ಕಷ್ಟಕ್ಕೆ ಮಿಡಿಯುವ ಆಪತ್ಭಾಂಧವ ಆಸಿಫ್!

Humanity rises from the dead body of a Kovid infected

Team Udayavani, Oct 5, 2020, 9:43 PM IST

ಕಷ್ಟಕ್ಕೆ ಮಿಡಿಯುವ ಆಪತ್ಭಾಂಧವ ಆಸಿಫ್!

ಶವ ಮೇಲಕ್ಕೆತ್ತಲು ಆಸಿಫ್ ಅವರು ಬಾವಿಗಿಳಿಯುತ್ತಿರುವುದು.

ಕಾರ್ಕಳ: ಕೋವಿಡ್ ಮನುಷ್ಯತ್ವದ ಪರೀಕ್ಷೆ ಮಾಡುತ್ತಿದೆ. ಕೊರೊನಾದಿಂದ ತಮ್ಮವರೇ, ತಮಗೆ ಬೇಕಾದವರೇ ಮೃತಪಟ್ಟರೂ ಯಾರೂ ಹತ್ತಿರ ಸುಳಿದಾಡುವುದಿಲ್ಲ. ಇಂತಹ ವಿಚಿತ್ರ ಸನ್ನಿವೇಶದಲ್ಲಿ ಇಲ್ಲೊಬ್ಬರು ಕೋವಿಡ್ ಸೋಂಕಿತ ವ್ಯಕ್ತಿಯ ಶವವನ್ನು ಬಾವಿಯಿಂದ ಮೇಲಕ್ಕೆತ್ತಿ ಮಾನವೀಯತೆ ಜತೆಗೆ ಹೃದಯ ವೈಶಾಲ್ಯ ಮೆರೆದಿದ್ದಾರೆ. ಅವರೇ ಮಂಗಳೂರು ನಿವಾಸಿ ಆಸಿಫ್. ಆಪತ್ಭಾಂಧವ ಆಸಿಫ್ ಎಂದೇ ಅವರು ಉಭಯ ಜಿಲ್ಲೆಯಲ್ಲಿ ಹೆಸರುವಾಸಿ.

ಕಾರ್ಕಳದ ಮಾರುಕಟ್ಟೆ ಮಾರ್ಗ ನಿವಾಸಿ ವೀಡಿಯೋ ಗ್ರಾಫ‌ರ್‌ ಪ್ರಸನ್ನ (45) ಅವರು 2 ದಿನಗಳ ಹಿಂದೆಯಷ್ಟೇ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೋವಿಡ್‌ ತಪಾಸಣೆ ವೇಳೆ ವರದಿ ಪಾಸಿಟಿವ್‌ ಬಂದಿದ್ದರಿಂದ ಮನನೊಂದು ಅವರು ಈ ಕೃತ್ಯ ಮಾಡಿಕೊಂಡಿದ್ದರು. ಸೋಂಕಿತ ವ್ಯಕ್ತಿಯ ಶವವನ್ನು ಬಾವಿಯಿಂದ ಮೇಲೆತ್ತುವುದು ತಾ| ಆಡಳಿತಕ್ಕೆ ಮತ್ತು ಪೊಲೀಸ್‌ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಸ್ಥಳೀಯರು, ಪೊಲೀಸ್‌, ಅಗ್ನಿಶಾಮಕ ದಳ ಹೀಗೆ ಎಲ್ಲರೂ ಸ್ಥಳದಲ್ಲಿದ್ದರು. ಆದರೆ ಸೋಂಕಿತ ಶವ ಮೇಲಕ್ಕೆತ್ತುವ ಧೈರ್ಯ ಹಾಗೂ ಮನಸ್ಸು ಅವರ್ಯಾರಿಗೂ ಬಂದಿರಲಿಲ್ಲ. ಇದೇ ವೇಳೆ ಅಲ್ಲಿದ್ದ ಅಧಿಕಾರಿಗಳ ಕಣ್ಣಿಗೆ ಕಂಡಿದ್ದು ಆಪತ್ಭಾಂಧವ ಮಂಗಳೂರಿನ ನಿವಾಸಿ ಆಸಿಫ್ ಅವರು.

