Udayavni Special

ರಬ್ಬರ್‌ ಬೆಳೆಗಾರರ ಮೊಗದಲ್ಲಿ ಮಂದಹಾಸ; 150 ರೂ. ದಾಟಿದ ಧಾರಣೆ!

Team Udayavani, Oct 29, 2020, 6:00 AM IST

ರಬ್ಬರ್‌ ಬೆಳೆಗಾರರ ಮೊಗದಲ್ಲಿ ಮಂದಹಾಸ; 150 ರೂ. ದಾಟಿದ ಧಾರಣೆ!

ಸಾಂದರ್ಭಿಕ ಚಿತ್ರ

ಪುತ್ತೂರು: ಕುಸಿತದ ಹಾದಿಯಲ್ಲೇ ಸಾಗುತ್ತಿದ್ದ ರಬ್ಬರ್‌ ಧಾರಣೆ ಏರಿಕೆ ಕಂಡಿದ್ದು, ಬುಧವಾರ 150 ರೂ.ಗೆ ಖರೀದಿಯಾಗುವ ಮೂಲಕ ಬೆಳೆಗಾರರಲ್ಲಿ ನವೋಲ್ಲಾಸ ಮೂಡಿಸಿದೆ.

ಕೆಲವು ವರ್ಷಗಳ ಬಳಿಕ ರಬ್ಬರ್‌ ಧಾರಣೆ ಏರಿಕೆ ಕಂಡಿದ್ದು ಅಡಿಕೆಯ ದಾಖಲೆ ಧಾರಣೆಯ ಖುಷಿಯ ಜತೆಗೆ ರಬ್ಬರ್‌ ಧಾರಣೆ ಏರಿಕೆ ದಸರಾ ತಿಂಗಳಲ್ಲಿ ಕೃಷಿಕರ ಖುಷಿಯನ್ನು ಇಮ್ಮಡಿಗೊಳಿಸಿದೆ.

ವಿದೇಶಗಳಿಂದ ರಬ್ಬರ್‌ ಆಮದು ಇಳಿಮುಖಗೊಂಡ ಕಾರಣ ಭಾರತದಲ್ಲಿ ರಬ್ಬರ್‌ ದಾಸ್ತಾನು ಕೊರತೆ ಹೆಚ್ಚಾಗಿದ್ದು, ದೇಶೀಯ ರಬ್ಬರ್‌ ಧಾರಣೆ ಏರಿಕೆ ಕಂಡಿದೆ. ಆದಾಯಕ್ಕಿಂತಲೂ ರಬ್ಬರ್‌ ಉತ್ಪಾದನೆ ನಿರ್ವಹಣೆ ವೆಚ್ಚ ಹೆಚ್ಚಳದ ಕಾರಣ ಹಲವಾರು ಬೆಳೆಗಾರರು ಟ್ಯಾಪಿಂಗ್‌ ಸ್ಥಗಿತಗೊಳಿಸಿದ ಕಾರಣದಿಂದ ಉತ್ಪಾದನಾ ಪ್ರಮಾಣ ಕುಸಿದಿತ್ತು. ಇವೆಲ್ಲದರ ಪರಿಣಾಮವಾಗಿ ರಬ್ಬರ್‌ ಬೇಡಿಕೆಯಷ್ಟು ದೊರಕುತ್ತಿಲ್ಲ. ಹೀಗಾಗಿ ಧಾರಣೆ ಏರಿಕೆಯತ್ತ ಮುಖ ಮಾಡಿದೆ.

