ಉಪವಿದ್ಯುತ್‌ ಕೇಂದ್ರ: ಸಾಮರ್ಥ್ಯ ಹೆಚ್ಚಳ

ಪುತ್ತೂರು: 20 ಮೆಗಾವ್ಯಾಟ್‌ ಸಾಮರ್ಥ್ಯದ ಹೆಚ್ಚುವರಿ ಪರಿವರ್ತಕ ಅಳವಡಿಕೆ

Team Udayavani, Mar 14, 2020, 4:36 AM IST

kadama-power

ಪುತ್ತೂರು ವಿದ್ಯುತ್‌ ಉಪಕೇಂದ್ರಕ್ಕೆ ಹೊಸ ಪರಿವರ್ತಕ ಆಗಮಿಸಿದೆ.

ಪುತ್ತೂರು: ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳ ವಿದ್ಯುತ್‌ ಸರಬರಾಜು ವ್ಯವಸ್ಥೆಯ ಪ್ರಮುಖ ಕೇಂದ್ರವಾಗಿರುವ ಪುತ್ತೂರಿನ 110 ಕೆ.ವಿ. ವಿದ್ಯುತ್‌ ಉಪಕೇಂದ್ರದ ವಿದ್ಯುತ್‌ ಪ್ರಸರಣ ಸಾಮರ್ಥ್ಯ ಹೆಚ್ಚಳಗೊಳಿಸಲು ಹೆಚ್ಚುವರಿ 20 ಮೆಗಾ ವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕ ಅಳವಡಿಸಲಾ ಗುತ್ತಿದ್ದು, ಮಾರ್ಚ್‌ ಅಂತ್ಯಕ್ಕೆ ಕಾರ್ಯಾರಂಭಿಸಲಿದೆ. ಪುತ್ತೂರು 110 ಕೆ.ವಿ. ವಿದ್ಯುತ್‌ ಉಪಕೇಂದ್ರವು ಹಾಲಿ 40 ಮೆ.ವ್ಯಾ. ಸಾಮರ್ಥ್ಯವನ್ನು ಹೊಂದಿದ್ದು, ಇದಕ್ಕೆ ಹೆಚ್ಚುವರಿಯಾಗಿ 20 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್‌ ಪರಿವರ್ತಕವನ್ನು ಅಳವಡಿಸುವ ಕಾಮಗಾರಿ ನಡೆಸಲಾಗುತ್ತಿದೆ. ಕೆಪಿಟಿಸಿಎಲ್‌ ವತಿಯಿಂದ ಈ ಕಾಮಗಾರಿಗಳು ನಡೆಯುತ್ತಿದ್ದು, ಟ್ರಾನ್ಸ್‌ ಫಾರ್ಮರ್‌ ಅಳವಡಿಸುವ ಕಾಮಗಾರಿ ಮಾತ್ರ ಬಾಕಿಯಿದೆ.

ಕ್ರೇನ್‌ ಮೂಲಕ ಅಳವಡಿಕೆ
ವಿದ್ಯುತ್‌ ಪರಿವರ್ತಕಕ್ಕೆ 1.75 ಕೋಟಿ ರೂ. ಹಾಗೂ ಅಳವಡಿಕೆ ಮತ್ತು ಸಾಗಾಟ ವೆಚ್ಚವಾಗಿ 75 ಲಕ್ಷ ರೂ. ಸೇರಿ ಒಟ್ಟು 2.50 ಕೋಟಿ ರೂ. ವಿನಿಯೋಗವಾಗಲಿದೆ. 20 ಮೆಗಾವ್ಯಾಟ್‌ ವಿದ್ಯುತ್‌ ಪರಿವರ್ತಕ ಪುತ್ತೂರು ವಿದ್ಯುತ್‌ ಉಪಕೇಂದ್ರಕ್ಕೆ ಆಗಮಿಸಿದ್ದು ಕ್ರೇನ್‌ ಮೂಲಕ ಅಳವಡಿಸಲಾಗುತ್ತದೆ.

ಪೂರೈಕೆ ಬಹೂಪಯೋಗಿ
ಹೆಚ್ಚುವರಿ ಯೋಜನೆಯ ಮೂಲಕ ಪುತ್ತೂರು 110 ಕೆ.ವಿ. ವಿದ್ಯುತ್‌ ಉಪಕೇಂದ್ರವು 60 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್‌ ಉಪಕೇಂದ್ರವಾಗಿ ಮೇಲ್ದರ್ಜೆಗೇರಲಿದೆ. ಆ ಮೂಲಕ ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳ ವಿದ್ಯುತ್‌ ಸರಬರಾಜು ವ್ಯವಸ್ಥೆಯಲ್ಲಿ ಪ್ರಗತಿ ಕಾಣಲಿದೆ. 10 ವರ್ಷಗಳ ಹಿಂದೆ ಪುತ್ತೂರು 110 ಕೆ.ವಿ. ವಿದ್ಯುತ್‌ ಉಪಕೇಂದ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿತ್ತು. ಅನಂತರದಲ್ಲಿ ಈಗ ಕಾಮಗಾರಿ ನಡೆಯುತ್ತಿರುವುದರಿಂದ ವಿದ್ಯುತ್‌ ಬಳಕೆದಾರರಲ್ಲಿ ಆಶಾಭಾವನೆ ಮೂಡಿಸಿದೆ.

