ಹಂಪ್ ಕಾಣದೆ ಬೈಕ್ ಸ್ಕಿಡ್: ಕಡಬದಲ್ಲಿ ಅವೈಜ್ಞಾನಿಕ ಹಂಪ್ ಗೆ ಬಲಿಯಾದ ಮಹಿಳೆ!
Team Udayavani, Feb 28, 2021, 12:58 PM IST
Representative Image Used
ಕಡಬ: ಇಲ್ಲಿನ ಹೊಸ್ಮಠ ಸೇತುವೆಯ ಬಳಿ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ಹಂಪ್ ನಿಂದಾಗ ಮಹಿಳೆಯೋರ್ವರು ಬಲಿಯಾಗಿರುವ ಘಟನೆ ಭಾನುವಾರ ಬೆಳ್ಳಂಬೆಳಗ್ಗೆ ನಡೆದಿದೆ.
ಮೃತ ಮಹಿಳೆಯನ್ನು ವೇಣೂರಿನ ಬಜಾಲು ಸಮೀಪದ ವಿರಂದಲೆ ನಿವಾಸಿ ವೆಂಕಪ್ಪ ಸಾಲ್ಯಾನ್ ಎಂಬವರ ಪತ್ನಿ ಸುಂದರಿ (65 ವ) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಮಿಯ್ಯಾರು ಜೋಡುಕರೆ ಕಂಬಳ ಸಂಪನ್ನ: ಇಲ್ಲಿದೆ ಸಂಪೂರ್ಣ ಫಲಿತಾಂಶ ಪಟ್ಟಿ
ಮೃತ ಮಹಿಳೆಯು ತನ್ನ ಮೊಮ್ಮಗನೊಂದಿಗೆ ಭಾನುವಾರ ಬೆಳಗಿನ ಜಾವ ವೇಣೂರಿನಿಂದ ಕಡಬಕ್ಕೆಂದು ಹೊರಟಿದ್ದು, ಬೆಳಿಗ್ಗೆ 6.30ರ ಸುಮಾರಿಗೆ ಮಂಜು ಆವರಿಸಿದ್ದರಿಂದ ಹಂಪ್ ಗೋಚರಿಸದೆ ಬೈಕ್ ಸ್ಕಿಡ್ ಆಗಿದ್ದು, ರಸ್ತೆಗೆಸೆಯಲ್ಪಟ್ಟ ಸುಂದರಿಯವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: ಪ್ರೀತಿಸಿದ ಹುಡುಗಿಗೆ ಬೇರೆ ಮದುವೆಗೆ ಸಿದ್ಧತೆ: ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