ಕೆಮ್ಮಾಯಿ ಮಹಾವಿಷ್ಣು ಮೂರ್ತಿ ದೇವಸ್ಥಾನ ಸೇರಿದಂತೆ ಹತ್ತಿರದ ಎರಡು ಅಂಗಡಿಯಲ್ಲಿ ಕಳ್ಳತನ
Team Udayavani, Jan 12, 2021, 9:24 AM IST
ಪುತ್ತೂರು: ಕೆಮ್ಮಾಯಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಸೇರಿದಂತೆ ಸ್ಥಳೀಯ ಎರಡು ಅಂಗಡಿಗಳಿಂದ ಕಳ್ಳತನ ನಡೆದ ಘಟನೆ ಜ.12 ರಂದು ಬೆಳಕಿಗೆ ಬಂದಿದೆ.
ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಹಿಂಬದಿಯ ಗೋಪುರದಿಂದ ದೇವಳದ ಒಳಾಂಗಣಕ್ಕೆ ಇಳಿದ ಕಳ್ಳರು ದೇವರ ಗರ್ಭಗುಡಿಯ ಬಾಗಿಲು ಮುರಿದು ಒಳನುಗ್ಗಿ ದೇವರ ಬೆಳ್ಳಿಯ ಮಾಲೆಯನ್ನು ಕಳವು ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಉಳಿದಂತೆ ದೇವಳದ ಕಾಣಿಕೆ ಹುಂಡಿಯನ್ನು ತೆರೆದರೂ ಜ.11 ರಂದು ಕಾಣಿಕೆ ಹುಂಡಿ ಲೆಕ್ಕಚಾರ ಆಗಿರುವ ಹಿನ್ನಲೆಯಲ್ಲಿ ಹುಂಡಿಯಿಂದ ಕಳವು ಆಗಿರದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಮೇಲಾಧಿಕಾರಿಗಳ ಕಾಟದಿಂದ ಬೇಸತ್ತು ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ KSRTC ಬಸ್ ನಿರ್ವಾಹಕ
ದೇವಳದ ಎದುರಿನ ಅಂಗಡಿಯಿಂದ ಸಾವಿರಾರೂ ರೂಪಾಯಿ ಕಳವು: ದೇವಳದ ಎದುರಿನ ಅಂಗಡಿಯ ತಿಮ್ಮಪ್ಪ ಗೌಡ ಎಂಬವರ ಅಂಗಡಿಯ ಹಿಂಬದಿಯಿಂದ ಒಳನುಗ್ಗಿದ್ದ ಕಳ್ಳರು ಅಂಗಡಿಯ ಒಳಗೆ ಸ್ವಸಹಾಯ ಸಂಘದ ಸಂಗ್ರಹದ ರೂ.೩೦ ಸಾವಿರ ನಗದು ಮತ್ತು ಇತರ ಚಿಲ್ಲರೆ ಹಣ ಕಳವಾಗಿದೆ.
ಜಂಕ್ಷನ್ ಅಂಗಡಿಯಲ್ಲೂ ಕಳವಿಗೆ ಯತ್ನ: ಕೆಮ್ಮಾಯಿ ಜಂಕ್ಷನ್ ಬಳಿಯ ಲಿಂಗಪ್ಪ ಹಾಗೂ ಬರ್ನಾಂಡಿಸ್ ಎಂಬವರ ಅಂಗಡಿಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿದ್ದು ಚಿಲ್ಲರೆ ಹಣ ಕಳವಾಗಿದೆ.
ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