ವಿಟ್ಲ ಜೇಸೀಸ್‌ ಆಂ.ಮಾ. ಶಾಲೆಯಲ್ಲಿ ನೀರಿಂಗಿಸುವ ಯೋಜನೆ

ಉದಯವಾಣಿ ಮಳೆಕೊಯ್ಲು ಅಭಿಯಾನ ಪ್ರೇರಣೆ

Team Udayavani, Jul 19, 2019, 5:00 AM IST

t-22

ವಿಟ್ಲ : ಕೊಳವೆಬಾವಿಗಳು ಹೆಚ್ಚಾಗಿ ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿದು, ಕುಡಿಯುವ ನೀರಿಗೂ ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ನೀರಿಗಾಗಿ ಹಪಹಪಿಸುವ ಈ ಕಾಲಘಟ್ಟದಲ್ಲಿ ಉದಯವಾಣಿ ಮಳೆ ಕೊಯ್ಲು ಅಭಿಯಾನದಿಂದ ಪ್ರೇರಣೆಗೊಂಡು ವಿಟ್ಲದಲ್ಲಿ ಕೊಳವೆ ಬಾವಿಗೆ ನೀರಿಂಗಿಸುವ ಯೋಜನೆ ಅನುಷ್ಠಾನಗೊಳಿಸಿದ ವಿಶೇಷ ಕಾರ್ಯ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ವಿಟ್ಲ ಜೇಸಿಐ ನೇತೃತ್ವದಲ್ಲಿ ಲಯನ್ಸ್‌, ರೋಟರಿ ಕ್ಲಬ್‌ ಸಹಯೋಗದಲ್ಲಿ ಈ ಕಾರ್ಯ ಯಶಸ್ವಿಯಾಗಿ ಮಾಡಲಾಗಿದೆ.

ವಿಟ್ಲ ಜೇಸೀಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ 600 ಅಡಿಗೂ ಹೆಚ್ಚು ಆಳದ ಕೊಳವೆ ಬಾವಿಯೊಂದರಲ್ಲಿ ಅರ್ಧ ಇಂಚು ನೀರು ಸಿಗುತ್ತಿತ್ತು. ಇದರಿಂದ ಶಾಲೆಗೆ ಪ್ರಯೋಜನವಿರಲಿಲ್ಲ. ಆದರೆ ಕೇಸಿಂಗ್‌ ಪೈಪ್‌ ತೆಗೆದಿರಲಿಲ್ಲ. ಇದನ್ನು ಗಮನಿಸಿದ ವಿಟ್ಲ ಜೇಸಿಐ, ಲಯನ್ಸ್‌, ರೋಟರಿ ಕ್ಲಬ್‌ ಸದಸ್ಯರು ಪುನಶ್ಚೇತನಗೊಳಿಸಲು ನಿರ್ಧರಿಸಿ ದರು. ವಿಟ್ಲ ಜೇಸಿಐ ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ವಿಟ್ಲ ನೇತೃತ್ವದಲ್ಲಿ ಮಾಜಿ ಅಧ್ಯಕ್ಷ ಮೋಹನ ಮೈರ ಮಾರ್ಗದರ್ಶನದಲ್ಲಿ ವಿಟ್ಲ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸಂತೋಷ್‌ ಶೆಟ್ಟಿ ಪೆಲ್ತಡ್ಕ ಸಹಯೋಗದಲ್ಲಿ ಕಾಮಗಾರಿ ನಡೆಸಲಾಯಿತು.

ಶಾಲಾ ಆಡಳಿತ ಮಂಡಳಿಯು ಪ್ರೋತ್ಸಾಹ ನೀಡಿತು. ಕೊಳವೆ ಬಾವಿ ಸುತ್ತ 7 ಅಡಿ ಗುಂಡಿ ಮಾಡಿ, ಬುಡದಿಂದ 3 ಅಡಿ ಅಂತರದಲ್ಲಿ ಕೇಸಿಂಗ್‌ ಪೈಪಿನಲ್ಲಿ ತೂತು ಮಾಡಿ, ನೆಟ್‌ ಅನ್ನು ಕವರ್‌ ಮಾಡಿ, ಒಂದು ಪಿಕ್‌ಅಪ್‌ ಜಲ್ಲಿ ಮತ್ತು ಚರಳು, 13 ಡಬ್ಬ ಇದ್ದಿಲು ತುಂಬಿಸಲಾಯಿತು. ಈ ಕಾಮಗಾರಿಯನ್ನು ಜೆಸಿಐ ಸದಸ್ಯರು ಶ್ರಮ ಸೇವೆಯ ಮೂಲಕವೇ ಮಾಡಿ ರುವುದು ವಿಶೇಷವಾಗಿದೆ. ಸುಮಾರು 15,000 ರೂ. ವೆಚ್ಚವನ್ನು ಈ ಯೋಜನೆಗೆ ಖರ್ಚು ಮಾಡಲಾಗಿದೆ.

