ಬದುಕಿಗೆ ಬೆಳಕಾಗೋ ಅಪ್ಪಂದಿರಿಗೂ ಸಲಾಮ್‌

ಇಂದು ವಿಶ್ವ ಅಪ್ಪಂದಿರ ದಿನ

Team Udayavani, Jun 16, 2019, 5:00 AM IST

z-13

ಹೆತ್ತವರನ್ನು ಗೌರವಿಸುವು ದೆಂದರೆ ದೇವರನ್ನು ಗೌರವಿಸಿದಂತೆ. ಇಂದು, ಜೂನ್‌ 16 ವಿಶ್ವ ಅಪ್ಪಂದಿರ ದಿನಾಚರಣೆ. ಮಲ್ಲಿಗೆಯಂತೆ ಉದುರುದುರಾಗಿರುವ ನಮ್ಮ ಕನಸುಗಳನ್ನು ದಾರದಲ್ಲಿ ಪೋಣಿಸಿ ಚಂದವಾದ ಒಂದು ಹೂ ದಂಡೆ ಮಾಡಿಕೊಡುವವರು ಅಪ್ಪ. ಅದರ ಹಿಂದಿರುವ ಅವರ ಸಹನೆ, ಶ್ರಮಗಳನ್ನು ನಾವು ಹಲವು ಬಾರಿ ಗುರುತಿಸುವುದಿಲ್ಲ. ತಾನು ಸೋತು ಮಕ್ಕಳನ್ನು ಗೆಲ್ಲಿಸುವ ಎಲ್ಲ ಅಪ್ಪಂದಿರಿಗೂ ಒಂದು ನಮನ.

ಪಿತೃ ದೇವೋಭವ ಎಂದು ಉಚ್ಚರಿ ಸುವ ಪ್ರತಿ ಕ್ಷಣವೂ ಅಪ್ಪನೇ ಕಣ್ಮುಂದೆ ಬರುತ್ತಾರೆ. ಹೌದು, ಮಗುವೊಂದಕ್ಕೆ ಅಮ್ಮನಂತೆ ಅಪ್ಪನ ಪೋಷಣೆಯೂ ತುಂಬಾ ಮುಖ್ಯ. ಅವರು ದೇವರೆಂದರೆ ತಪ್ಪಲ್ಲ. ಹುಟ್ಟಿದಾಗಿನಿಂದ ಮಗುವಿನ ಎಲ್ಲ ಸಣ್ಣ , ದೊಡ್ಡ ಬೇಡಿಕೆಗಳನ್ನು ಎಷ್ಟೇ ಕಷ್ಟವಾದರೂ ಯೋಚಿಸದೆ ಪೂರೈಸುವ ಮನಸ್ಸಿರುವುದು ಅಪ್ಪನಿಗೆ ಮಾತ್ರ. ಅಲ್ಲಿ ಸ್ವಾರ್ಥ ಎಂಬ ಪದಕ್ಕೆ ಅರ್ಥವೇ ಇಲ್ಲ.

ಅಪ್ಪಂದಿರ ಎಂತಹ ಕಠಿನ ಮನಸ್ಸು ಕೂಡ ಮಕ್ಕಳ ಅಕ್ಕರೆಯ ಬೇಡಿಕೆಗೆ ಕರಗದಿರುವುದಿಲ್ಲ. ಆತ ಎಷ್ಟೇ ದೃಢ ಮನಸ್ಸಿನವನಾದರೂ ಮಕ್ಕಳ ಕೋರಿಕೆಯ ಮುಂದೆ ಸೋತು ಬಿಡುತ್ತಾನೆ. ಅಪ್ಪ ನಾದವನು ಮಕ್ಕಳು ಸಣ್ಣದಿರುವಾಗ ಗುರುವಾಗಿದ್ದು ಅವರನ್ನು ತಿದ್ದಿ, ತೀಡಿ ಅವರು ಬೆಳೆದು ದೊಡ್ಡವರಾದಂತೆ ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಗೆಳೆಯನಾಗಬೇಕಾಗುತ್ತದೆ. ಈ ಹಿನ್ನೆ ಲೆ ಯಲ್ಲೇ ಆಚ ರ ಣೆಗೆ ಬಂದದ್ದು ವಿಶ್ವ ಅಪ್ಪಂದಿರ ದಿನಾಚರಣೆ.

