“ಕಡೇಶಿವಾಲಯ ಸೌಹಾರ್ದ ಸೇತುವೆ ಕಾಮಗಾರಿ ನಿಗದಿತ ಅವಧಿಗೆ ಪೂರ್ಣ’


Team Udayavani, Jun 11, 2019, 5:50 AM IST

b-16

ಬಂಟ್ವಾಳ: ಮುಂದಿನ 30 ತಿಂಗಳುಗಳಲ್ಲಿ ಕಡೇಶಿವಾಲಯ- ಅಜಿಲಮೊಗರು ಸಂಪರ್ಕದ ನೇತ್ರಾವತಿ ನದಿ ಸೌಹಾರ್ದ ಸೇತುವೆ ನಿಗದಿತ ಅವಧಿಗೆ ಪೂರ್ಣಗೊಳ್ಳಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು. ಅವರು ಸೋಮವಾರ ಸೌಹಾರ್ದ ಸೇತುವೆಯ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಕಡೇಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಠಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. 19.84 ಕೋಟಿ ರೂ. ವೆಚ್ಚದ ಈ ಸೇತುವೆ ನದಿ ತಳಮಟ್ಟದಿಂದ 8. 50 ಮೀ. ಎತ್ತರ, 312 ಮೀ. ಉದ್ದ, 10.5 ಮೀ. ಅಗಲದ ವಿನ್ಯಾಸ, 13 ಪಿಲ್ಲರ್‌ಗಳನ್ನು ಹೊಂದಿರುವುದು. ಮಳೆಗಾಲಕ್ಕೆ ಮೊದಲು ಪಿಲ್ಲರ್‌ ಕಾಮಗಾರಿ ಮುಕ್ತಾಯ ಉದ್ದೇಶವನ್ನು ಗುತ್ತಿಗೆದಾರರು ಹೊಂದಿದ್ದಾರೆ ಎಂದು ರೈ ತಿಳಿಸಿದರು.

ಸೌಹಾರ್ದದ ಉದ್ದೇಶ
ನದಿ ಇಕ್ಕೆಲದ ಕಡೇಶಿವಾಲಯ ಗ್ರಾಮ ದಿಂದ ಮಣಿನಾಲ್ಕೂರು ಗ್ರಾಮ ಸಂಪರ್ಕದ ಎರಡು ಧರ್ಮಗಳ ಆಸ್ತಿಯಾಗಿ ಜಿಲ್ಲೆಯ ಸೌಹಾರ್ದದ ಉದ್ದೇಶದಿಂದ ಈ ಸೇತುವೆ ನಿರ್ಮಾಣಕ್ಕೆ 2016 ರಲ್ಲಿ ಘೋಷಣೆ ಮಾಡಿದ್ದು, 2017ರಲ್ಲಿ ಮಂಜೂರಾತಿ ಸಿಕ್ಕಿದೆ. 2018ರಲ್ಲಿ ಟೆಂಡರ್‌ ಆಗಿದ್ದು, ಕಾಮಗಾರಿ ನಡೆಸಲು ಸ್ವಲ್ಪ ಮಟ್ಟಿಗೆ ತಾಂತ್ರಿಕ ತೊಂದರೆಯಾಗಿತ್ತು. 2019 ರ ಮೇ ತಿಂಗಳಿನಿಂದ ಕಾಮಗಾರಿ ನಡೆಸ ಲಾಗುತ್ತಿದ್ದು, ಅವಧಿಯೊಳಗೆ ಕಾಮಗಾರಿ ಮುಗಿಸಿ ಜನರ ಸೌಲಭ್ಯಕ್ಕೆ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.

ಮಳೆಗಾಲದ ಎರಡು ತಿಂಗಳು ಬಿಟ್ಟು ಮಳೆ ಕಡಿಮೆಯಾದ ಬಳಿಕ ಕೆಲಸ ಮುಂದುವರಿಸಲಾಗುತ್ತದೆ. ಪುತ್ತೂರು, ಮಾಣಿ, ವಿಟ್ಲ ಪ್ರದೇಶದವರಿಗೆ, ಅಜಿಲ ಮೊಗರು, ಮಡಂತ್ಯಾರ್‌, ಬೆಳ್ತಂಗಡಿ, ಧರ್ಮಸ್ಥಳ ಊರುಗಳಿಗೆ ಸಂಪರ್ಕಿಸಲು ಸುಮಾರು 20 ಕಿ.ಮೀ. ದೂರವನ್ನು ಈ ಸೇತುವೆ ನಿರ್ಮಾಣದಿಂದ ಕಡಿಮೆ ಮಾಡಿದಂತಾಗುವುದು.

