ಸೊರಗಿದ ಕಿಂಡಿ ಅಣೆಕಟ್ಟಿಗೆ ಕಾಯಕಲ್ಪ


Team Udayavani, Jun 2, 2019, 6:00 AM IST

c-15

ನರಿಮೊಗರು: ಮುಂಡೂರು ಗ್ರಾ. ಪಂ. ವ್ಯಾಪ್ತಿಯ ಸರ್ವೆ ಗ್ರಾಮದ ಸೊರಕೆಯಲ್ಲಿ 20 ವರ್ಷಗಳ ಹಿಂದೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣವಾಗಿದ್ದ ಕಿಂಡಿ ಅಣೆಕಟ್ಟಿಗೆ ಅಂತೂ ದುರಸ್ತಿ ಭಾಗ್ಯ ಒದಗಿದೆ. ಇಲಾಖೆಯ ನಿರ್ಲಕ್ಷ್ಯದಿಂದ ಕಿಂಡಿ ಅಣೆಕಟ್ಟು ಉಪಯೋಗ ಶೂನ್ಯವಾಗಿದ್ದರ ಕುರಿತು “ಉದಯವಾಣಿ’ ಸುದಿನ ಫೆ. 7ರಂದು ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಇದೀಗ ಸಣ್ಣ ನೀರಾವರಿ ಇಲಾಖೆಯ ಮೂಲಕ ಕಿಂಡಿ ಅಣೆಕಟ್ಟಿನ ದುರಸ್ತಿಯಾಗಿದೆ. ಜನತೆಯ ಬಹು ವರ್ಷಗಳ ಬೇಡಿಕೆಯೊಂದು ಈಡೇರಿದಂತಾಗಿದೆ.

17 ವರ್ಷ ನಿರ್ವಹಣೆಯಿಲ್ಲ
ಸುಮಾರು 35 ಮೀ. ಅಗಲ ಮತ್ತು 2 ಮೀಟರ್‌ ಎತ್ತರವಿರುವ ಈ ಅಣೆಕಟ್ಟು ಪ್ರಸ್ತುತ ಸುಮಾರು 2 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿತ್ತು. ನಿರ್ಮಾಣಗೊಂಡ ಮೂರು ವರ್ಷಗಳ ಕಾಲ ಹಲಗೆ ಹಾಕಲು ಆಸಕ್ತಿ ತೋರಿದ್ದ ಇಲಾಖೆ ನಿರ್ವಹಣ ವೆಚ್ಚ ಭರಿಸಿತ್ತು. ಅನಂತರ 17 ವರ್ಷಗಳ ಕಾಲ ಅಣೆಕಟ್ಟನ್ನು ನಿರ್ವಹಿಸುವ ಗೋಜಿಗೆ ಹೋಗಿರಲಿಲ್ಲ. ಈ ನಡುವೆ ಅಣೆಕಟ್ಟೆಯ ಒಂದು ಬದಿಯ ತಡೆಗೋಡೆ ಕುಸಿದು ಹೋಗಿದ್ದು ಹಲಗೆಗಳು ಶಿಥಿಲಗೊಂಡಿತ್ತು.

ಮೂರು ವರ್ಷಗಳಿಂದ ಕಿಂಡಿ ಅಣೆಕಟ್ಟಿನ ಫಲಾನುಭವಿಗಳಲ್ಲಿ ಒಬ್ಬರಾದ ಜಿ.ಪಂ. ಮಾಜಿ ಸದಸ್ಯ ಸುರೇಶ್‌ ಕುಮಾರ್‌ ಸೊರಕೆ ಅವರು ವರ್ಷಕ್ಕೆ 25 ಸಾವಿರ ರೂ. ಖರ್ಚು ಮಾಡಿ ಶಿಥಿಲಗೊಂಡಿರುವ ಹಲಗೆಗೆ ಟಾರ್ಪಲ್‌ ಹೊದಿಸಿ ಹಲಗೆ ಅಳವಡಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಹಲಗೆಗಳು ಶಿಥಿಲಗೊಂಡಿದೆ ಹಾಗೂ ಹೊಳೆಯ ಒಂದು ಬದಿಯಲ್ಲಿ ತಡೆಗೋಡೆ ಇಲ್ಲದ ಕಾರಣ ಗರಿಷ್ಠ ಸಾಮರ್ಥ್ಯದ ತನಕ ನೀರು ಶೇಖರಣೆಯಾಗುತ್ತಿರಲಿಲ್ಲ.

