ಕಡಬ: ರುದ್ರಭೂಮಿಯಲ್ಲಿನ ಸಮಸ್ಯೆಗಳಿಗೆ ಶೀಘ್ರ ಮುಕ್ತಿ

22.40 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಗೆ ಚಾಲನೆ

Team Udayavani, Oct 6, 2022, 9:22 AM IST

1

ಕಡಬ: ತಾಲೂಕು ಕೇಂದ್ರ ವಾಗಿರುವ ಕಡಬ ಪೇಟೆಯ ಸಾರ್ವಜನಿಕ ರುದ್ರಭೂಮಿಯನ್ನು ಮೂಲ ಸೌಕರ್ಯ ಒದಗಿಸಿ ಅಭಿವೃದ್ಧಿಗೊಳಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದ್ದು, ಟೆಂಡರ್‌ ಪ್ರಕ್ರಿಯೆ ಮುಗಿದ ಕೂಡಲೇ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.

ರುದ್ರಭೂಮಿಗೆ ಕಡಬ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕದಲ್ಲಿ ಕಡಬ-ಪಂಜ ರಸ್ತೆಯ ಪಕ್ಕದಲ್ಲಿ ಸ.ನಂ. 306/1ಎ1 ಯಲ್ಲಿ 1.03 ಎಕರೆ ಭೂಮಿ ಕಾದಿರಿಸಲಾಗಿದೆ. ಕಡಬ ಆಸುಪಾಸಿನ ಗ್ರಾಮಗಳಲ್ಲಿಯೂ ಸಾರ್ವಜನಿಕ ರುದ್ರಭೂಮಿಗಳು ಇಲ್ಲದೇ ಇರುವುದರಿಂದ ಜನರು ಅಂತ್ಯಸಂಸ್ಕಾರಕ್ಕಾಗಿ ಕಡಬದ ರುದ್ರಭೂಮಿಯನ್ನು ಅವಲಂಭಿ ಸಿದ್ದಾರೆ.

ರುದ್ರಭೂಮಿಯ ಸಮಗ್ರ ಅಭಿವೃದ್ಧಿಯ ಜತೆಗೆ ಮುಂದಿನ ದಿನಗಳಲ್ಲಿ ವಿದ್ಯುತ್‌ ಚಿತಾಗಾರವನ್ನು ಅಳವಡಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಅನುದಾನ ಬಿಡುಗಡೆ ಪ್ರಸ್ತುತ ಕಡಬ ಪಟ್ಟಣ ಪಂಚಾಯತ್‌ನ ಸುಪರ್ದಿಯಲ್ಲಿರುವ ಕಡಬ ಹಿಂದೂ ರುದ್ರಭೂಮಿಯ ಅಭಿವೃದ್ಧಿಗಾಗಿ ಒಟ್ಟು 22.40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.

ಆ ಪೈಕಿ ಸುಮಾರು 10 ಲಕ್ಷ ರೂ. ಅನುದಾನ ಈ ಹಿಂದೆ ಗ್ರಾ.ಪಂ. ಆಡಳಿತದ ಅವಧಿಯಲ್ಲಿ ಬಳಕೆಯಾಗಿದ್ದು, ಚಿತಾಗಾರದ ಛಾವಣಿಗೆ ಲೋಹದ ಶೀಟ್‌ ಅಳವಡಿಕೆ (2 ಲಕ್ಷ ರೂ.), ಶವ ದಹನ ನಡೆಸುವ ಲೋಹದ ಕ್ರಿಮೆಟೋರಿಯಂ ಅಳವಡಿಕೆ, ಚಿತಾಗಾರದ ಸುತ್ತ ಲೋಹದ ತಡೆಬೇಲಿ ಹಾಗೂ ನೆಲಹಾಸು ಕಾಮಗಾರಿ (4 ಲಕ್ಷ ರೂ.), ಶ್ಮಶಾನವನ್ನು ಸಂಪರ್ಕಿಸುವ ರಸ್ತೆಯನ್ನು ಕಾಂಕ್ರೀಟ್‌ ಹಾಕಿ ಅಭಿವೃದ್ಧಿಪಡಿಸುವ ಕಾಮಗಾರಿ (4 ಲಕ್ಷ ರೂ.) ಈಗಾಗಲೇ ಪೂರ್ಣಗೊಂಡಿದೆ.