ಅಜಿಲಮೊಗರು ಉರೂಸ್‌ ಸಂದರ್ಭದಲ್ಲಿ ಅಲ್ಲಿನ ಜನರು ಈ ಸೇತುವೆಯ ಬಗ್ಗೆ ಮನವಿ ಸಲ್ಲಿಸುತ್ತಿದ್ದರು. ಲೋಕೋಪಯೋಗಿ ಸಚಿವರಲ್ಲಿ ಮಾತುಕತೆ ನಡೆಸಿ ಅಂತಿಮವಾದ ಅನಂತರ ಇದರ ಬಗ್ಗೆ ಘೋಷಣೆ ಮಾಡಿದ್ದೆ ಎಂದು ಇದೇ ಸಂದರ್ಭ ಅವರು ಪ್ರಸ್ತಾವಿಸಿದರು.

ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ, ಬಿ. ಪದ್ಮಶೇಖರ್‌ ಜೈನ್‌, ಮಂಜುಳಾ ಮಾಧವ ಮಾವೆ, ಮಣಿನಾಲ್ಕೂರು ಗ್ರಾ.ಪಂ. ಅಧ್ಯಕ್ಷೆ ಗೀತಾ ಪೂಜಾರಿ, ಬಂಟ್ವಾಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಬಿ ಕುಂದರ್‌, ಪಾಣೆಮಂಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುದೀಪ್‌ ಕುಮಾರ್‌ ಶೆಟ್ಟಿ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಆಲಿ, ಪ್ರಮುಖರಾದ ಸಂಪತ್‌ ಕುಮಾರ್‌ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್‌, ಪ್ರಶಾಂತ್‌ ಕುಲಾಲ್‌, ಈಶ್ವರ ಪೂಜಾರಿ ಹಿರ್ತಡ್ಕ, ಚೆನ್ನೈಎಸ್‌ವಿಎಲ್‌ ಕನ್ಸ್‌ಸ್ಟ್ರಕ್ಷನ್‌ ಗುತ್ತಿಗೆ ಕಂಪೆನಿಯ ರಾಘವನ್‌, ಎಂಜಿನಿಯರ್‌ ಮಂಜೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಯೋಜನೆಗಳ ಕಡೆಗೆ ಹೆಚ್ಚಿನ ಗಮನ
ನಾನು ಶಾಸಕ, ಸಚಿವನಾಗಿ ಪ್ರಸ್ತಾವಿಸಿ, ಮಂಜೂರಾದ ಯೋಜನೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಲ್ಲ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಡೆಸಿ ಜನರ ಉಪಯೋಗಕ್ಕೆ ದೊರೆಯುವ ತನಕ ಅದರ ಕೆಲಸ ಮಾಡುತ್ತೇನೆ. ನನ್ನ ಕನಸಿನ ಯೋಜನೆಗಳಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರು, ಪಶ್ಚಿಮವಾಹಿನಿ ಯೋಜನೆ ಅಂತಿಮ ಹಂತಕ್ಕೆ ಬರಬೇಕಾಗಿದೆ.
-ಬಿ. ರಮಾನಾಥ ರೈ, ಮಾಜಿ ಸಚಿವರು

ಟಾಪ್ ನ್ಯೂಸ್

ಪಾತಾಳಕ್ಕೆ ಕುಸಿದ  ಸೆನ್ಸೆಕ್ಸ್; ಮುಂಬಯಿ ಷೇರುಪೇಟೆ ಸೂಚ್ಯಂಕ 1,546 ಅಂಕ ಇಳಿಕೆ

ಪಾತಾಳಕ್ಕೆ ಕುಸಿದ  ಸೆನ್ಸೆಕ್ಸ್; ಮುಂಬಯಿ ಷೇರುಪೇಟೆ ಸೂಚ್ಯಂಕ 1,546 ಅಂಕ ಇಳಿಕೆ

CM @ 2

ಜಿಲ್ಲಾ ಉಸ್ತುವಾರಿ ಬದಲಾವಣೆ: ತವರು ಜಿಲ್ಲೆ ಬಹುತೇಕ ಸಚಿವರಿಗೆ ಇಲ್ಲ

500 ರೂ. ವಿಷಯದಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡ ನರ್ಸ್ ಮತ್ತು ಆಶಾ ಕಾರ್ಯಕರ್ತೆ

