ಸೂರ್ಯದೇವ ಕಣಿºರಷ್ಟೆ ನಾವೂರಿಗೆ ಬೆಳಕು


Team Udayavani, Aug 19, 2021, 3:00 AM IST

ಸೂರ್ಯದೇವ ಕಣಿºರಷ್ಟೆ ನಾವೂರಿಗೆ ಬೆಳಕು

ನಾವೂರಿನ ಜನತೆ ವಿದ್ಯುತ್‌ ಸಂಪರ್ಕಕ್ಕಾಗಿ ಜೀವನದ ಬಹುಪಾಲು ಸಮಯವನ್ನು ಕಚೇರಿ ಅಲೆದಾಟಕ್ಕೆ ಮೀಸಲು ಇಡುವಂತಾಗಿದೆ. ಈ ಊರಿನ ಒಟ್ಟು ಭವಣೆ ಕುರಿತ ವರದಿ ಇಂದಿನ ಒಂದು ಊರು-ಹಲವು ದೂರು ಸರಣಿಯಲ್ಲಿ.

ಬೆಳ್ತಂಗಡಿ: ರಾಷ್ಟ್ರೀಯ ಉದ್ಯಾನ ದಂಚಿನಲ್ಲಿರುವ ಬೆಳ್ತಂಗಡಿ ತಾಲೂಕಿನ ಬಹುತೇಕ ಗ್ರಾಮಗಳ ಅನೇಕರು ವಿದ್ಯುತ್‌, ರಸ್ತೆ, ಹಕ್ಕುಪತ್ರಗಳಿಗಾಗಿ ಜೀವನಯಾತ್ರೆಯ ಅರ್ಧ ಆಯುಷ್ಯವನ್ನ ಕಂದಾಯ, ಅರಣ್ಯ ಇಲಾಖೆಯನ್ನೇ ಸುತ್ತಿ ಕಳೆದಿದ್ದಾರೆ. ಮಕ್ಕಳ ಜೀವನವಾದರೂ ಸುಖಮಯವಾಗಲಿ ಎಂಬ ಆಶಯದಿಂದ ಮೂಲಸೌಕರ್ಯಕ್ಕಾಗಿ ಹಾತೊರೆ ಯುತ್ತಿರುವ ಗ್ರಾಮಗಳಲ್ಲೊಂದಾದ, ತಾಲೂಕು ಕೇಂದ್ರದಿಂದ 12ಕಿ.ಮೀ. ದೂರವಿರುವ ನಾವೂರು ಗ್ರಾಮವಾಸಿಗಳ ಕಣ್ಣಾಮಚ್ಚಾಲೆ ಬದುಕಿನ ವರದಿಯಿದು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾವೂರು ಗ್ರಾಮದ ಅರುವಾಲು ಪುಳಿತ್ತಡಿ, ಮುತ್ತಾಜೆ, ಅಲ್ಯ, ಎರ್ಮೆಲೆಯ 25 ಕುಟುಂಬಗಳು ಕಳೆದ 5 ತಲೆಮಾರಿನಿಂದ ವಿದ್ಯುತ್‌ಗಾಗಿ ಹಪಹಪಿಸುತ್ತಿದ್ದಾರೆ. ಕೆಲವೆಡೆ ಮೀಟರ್‌ ಇದೆ ವಿದ್ಯುತ್‌ ಇಲ್ಲ. ಸೂರ್ಯ ಉದಯಿಸದರಷ್ಟೆ ಕಾಡಂಚಿಗೆ ಬೆಳಕಿನ ಸ್ಪರ್ಶ. ಸುಮಾರು 90ಕ್ಕೂ ಅಧಿಕ ಮಲೆಕುಡಿಯ ಮತದಾರರಿದ್ದಾರೆ. ಈ ಹಿಂದಿನ ಎರಡು ಜಿಲ್ಲಾಧಿಕಾರಿಗಳು ಭೇಟಿ ನೀಡಿದರು ಪ್ರಯೋಜನ ಶೂನ್ಯವಾಗಿದೆ.