ಇನ್ನುಳಿದಂತೆ ಶ್ಮಶಾನಕ್ಕೆ ಹೈಮಾಸ್ಟ್‌ ದೀಪ ಅಳವಡಿಕೆ (1 ಲಕ್ಷ ರೂ.), ಉದ್ಯಾನವನ ನಿರ್ಮಾಣ (3.40 ಲಕ್ಷ ರೂ.), ಚಿತಾಗಾರ ಅಭಿವೃದ್ಧಿ (4 ಲಕ್ಷ ರೂ.) ಹಾಗೂ ಚಿತಾಗಾರಕ್ಕೆ ಇಂಟರ್‌ಲಾಕ್‌ ಅಳವಡಿಕೆ (4 ಲಕ್ಷ ರೂ.) ಕಾರ್ಯ ಶೀಘ್ರ ನಡೆಯಲಿದೆ ಎಂದು ಕಡಬ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಪಕೀರ ಮೂಲ್ಯ ಅವರು ತಿಳಿಸಿದ್ದಾರೆ.

ಹೆಚ್ಚಿನ ಅನುದಾನ: ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಸುಸಜ್ಜಿತ ರುದ್ರಭೂಮಿ ರಚನೆ ಯಾಗಬೇಕೆಂಬ ಉದ್ದೇಶದಿಂದ ಅಗತ್ಯ ಅನುದಾನಗಳನ್ನು ನೀಡಲಾಗಿದೆ. ಈಗಾಗಲೇ ಕಡಬದಲ್ಲಿ ವಿವಿಧ ಇಲಾಖೆಗಳ ತಾಲೂಕುಮಟ್ಟದ ಕಚೇರಿಗಳು ಆರಂಭಗೊಂಡಿದೆ. ಕಡಬ ಗ್ರಾ.ಪಂ. ಪ್ರಸ್ತುತ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿರುವುದರಿಂದ ಮೂಲ ಸೌಕರ್ಯಗಳ ಅನುಷ್ಠಾನಕ್ಕಾಗಿ ಹೆಚ್ಚಿನ ಅನುದಾನಗಳು ಲಭ್ಯವಾಗಲಿದೆ. –ಎಸ್‌.ಅಂಗಾರ, ಸಚಿವರು

ಟಾಪ್ ನ್ಯೂಸ್

ಪಡುಬಿದ್ರಿ: ಕಾರ್ಯಾಚರಿಸದ ಹಳ್ಳಿಗಳ ಪಶು ಚಿಕಿತ್ಸಾಲಯ

ಪಡುಬಿದ್ರಿ: ಕಾರ್ಯಾಚರಿಸದ ಹಳ್ಳಿಗಳ ಪಶು ಚಿಕಿತ್ಸಾಲಯ

ಕೌಟುಂಬಿಕ ಕಲಹ: ಮೂವರು ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಾಯಿ

ಕೌಟುಂಬಿಕ ಕಲಹ: ಮೂವರು ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಾಯಿ

ಮುಂದಿನ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲಿ ಎನ್‌ಇಪಿ ಜಾರಿ: ಸಿಎಂ ಬೊಮ್ಮಾಯಿ