500 ರೂ. ವಿಷಯದಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡ ನರ್ಸ್ ಮತ್ತು ಆಶಾ ಕಾರ್ಯಕರ್ತೆ

1-1-sds

ಭಾರತದ ಸ್ಮೃತಿ ಮಂಧಾನ ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗರಾಗಿ ಆಯ್ಕೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

yatnal

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ರೇಣು ಭೇಟಿಗೆ ಯತ್ನಾಳ್ ಸಮಜಾಯಿಷಿ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೂಸ್ಟರ್‌ ಡೋಸ್‌ ಪಡೆದ ಡಾ| ಹೆಗ್ಗಡೆ

ಬೂಸ್ಟರ್‌ ಡೋಸ್‌ ಪಡೆದ ಡಾ| ಹೆಗ್ಗಡೆ

dಉದನೆ: ಹೆದ್ದಾರಿಯಲ್ಲಿ ಆನೆ ಸಂಚಾರ!

ಉದನೆ: ಹೆದ್ದಾರಿಯಲ್ಲಿ ಆನೆ ಸಂಚಾರ!

ನೆಟ್ಟಣದ ಹಳೆ ಮುಳುಗು ಸೇತುವೆ ತೆರವು

ನೆಟ್ಟಣದ ಹಳೆ ಮುಳುಗು ಸೇತುವೆ ತೆರವು

ಬಹುತೇಕ ವಾಹನಗಳಿಗೆ ಅನುಮತಿ ಇಲ್ಲ

ಬಹುತೇಕ ವಾಹನಗಳಿಗೆ ಅನುಮತಿ ಇಲ್ಲ

6elephant

ಸಂಪಾಜೆ ನೆಲ್ಲಿಕುಮೇರಿ ಕಾರ್ಣಿಕ ದೈವ ಕಟ್ಟೆಗೆ ಕಾಡಾನೆ ದಾಳಿ

MUST WATCH

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

udayavani youtube

ರಾಷ್ಟ್ರೀಯ ಬಾಲ ಪುರಸ್ಕಾರ : ಪ್ರಧಾನಿ ಜೊತೆ ಮಂಗಳೂರಿನ ರೆಮೋನಾ ಪರೇರಾ ಮಾತುಕತೆ

udayavani youtube

ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ! ಕೆಲಸಕ್ಕೆ ಹೋಗುವವರ ಪರದಾಟ ಹೇಳತೀರದು…

udayavani youtube

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ, ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

ಹೊಸ ಸೇರ್ಪಡೆ

ಪಾತಾಳಕ್ಕೆ ಕುಸಿದ  ಸೆನ್ಸೆಕ್ಸ್; ಮುಂಬಯಿ ಷೇರುಪೇಟೆ ಸೂಚ್ಯಂಕ 1,546 ಅಂಕ ಇಳಿಕೆ

ಪಾತಾಳಕ್ಕೆ ಕುಸಿದ  ಸೆನ್ಸೆಕ್ಸ್; ಮುಂಬಯಿ ಷೇರುಪೇಟೆ ಸೂಚ್ಯಂಕ 1,546 ಅಂಕ ಇಳಿಕೆ

ನೋಂದಣಿ ಸ್ಥಗಿತ: ರೈತರ ಆಕ್ರೋಶ

ನೋಂದಣಿ ಸ್ಥಗಿತ: ರೈತರ ಆಕ್ರೋಶ

25joshi

ಜೋಶಿ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ

BJP FLAG

ಬಿಬಿಎಂಪಿ ಚುನಾವಣೆ ಪೂರ್ವ ಸಿದ್ಧತೆ: ಜ. 25 ರಿಂದ ಮೂರು ದಿನ ಬಿಜೆಪಿ ಸಭೆ

ಹೆಣ್ಣು ಮಕ್ಕಳ ಕಾಳಜಿ ಬಗ್ಗೆ ಪಾಲಕರಲ್ಲಿ ಅರಿವು ಅತ್ಯಗತ್ಯ: ಬಿ.ಡಿ.ರೋಹಿಣಿ

ಹೆಣ್ಣು ಮಕ್ಕಳ ಕಾಳಜಿ ಬಗ್ಗೆ ಪಾಲಕರಲ್ಲಿ ಅರಿವು ಅತ್ಯಗತ್ಯ: ಬಿ.ಡಿ.ರೋಹಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.