ಈ ಕುರಿತು ಹಲವು ವರ್ಷಗಳಿಂದ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡುತ್ತಾ ಬಂದಿರುವ ಸುರೇಶ್‌ ಕುಮಾರ್‌ ಸೊರಕೆ ವಿನೂತನ ಮಾದರಿಯ ಹಲಗೆಗಳನ್ನು ನೀಡುವಂತೆ, ಕಾಂಕ್ರೀಟ್‌ ತಡೆಗೋಡೆ ನಿರ್ಮಾಣ ಹಾಗೂ ಇತರ ದುರಸ್ತಿ ಕಾರ್ಯಗಳನ್ನು ಮಾಡುವಂತೆಯೂ ಮನವಿ ಮಾಡಿದ್ದರು. ತಡೆಗೋಡೆ ನಿರ್ಮಾಣಕ್ಕೆ 2017ರಲ್ಲಿ ಗುತ್ತಿಗೆ ಪಡೆದುಕೊಂಡವರು ಕಾಮಗಾರಿಯನ್ನು ಪ್ರಾರಂಭಿಸಿರಲಿಲ್ಲ. ಈಗ ಕಿಂಡಿ ಅಣೆಕಟ್ಟಿನ ದುರಸ್ತಿ ನಡೆಯುತ್ತಿದೆ.

ಏನು ಪ್ರಯೋಜನ?
ಈ ಕಿಂಡಿ ಅಣೆಕಟ್ಟಿನಲ್ಲಿ ಗರಿಷ್ಠ ಸಾಮರ್ಥ್ಯದ ವರೆಗೆ ನೀರು ನಿಂತರೆ ಒಲೆಮುಂಡೋವು ತನಕ 2 ಕಿ.ಮೀ. ವರೆಗೆ ನೀರು ಶೇಖರಿಸಿಡುವ ಅವಕಾಶ ಇದ್ದು, ಸರ್ವೆ ಹಾಗೂ ಸವಣೂರು ಗ್ರಾ.ಪಂ. ವ್ಯಾಪ್ತಿಯ ಪುಣcಪ್ಪಾಡಿ ಗ್ರಾಮಗಳ ಅಂತರ್ಜಲ ಮಟ್ಟ ಸುಧಾರಣೆ ಆಗುವುದರಲ್ಲಿ ಸಂದೇಹವಿಲ್ಲ.

ಹಲವರಿಗೆ ಪ್ರಯೋಜನ
ಸರ್ವೆ, ಪುಣcಪ್ಪಾಡಿ ಗ್ರಾಮಗಳ ಅಂತರ್ಜಲ ವೃದ್ಧಿಗಾಗಿ ನಾನು ಜಿ.ಪಂ. ಸದಸ್ಯನಾಗಿದ್ದಾಗ ಅನುಷ್ಠಾನ ಗೊಂಡ ಈ ಯೋಜನೆಯನ್ನು ಉಳಿಸಿಕೊಳ್ಳಬೇಕೆಂಬ ಆಸಕ್ತಿಯಿಂದ ಆಣೆ ಕಟ್ಟೆಯ ನಿರ್ವಹಣೆ ಮಾಡುತ್ತಿದ್ದೇನೆ. ಈಗ ಇಲಾಖೆಯ ವತಿ ಯಿಂದಲೇ ದುರಸ್ತಿ ನಡೆಯುತ್ತಿದೆ. ಇದರಿಂದ ಹಲವರಿಗೆ ಪ್ರಯೋಜನವಾಗಲಿದೆ.
– ಸುರೇಶ್‌ ಕುಮಾರ್‌ ಸೊರಕೆ ಜಿ.ಪಂ. ಮಾಜಿ ಸದಸ್ಯರು

ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

subhash chandra bose

ನೇತಾಜಿ ಸುಭಾಷ್‌ ಚಂದ್ರ ಭೋಸ್ ಪ್ರೇರಣಾತ್ಮಕ ನುಡಿಗಳು

goa

ಗೋವಾದಲ್ಲಿ ಶಾಸಕರು ಪಕ್ಷ ಬದಲಾಯಿಸಿದ್ದು ಭಾರತದಲ್ಲೇ ದಾಖಲೆ !

netaji subhash chandra bose

ಸುಭಾಷ್‌ ಚಂದ್ರ ಬೋಸ್‌.. ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಶಕ್ತಿ

15forest

ಸಾಗರ: ಅಪಘಾತದಲ್ಲಿ ಗಾಯಗೊಂಡಿದ್ದ ಅರಣ್ಯಾಧಿಕಾರಿ ಸಾವು

21ನೇ ಶತಮಾನದಲ್ಲೂ ಪ್ರಸ್ತುತ ನೇತಾಜಿ ವಿಚಾರಧಾರೆಗಳು 

21ನೇ ಶತಮಾನದಲ್ಲೂ ಪ್ರಸ್ತುತ ನೇತಾಜಿ ವಿಚಾರಧಾರೆಗಳು ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dಉದನೆ: ಹೆದ್ದಾರಿಯಲ್ಲಿ ಆನೆ ಸಂಚಾರ!

ಉದನೆ: ಹೆದ್ದಾರಿಯಲ್ಲಿ ಆನೆ ಸಂಚಾರ!

ನೆಟ್ಟಣದ ಹಳೆ ಮುಳುಗು ಸೇತುವೆ ತೆರವು

ನೆಟ್ಟಣದ ಹಳೆ ಮುಳುಗು ಸೇತುವೆ ತೆರವು

ಬಹುತೇಕ ವಾಹನಗಳಿಗೆ ಅನುಮತಿ ಇಲ್ಲ

ಬಹುತೇಕ ವಾಹನಗಳಿಗೆ ಅನುಮತಿ ಇಲ್ಲ

6elephant

ಸಂಪಾಜೆ ನೆಲ್ಲಿಕುಮೇರಿ ಕಾರ್ಣಿಕ ದೈವ ಕಟ್ಟೆಗೆ ಕಾಡಾನೆ ದಾಳಿ

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

MUST WATCH

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

udayavani youtube

ಶೃಂಗೇರಿ ಮಠದ ಆವರಣದಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ

udayavani youtube

ಮಲೆನಾಡು ಗಿಡ್ಡ ಈ ನಾಟಿಹಸುವಿನ ಹಾಲಿನಲ್ಲಿ ಅಮೃತವಿದೆ ಅನ್ನಬಹುದು

udayavani youtube

ಮಧ್ವರಾಜ್ ಮನದಾಳದ ಮಾತು

ಹೊಸ ಸೇರ್ಪಡೆ

1-dsa

ರಿಜ್ವಾನ್,ಬ್ಯೂಮಾಂಟ್ ಐಸಿಸಿ 2021 ವರ್ಷದ ಟಿ 20 ಶ್ರೇಷ್ಠ ಆಟಗಾರರು

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

1-dsadsar3r

ಪಾರ್ಸೇಕರ್, ಪರ್ರಿಕರ್ ನಿರ್ಣಯದಿಂದ ಗೋವಾ ಬಿಜೆಪಿಗೆ ಪರಿಣಾಮವಿಲ್ಲ: ತಾನಾವಡೆ

ಎನ್‌ಎಚ್ 206 ರಸ್ತೆ ವಿಸ್ತರಣೆ ವಿವಾದ: ಎಡಭಾಗದ ಸಾಲು ಮರಗಳಿಗೆ ಮಾತ್ರ ಕತ್ತರಿ: ಹಾಲಪ್ಪ

ಎನ್‌ಎಚ್ 206 ರಸ್ತೆ ವಿಸ್ತರಣೆ ವಿವಾದ: ಎಡಭಾಗದ ಸಾಲು ಮರಗಳಿಗೆ ಮಾತ್ರ ಕತ್ತರಿ: ಹಾಲಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.