ದಿನದ ಇತಿಹಾಸ
ಹೆಚ್ಚಿನ ಎಲ್ಲ ದಿನಾಚರಣೆಗಳೂ ಪಾಶ್ಚಾತ್ಯರ ಕೊಡುಗೆಯೇ ಅಧಿಕವಾಗಿರುತ್ತದೆ. ಅಪ್ಪಂದಿರ ದಿನ ಕೂಡ ಪಾಶ್ಚಾತ್ಯ ದೇಶ ದಲ್ಲೇ ಮೊದಲು ಆಚರಣೆಗೆ ಬಂತು. ಸೊನೊರಾ ಲೂಯಿಸ್‌ ಸ್ಮಾರ್ಟ್‌ ಡೊಡ್‌ ಎಂಬ ಮಹಿಳೆಯ 62 ವರ್ಷದ ಹೋರಾಟದ ಫ‌ಲವಾಗಿ ಅಮೆರಿಕದಲ್ಲಿ ಮೊದಲು ಅಪ್ಪಂದಿರ ದಿನವನ್ನು ಆಚರಿಸ ಲಾಯಿತು. ಸೊನೊರಾ ಲೂಯಿಸ್‌ ಸ್ಮಾರ್ಟ್‌ ಡೊಡ್‌ 15 ವರ್ಷದ ಹುಡುಗಿಯಾಗಿದ್ದಾಗ ಅವಳ ತಾಯಿ ತೀರಿಕೊಂಡರು. ಹೀಗಾ ಗಿ ಅವಳನ್ನು ಮತ್ತು ಅವಳ 5 ವರ್ಷದ ತಮ್ಮನನ್ನು ಬೆಳೆಸುವ ಜವಾಬ್ದಾರಿ ಅಪ್ಪನ ಮೇಲೆ ಬಿತ್ತು. ಅಮ್ಮಂದಿರ ದಿನದ ಆಚರಣೆಯ ಬಗ್ಗೆ ಅರಿತ ಸೊನೊರಾ ಅಪ್ಪಂದಿರ ದಿನವನ್ನು ಅಥವಾ ತನ್ನ ಅಪ್ಪನ ದಿನವನ್ನು ಆಚರಿಸಲು ನಿರ್ಧರಿಸಿದಳು. ಅದಕ್ಕಾಗಿ ಸಂಬಂಧಪಟ್ಟ ಆಡಳಿತ ವರ್ಗ ಹಾಗೂ ಚರ್ಚ್‌ಗಳಿಗೆ ಪತ್ರವನ್ನು ಬರೆಯಲಾರಂಭಿಸಿದಳು.

ಅವಳು ನಿರೀಕ್ಷಿಸಿದ ಉತ್ತರ ಲಭಿಸ ದಿದ್ದಾಗ ಅವಳು ಅಮೆರಿಕದೆಲ್ಲೆಡೆ ಅಪ್ಪಂದಿರ ದಿನದ ಮಹ ತ್ವದ ಕುರಿತು ಅಭಿಯಾನ ಆರಂಭಿಸಿದಳು. ಇದರ ಪರಿಣಾಮವಾಗಿ 1972ರಲ್ಲಿ ವಿಶ್ವ ಅಪ್ಪಂದಿರ ದಿನವನ್ನು ಆಚರಿಸುವ ಬಗ್ಗೆ ಅಧಿಕೃತವಾಗಿ ಘೋಷಿಸಲಾಯಿತು.ಮೊದಲು ಜೂನ್‌ 5ರಂದು ಆಚರಿಸ ಲ್ಪಡುತ್ತಿದ್ದ ಅಪ್ಪಂದಿರ ದಿನ ಅನಂತರದ ವರ್ಷಗಳಲ್ಲಿ ಜೂನ್‌ ತಿಂಗಳ ಮೂರನೇ ರವಿವಾರ ಆಚರಿಸಲ್ಪಟ್ಟಿತು. ಈಗಲೂ ಹಾಗೆಯೇ ಮುಂದುವರಿದಿದೆ.

