36 ಅರ್ಜಿಗಳ ದಾಖಲಾತಿ, ಹಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ


Team Udayavani, Jun 16, 2019, 5:00 AM IST

z-17

ಬಂಟ್ವಾಳ: ಸಾರ್ವಜನಿಕ ಉದ್ದೇಶದ ಯಾವುದೇ ಕಾಮಗಾರಿಗಳು ಬಾಕಿಯಾಗಬಾರದು. ವಿದ್ಯುತ್‌ ಗುತ್ತಿಗೆ ದಾರರ ಸಮಸ್ಯೆಗೆ ಪ್ರತ್ಯೇಕ ಸಭೆ ಕರೆಯಲಾಗುವುದು. ಮೆಸ್ಕಾಂ ಜನ ಸಂಪರ್ಕ ಸಭೆ ಸಾರ್ವಜನಿಕರ ಸಮಸ್ಯೆ ಪರಿಹಾರದ ಉದ್ದೇಶಕ್ಕಾಗಿ ಇರುವುದು ಎಂದು ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪೆನಿ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಮಂಜಪ್ಪ ಹೇಳಿದರು.

ಕೈಕುಂಜೆ ಮೆಸ್ಕಾಂ ಉಪವಿಭಾಗ ಬಿ.ಸಿ. ರೋಡ್‌ ಕಚೇರಿಯಲ್ಲಿ ಜೂ. 15ರಂದು ನಡೆದ ಮೆಸ್ಕಾಂ ಬಂಟ್ವಾಳ ನಂ. 1, ನಂ. 2 ಉಪವಿಭಾಗ ಜನಸಂಪರ್ಕ ಸಭೆಯಲ್ಲಿ ಅವರು ಸಾರ್ವಜನಿಕರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಮಾತನಾಡಿ, ವಾಮದಪದವಿನಲ್ಲಿ ಮೆಸ್ಕಾಂ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಮೆಸ್ಕಾಂ ಇಲಾಖೆಯಲ್ಲಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ವಿದ್ಯುತ್‌ ಸ್ಪರ್ಶಿಸಿ ಜಾನುವಾರುಗಳು ಸಾಯುತ್ತಿವೆೆ. ಬಂಟ್ವಾಳ, ಕೊಡಂಬೆಟ್ಟು , ಅಜ್ಜಿಬೆಟ್ಟು ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 40 ವರ್ಷಗಳ ಹಳೆಯದಾದ ವಿದ್ಯುತ್‌ ತಂತಿಗಳನ್ನು ಬದಲಾಯಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಪರಿಹಾರಕ್ಕೆ ಮೆಸ್ಕಾಂ ಸೂಕ್ತ ದಾಖಲೆಪತ್ರಗಳ ಬಳಿಕ ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್‌ ತಂತಿಗಳ ಬದಲಾವಣೆಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಆದ್ಯತೆಯಲ್ಲಿ ನಡೆಸುವುದಾಗಿ ಮಂಜಪ್ಪ ತಿಳಿಸಿದರು.

ಒಂದು ವಾರದಲ್ಲಿ ಮೆಸ್ಕಾಂ ಬಿಲ್‌ಗ‌ಳ ಪ್ರಿಂಟ್‌ ಮಾಸಿ ಹೋಗುತ್ತದೆ. ಮಳೆಗಾಲದಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚು ಎಂದು ಬಳಕೆದಾರ ನರೇಶ್‌ ಭಟ್‌ ಅಧಿಕಾರಿಯ ಗಮನಕ್ಕೆ ತಂದರು. ಉತ್ತಮ ಗುಣಮಟ್ಟದ ಪೇಪರ್‌ ತರಿಸಿ ಬಿಲ್‌ ನೀಡಲು ಸ್ಥಳದಲ್ಲಿಯೇ ಸಂಬಂಧಪಟ್ಟ ಸಿಬಂದಿಗೆ ಸೂಚನೆ ನೀಡಿ ಕ್ರಮ ಕೈಗೊಂಡು ಮಾಹಿತಿ ನೀಡಲು ತಿಳಿಸಿದರು.

ಹೆಚ್ಚುವರಿ ಬಿಲ್‌
ಗ್ರಾಮಾಂತರ ಮನೆಗಳಿಗೆ ವಿದ್ಯುತ್‌ ಮೀಟರ್‌ ರೀಡಿಂಗ್‌ ಮಾಡಲು ಸಿಬಂದಿ ಬಾರದೆ ಸತಾಯಿಸಲಾಗುತ್ತದೆ. ಒಮ್ಮೆಲೆ ಕೆಲವು ತಿಂಗಳ ಬಿಲ್‌ ನೀಡುವ ಮೂಲಕ ಪಾವತಿಗೆ ಸಮಸ್ಯೆ ಆಗುವಂತಾಗಿದೆ. ಬಿಲ್‌ ನೀಡುವಾಗ ಕೆಲವೊಂದು ಸಂದರ್ಭಗಳಲ್ಲಿ ಹೆಚ್ಚುವರಿ ಬಿಲ್‌ ಬರುತ್ತದೆ. ಗ್ರಾಹಕರು ಅನಂತರ ಇಲಾಖೆಗೆ ಬಂದು ಬಿಲ್‌ ಪರಿಶೀಲನೆ ನಡೆಸಿ ಪರಿಹಾರ ಕಾಣುವಾಗ ಸಮಯ ಮುಗಿದಿರುತ್ತದೆ ಎಂದು ಗ್ರಾಹಕರೊಬ್ಬರು ದೂರಿದರು.

