ಷಣಾ ಮಾರ್ಗ!

ಸೆಲೂನ್‌ ಬಂದ್‌, ಬಿಸಿಲ ಧಗೆ:ಪೊಲೀಸರಿಂದ ರಕ್ಷಣಾ ಮಾರ್ಗ!

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