Udayavni Special

ಕಾಳುಮೆಣಸಿನ ಸೊರಗು ರೋಗ ತಡೆಗೆ ಕಸಿ ಕಟ್ಟುವ ಉಪಾಯ

 ಅಡ್ಯನಡ್ಕದ ಶರ್ಮಾ ದಂಪತಿ ಸಾಧನೆ

Team Udayavani, Sep 10, 2019, 5:01 AM IST

y-25

ಅಡ್ಯನಡ್ಕ: ಕಾಳುಮೆಣಸು ಸಂಬಾರ ಪದಾರ್ಥಗಳ ರಾಜ. ಕಾಳುಮೆಣಸಿಗೆ ಬರುವ ರೋಗ ಸೊರಗು ರೋಗ. ಈ ವರ್ಷ ಕ್ವಿಂಟಾಲ್‌ ಕಾಳುಮೆಣಸು ಪಡೆ ದವನು ಮುಂದಿನ ವರ್ಷ ಒಂದು ಕಿಲೋ ಕಾಳುಮೆಣಸೂ ಕೊಯ್ಯಲಾರ. ಇದಕ್ಕೆ ನಮ್ಮ ಕೃಷಿಕ ವಿಜ್ಞಾನಿಗಳು ಕಂಡುಕೊಂಡ ಉಪಾಯ ಹಿಪ್ಪಲಿ ಬಳ್ಳಿಗೆ ಕಾಳುಮೆಣಸಿನ ತಳಿಯ ಕಸಿ.

ಹಿಪ್ಪಲಿ ಬಳ್ಳಿಗೆ ಈ ಸೊರಗು ನಿರೋಧ‌ಕ ಶಕ್ತಿ ಇದೆ. ತೋಟದಲ್ಲಿ ಸಾವಿರಾರು ಬಳ್ಳಿ ಗಳಿಗೆ ಇಂತಹ ಕಸಿ ಮಾಡಿ ಕಾಳುಮೆಣಸಿನ ಕೃಷಿಯಲ್ಲಿ ಗೆದ್ದವರು ಜಯಾನಂದ – ವೀಣಾ ಶರ್ಮಾ ದಂಪತಿ ಪಂಜಿಕಲ್ಲು.

ಕಸಿ ಮೂಲಕ ಬಳ್ಳಿ ಅಭಿವೃದ್ಧಿ
ದ.ಕ. ಜಿಲ್ಲೆಯ ಅಡ್ಯನಡ್ಕ ಸಮೀಪದ ಪಂಜಿಕಲ್ಲು ಇವರ ಕೃಷಿ ಕಾರ್ಯ ಕ್ಷೇತ್ರ. ಹಿರಿಯರಿಂದ ಬಂದ ಅಡಿಕೆ ತೋಟ. ಹಾಲಿನ ಡೇರಿ ಉಪ ವೃತ್ತಿ. ಸಾವಯವ ಕೃಷಿ. ಅಡಿಕೆ ಜತೆಗೆ ಬಾಳೆ, ತೆಂಗು, ಕಾಳುಮೆಣಸು ಉಪ ಬೆಳೆಗಳು. ಕಾಳುಮೆಣಸು ಬಳ್ಳಿಗೆ ಸೊರಗು ರೋಗ ಬಂದು ಸಾಯುತ್ತಿತ್ತು. ಇದಕ್ಕಾಗಿ ಇವರು ಕಂಡುಕೊಂಡ ಪರಿಹಾರ ಕಸಿ ಮೂಲಕ ಕಾಳು ಮೆಣಸಿನ ಬಳ್ಳಿ ಅಭಿವೃದ್ಧಿ.