ರಾಷ್ಟ್ರೀಯ ಉದ್ಯಾನದಂಚಿನ ಅರುವಾಲು-ಪುಳಿತ್ತಡಿ ಭಜನಮಂದಿರಕ್ಕೆ ತೆರಳುವ 3 ಕಿ.ಮೀ. ರಸ್ತೆ, ಪುಳಿತ್ತಡಿ- ಮುತ್ತಾಜೆ, ಪುಳಿತ್ತಡಿ-ಅಲ್ಯ, ಪುಳಿತ್ತಡಿ-ಎರ್ಮೆಲೆ, ಪಾಂಜಾರು- ಮಂಜಲ, ಪಾಂಜಾರು-ಎರ್ಮೆಲೆ, ಅರ್ವಾ ಲು-ಮಲ್ಲ, ಫಾರೆಸ್ಟ್‌ ಬಂಗ್ಲೆಯಿಂದ -ಕಾಸ್ರೋಳಿಗೆ ಶಾಶ್ವತ ಕಾಂಕ್ರೀಟ್‌ ರಸ್ತೆ ಹಾಗೂ ಕಾಸ್ರೋಳಿ ಬಳಿ 10 ಮೀಟರ್‌ ಉದ್ದದ ಸೇತುವೆ ನಿರ್ಮಾಣವಾದಲ್ಲಿ ಅನುಕೂಲವಾಗಲಿದೆ.

ಮತ್ತೂಂದೆಡೆ 16ರಷ್ಟು ಮನೆಗಳಿರುವ ಅರುವಾಲು- ಪುಳಿತ್ತಡಿ ರಸ್ತೆಯ ಕುದೊRàಳಿ ಬಳಿ ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಸುಪರ್ದಿಯಡಿ 15 ಲಕ್ಷ ರೂ.ನ ಕ್ರಿಯಾಯೋಜನೆ ಸಲ್ಲಿಸಿದರೂ ಕಡತ ಧೂಳುಹಿಡಿಯುವಂತಾಗಿದೆ.

13-14ನೇ ಬ್ಲಾಕ್‌ ಸಂಪರ್ಕವೇ ಇಲ್ಲ :

ನಾವೂರು ಗ್ರಾಮದಲ್ಲಿ ಒಟ್ಟು ಎರಡೇ ಬ್ಲಾಕ್‌ಗಳು. 13ನೇ ಬ್ಲಾಕ್‌ ಮಂದಿ 14ನೇ ಬ್ಲಾಕ್‌ ಅಂದರೆ ನಾವೂರು ಪೇಟೆಗೆ ಬರಲು 3 ಕಿ.ಮೀ. ಸುತ್ತಿ ಬಳಸಿ ಬರುವ ಪರಿಸ್ಥಿತಿ. ಆದರೆ ಅಬ್ಬನ್‌ಕೆರೆಯಿಂದ ಬಡೆಕಾವುಗುತ್ತು ಮಾರ್ಗವಾಗಿ ಕುಮರಾಜೆ ಯಿಂದ ನಾವೂರು ಗುತ್ತು ಗೋಪಾಲಕೃಷ್ಣ ದೇವಸ್ಥಾನ ರಸ್ತೆಯಾಗಿ ರಸ್ತೆ ಅಭಿವೃದ್ಧಿಯಾಗಬೇಕಿದೆ. ಇದೇ ರಸ್ತೆಯಲ್ಲಿ ಕುಮರಾಜೆ ಬಳಿ ಸೇತುವೆ ನಿರ್ಮಾಣವಾಗದೆ ಪ್ರತೀ ಮಳೆಗಾಲದಲ್ಲಿ ಸಂಪರ್ಕ ಕಡಿತಗೊಳ್ಳುತ್ತಿದೆ. ಹೀಗಾಗಿ ಸೇತುವೆ ಅವಶ್ಯವಾಗಿ ನಿರ್ಮಾಣವಾಗಬೇಕಿದೆ. ಮತ್ತೂಂದೆಡೆ ಕುಂಡಡ್ಕದಿಂದ ನನೊìಟ್ಟು ರಸ್ತೆ, ಬೂರುಮೇಲು ರಸ್ತೆ ಹಾಗೂ ಸುಳೊÂàಡಿ ಬಳಿ ಸೇತುವೆ ನಿರ್ಮಾಣವಾದಲ್ಲಿ ಸುಮಾರು 15 ಮನೆಗಳಿಗೆ ವರದಾನವಾಗಲಿದೆ.

ರುದ್ರಭೂಮಿ ಅಭಿವೃದ್ಧಿ :

ಪ.ಜಾತಿ, ಪ.ಪಂಗಕ್ಕೆ 70 ಸೆಂಟ್ಸ್‌ ಮೀಸಲಾದ ರುದ್ರಭೂಮಿ ಜಾಗ ಈವರೆಗೆ ಅಭಿವೃದ್ಧಿ ಕಂಡಿಲ್ಲ. ಇದರ ಅಭಿವೃದ್ಧಿಯಾಗಬೇಕಿದ್ದಲ್ಲಿ ಕೈಕಂಬದಿಂದ ನಾವೂರು ಪ.ಜಾತಿ/ಪ.ಪಂಗಡದ ಕಾಲನಿಗೆ ರಸ್ತೆ ನಿರ್ಮಾಣವಾಗಬೇಕಿದೆ. ಹಾಗಾದಲ್ಲಿ ಮುಂದಿನ ಪ್ರಗತಿ ಸಾಧ್ಯವಾಗಲಿದೆ.

