ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್ ಅವಾರ್ಡ್
Team Udayavani, Jan 21, 2022, 8:10 AM IST
ಬಂಟ್ವಾಳ: ಪುಣಚ ಗ್ರಾಮದ ಮೂಡಂ ಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ವಿಪ್ರೋ ಫೌಂಡೇಶನ್ ನಡೆಸಿದ ವಿಪ್ರೋ ಅರ್ತಿ ಯನ್ ಅವಾರ್ಡ್ 2021-22ನೇ ಸಾಲಿನ ರಾಷ್ಟ್ರ ಮಟ್ಟದ ಯೋಜನಾ ಕಲಿಕಾ ಸ್ಪರ್ಧೆಯ ವಿಜೇತ ಶಾಲೆಗಳ ಪಟ್ಟಿ(ವಿನ್ನಿಂಗ್ ಸ್ಕೂಲ್ಸ್)ಯಲ್ಲಿ ಸ್ಥಾನ ಪಡೆದಿದ್ದು, ರಾಜ್ಯದಿಂದ ಆಯ್ಕೆಯಾದ ಏಕೈಕ ಶಾಲೆ ಎಂಬ ಹೆಗ್ಗಳಿಕೆ ಗಳಿಸಿದೆ.
ಸಂಸ್ಥೆಯು ಶಾಲಾ-ಕಾಲೇಜುಗಳಿಗಾಗಿ ನಡೆಸಿದ ಸುಸ್ಥಿರ ಶಿಕ್ಷಣ ಕಾರ್ಯಕ್ರಮದಲ್ಲಿ ದೇಶದ 20 ಶಾಲೆಗಳನ್ನು ವಿಪ್ರೋ ಅರ್ತಿಯನ್ ನ್ಯಾಶ ನಲ್ ವಿನ್ನರ್ ಎಂದು ಆಯ್ಕೆ ಮಾಡಿದೆ. ಪ್ರಶಸ್ತಿ ಯೊಂದಿಗೆ 50 ಸಾವಿರ ರೂ. ಮೊತ್ತವೂ ಇದೆ. ರಾಷ್ಟ್ರ ಮಟ್ಟದ ಈ ಸ್ಪರ್ಧೆಯಲ್ಲಿ ಪ್ರಾದೇಶಿಕ ಭಾಷೆಯಾದ ಕನ್ನಡದಲ್ಲೇ ತಯಾರಿಸಿದ ಯೋಜನಾ ವರದಿ ಆಯ್ಕೆಯಾಗಿರುವುದು ವಿಶೇಷವಾಗಿದೆ.
ವಿಪ್ರೋ ಫೌಂಡೇಶನ್ ಸುಸ್ಥಿರತೆ ಮತ್ತು ತ್ಯಾಜ್ಯನಿರ್ವಹಣೆ, ಸುಸ್ಥಿರತೆ ಮತ್ತು ನೀರು ಹಾಗೂ ಸುಸ್ಥಿರತೆ ಮತ್ತು ಜೀವವೈವಿಧ್ಯ ಎಂಬ ಮೂರರಲ್ಲಿ ಒಂದು ಅಥವಾ ಹೆಚ್ಚು ವಿಷಯಗಳನ್ನು ಶಾಲೆ
ಗಳು ಆಯ್ಕೆ ಮಾಡಿಕೊಂಡು ಪಾಲ್ಗೊಳ್ಳಬೇಕಿತ್ತು. ಶಾಲೆ ಗಳಲ್ಲಿ ರಾಷ್ಟ್ರೀಯ ಹಸಿರು ಕಾರ್ಯ ಪಡೆಯ ಭಾಗವಾದ ಇಕೋ ಕ್ಲಬ್ ಚಟುವಟಿಕೆ ಮೂಲಕ ಯೋಜನೆಯ ಕಾರ್ಯಚಟುವಟಿಕೆಗಳನ್ನು ನಡೆಸಲಾಗಿತ್ತು.
8ನೇ ತರಗತಿಯ ಆಕಾಶ್, ಕಾರ್ತಿಕ್, ಪ್ರಣಾಮ್, ಪ್ರೀತಂ, 7ನೇ ತರಗತಿಯ ಆದಿತ್ಯ ಮತ್ತು ನಿತೇಶ್, ಶಿಕ್ಷಕರಾದ ಶ್ರುತಿ ಎನ್. ಮತ್ತು ಅರವಿಂದ ಕುಡ್ಲ ಯೋಜನೆಯಲ್ಲಿ ಭಾಗವಹಿಸಿದ್ದರು. ಇತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೂ ಬೆಂಬಲವಾಗಿದ್ದರು.
