ಸ್ವಾವಲಂಬಿ ಬದುಕಿಗೆ ದಾರಿ ತೋರುವ ಎಸ್ಕೆಡಿಆರ್ಡಿಪಿ
ಪುತ್ತೂರು ಕಚೇರಿ ಉದ್ಘಾಟಿಸಿ ಡಾ| ಹೆಗ್ಗಡೆ
Team Udayavani, Dec 10, 2020, 1:09 AM IST
ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ದೀಪ ಬೆಳಗಿಸಿದರು.
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ಎಸ್ಕೆಡಿಆರ್ಡಿಪಿ)ಯು ಸಮಾ ಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಅವರನ್ನು ಸ್ವ-ಸಹಾಯ ಸಂಘಗಳಿಗೆ ಸೇರಿಸಿಕೊಂಡು ಸ್ವಾವಲಂಬಿ ಬದುಕಿಗೆ ದಾರಿ ತೋರುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ-2ರ ಜಿಲ್ಲಾ ಕಚೇರಿಯನ್ನು ಬುಧವಾರ ಪುತ್ತೂರಿನಲ್ಲಿ ಉದ್ಘಾಟಿಸಿ ಸಾಲ್ಮರದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ 13 ಸಾವಿರ ಸ್ವ-ಸಹಾಯ ಸಂಘಗಳು ಕಾರ್ಯಾಚರಿಸುತ್ತಿದ್ದು 1,062 ಕೋ.ರೂ.ಗಳನ್ನು ಸಾಲದ ರೂಪದಲ್ಲಿ ಒದಗಿಸಲಾಗಿದೆ. 11,800 ಎ ಮತ್ತು ಎ ಪ್ಲಸ್ ಸ್ವಸಹಾಯ ಸಂಘಗಳು ವ್ಯವಸ್ಥಿತ ರೀತಿಯಲ್ಲಿ ವ್ಯವಹಾರಗೈದು ಯಶಸ್ವಿ ಸಾಧನೆ ತೋರಿರುವುದು ಶ್ಲಾಘನೀಯ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
2,500 ಹೊಸ ಸಂಘ
ಮೇ ತಿಂಗಳಿನಿಂದ ಈ ತನಕ 2,500 ಹೊಸ ಸಂಘಗಳನ್ನು ರಚಿಸಲಾಗಿದೆ. ಯೋಜನೆಯ ವ್ಯವಸ್ಥೆ ಇನ್ನಷ್ಟು ವೇಗವಾಗಿ ಜನರಿಗೆ ತಲುಪಲು ಪೂರಕವಾಗುವ ನೆಲೆಯಲ್ಲಿ ಯೋಜನೆಯ ಜಿಲ್ಲಾ ಕೇಂದ್ರವನ್ನು ಪುತ್ತೂರಿನಲ್ಲಿ ತೆರೆಯಲಾಗಿದೆ ಎಂದರು.
ಯೋಜನೆಯ ಮೂಲಕ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ 500ಕ್ಕೂ ಮಿಕ್ಕಿ ಲ್ಯಾಪ್ಟಾಪ್ಗ್ಳನ್ನು ಒದಗಿಸಿದ್ದೇವೆ. ಅಂಗವಿಕಲರಿಗೆ ವಾತ್ಸಲ್ಯ ಕಿಟ್ ವಿತರಿಸಲಾಗಿದೆ. ಪ್ರತಿಯೊಂದು ವ್ಯವಹಾರಗಳನ್ನು ಕಾಗದ ಪತ್ರಗಳಿಲ್ಲದೆ ಆನ್ಲೈನ್ ಮೂಲಕ ಮಾಡುವ ಆಧುನಿಕ ತಂತ್ರಜ್ಞಾನ ರೂಢಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ
ವಹಿಸಿದ್ದರು. ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್.ಎಚ್.ಮಂಜುನಾಥ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ವೈದ್ಯ ಡಾ| ಎಂ.ಕೆ. ಪ್ರಸಾದ್ ಭಂಡಾರಿ ಶುಭ ಹಾರೈಸಿದರು. ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ ವೇದಿಕೆಯಲ್ಲಿದ್ದರು.
ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ವತಿ
ಯಿಂದ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ ಅವರನ್ನು ಗೌರವಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಉಡುಪಿಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಸ್ವಾಗತಿಸಿದರು. ಯೋಜನೆಯ ದ.ಕ. ಜಿಲ್ಲೆ-2 ಪುತ್ತೂರಿನ ನಿರ್ದೇಶಕ ಪ್ರವೀಣ್ ಕುಮಾರ್ ವಂದಿಸಿದರು. ಸುಧಾ ಉದಯ ರೈ ಹಾಗೂ ಉಮೇಶ್ ನಿರ್ವಹಿಸಿದರು.
ಪ್ಲಾಸ್ಟಿಕ್ ವಿರುದ್ಧ ಹೆಗ್ಗೆಡೆ ಜಾಗೃತಿ
ಜಿಲ್ಲಾ ಕಚೇರಿಯ ನಿರ್ದೇಶಕರ ಕೊಠಡಿಯಲ್ಲಿ ಇರಿಸಲಾಗಿದ್ದ ಮೂರ್ತಿಯೊಂದಕ್ಕೆ ಪ್ಲಾಸ್ಟಿಕ್ ಲ್ಯಾಮಿನೇಶನ್ ಇರುವುದನ್ನು ಗಮನಿಸಿದ ಡಾ| ಹೆಗ್ಗಡೆ ಅವರು ಪ್ಲಾಸ್ಟಿಕ್ ಹೊದಿಕೆಯನ್ನು ಸ್ವತಃ ತೆರವು ಮಾಡುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಿದ ವಿದ್ಯಾಮಾನ ನಡೆಯಿತು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444