ಪುತ್ತೂರು : ಜಾತಿ ನಿಂದನೆ, ಹಲ್ಲೆ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
Team Udayavani, Jun 26, 2022, 11:53 PM IST
ಪುತ್ತೂರು: ಏಲ್ಮುಡಿ ನಿವಾಸಿ ರಿತೇಶ್ ಪಾಯಸ್ ವಿರುದ್ಧದ ಜಾತಿ ನಿಂದನೆ ಮತ್ತು ಹಲ್ಲೆ ಆರೋಪದಡಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಕಟ್ಟಡದ ನೆಲಮಹಡಿಯಲ್ಲಿ ನಿಂದಿಸಿದರೆ ಅದು ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಗೆ ಅನ್ವಯಿಸುವುದಿಲ್ಲ ಎಂದು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ಮಾಡಿದರೆ ಮಾತ್ರ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಗೆ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.
ಉದ್ಯಮಿ ರಿತೇಶ್ ಪಾಯಸ್ ಮತ್ತು ಜಯ ಕುಮಾರ್ ನಾಯರ್ ಅವರ ಮಧ್ಯೆ ಸಿವಿಲ್ ವ್ಯಾಜ್ಯ ನ್ಯಾಯಾಲಯದಲ್ಲಿ ತನಿಖೆಯಲ್ಲಿತ್ತು. ಜಯಕುಮಾರ್ ನಾಯರ್ ವಿರುದ್ಧ ರಿತೇಶ್ ಪಾಯಸ್ ಪ್ರತಿಬಂಧಕಾಜ್ಞೆ ಪಡೆದಿದ್ದರು. ಜಯ ಕುಮಾರ್ ನಾಯರ್ ಅವರ ಕಟ್ಟಡದ ಕಾರ್ಮಿಕರು ನೀಡಿದ ದೂರಿನಂತೆ ರಿತೇಶ್ ಪಾಯಸ್ ವಿರುದ್ದ ಎಫ್.ಐ.ಆರ್. ದಾಖಲಾಗಿತ್ತು.
ರಿತೇಶ್ ಪಾಯಸ್ ನ್ಯಾಯವಾದಿ ಶಂಭು ಭಟ್ ಅವರ ಮೂಲಕ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣ ಜಾಮೀನು ಕೋರಿ ಅರ್ಜಿ ಸಲ್ಲಿಸಿ, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೋಲೀಸರು ರಿತೇಶ್ ಪಾಯಸ್ ಅವರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ಪ್ರಕರಣವನ್ನು ರದ್ದುಪಡಿಸಬೇಕೆಂದು ಕೋರಿ ರಿತೇಶ್ ಪಾಯಸ್ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ ಪ್ರಕರಣವನ್ನು ರದ್ದುಗೊಳಿಸಿ ಆದೇಶ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪಶ್ಚಿಮ ಬಂಗಾಳದಲ್ಲಿ ಅಲ್ ಖೈದಾ ಶಂಕಿತ ಸದಸ್ಯರಿಬ್ಬರ ಬಂಧನ
ಪೆನ್ಚಾಕುವಿನಿಂದ ಇರಿದು ವಿದ್ಯಾರ್ಥಿ ಕೊಲೆ: ಆರೋಪಿಗಳ ಬಂಧನ
Boycott ಎಫೆಕ್ಟ್: 7 ದಿನದಲ್ಲಿ 50 ಕೋಟಿ ರೂ. ಗಳಿಸಲು ವಿಫಲವಾದ “ಲಾಲ್ ಸಿಂಗ್ ಚಡ್ಡಾ”
ಆಲಮಟ್ಟಿ ಶಾಸ್ತ್ರೀ ಜಲಾಶಯದ ಪ್ರವಾಹ ನಿರ್ವಹಣೆಗೆ ಮಹಾ ಸಿ.ಎಂ. ಶ್ಲಾಘನೆ : ಕೋಳಕೂರ
ನಕಲಿ ಸುದ್ದಿ ಹರಡುತ್ತಿದ್ದ ಭಾರತದ 7 ಮತ್ತು ಪಾಕ್ ನ 1 ಯೂಟ್ಯೂಬ್ ಚಾನೆಲ್ ನಿಷೇಧಿಸಿದ ಕೇಂದ್ರ