ಕಿರ್ನಡ್ಕ ಘನತ್ಯಾಜ್ಯ ಘಟಕ :

ಗ್ರಾಮ ಬೆಳೆದಂತೆ ತ್ಯಾಜ್ಯ ಸಂಗ್ರಹಣೆ ಹಾಗೂ ಅದರ ನಿರ್ವಹಣೆ ಸವಾಲಾಗಿದೆ. ಹೀಗಾಗಿ ಭವಿಷ್ಯದಲ್ಲಿ ಸಮಸ್ಯೆ ತಲೆದೋರದಂತೆ ಕಿರ್ನಡ್ಕದಲ್ಲಿ 1 ಎಕ್ರೆ ಘನತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಆದರೆ ಅಲ್ಲಾಜೆಯಿಂದ ಕರ್ನಿನಡ್ಕಕ್ಕ ತೆರಳುವ 2 ಕಿ.ಮೀ. ರಸ್ತೆ ಕಾಂಕ್ರೀಟ್‌ ರಸ್ತೆಯ ಬೇಡಿಕೆ ಹಾಗೆ ಇದೆ. ಇದರೊಂದಿಗೆ ಸಮೀಪದ ಹೊಡಿಕ್ಕಾರು-ಮನ್ನಲಿಕೆ ರಸ್ತೆ, ನಾವೂರು ಪಲಿಕೆ ಎಸ್ಸಿ-ಎಸ್ಟಿ ಕಾಲನಿ ರಸ್ತೆ ಹಾಗೂ ದಾರಿದೀಪ ನಿರ್ಮಾಣವಾಗಬೇಕಿದೆ. ಕಿರ್ನಡ್ಕ ಕಾಲನಿ ರಸ್ತೆ, ಜನತಾ ಕಾಲನಿ ರಸ್ತೆಗಳು ಅಭಿವೃದ್ಧಿಗಾಗಿ ಕಾಯುತ್ತಿವೆ. ಬಹುತೇಕ ಮಣ್ಣಿನ ರಸ್ತೆಗಳಾಗಿದ್ದು ಕಾಂಕ್ರೀಟ್‌ ಅಳಡಿಸಿದರಷ್ಟೆ ಸಮಸ್ಯೆ ನೀಗಲಿದೆ. ಕಿರ್ನಡ್ಕ ಕಾಲನಿಯಿಂದ ಕೋಡಿ ಹಡೀಲು ರಸ್ತೆಯಾಗಿ ಕನ್ಯಾಡಿ ಗ್ರಾಮದ ನೇರೋಲ್ದ ಪಲ್ಕೆ ಎಸ್ಸಿ-ಎಸ್ಟಿ ಕಾಲನಿ ಸಂಪರ್ಕಕ್ಕೆ 3 ಕಿ.ಮೀ. ರಸ್ತೆಯಾದಲ್ಲಿ ಎರಡು ಗ್ರಾಮ ಸಂಪರ್ಕವಾಗಲಿದೆ.

25 ವರ್ಷ ಹಳೇ ಅಂಗನವಾಡಿ ಕಟ್ಟಡ :

ಕುಂಡಡ್ಕ ಪರಿಶಿಷ್ಟ ಪಂಗಡ ಕಾಲನಿಯಲ್ಲಿರುವ ಅಂಗನವಾಡಿ ಕಟ್ಟಡ 25 ವರ್ಷ ಪೂರೈಸಿದೆ. 18 ಮಕ್ಕಳಿರುವ ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡದ ಆವಶ್ಯಕತೆಯಿದೆ.

ಕುಂಡಡ್ಕದಿಂದ ನನೊìಟ್ಟು ಕಾರಿಂಜ ರಸ್ತೆಯ ನನೊìಟ್ಟು ಬಳಿ ಸೇತುವೆಯಾದಲ್ಲಿ ಕಾರಿಂಜ ಬೈಲಿಗೆ ಸಂಪರ್ಕಕ್ಕೂ ಅನುಕೂಲವಾಗಲಿದೆ. ಅಂಗನವಾಡಿ ಮಕ್ಕಳಿಗೆ ಅನುಕೂಲವಾಗಲಿದೆ.