ಕಡಿಮೆಯಾಗಲಿದೆ ಒತ್ತಡ
ಹಾಲಿ ತಾಲೂಕಿನ ಮಾಡಾವಿನಲ್ಲಿ 110 ಕೆ.ವಿ. ವಿದ್ಯುತ್‌ ಉಪಕೇಂದ್ರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಈ ಉಪಕೇಂದ್ರವು ಕಾರ್ಯಾರಂಭಗೊಂಡಲ್ಲಿ ಸುಳ್ಯ, ಕಡಬ ಭಾಗದ ವಿದ್ಯುತ್‌ ಸರಬರಾಜು ವ್ಯವಸ್ಥೆಯಲ್ಲಿ ಇನ್ನಷ್ಟು ಪ್ರಗತಿ ಕಾಣುವ ಜತೆಗೆ ಪುತ್ತೂರು ಉಪಕೇಂದ್ರದ ಒತ್ತಡವನ್ನೂ ಕಡಿಮೆ ಮಾಡಲಿದೆ. ಇದರ ಜತೆಗೆ ಮಾಡಾವು, ಕೈಕಾರ, ಉಪ್ಪಿನಂಗಡಿ ಸಬ್‌ಸ್ಟೇಷನ್‌ ವಿಚಾರಗಳು ಪ್ರಗತಿಯಲ್ಲಿರುವುದು ಕಾರ್ಯರೂಪಕ್ಕೆ ಬಂದರೆ ಬಹುತೇಕ ಸಮಸ್ಯೆಗಳು ಬಗೆಹರಿಯುವ ವಿಶ್ವಾಸದಲ್ಲಿ ಮೆಸ್ಕಾಂ ಇದೆ.

ಪ್ರಸರಣ ವ್ಯವಸ್ಥೆ ಉತ್ತಮ
ಮೂರು ತಾಲೂಕುಗಳ ವಿದ್ಯುತ್‌ ಪೂರೈಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಹಂತ ಹಂತವಾಗಿ ಯೋಜನೆ ಹಾಕಿಕೊಳ್ಳಲಾಗಿದೆ. ಆ ಮೂಲಕ ವಿದ್ಯುತ್‌ ಪ್ರಸರಣ ವ್ಯವಸ್ಥೆಯನ್ನು ಉತ್ತಮಪಡಿಸಲಿದೆ. ಗುಣಮಟ್ಟದ ಹಾಗೂ ನಿರಂತರ ವಿದ್ಯುತ್‌ ಸರಬರಾಜು ಮಾಡಲು ಕ್ರಮಗಳನ್ನು ಕೈಗೊಳ್ಳಲಿದೆ.
– ಗಂಗಾಧರ್‌, ಕಾರ್ಯಪಾಲಕ ಎಂಜಿನಿಯರ್‌, ಕೆಪಿಟಿಸಿಎಲ್‌, ಮಂಗಳೂರು

ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

1-gfgfdgf

ನೈಜೀರಿಯಾದಲ್ಲಿ ಚರ್ಚ್‌ನಲ್ಲಿ ಕಾಲ್ತುಳಿತ : 31 ಮಂದಿ ಸಾವು

ನೂರರ ನೋಟಿಗೇ ಹೆಚ್ಚು ಬೇಡಿಕೆ! 2000 ರೂ. ನೋಟಿಗೆ ಇಲ್ಲ ಆದ್ಯತೆ

ನೂರರ ನೋಟಿಗೇ ಹೆಚ್ಚು ಬೇಡಿಕೆ! 2000 ರೂ. ನೋಟಿಗೆ ಇಲ್ಲ ಆದ್ಯತೆ

ಕುಂದಾಪುರ : ಕಟ್ಟೆ ಭೋಜಣ್ಣ ಪ್ರಕರಣ ಮತ್ತೋರ್ವ ಆರೋಪಿಗಾಗಿ ಶೋಧ

ಕುಂದಾಪುರ : ಕಟ್ಟೆ ಭೋಜಣ್ಣ ಪ್ರಕರಣ, ಮತ್ತೋರ್ವ ಆರೋಪಿಗಾಗಿ ಶೋಧ

pramod-sawanth

ಗೋವಾದಲ್ಲಿ ಕ್ರೈಸ್ತ ಪಾದ್ರಿ ಬಂಧನ : ಮತಾಂತರ ಸಹಿಸುವುದಿಲ್ಲ ಎಂದ ಸಿಎಂ ಸಾವಂತ್

ನಾನೊಬ್ಬ “ಮಜ್ನೂ’ ಎಂದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್ !

ನಾನೊಬ್ಬ “ಮಜ್ನೂ’ ಎಂದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್ !