ಕೃಷಿ ವಿಜ್ಞಾನಿಯ ಸಲಹೆ
ಕೃಷಿ ವಿಜ್ಞಾನಿ ಯದು ಕುಮಾರ್‌ ಪುತ್ತೂರು ಇವರಿಗೆ ಕಾಳುಮೆಣಸಿನ ಕಸಿ ಕಲಿಸಿದವರು. 4 ವರ್ಷಗಳ ಹಿಂದೆ ಅವರ ನಿರ್ದೇಶನದಂತೆ ಹಿಪ್ಪಲಿ ತಾಯಿ ಬಳ್ಳಿಗೆ ಕಸಿ ಕಟ್ಟಿದ 30 ಕಾಳುಮೆಣಸಿನ ಬಳ್ಳಿ ತಂದು ನೆಟ್ಟರು. ಕಾಂಡವಾಗಿ ನೆಲಕ್ಕೆ ಬೇರಿಳಿಸುವ ತಾಯಿ ಹಿಪ್ಪಲ ಗಿಡದ ಕಸಿ ಭಾಗ ಎಳತಾಗಿರಬೇಕು. ಕಸಿ ಕಟ್ಟುವ‌ ಸಯಾನ್‌ ಬೆಳೆದ ಉತ್ತಮ ಇಳುವರಿಯ ಕಾಳುಮೆಣಸಿನ ಎರಡು ಗಂಟು ಇರುವ ಬೆಳೆದ ಕಾಂಡವಾಗಿರಬೇಕು ಎನ್ನುವುದು ಮುಖ್ಯ. ಇದು ಮೃದು ಕಾಂಡ ಕಸಿ ವಿಧಾನದ ಪ್ರಮುಖ ವಿಷಯ. ಅಡಿಕೆ ಮರದ ಬುಡದಲ್ಲೇ ನೆಟ್ಟು ಬೆಳೆಸಿದ ಹಿಪ್ಪಲಿ ತಾಯಿ ಗಿಡ ಕಸಿಗೆ ಅತ್ಯುತ್ತಮ.

ಕಸಿ ತಾಯಿ ಗಿಡಕ್ಕಾಗಿ ಹಿಪ್ಪಲಿ ಬಳ್ಳಿ ಯನ್ನು ಮರದ ಬುಡಕ್ಕೆ ಹತ್ತಿರವಾಗಿ ನೆಟ್ಟು ಬೆಳೆಸಬೇಕು ಎನ್ನುತ್ತಾರಿವರು. ದೂರ ನೆಟ್ಟು ಬಾಗಿಸಿದ್ದಲ್ಲಿ ಅತಿಯಾಗಿ ಹಿಪ್ಪಲಿ ಚಿಗುರೊಡನೆ ಕಸಿ ಕಟ್ಟುವ ಕಾಳು ಮೆಣಸಿನ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ಒಂದು ಮರದ ಬುಡದಲ್ಲಿ 2-3 ಹಿಪ್ಪಲ ಗಿಡವನ್ನು ತಾಯಿ ಗಿಡವಾಗಿ ಬೆಳೆಸಿ 1.5- 2 ಅಡಿ ಎತ್ತರದಲ್ಲಿ ಉತ್ತಮ ಇಳುವರಿ ನೀಡುವ ಕಾಳುಮೆಣಸಿನ ಬಳ್ಳಿಯನ್ನು ಕಸಿ ಕಟ್ಟಿ ಬೆಳೆಸಬೇಕು. ಈ ಕಸಿ ಬಳ್ಳಿ ಬೆಳೆಯುತ್ತಾ ಮೇಲೇರುವಾಗ ಚಿಗುರು ಚಿವುಟಿ ಟಿಸಿಲೊಡೆಯುವಂತೆ ಮಾಡಿ. ಮರ ತುಂಬಾ 5-6 ಬಳ್ಳಿಗಳು ಹರಡಿ ಮೇಲೇರುತ್ತವೆ. ಹೆಚ್ಚು ಇಳುವರಿ ಸಿಗುತ್ತದೆ.

ಶರ್ಮಾ ದಂಪತಿ ಕಸಿ ಕಟ್ಟುವುದರಲ್ಲಿ ನೈಪುಣ್ಯ ಸಾಧಿಸಿದ್ದಾರೆ. ಹಿಪ್ಪಲಿ ಗಿಡವನ್ನು ಅಡಕೆ ಮರದ ಬುಡದಲ್ಲಿ ನೆಟ್ಟು ಬೆಳೆಸುತ್ತಾ ಅದರ ಮೃದು ಕಾಂಡವನ್ನು ಆಯ್ದು, ದಿನಾಲೂ 10-15 ನಿಮಿಷ ಬಿಡುವು ಮಾಡಿಕೊಂಡು 4-5 ಹಿಪ್ಪಲಿ ಗಿಡಕ್ಕೆ ಕಸಿ ಕಟ್ಟುತ್ತಾರೆ. ಕಸಿ ಕಟ್ಟಿದ ಭಾಗ ಒಣಗಿ ಹೋಗದಂತೆ ಲಾಲಿಯ ಪ್ಲಾಸ್ಟಿಕ್‌ ತೊಟ್ಟೆಯನ್ನು ಕಟ್ಟಿ ರಕ್ಷಣೆ ಮಾಡುತ್ತಾರೆ.
ಇವರು ಕಳೆದ 4 ವರ್ಷಗಳಲ್ಲಿ ಕಸಿ ಮಾಡಿದ ಗಿಡಗಳು ಸುಮಾರು 2 ಸಾವಿರಕ್ಕೂ ಮಿಕ್ಕಿವೆ. ಈ ವರ್ಷ ಇವರಿಗೆ ಉತ್ತಮ ಇಳುವರಿ ದೊರೆತಿದೆ.