 ಸಾರ್ವಜನಿಕ ಆಸ್ಪತ್ರೆ :

ಗ್ರಾಮದಲ್ಲಿರುವ ಎಎನ್‌ಎಂ ಕೇಂದ್ರ ಶಿಥಿಲಾವಸ್ಥೆಯಲ್ಲಿದ್ದು ಆವರಣಗೋಡೆಯಿಲ್ಲ. ತುರ್ತು ಸಂದರ್ಭಗಳಲ್ಲಿ 12 ಕಿ.ಮೀ. ದೂರುದ ಬೆಳ್ತಂಗಡಿ ಆಸ್ಪತ್ರೆ ಇಲ್ಲವೇ 5 ಕಿ.ಮೀ. ದೂರದ ಇಂದಬೆಟ್ಟು ಪ್ರಾ.ಆ.ಕೇಂದ್ರಕ್ಕೆ ತೆರಳಬೇಕಿದೆ.

25 ಮನೆಗಳಿಗೆ ಸಿಕ್ಕಿಲ್ಲ ಹಕ್ಕುಪತ್ರ :

ಎರ್ಮೆಲೆ ಸಮೀಪ ಕುದುರೇಮುಖ ರಾಷ್ಟ್ರೀಯ ಉದ್ಯಾನದಂಚಿನಲ್ಲಿರುವ ಪ.ಜಾತಿ/ಪಂಗಡದ 25 ಮನೆಗಳಿವೆ. ಇವರಿಗೆ ಮೂಲಸೌಕರ್ಯವಿಲ್ಲ ಜತೆಗೆ ಹಕ್ಕುಪತ್ರವೂ ಸಿಕ್ಕಿಲ್ಲ. ಅಪಘಾತ ವಲಯ

ನಾವೂರು ಗ್ರಾಮಕ್ಕೆ ತೆರಳುವ ಪಿ.ಡಬ್ಲ್ಯುಡಿ ಇಲಾಖೆಯ ಮುಖ್ಯ ರಸ್ತೆಯ ಮುರ ಎಂಬಲ್ಲಿ ಕಿರು ಸೇತುವೆ ಅಪಘಾತವಲಯವಾಗಿದೆ.ಸುಸಜ್ಜಿತ ಸೇತುವೆಯ ಬೇಡಿಕೆ ವ್ಯಕ್ತವಾಗಿದೆ.

 ಎರಡು ಗ್ರಾಮ ಸಂಪರ್ಕಕ್ಕೆ ಬೇಕಿದೆ ರಸ್ತೆ :

ಸುಳ್ಯೋಡಿ ಶಾಲೆಯಿಂದ ಬರಮೇಲು ಲಾವುದಡಿಯಾಗಿ ನಡ ಗ್ರಾಮದ ಮೂಡಾಯಿಬೆಟ್ಟು ಶಾಲೆಗೆ ಸಂಪರ್ಕ ಕಲ್ಪಿಸುವ 5 ಕಿ.ಮೀ. ರಸ್ತೆ ತೀರ ಹದಗೆಟ್ಟಿದೆ. ಹೀಗಾಗಿ ಡಾಮರು ರಸ್ತೆ ನಿರ್ಮಾಣವಾದಲ್ಲಿ ನಾವೂರು ಮತ್ತು ನಡ ಗ್ರಾಮ ಸಂಪರ್ಕಕ್ಕೆ 8 ಕಿ.ಮೀ. ಸುತ್ತಿಬಳಸುವ ಸಂಕಷ್ಟ ತಪ್ಪಲಿದೆ.

 

ಗ್ರಾಮದ ಅಗತ್ಯಗಳು :

  • ಗ್ರಾಮದ 10ಕ್ಕೂ ಅಧಿಕ ರಸ್ತೆಗಳಿಗೆ ದಾರಿದೀಪ
  • ನಾವೂರು ಪ್ರೌಢಶಾಲೆಗೆ ಹೆಚ್ಚುವರಿ ಕೊಠಡಿ
  • ನಾವೂರು ಪ್ರಾಥಮಿಕ, ಪ್ರೌಢ ಶಾಲೆಗೆ ಶೌಚಾಲಯ
  • ರಾಷ್ಟ್ರೀಕೃತ ಬ್ಯಾಂಕ್‌ ಎಟಿಎಂ
  • ಸಾರ್ವಜನಕ ಆಟದ ಮೈದಾನ

 

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.