ಬಂಟ್ವಾಳ: ತೋಟದಲ್ಲಿ ಕಂಡುಬಂದ ಚಿಪ್ಪುಹಂದಿ, ರಕ್ಷಿತಾರಣ್ಯಕ್ಕೆ ಬಿಟ್ಟ ಅಧಿಕಾರಿಗಳು
Team Udayavani, Dec 5, 2020, 4:09 PM IST
ಬಂಟ್ವಾಳ: ಕರಾವಳಿ ಭಾಗದಲ್ಲಿ ಅಪರೂಪವಾದ ಚಿಪ್ಪುಹಂದಿಯನ್ನು ಹಿಡಿದು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡುವಲ್ಲಿ ಬಂಟ್ವಾಳ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕೃಷ್ಣಕೋಡಿ ಎಂಬಲ್ಲಿ ಪುರುಷೋತ್ತಮ ಎಂಬವರ ಮನೆಯ ಪಕ್ಕದ ತೋಟದಲ್ಲಿ ಈ ಚಿಪ್ಪುಹಂದಿ ಕಂಡು ಬಂದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯದಿಂದ ರಕ್ಷಣೆ ಮಾಡಲಾಗಿದೆ.
ತಮ್ಮ ತೋಟದಲ್ಲಿ ಚಿಪ್ಪು ಹಂದಿ ಇರುವ ಬಗ್ಗೆ ಪುರುಷೋತ್ತಮ ಅವರು ಬಂಟ್ವಾಳ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಬಂಟ್ವಾಳ ಅರಣ್ಯ ಇಲಾಖೆಯ ಅಧಿಕಾರಿ ಸಹಿತ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಚಿಪ್ಪುಹಂದಿಯನ್ನು ಸುರಕ್ಷಿತವಾಗಿ ಹಿಡಿದು ಬಳಿಕ ರಕ್ಷಿತಾರಣ್ಯಕ್ಕೆ ಬಿಡುವಲ್ಲಿ ಯಶಸ್ಬಿಯಾಗಿದ್ದಾರೆ.
ಇದನ್ನೂ ಓದಿ:ಈ ಮನೆಯಲ್ಲಿ ಎರಡು ದಿನದಲ್ಲಿ ನಾಲ್ಕು ಹಾವು ಪ್ರತ್ಯಕ್ಷ: ಕುಟುಂಬಸ್ಥರ ಆತಂಕ
ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್. ಯಶೋಧರ, ಅರಣ್ಯ ರಕ್ಷಕರಾದ ಜಿತೇಶ್ ಮತ್ತು ರೇಖಾ ಭಾಗವಹಿಸಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444