ಮಂಜಪ್ಪ ಪ್ರತಿಕ್ರಿಯಿಸಿ, ಸಮಸ್ಯೆ ಗಮನಿಸಲಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಇಂತಹ ತಪ್ಪುಗಳು ತಾಂತ್ರಿಕವಾಗಿ ಕಂಡು ಬರುತ್ತದೆ. ಗ್ರಾಹಕರು ಗಮನಿಸಿ ಅಧಿಕಾರಿಗಳ ಗಮನಕ್ಕೆ ತಂದಾಗ ಸೂಕ್ತ ತಿದ್ದುಪಡಿ ಮಾಡಿ ನೀಡಲಾಗುತ್ತದೆ ಎಂದರು. ನಂದಾವರ ನಿವಾಸಿ ಕೃಷಿಕ ಇದಿನಬ್ಬ ಅಹವಾಲು ಸಲ್ಲಿಸಿ, ನಂದಾವರದಲ್ಲಿ ಸುಮಾರು 55 ವರ್ಷಗಳಿಂದ ಹಳೆಯದಾದ ತಂತಿಗಳನ್ನು ಬದಲಿಸಿಲ್ಲ. ಪರಿಹಾರ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ದೂರನ್ನು ದಾಖಲಿಸಿಕೊಂಡಿದೆ. ಸ್ಥಳಕ್ಕೆ ಬಂದು ಪರಿಶೀಲಿಸಿ ಕ್ರಮ ಮಾಡಲಾಗುವುದು. ಸಂಬಂಧಪಟ್ಟ ಅಧಿಕಾರಿ ನಿಮ್ಮ ಸಮಸ್ಯೆಗೆ ಗಮನ ನೀಡುವರು ಎಂದು ಮಂಜಪ್ಪ ತಿಳಿಸಿದರು. ಮೆಸ್ಕಾಂ ಇ.ಇ. ರಾಮಚಂದ್ರ, ಎ.ಇ.ಇ. ನಾರಾಯಣ ಭಟ್‌, ಪ್ರಶಾಂತ್‌ ಪೈ ಉಪಸ್ಥಿತರಿದ್ದರು. ಸಾರ್ವಜನಿಕರ ಸಮಸ್ಯೆಯ ದೂರು ದಾಖಲಾತಿ ಬಳಿಕ ಗುತ್ತಿಗೆದಾರರ ಸಭೆಯನ್ನು ನಡೆಸಲಾಯಿತು.

36 ದೂರು ಸಲ್ಲಿಕೆ
ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿ ವ್ಯಾಪ್ತಿಯಿಂದ ಒಟ್ಟು 36 ದೂರುಗಳನ್ನು ಅದಾಲತ್‌ನಲ್ಲಿ ದಾಖಲಿಸಲಾಗಿದೆ. ಅದರಲ್ಲಿ 20 ದೂರುಗಳು ಹಳೆ ತಂತಿಗಳನ್ನು ಬದಲಾಯಿಸುವುದು. 12 ದೂರುಗಳು ಸಮರ್ಪಕ ಬಿಲ್‌ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು, 2 ದೂರು ಲೈನ್‌ ಸ್ಥಳಾಂತರಕ್ಕೆ ಬೇಡಿಕೆ, 2 ದೂರುಗಳು ಲೋ ವೋಲ್ಟೆàಜ್‌ ಕುರಿತು ಸಲ್ಲಿಕೆಯಾಗಿದೆ.

ಸಹಕರಿಸಿ
ಗ್ರಾಮೀಣ ಭಾಗದಲ್ಲಿ ನಿರ್ದಿಷ್ಟ ಸ್ಥಳವನ್ನು ಬಿಟ್ಟು ಕೃಷಿ ಮಾಡಬೇಕು. ಸಮಸ್ಯೆ ಬಂದಾಗ ಸೂಕ್ತ ಕ್ರಮ ಮಾಡುವಂತೆ ರೈತರಲ್ಲಿ ನಾವು ವಿನಂತಿಸುತ್ತೇವೆ. ಅದಕ್ಕಾಗಿ ಕರಪತ್ರ ಪ್ರಕಟಿಸಿ ನೀಡಲು ಎಲ್ಲ ಶಾಖಾಧಿಕಾರಿಗಳಿಗೆ ತಿಳಿಸಿದೆ. ಅಡಿಕೆ ತೋಟಕ್ಕೆ ಕೊಪರ್‌ ಸಲ್ಫೆàಟ್‌ ಸಿಂಪಡಣೆಯಿಂದ ವಿದ್ಯುತ್‌ ತಂತಿಗಳು ಕಾಲಕ್ರಮೇಣ ಹಾನಿಗೆ ಒಳಗಾಗುತ್ತವೆ. ರೈತರು ಮೆಸ್ಕಾಂ ಜತೆ ಸಹಕರಿಸಬೇಕು.
– ಮಂಜಪ್ಪ
ಸೂಪರಿಂಟೆಂಡೆಂಟ್‌ ಎಂಜಿನಿಯರ್‌

ಟಾಪ್ ನ್ಯೂಸ್

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.