ಭಾರತದ ಗೋದಾಮುಗಳಲ್ಲಿ ಸಿಂಥೆಟಿಕ್‌ ರಬ್ಬರ್‌ ಹಾಗೂ ಇಂಡೋನೇಶ್ಯಾ, ಮಲೇಶ್ಯಾ, ಥಾಯ್ಲೆಂಡ್‌ನ‌ ರಬ್ಬರ್‌ ಯಥೇತ್ಛವಾಗಿ ಶೇಖರಿಸಲಾಗಿತ್ತು. ಲಾಕ್‌ಡೌನ್‌ ವೇಳೆ ಟಯರ್‌ ಹಾಗೂ ಇತರ ರಬ್ಬರ್‌ ಉತ್ಪನ್ನ ಉತ್ಪಾದನೆ ಕಡಿಮೆಯಾಗಿತ್ತು. ಆದರೆ ಈಗ ಉತ್ಪಾದನಾ ಪ್ರಮಾಣ ಹೆಚ್ಚುತ್ತಿದ್ದು, ವಿದೇಶಿ ರಬ್ಬರ್‌ ದಾಸ್ತಾನು ಖಾಲಿಯಾಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಏರುಗತಿಯಲ್ಲಿ ರಬ್ಬರ್‌ ಬೆಲೆ
2020ರ ಜನವರಿ ವೇಳೆಗೆ ರಬ್ಬರ್‌ ಆರ್‌ಎಸ್‌ಎಸ್‌ 4- 127ರಿಂದ 130 ರೂ., ಆರ್‌ಎಸ್‌ಎಸ್‌ 5- 118ರಿಂದ 123 ಇತ್ತು. ಫೆಬ್ರವರಿಯಲ್ಲಿ ಆರ್‌ಎಸ್‌ಎಸ್‌ 4- 127ರಿಂದ 128 ರೂ., ಆರ್‌ಎಸ್‌ಎಸ್‌ 5-118ರಿಂದ 120 ರೂ., ಮಾರ್ಚ್‌ ಅನಂತರ ಲಾಕ್‌ಡೌನ್‌ನಿಂದ ಬಹುತೇಕ ರಬ್ಬರ್‌ ಸಂಸ್ಕರಣಾ ಘಟಕಗಳು ಮುಚ್ಚಿದ್ದವು. ಆಗಸ್ಟ್‌ ವೇಳೆ ಮಾರುಕಟ್ಟೆ ತೆರೆದು ಅಕ್ಟೋಬರ್‌ 1ರ ವರೆಗೆ ಆರ್‌ಎಸ್‌ಎಸ್‌ 4ಕ್ಕೆ 130 ರೂ., ಆರ್‌ಎಸ್‌ಎಸ್‌ 5ಕ್ಕೆ 124 ರೂ. ಸ್ಥಿರ ಧಾರಣೆ ಇತ್ತು. ಅ. 28ರಂದು ರಬ್ಬರ್‌ ಆರ್‌ಎಸ್‌ಎಸ್‌ 4ಕ್ಕೆ 150 ರೂ., ಆರ್‌ಎಸ್‌ಎಸ್‌ 5ಕ್ಕೆ 141 ರೂ., ಲಾಟ್‌- 125 ರೂ., ಸಾðಪ್‌-1-84 ರೂ., ಸಾðಪ್‌ 2 76 ರೂ.ಗೆ ಖರೀದಿಯಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Olypic