ಅಪ್ಪನ ಜವಾಬ್ದಾರಿ ಗೌರವಿಸುವ ದಿನ
ಅಪ್ಪಂದಿರಿಗೆ ಸಮಾಜ ಮತ್ತು ಕುಟುಂಬದಲ್ಲಿರುವ ಜವಾಬ್ದಾರಿ ಮತ್ತು ಹೊಣೆಗಳನ್ನು ಗುರುತಿಸಿ ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಮೊದಮೊದಲ ಗುಲಾಬಿ ನೀಡಿ ಆಚರಿಸಲ್ಪಡುತ್ತಿದ್ದ ಈ ದಿನ ಇತ್ತೀಚೆಗೆ ಉಡುಗೊರೆಗಳನ್ನು ನೀಡುವಲ್ಲಿಯವರೆಗೆ ಮುಂದುವರಿದಿದೆ.
ಒಂದು ಮಗುವನ್ನು ಹೆತ್ತು ಹೊತ್ತು ಸಾಕುವ ಅಮ್ಮನಷ್ಟೇ ಜವಾಬ್ದಾರಿ ಅಪ್ಪನಿಗೂ ಇದೆ. ಅಪ್ಪ ಒಬ್ಬ ಏಕಪೋಷಕನಾಗಿದ್ದರೆ ಅವರ ಜವಾಬ್ದಾರಿಗಳು ಮತ್ತಷ್ಟು ಹೆಚ್ಚಿ ಅದನ್ನೂ ನಿಭಾಯಿಸಬೇಕಾಗುತ್ತದೆ.
ತನ್ನೆಲ್ಲ ಒತ್ತಡಗಳ ಮಧ್ಯೆಯೂ ಮಕ್ಕಳಿ ಗಾಗಿ ಸಮಯ ಮೀಸಲಿರಿಸಿ ಅವರ ಬೇಕು ಬೇಡಗಳನ್ನು ಪೂರೈಸುವ ಅಪ್ಪಂದಿರು ಕೂಡ ತಾಯಿಯಾಗಿ, ಗುರುವಾಗಿ, ಸ್ನೇಹಿತನಾಗಿ ಮಕ್ಕಳನ್ನು ಬೆಳೆಸಬಲ್ಲ, ಅವರ ಬದುಕಿಗೆ ಸರಿಯಾದ ದಾರಿ ತೋರಬಲ್ಲ ಎಂಬ ಸಂದೇಶವೂ ಇದರಲ್ಲಿ ಅಡಗಿದೆ.

ಉತ್ತಮ ಅಪ್ಪನಾಗುವುದು ಸುಲಭವಲ್ಲ
ಪ್ರತಿಯೊಬ್ಬ ಪುರುಷನ ಬಯಕೆ ಒಬ್ಬ ಉತ್ತಮ ಅಪ್ಪನಾಗಬೇಕು ಎನ್ನುವುದಾಗಿರುತ್ತದೆ. ಆದರೆ ಅದು ಅಷ್ಟು ಸುಲಭದ ಕೆಲಸವೇನಲ್ಲ. ಮಕ್ಕಳನ್ನು ಎಲ್ಲ ವಯಸ್ಸಿನಲ್ಲಿಯೂ ಅವರ ಭಾವನೆಗಳಿಗೆ ತಕ್ಕಂತೆ ಅರ್ಥ ಮಾಡಿಕೊಂಡು ತಿದ್ದಿ ತೀಡುವ ಹೊಣೆ ಅವರ ಮೇಲಿರುತ್ತದೆ. ಕೆಲವೊಂದು ಜವಾಬ್ದಾರಿಗಳೇ ಹಾಗೆ, ಕಷ್ಟವೆಂದರೆ ಕಷ್ಟ; ಇಷ್ಟಪಟ್ಟು ಮಾಡಿದರೆ ಸಂತೃಪ್ತಿ. ಅಪ್ಪನದ್ದೂ ಅದೇ ಹೊಣೆಗಾರಿಕೆ.

ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

wheelchair romeo

ವೀಲ್‌ಚೇರ್‌ನಲ್ಲಿ ಹೊಸ ಪ್ರೇಮ ಪುರಾಣ: ವಿಭಿನ್ನ ಕಾನ್ಸೆಪ್ಟ್ ನ ಸಿನಿಮಾವಿದು..

4fraud

ಮೆಡಿಕಲ್‌ ಸೀಟ್‌ ನೆಪದಲ್ಲಿ ವಂಚನೆ: ವಂಚಿಸಿದ ಹಣ ಕೇಳಿದ್ದಕ್ಕೆ ಹನಿಟ್ರ್ಯಾಪ್‌

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 2,710 ಕೋವಿಡ್ ಸೋಂಕು ದೃಢ, 14 ಮಂದಿ ಸಾವು

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 2,710 ಕೋವಿಡ್ ಸೋಂಕು ದೃಢ, 14 ಮಂದಿ ಸಾವು

amreen-bhatt

24 ಗಂಟೆಯಲ್ಲಿ ನಟಿಯ ಹತ್ಯೆ ಪ್ರಕರಣ ಭೇದಿಸಿದ ಭದ್ರತಾ ಪಡೆ: ನಾಲ್ವರು ಲಷ್ಕರ್ ಉಗ್ರರ ಹತ್ಯೆ

3lake

ಕೆರೆಯಲ್ಲಿ ಮುಳುಗಿ ಮೂವರು ಬಾಲಕರು ಸಾವು

Akshith shashikumar spoke about seethayanam

ರಗಡ್‌ ಲವರ್‌ ಬಾಯ್: ಚೊಚ್ಚಲ ಚಿತ್ರದ ಬಿಡುಗಡೆ ಖುಷಿಯಲ್ಲಿ ಅಕ್ಷಿತ್

1death

7 ವರ್ಷ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆದಿದ್ದ ಮಹಿಳೆ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cashew-nut

ಗೇರು ಪ್ರಪಂಚದ ಸಮಗ್ರತೆ ತೆರೆದಿಡುವ ಮ್ಯೂಸಿಯಂ

asadde

ಸರಕಾರಿ ಆಸ್ಪತ್ರೆ ಸಿಬಂದಿ ಅಸಡ್ಡೆ ವರ್ತನೆ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಪುತ್ತೂರು : 13 ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಡಿತ

ಪುತ್ತೂರು : 13 ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಡಿತ

ಪುತ್ತೂರು: ಮರ ಕಡಿಯುವ ವೇಳೆ ವಿದ್ಯುತ್‌ ಸ್ಪರ್ಶಿಸಿ ಕಾರ್ಮಿಕ ಸಾವು

ಪುತ್ತೂರು: ಮರ ಕಡಿಯುವ ವೇಳೆ ವಿದ್ಯುತ್‌ ಸ್ಪರ್ಶಿಸಿ ಕಾರ್ಮಿಕ ಸಾವು

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

wheelchair romeo

ವೀಲ್‌ಚೇರ್‌ನಲ್ಲಿ ಹೊಸ ಪ್ರೇಮ ಪುರಾಣ: ವಿಭಿನ್ನ ಕಾನ್ಸೆಪ್ಟ್ ನ ಸಿನಿಮಾವಿದು..

6

ಮಳೆಹಾನಿ ಪರಿಹಾರಕ್ಕೆ ತುರ್ತು ಕ್ರಮ

water-tank

ಕೊಲ್ಲೂರು: ಬಳಕೆಯಾಗದೆ ಅನಾಥವಾಗಿ ಉಳಿದ ನೀರಿನ ಟ್ಯಾಂಕ್‌

4fraud

ಮೆಡಿಕಲ್‌ ಸೀಟ್‌ ನೆಪದಲ್ಲಿ ವಂಚನೆ: ವಂಚಿಸಿದ ಹಣ ಕೇಳಿದ್ದಕ್ಕೆ ಹನಿಟ್ರ್ಯಾಪ್‌

5

ಸೀಬರ್ಡ್‌ ನೌಕಾನೆಲೆಗೆ ರಾಜನಾಥ ಸಿಂಗ್‌ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.