ವಿಟ್ಲ ಜೇಸಿಐ ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ವಿಟ್ಲ, ಮಾಜಿ ಅಧ್ಯಕ್ಷ ಮೋಹನ ಮೈರ, ವಿಟ್ಲ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸಂತೋಷ್‌ ಶೆಟ್ಟಿ ಪೆಲ್ತಡ್ಕ, ಜೇಸಿಐ ಸದಸ್ಯರಾದ ಭಾಸ್ಕರ ಶೆಟ್ಟಿ, ಅಣ್ಣಪ್ಪ ಸಾಸ್ತಾನ, ರಮೇಶ್‌ ಬಿ.ಕೆ., ಸೋಮಶೇಖರ್‌, ವಿಜಯ ಪಾಯಸ್‌, ಜೇಸನ್‌ ಪಿಂಟೋ, ಫ್ಲೆàವನ್‌, ನವೀನ್‌, ಚಂದ್ರಹಾಸ, ಲೂಯಿಸ್‌ ಮಸ್ಕರೇನ್ಹಸ್‌, ಸಂದೀಪ್‌, ಚಂದ್ರಹಾಸ, ಸಂಜೀವ, ಜೆಜೆಸಿಐ ಸದಸ್ಯರು, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಈ ಶ್ರಮದಾನದಲ್ಲಿ ಭಾಗವಹಿಸಿದ್ದರು. ಜೇಸೀಸ್‌ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಎಲ್‌.ಎನ್‌. ಕೂಡೂರು, ಮೋನಪ್ಪ ಶೆಟ್ಟಿ, ಆಡಳಿತಾಧಿಕಾರಿ ರಾಧಾಕೃಷ್ಣ,ಜೇಸಿಐ ವಲಯಾಧಿಕಾರಿ ಬಾಬ ಕೆ.ವಿ., ರಾಘವೇಂದ್ರ ಪೈ, ರೋಟರಿ ಕ್ಲಬ್‌ ಅಧ್ಯಕ್ಷ ಜಯರಾಮ ರೈ ಅವರು ಕಾಮಗಾರಿಗೆ ಬೆಂಬಲ ನೀಡಿದರು.

ಇದರ ಸ್ಫೂರ್ತಿ ಇನ್ನೊಂದು ಯೋಜನೆಗೂ ನಾಂದಿಯಾಗಿದೆ. ವಿಟ್ಲ ವಿಟuಲ ಪ.ಪೂ. ಕಾಲೇಜಿನ ಆವರಣ ದಲ್ಲಿರುವ ಕೊಳವೆ ಬಾವಿಗೂ ಇದೇ ರೀತಿಯ ನೀರಿಂಗಿಸುವ ಯೋಜನೆಯನ್ನು ಅನುಷ್ಠಾನಗೊಳಿ ಸಲು ಇವರು ನಿರ್ಧರಿಸಿದ್ದಾರೆ. ಶೀಘ್ರದಲ್ಲಿ ಈ ಕಾಮಗಾರಿಯೂ ಪೂರ್ಣಗೊಳ್ಳಲಿದೆ.

ದಿನದಲ್ಲಿ ಕಾರ್ಯ ಪೂರ್ಣ
ವಿಟ್ಲ ಜೇಸಿಐ ಘಟಕದ 12 ಮಂದಿ ಸದಸ್ಯರು ಹಾಗೂ ಜೂನಿಯರ್‌ ಜೇಸಿಯ 4 ಮಂದಿ ಸೇರಿ ಸತತ 10 ಗಂಟೆ ಕೆಲಸದಲ್ಲಿ ಕಾಮಗಾರಿ ಪೂರ್ಣ ಗೊಳಿಸಿದ್ದಾರೆ. ಕಾಂಕ್ರೀಟ್‌ ರಿಂಗ್‌ ಅಳವಡಿಸಿ ಅದರ ಒಳಗೆ ಜಲ್ಲಿ, ಮರಳು, ಇದ್ದಿಲನ್ನು ವ್ಯವಸ್ಥಿತವಾಗಿ ತುಂಬಿಸಿ ನೀರು ಶುದ್ಧೀಕರಣವಾಗಿ ಇಂಗುವಂತೆ ಮಾಡಲಾಗಿದೆ.

 ಮಾರ್ಗದರ್ಶನ, ಬೆಂಬಲ
ಉದಯವಾಣಿಯಲ್ಲಿ ಮಳೆಕೊಯ್ಲು ಅಭಿಯಾನ ಕುರಿತ ವರದಿಗಳು ಎಚ್ಚರಿಸುತ್ತಿತ್ತು. ಮೋಹನ ಮೈರ ಮಾರ್ಗದರ್ಶನ ನೀಡಿದರು. ಸಂತೋಷ್‌ ಶೆಟ್ಟಿ ಪೆಲ್ತಡ್ಕ, ಶಾಲಾ ಆಡಳಿತ ಮಂಡಳಿಯವರು ಬೆಂಬಲಿಸಿದರು. ಜೇಸಿಐ ಸದಸ್ಯರ ಶ್ರಮಸೇವೆ ಕಾಮಗಾರಿಯನ್ನು ಪೂರೈಸಿತು.
– ಬಾಲಕೃಷ್ಣ ವಿಟ್ಲ, ಅಧ್ಯಕ್ಷರು, ವಿಟ್ಲ ಜೇಸಿಐ

ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.