ಒಲಿಂಪಿಕ್ಸ್‌ ಮುಂದೂಡಿಕೆ; 3 ಬಿ. ಡಾಲರ್‌ಗೂ ಹೆಚ್ಚು ಖರ್ಚು

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

ಬೇಕಿದ್ದ ಮಾತ್ರೆ ಬಿಟ್ಟು ಬೇರೆ ಮಾತ್ರೆ ಸೇವಿಸಿದ್ದರಿಂದ ಇಷ್ಟೆಲ್ಲ ಆಯಿತು :N.R‌.ಸಂತೋಷ್‌

ಬೇಕಿದ್ದ ಮಾತ್ರೆ ಬಿಟ್ಟು ಬೇರೆ ಮಾತ್ರೆ ಸೇವಿಸಿದ್ದರಿಂದ ಇಷ್ಟೆಲ್ಲ ಆಯಿತು :N.R‌.ಸಂತೋಷ್‌

ಅರಬ್ಬಿ ಸಮುದ್ರದಲ್ಲಿ ಮಿಗ್‌-29 ವಿಮಾನದ ಭಗ್ನಾವಶೇಷ ಪತ್ತೆ

ಅರಬ್ಬಿ ಸಮುದ್ರದಲ್ಲಿ ಮಿಗ್‌-29 ವಿಮಾನದ ಭಗ್ನಾವಶೇಷ ಪತ್ತೆ

ಚಾಮರಾಜನಗರ ಜಿಲ್ಲೆಯ 129 ಗ್ರಾ.ಪಂ.ಗಳ ಚುನಾವಣೆಗೆ 1046 ಮತಗಟ್ಟೆಗಳ ಸ್ಥಾಪನೆ

ಚಾಮರಾಜನಗರ ಜಿಲ್ಲೆಯ 129 ಗ್ರಾ.ಪಂ.ಗಳ ಚುನಾವಣೆಗೆ 1046 ಮತಗಟ್ಟೆಗಳ ಸ್ಥಾಪನೆ

ಅತಿವೃಷ್ಠಿ ಹಾನಿ ಪರಿಹಾರಕ್ಕೆ ಲಂಚ ಕೇಳಿದ ಮಸಗುಪ್ಪಿ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಅತಿವೃಷ್ಠಿ ಹಾನಿ ಪರಿಹಾರಕ್ಕೆ ಲಂಚ ಕೇಳಿದ ಮಸಗುಪ್ಪಿ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಡಬ: ಲೋ ವೋಲ್ಟೇಜ್‌ ಸಮಸ್ಯೆಗೆ ಮುಕ್ತಿ

ಕಡಬ: ಲೋ ವೋಲ್ಟೇಜ್‌ ಸಮಸ್ಯೆಗೆ ಮುಕ್ತಿ

ಆಲಾಡಿ ಜಾಕ್‌ವೆಲ್‌ ಶೇ. 70 ಪೂರ್ಣ

ಆಲಾಡಿ ಜಾಕ್‌ವೆಲ್‌ ಶೇ. 70 ಪೂರ್ಣ

ವಿದ್ಯುತ್ ಆಘಾತ: ವಿದ್ಯುತ್ ಕಂಬದಲ್ಲೇ ಓರ್ವ ಸಾವು, ಇಬ್ಬರು ಗಂಭೀರ

ವಿದ್ಯುತ್ ಆಘಾತ: ವಿದ್ಯುತ್ ಕಂಬದಲ್ಲೇ ಓರ್ವ ಸಾವು, ಇಬ್ಬರು ಗಂಭೀರ

ಬಂಟ್ವಾಳ: ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಉಪತಹಶೀಲ್ದಾರ

ಬಂಟ್ವಾಳ: ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

ಶಿಥಿಲಾವಸ್ಥೆಯಲ್ಲಿ ಪುತ್ತೂರು ಬಿಇಒ ಕಚೇರಿ ಕಟ್ಟಡ; ಶೀಘ್ರ ಸ್ಥಳಾಂತರಕ್ಕೆ ನಿರ್ಧಾರ

ಶಿಥಿಲಾವಸ್ಥೆಯಲ್ಲಿ ಪುತ್ತೂರು ಬಿಇಒ ಕಚೇರಿ ಕಟ್ಟಡ; ಶೀಘ್ರ ಸ್ಥಳಾಂತರಕ್ಕೆ ನಿರ್ಧಾರ

MUST WATCH

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

ಹೊಸ ಸೇರ್ಪಡೆ

Olypic

ಒಲಿಂಪಿಕ್ಸ್‌ ಮುಂದೂಡಿಕೆ; 3 ಬಿ. ಡಾಲರ್‌ಗೂ ಹೆಚ್ಚು ಖರ್ಚು

KUD

ಪೊಲೀಸ್‌ ಗೈರು: ದಲಿತ ಕುಂದುಕೊರತೆ ಸಭೆ ರದ್ದು

NEWBORN

ಆಚಾರ್ಯ ಎಲೈವ್‌: ನವಜಾತ ಶಿಶುವಿನ ಆರೈಕೆ, ಅಂತರಾಷ್ಟ್ರೀಯ ವಿಚಾರ ಸಂಕಿರಣ

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.