ಸುಸ್ಥಿರತೆ ಮತ್ತು ಜೀವವೈವಿಧ್ಯ ಆಯ್ಕೆ :
ಈ ಶಾಲೆಯು ಸುಸ್ಥಿರತೆ ಮತ್ತು ತ್ಯಾಜ್ಯ ನಿರ್ವಹಣೆಯ ಯೋಜನೆಯನ್ನು ಆಯ್ಕೆ ಮಾಡಿಕೊಂಡು “ನಮ್ಮ ಕಸ ನಮ್ಮ ಹೊಣೆ, ಸ್ವತ್ಛತೆಗೆ ಹಾಕು ಮಣೆ’ ಎಂಬ ಶೀರ್ಷಿಕೆಯಡಿ ಯೋಜನೆಯಲ್ಲಿ ತೊಡಗಿಕೊಂಡಿದ್ದರು. ನಾವು ಬಳಸಿ ಕಸವಾಗಿ ಎಸೆಯುವ ಸೊತ್ತುಗಳನ್ನು ಬಳಸಿಕೊಂಡು ವಿವಿಧ ಚಟುವಟಿಕೆಗಳನ್ನು ನಿರ್ವಹಿಸಲಾಗಿತ್ತು.
ಕಾಲೊರೆಸುವ ಮ್ಯಾಟ್, ಪೆನ್‌ಸ್ಟಾಂಡ್ ಮತ್ತು ಹೂದಾನಿ, ಬಹು ಉಪಯೋಗಿ ಚೀಲ, ಪ್ಲಾಸ್ಟಿಕ್‌ನಿಂದ ಇಕೋ ಬ್ರಿಕ್, ಹಾರ, ಡಸ್ಟರ್ ಇತ್ಯಾದಿಗಳ ತಯಾರಿ, ಹಳೆಯ ವಸ್ತುಗಳ ವಸ್ತುಗಳ ಸಂಗ್ರಹ ಮತ್ತು ವಿಂಗಡಣೆ, ಎಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹ, ಬಯೋ ಎನ್ಸೆ„ಮ್ ತಯಾರಿ, ಹೊಸ ಪೇಪರ್ ತಯಾರಿ ಹೀಗೆ ಹಲವು ರಚನೆಗಳನ್ನು ಮಾಡಿದ್ದರು. ಜತೆಗೆ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಿದ್ದರು.
ಬಜಪೆಯ ಸಂಸ್ಥೆಗೂ ಸ್ಥಾನ:
ಸ್ಪರ್ಧೆಯಲ್ಲಿ ದೇಶದ ಸುಮಾರು 20 ಶಾಲೆಗಳನ್ನು ಶಾರ್ಟ್ ಲಿಸ್ಟೆಡ್ ಟೀಮ್ಸ್ ಎಂದು ಆಯ್ಕೆ ಮಾಡಿದ್ದು, ಅದರಲ್ಲಿ ಬಜಪೆಯ ಸೈಂಟ್ ಜೋಸೆಫ್ಸ್ ಪ.ಪೂ. ಕಾಲೇಜು ಸ್ಥಾನ ಪಡೆದಿದೆ.
ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು, ಮಕ್ಕಳ ಪೋಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಇದರಿಂದ ಮಕ್ಕಳ ಕಲಿಕಾ ಸಾಮರ್ಥ್ಯವೂ ವೃದ್ಧಿಯಾಗಿದೆ. ಕಲಿಕಾ ನ್ಯೂನತೆಗಳನ್ನು ದಾಟಿ ಮುಂದೆ ಬರಲು ವಿಪ್ರೋ ಅರ್ತಿಯನ್ ಸಹಕಾರಿಯಾಗಿದೆ. –ಅರವಿಂದ ಕುಡ್ಲ,ಮುಖ್ಯ ಶಿಕ್ಷಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ
ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು
ಬಂಟ್ವಾಳ: ಅಜ್ಜಿ ಮನೆಗೆಂದು ಹೋದ ತಾಯಿ, ಮಗ ನಾಪತ್ತೆ
ಐವರ್ನಾಡು: ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ವಾಹನ ಪಲ್ಟಿ
ಕಡೆಗೋಳಿ: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ
MUST WATCH
ಹೊಸ ಸೇರ್ಪಡೆ
ಮೇ 27: ಮೊಗರಿನಲ್ಲಿ ದ.ಕ. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ
ಕಾಳ್ಗಿಚ್ಚಿನಿಂದ ನೆಲಬಾಂಬ್ಗಳ ಸ್ಫೋಟ : ಧರಮ್ಶಾಲಾದಲ್ಲಿ ನಡೆದ ಘಟನೆ
ನೌಕಾ ನಿಗ್ರಹ ಕ್ಷಿಪಣಿಯ ಚೊಚ್ಚಲ ಪರೀಕ್ಷೆ ಯಶಸ್ವಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕ್ಷಿಪಣಿ
ಯು.ಕೆ. ಹಣದುಬ್ಬರ ಪ್ರಮಾಣ ಶೇ.9ಕ್ಕೇರಿಕೆ! 40 ವರ್ಷಗಳಲ್ಲಿ ಕಾಣದಂಥ ಏರಿಕೆ
ರೋಚಕ ಜಯ ಸಾಧಿಸಿದ ಲಕ್ನೋ ಜೈಂಟ್ಸ್ ಪ್ಲೇಆಫ್ ಗೆ ಖಚಿತ