1-fd-sfdf

ಜಾಕ್ವೆಲಿನ್ ಫರ್ನಾಂಡಿಸ್ ಗೆ ಅಬುಧಾಬಿಗೆ ತೆರಳಲು ಕೋರ್ಟ್ ಅನುಮತಿ

ಭಟ್ಕಳ : ಹೆದ್ದಾರಿಯಲ್ಲೇ ಪಲ್ಟಿಯಾದ ಲಾರಿ, ಚಾಲಕ ಗಂಭೀರ, ಸಂಚಾರ ವ್ಯತ್ಯಯ

ಭಟ್ಕಳ : ರಾಷ್ಟ್ರೀಯ ಹೆದ್ದಾರಿಯಲ್ಲೇ ಪಲ್ಟಿಯಾದ ಲಾರಿ, ಚಾಲಕ ಗಂಭೀರ, ಸಂಚಾರ ವ್ಯತ್ಯಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾರಾವಿಯಲ್ಲಿ ಮುರಿದುಬಿತ್ತು ಅದ್ದೂರಿ ಮದುವೆ

ನಾರಾವಿಯಲ್ಲಿ ಮುರಿದುಬಿತ್ತು ಅದ್ದೂರಿ ಮದುವೆ

ನೆಲ್ಯಾಡಿ: ಕಾರು – ಟಿಪ್ಪರ್‌ ಢಿಕ್ಕಿ; ಓರ್ವ ಸಾವು

ನೆಲ್ಯಾಡಿ: ಕಾರು – ಟಿಪ್ಪರ್‌ ಢಿಕ್ಕಿ; ಓರ್ವ ಸಾವು

ಶಿಶಿಲ: ದೇವರ ಮೀನುಗಳಿಗೆ ನೀರುನಾಯಿ ಕಾಟ; ಭಕ್ತರಿಗೆ ಆತಂಕ; ಅರಣ್ಯ ಇಲಾಖೆಗೆ ಉಭಯ ಸಂಕಟ !

ಶಿಶಿಲ: ದೇವರ ಮೀನುಗಳಿಗೆ ನೀರುನಾಯಿ ಕಾಟ; ಭಕ್ತರಿಗೆ ಆತಂಕ; ಅರಣ್ಯ ಇಲಾಖೆಗೆ ಉಭಯ ಸಂಕಟ !

ತಿಂಗಳಾಡಿ: ಹೆಚ್ಚಾದ ಕಳ್ಳರ ಹಾವಳಿ; ಸೀಯಾಳ ಕದ್ದು ಕುಡಿದ ಕಳ್ಳರು..!

ತಿಂಗಳಾಡಿ: ಹೆಚ್ಚಾದ ಕಳ್ಳರ ಹಾವಳಿ; ಸೀಯಾಳ ಕದ್ದು ಕುಡಿದ ಕಳ್ಳರು..!

9death

ಬಂಟ್ವಾಳ: ಆಟವಾಡುವ ವೇಳೆ 3ನೇ ಮಹಡಿಯಿಂದ ಬಿದ್ದು ಬಾಲಕ ಸಾವು

MUST WATCH

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

ಹೊಸ ಸೇರ್ಪಡೆ

ಕುಂದಾಪುರ : ಜಾಗದ ವಿಚಾರ ; ದೂರು – ಪ್ರತಿದೂರು

ಕುಂದಾಪುರ : ಜಾಗದ ವಿಚಾರ ; ದೂರು – ಪ್ರತಿದೂರು

1-gfgfdgf

ನೈಜೀರಿಯಾದಲ್ಲಿ ಚರ್ಚ್‌ನಲ್ಲಿ ಕಾಲ್ತುಳಿತ : 31 ಮಂದಿ ಸಾವು

ನೂರರ ನೋಟಿಗೇ ಹೆಚ್ಚು ಬೇಡಿಕೆ! 2000 ರೂ. ನೋಟಿಗೆ ಇಲ್ಲ ಆದ್ಯತೆ

ನೂರರ ನೋಟಿಗೇ ಹೆಚ್ಚು ಬೇಡಿಕೆ! 2000 ರೂ. ನೋಟಿಗೆ ಇಲ್ಲ ಆದ್ಯತೆ

ಕುಂದಾಪುರ : ಕಟ್ಟೆ ಭೋಜಣ್ಣ ಪ್ರಕರಣ ಮತ್ತೋರ್ವ ಆರೋಪಿಗಾಗಿ ಶೋಧ

ಕುಂದಾಪುರ : ಕಟ್ಟೆ ಭೋಜಣ್ಣ ಪ್ರಕರಣ, ಮತ್ತೋರ್ವ ಆರೋಪಿಗಾಗಿ ಶೋಧ

pramod-sawanth

ಗೋವಾದಲ್ಲಿ ಕ್ರೈಸ್ತ ಪಾದ್ರಿ ಬಂಧನ : ಮತಾಂತರ ಸಹಿಸುವುದಿಲ್ಲ ಎಂದ ಸಿಎಂ ಸಾವಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.