ಮುಂದಿನ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲಿ ಎನ್‌ಇಪಿ ಜಾರಿ: ಸಿಎಂ ಬೊಮ್ಮಾಯಿ

tdy-28

ಜೆಎನ್‌ಯುನಲ್ಲಿ ಬ್ರಾಹ್ಮಣ ವಿರೋಧಿ ಬರಹ

ಕುಂಬಳೆ ಸುಂದರ ರಾವ್‌ ಪಂಚಭೂತಗಳಲ್ಲಿ ಲೀನ: ಗಣ್ಯರಿಂದ ನುಡಿನಮನ

ಕುಂಬಳೆ ಸುಂದರ ರಾವ್‌ ಪಂಚಭೂತಗಳಲ್ಲಿ ಲೀನ: ಗಣ್ಯರಿಂದ ನುಡಿನಮನ

tdy-19

ಸಿದ್ದು ಮಾತಿಗೆ ಸಿ.ಟಿ.ರವಿ ಆಕ್ರೋಶ

ರಾಜ್ಯದಲ್ಲಿ ಜೆಡಿಎಸ್‌ ಪರ ಅಲೆ: ಎಚ್‌.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಜೆಡಿಎಸ್‌ ಪರ ಅಲೆ: ಎಚ್‌.ಡಿ.ಕುಮಾರಸ್ವಾಮಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-31

ಕುಕ್ಕೆ: ಯಾತ್ರಿಕನಿಗೆ ಬೀದಿ ನಾಯಿ ಕಡಿತ; ಆಟೋ ಪಲ್ಟಿ

0

ಪುತ್ತೂರು: ಜಾಗದ ವಿವಾದ,ಹಲ್ಲೆ: ಮೂವರು ಆಸ್ಪತ್ರೆಗೆ  

8

ಸುಜೀರಿಗೆ ಸ.ಪ.ಪೂ.ಕಾಲೇಜು?

ಧರ್ಮಸ್ಥಳದ ಮಂಜೂಷಾಕ್ಕೆ ಟಿ-565 ಯುದ್ಧ ಟ್ಯಾಂಕರ್‌!

ಧರ್ಮಸ್ಥಳದ ಮಂಜೂಷಾಕ್ಕೆ ಟಿ-565 ಯುದ್ಧ ಟ್ಯಾಂಕರ್‌!

ಆಟೋ ಚಾಲಕನ ಮೃತದೇಹ ಕೆರೆಯಲ್ಲಿ ಪತ್ತೆ; ಸಾಯುವ ಮೊದಲು ಆಪ್ತರೋರ್ವರಿಗೆ ಕರೆ

ಆಟೋ ಚಾಲಕನ ಮೃತದೇಹ ಕೆರೆಯಲ್ಲಿ ಪತ್ತೆ; ಸಾಯುವ ಮೊದಲು ಆಪ್ತರೋರ್ವರಿಗೆ ಕರೆ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಪಡುಬಿದ್ರಿ: ಕಾರ್ಯಾಚರಿಸದ ಹಳ್ಳಿಗಳ ಪಶು ಚಿಕಿತ್ಸಾಲಯ

ಪಡುಬಿದ್ರಿ: ಕಾರ್ಯಾಚರಿಸದ ಹಳ್ಳಿಗಳ ಪಶು ಚಿಕಿತ್ಸಾಲಯ

ಕೌಟುಂಬಿಕ ಕಲಹ: ಮೂವರು ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಾಯಿ

ಕೌಟುಂಬಿಕ ಕಲಹ: ಮೂವರು ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಾಯಿ

ಮುಂದಿನ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲಿ ಎನ್‌ಇಪಿ ಜಾರಿ: ಸಿಎಂ ಬೊಮ್ಮಾಯಿ

ಮುಂದಿನ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲಿ ಎನ್‌ಇಪಿ ಜಾರಿ: ಸಿಎಂ ಬೊಮ್ಮಾಯಿ

tdy-28

ಜೆಎನ್‌ಯುನಲ್ಲಿ ಬ್ರಾಹ್ಮಣ ವಿರೋಧಿ ಬರಹ

ಕುಂಬಳೆ ಸುಂದರ ರಾವ್‌ ಪಂಚಭೂತಗಳಲ್ಲಿ ಲೀನ: ಗಣ್ಯರಿಂದ ನುಡಿನಮನ

ಕುಂಬಳೆ ಸುಂದರ ರಾವ್‌ ಪಂಚಭೂತಗಳಲ್ಲಿ ಲೀನ: ಗಣ್ಯರಿಂದ ನುಡಿನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.