ಬಂಟ್ವಾಳ: ಸ್ನಾನದ ಹಂಡೆ ,ಅಡುಗೆಯ ಪಾತ್ರೆಗಳು ಕಳ್ಳತನ
Team Udayavani, Jun 26, 2022, 7:33 PM IST
ಸಾಂದರ್ಭಿಕ ಚಿತ್ರ
ಬಂಟ್ವಾಳ: ಮಣಿನಾಲ್ಕೂರು ಹಂಡೀರಿನಲ್ಲಿ ಮಹಿಳೆಯೊಬ್ಬರ ಮನೆಯಿಂದ ಸ್ನಾನ ಮಾಡುವ ಹಂಡೆ ಹಾಗೂ ಅಡುಗೆಯ ಪಾತ್ರೆಗಳು ಕಳ್ಳತನವಾದ ಘಟನೆ ನಡೆದಿದೆ.
ಹಂಡೀರು ನಿವಾಸಿ ಮುತ್ತು ಅವರು ಮನೆಯಲ್ಲಿ ಒಂಟಿಯಾಗಿ ವಾಸವಿದ್ದು, ಅದರು ಅಲ್ಲೇ ಪಕ್ಕದಲ್ಲೇ ಇರುವ ಮಗಳ ಮನೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಜೂ. 25 ರಂದು ಬೆಳಗ್ಗೆ ಮಹಿಳೆಯ ಪುತ್ರಿ ಮನೆಗೆ ಆಗಮಿಸಿ ಪಾತ್ರೆಗಳನ್ನು ತೊಳೆದು ಮನೆಯ ಹೊರಗಡೆ ಒಣಗಲು ಇಟ್ಟು ತಾಯಿಯೊಂದಿಗೆ ಪಕ್ಕದಲ್ಲೇ ಇರುವ ತನ್ನ ಮನೆಗೆ ತೆರಳಿದ್ದರು.
ಆದರೆ ಸಂಜೆ ಬಂದು ನೋಡುವಾಗ ಪಾತ್ರೆಗಳು ಇಲ್ಲವಾಗಿದ್ದು, ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ದೊಡ್ಡ ಹಂಡೆ, ಅಡುಗೆಯ ಪಾತ್ರೆಗಳು ಹಾಗೂ 2 ಪೈಬರ್ ಕುರ್ಚಿಗಳು ಸೇರಿ ಒಟ್ಟು 3500 ರೂ.ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಿದ್ದಾರೆ.
ಈ ಕುರಿತು ಒಂಟಿ ಮಹಿಳೆಯರ ಅಳಿಯ ಪದ್ಮನಾಭ ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್‌ಐ ಸಂಜೀವ ಹಾಗೂ ಸಿಬಂದಿ ತೆರಳಿ ಕಳ್ಳನ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಕಳ್ಳರ ಸುಳಿವು ಕೂಡ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧ್ವಜ ಹಾರಿಸುವ ವೇಳೆ ಘಟನೆ: ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಸುಳ್ಯದ ಯುವಕ ಸಾವು
ಕಡಬ: ಧ್ವಜಾರೋಹಣದ ವೇಳೆ ಕುಸಿದು ಬಿದ್ದ ನಿವೃತ್ತ ಸೈನಿಕ ಮೃತ್ಯು
ಕೊಡಗು, ದ.ಕ. ಗಡಿಯಲ್ಲಿ ಮತ್ತೆ ಭೂ ಕಂಪನ ಅನುಭವ
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ತೇಜಿ: 500 ರೂ. ಧಾರಣೆ ನಿರೀಕ್ಷೆಯಲ್ಲಿ ಹೊಸ ಅಡಿಕೆ
ಪುತ್ತೂರಿನ ದಶಕದ ಬೇಡಿಕೆಗೆ ಸಿಗದ ಸ್ಪಂದನೆ: ಕಮಿಷನರೆಟ್ ವ್ಯಾಪ್ತಿಯೊಳಗೆ ಎಸ್ಪಿ ಕಚೇರಿ