ಸೊರಗು ರೋಗಕ್ಕೆ ಮದ್ದು
ಹಿಪ್ಪಲಿ ಬಳ್ಳಿ ಮಣ್ಣಿನ ಮೂಲಕ ಬರುವ ಸೊರಗುರೋಗ ಪ್ರತಿರೋಧ ಶಕ್ತಿಯುಳ್ಳ ಸಸ್ಯ. ಹಿಪ್ಪಲಿ ಬಳ್ಳಿ ತಂಪಾದ ಸ್ಥಳದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಳೆಗಾಲದಲ್ಲಿ ಬುಡದಲ್ಲಿ ಗಂಟೆಗಟ್ಟಲೆ ನೀರು ನಿಂತರೂ ಕೊಳೆಯುವ ಭಯವಿಲ್ಲ. ಕ್ವಿಕ್‌ ವಿಲ್ಟ್ (ಸೊರಗು ರೋಗ) ನಿರೋಧಕ ಶಕ್ತಿ ಹಿಪ್ಪಲಿ ಬಳ್ಳಿಗಿದೆ.
-ಯದುಕುಮಾರ್‌ ಪುತ್ತೂರು, ಕೃಷಿ ವಿಜ್ಞಾನಿ

-  ಶಂಕರ್‌ ಸಾರಡ್ಕ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದೋಸ್ತಿ ಯುಎಇ ನೆರವಿಗೆ ಇನ್ನಷ್ಟು ವೈದ್ಯಕೀಯ ಸಿಬಂದಿ ಕಳಿಸಿದ ಭಾರತ

ದೋಸ್ತಿ ಯುಎಇ ನೆರವಿಗೆ ಇನ್ನಷ್ಟು ವೈದ್ಯಕೀಯ ಸಿಬಂದಿ ಕಳಿಸಿದ ಭಾರತ

ಲಾಕ್‌ಡೌನ್‌ ವೇಳೆ ಡಿಜಿಟಲ್‌ ಪಾವತಿ ಭರ್ಜರಿ ಏರಿಕೆ

ಲಾಕ್‌ಡೌನ್‌ ವೇಳೆ ಡಿಜಿಟಲ್‌ ಪಾವತಿ ಭರ್ಜರಿ ಏರಿಕೆ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರಿಂದ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರಿಂದ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ

ಪಕ್ಷದಲ್ಲಿ ಕೇಳಲು ಎಲ್ಲರಿಗೂ ಅಧಿಕಾರವಿದೆ, ಇದರಲ್ಲಿ ರಾಜಕಾರಣವಿಲ್ಲ: ಸಚಿವ ಸೋಮಶೇಖರ್

ಪಕ್ಷದಲ್ಲಿ ಸ್ಥಾನ ಕೇಳಲು ಎಲ್ಲರಿಗೂ ಅಧಿಕಾರವಿದೆ, ಇದರಲ್ಲಿ ರಾಜಕಾರಣವಿಲ್ಲ: ಸಚಿವ ಸೋಮಶೇಖರ್

ಮಾಸ್ಕ್ ಹಾಕದೆ ಮೆರವಣಿಗೆಯಲ್ಲಿ ಭಾಗಿಯಾಗಿ ಸಾಮಾಜಿಕ ಅಂತರ ಮರೆತ ಆರೋಗ್ಯ ಸಚಿವರು

ಮಾಸ್ಕ್ ಹಾಕದೆ ಮೆರವಣಿಗೆಯಲ್ಲಿ ಭಾಗಿಯಾಗಿ ಸಾಮಾಜಿಕ ಅಂತರ ಮರೆತ ಆರೋಗ್ಯ ಸಚಿವರು

ಕೋವಿಡ್ ನಿಂದ ಸಂಕಷ್ಟಕ್ಕೀಡಾದ ಹೂವು ಬೆಳೆಗಾರರ ಪರಿಹಾರ ಕಾರ್ಯಕ್ಕೆ ಸಿಎಂ ಚಾಲನೆ

ಕೋವಿಡ್ ನಿಂದ ಸಂಕಷ್ಟಕ್ಕೀಡಾದ ಹೂವು ಬೆಳೆಗಾರರ ಪರಿಹಾರ ಕಾರ್ಯಕ್ಕೆ ಸಿಎಂ ಚಾಲನೆ

ಕೆಲಸಕ್ಕೆ ಹಾಜರಾಗದ ಹಾಪ್‍ಕಾಮ್ಸ್ ನೌಕರರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ

ಕೆಲಸಕ್ಕೆ ಹಾಜರಾಗದ ಹಾಪ್‍ಕಾಮ್ಸ್ ನೌಕರರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತ್ಯಾಜ್ಯ ಎಸೆಯುವವರ ಪತ್ತೆಗೆ ಕೆಮರಾ ಬಳಕೆಗೆ ನಿರ್ಣಯ

ತ್ಯಾಜ್ಯ ಎಸೆಯುವವರ ಪತ್ತೆಗೆ ಕೆಮರಾ ಬಳಕೆಗೆ ನಿರ್ಣಯ

ಕಾರು ಢಿಕ್ಕಿ : ಪಾದಚಾರಿ ಸಾವು

ಕಾರು ಢಿಕ್ಕಿ : ಪಾದಚಾರಿ ಸಾವು

ಮಿಡತೆ ಪತ್ತೆ ಸ್ಥಳಕ್ಕೆ ಕೃಷಿ ಅಧಿಕಾರಿ ಭೇಟಿ ; ಮಿಡತೆ, ಎಲೆಗಳ ಮಾದರಿ ಸಂಗ್ರಹ

ಮಿಡತೆ ಪತ್ತೆ ಸ್ಥಳಕ್ಕೆ ಕೃಷಿ ಅಧಿಕಾರಿ ಭೇಟಿ ; ಮಿಡತೆ, ಎಲೆಗಳ ಮಾದರಿ ಸಂಗ್ರಹ

ಮಳೆಗಾಲ ಆರಂಭಕ್ಕೆ ಮೊದಲೇ ತುಂಬೆ ಡ್ಯಾಂ ಭರ್ತಿ!

ಮಳೆಗಾಲ ಆರಂಭಕ್ಕೆ ಮೊದಲೇ ತುಂಬೆ ಡ್ಯಾಂ ಭರ್ತಿ!

300 ರೂ. ಗಡಿ ದಾಟಿದ ಹೊಸ ಅಡಿಕೆ ಧಾರಣೆ

300 ರೂ. ಗಡಿ ದಾಟಿದ ಹೊಸ ಅಡಿಕೆ ಧಾರಣೆ

MUST WATCH

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

ಹೊಸ ಸೇರ್ಪಡೆ

ದೋಸ್ತಿ ಯುಎಇ ನೆರವಿಗೆ ಇನ್ನಷ್ಟು ವೈದ್ಯಕೀಯ ಸಿಬಂದಿ ಕಳಿಸಿದ ಭಾರತ

ದೋಸ್ತಿ ಯುಎಇ ನೆರವಿಗೆ ಇನ್ನಷ್ಟು ವೈದ್ಯಕೀಯ ಸಿಬಂದಿ ಕಳಿಸಿದ ಭಾರತ

ಲಾಕ್‌ಡೌನ್‌ ವೇಳೆ ಡಿಜಿಟಲ್‌ ಪಾವತಿ ಭರ್ಜರಿ ಏರಿಕೆ

ಲಾಕ್‌ಡೌನ್‌ ವೇಳೆ ಡಿಜಿಟಲ್‌ ಪಾವತಿ ಭರ್ಜರಿ ಏರಿಕೆ

ರೋಗ ತಡೆಗೆ ಜನರ ಸಹಭಾಗಿತ್ವ ಅಗತ್ಯ

ರೋಗ ತಡೆಗೆ ಜನರ ಸಹಭಾಗಿತ್ವ ಅಗತ್ಯ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರಿಂದ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರಿಂದ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ

ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿ ಶಾಸಕ ಮಹೇಶ್ ಕುಮಠಳ್ಳಿ ನೇಮಕ

ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿ ಶಾಸಕ ಮಹೇಶ್ ಕುಮಠಳ್ಳಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.