ಬಂಟ್ವಾಳ: ಅಪ್ರಾಪ್ತ ವಯಸ್ಕ ಬಾಲಕಿಯ ಜತೆ ದೈಹಿಕ ಸಂಪರ್ಕ; ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ
Team Udayavani, May 19, 2022, 8:13 PM IST
ಸಾಂದರ್ಭಿಕ ಚಿತ್ರ
ಬಂಟ್ವಾಳ: ಅಪ್ರಾಪ್ತ ಬಾಲಕಿಯ ಜತೆ ದೈಹಿಕ ಸಂಪರ್ಕ ಬೆಳೆಸಿ ಗಂಡು ಮಗುವಿನ ಜನನಕ್ಕೆ ಕಾರಣವಾದ ಆರೋಪಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಕಿನ್ನಿಗೋಳಿ ಕೊಲ್ಲೂರು ನಿವಾಸಿ ಅಶ್ವತ್ಥ ಆರೋಪಿ. ಪಾಣೆಮಂಗಳೂರು ಗ್ರಾಮದ ಉಪ್ಪುಗುಡ್ಡೆ ನಿವಾಸಿ ಅಪ್ರಾಪ್ತ ವಯಸ್ಕ ಬಾಲಕಿ ಸುಮಾರು 2 ವರ್ಷಗಳ ಹಿಂದೆ ಕಿನ್ನಿಗೋಳಿಯಲ್ಲಿ ನಡೆದ ಸ್ನೇಹಿತೆಯ ಮದುವೆಗೆ ತೆರಳಿದ್ದ ವೇಳೆ ಆರೋಪಿ ಅಶ್ವತ್ಥನ ಪರಿಚಯವಾಗಿ ಇಬ್ಬರೂ ಮೊಬೈಲ್‌ನಲ್ಲಿ ಸಂಪರ್ಕದಲ್ಲಿದ್ದರು.
ಬಾಲಕಿಯು ಕಳೆದ ವರ್ಷ 2 ಬಾರಿ ಆರೋಪಿಯ ಮನೆಗೆ ಹೋಗಿದ್ದಾಗ ಆತ ಅಲ್ಲೇ ಪಕ್ಕದಲ್ಲಿದ್ದ ಖಾಲಿ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಬಾಲಕಿ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮನೀಡಿದ್ದು, ಆರೋಪಿ ಅಶ್ವತ್ಥನ ವಿರುದ್ಧ ದೂರು ನೀಡಿದ್ದಾಳೆ. ಆಕೆಯ ದೂರಿನಂತೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುತ್ತಿಗಾರು: ಮಗುವಿನೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ; ಬದುಕುಳಿದ ಮಗು
ವಿಟ್ಲ: ಬದನಾಜೆಯ ಬಸ್ ತಂಗುದಾಣದಲ್ಲಿ ರಕ್ತದ ಕಲೆ; ಕುಡಿದು ಬಿದ್ದಿರುವ ವ್ಯಕ್ತಿಯದೆಂದು ಶಂಕೆ
ಸಂಪಾಜೆ ಭೂಕಂಪ ಪೀಡಿತ ಪ್ರದೇಶದ ಮನೆಗಳಿಗೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ಭೇಟಿ
ಜಕ್ರಿಬೆಟ್ಟು ಜಲ ಶುದ್ಧೀಕರಣ ಘಟಕ: ಸುತ್ತಲೂ ಬೆಳೆದು ನಿಂತ ಪೊದೆ
ಸೌಕರ್ಯದ ನಿರೀಕ್ಷೆಯಲ್ಲಿ ಹಾರಾಡಿ ಶಾಲೆ
MUST WATCH
ಹೊಸ ಸೇರ್ಪಡೆ
ಕುಣಿಗಲ್: ಕೆಂಪೇಗೌಡ ಜಯಂತೋತ್ಸವ ಮೆರವಣಿಗೆ ವೇಳೆ ಲೋಪ: ತಹಶೀಲ್ದಾರ್ ಮಹಬಲೇಶ್ವರ್ ಕ್ಷಮೆ
ತೆಲಂಗಾಣದಲ್ಲೂ ಬಿಜೆಪಿ ಅಧಿಕಾರ ಖಚಿತ : ಸಚಿವ ಅನುರಾಗ್ ಠಾಕೂರ್
ಗೋವಾದಲ್ಲಿ ಶಿವಸೇನೆ ಬಂಡಾಯ ಶಾಸಕರು : ಗಡಿ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ
ಭ್ರಷ್ಟಾಚಾರ ಆರೋಪಿಸಿ ಕಾರವಾರ ಪೌರಾಯುಕ್ತರ ಕೊಠಡಿಯಲ್ಲಿ ಮಾಜಿ ಶಾಸಕ ಸೈಲ್ ಧರಣಿ
ಕೊನೆ ಕ್ಷಣದ ಬದಲಾವಣೆ : ಔರಂಗಾಬಾದ್- ಸಂಭಾಜಿ ನಗರ, ಒಸ್ಮಾನಾಬಾದ್- ಧಾರಶಿವ್