ತಹಶೀದ್ದಾರ್‌ ಪುರಂದರ ಹೆಗ್ಡೆ ಅವರು ಮೂಲ್ಕಿ ಕಾರ್ನಾಡು ಮೈಮೂನಾ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಸ್ಥಾಪಕ ಆಸಿಫ್ ಆಪತ್ಭಾಂಧವ ಅವರಿಗೆ ಕರೆ ಮಾಡಿ ಸಹಾಯ ಕೋರಿದ್ದರು. ತತ್‌ಕ್ಷಣವೇ ಮಂಗಳೂರಿನಿಂದ ಆಗಮಿಸಿದ ಆಸಿಫ್ ಸ್ಥಳೀಯರ ನೆರವಿನಿಂದ ಬಾವಿಗಿಳಿದು ಕೈಯಲ್ಲಿಯೇ ಶವ ಮೇಲಕ್ಕೆತ್ತಿದರು. ಬಳಿಕ ಸ್ಯಾನಿಟೈಸರ್‌, ಸೋಪ್‌ಗ್ಳನ್ನು ಬಳಸಿ ಸ್ನಾನ ಮಾಡಿ ಶುಚಿಯಾದರು. ಅವರ ಮಾನವೀಯತೆ, ಹೃದಯ ವೈಶಾಲ್ಯತೆಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತಗೊಂಡಿತ್ತು. ಯಾವುದೇ ಸಂಭಾವನೆ, ಫ‌ಲಾಪೇಕ್ಷೆ ಪಡೆಯದೆ ಈ ಸೇವೆಯನ್ನು ಉಚಿತವಾಗಿ ನೀಡಿದ್ದರು.

ಆಸಿಫ್ ಈ ಹಿಂದೆ ಸುರತ್ಕಲ್‌ನಲ್ಲಿ ಸೋಂಕಿತ ವ್ಯಕ್ತಿಯನ್ನು ಆತ ವಾಸವಿದ್ದ ಪ್ಲಾಟ್‌ನಿಂದ ಎತ್ತಿಕೊಂಡು ಬಂದಿದ್ದರು. ಅಷ್ಟೇ ಅಲ್ಲ ಮಂಗಳೂರು ಹಾಗೂ ಸುತ್ತಮುತ್ತ ಯಾರಿಗೂ ಎಷ್ಟೇ ಕಷ್ಟ ಎದುರಾದರೂ ತತ್‌ಕ್ಷಣಕ್ಕೆ ಆಸಿಫ್ ಧಾವಿಸಿ ಬರುತ್ತಾರೆ. ರಸ್ತೆ ಬದಿ ಅನಾಥವಾಗಿ ಇದ್ದ ಅದೆಷ್ಟೋ ಮಂದಿಯನ್ನು ಸ್ವತಃ ಆರೈಕೆ ಮಾಡಿ, ಚಿಕಿತ್ಸೆ ಕೊಡಿಸಿ ಸಂರಕ್ಷಿಸಿ ಮನೆ ಹಾಗೂ ಆಶ್ರಮಗಳಿಗೆ ಸೇರಿಸುತ್ತಾರೆ. ಆಸ್ಪತ್ರೆಯಲ್ಲಿ ಬಿಲ್‌ ಕಟ್ಟಲಾಗದೆ ತೊಂದರೆ ಅನುಭವಿಸುತ್ತಿರುವ ಬಡವರಿಗೆ ದಾನಿಗಳಿಂದ ಹಣ ಸಂಗ್ರಹಿಸಿ ನೆರವಾಗುತ್ತಾರೆ. ಬಡವರ ಕಣ್ಣೀರು ಒರೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಕಷ್ಟ ಕಾಲದಲ್ಲಿ ಜನರಿಗೆ ದೇವರಂತೆ ಬಂದು ಸಹಾಯ ಮಾಡುವ ಅವರ ಗುಣ ಶ್ಲಾಘನೆಗೆ ಕಾರಣವಾಗಿದೆ. ಇದು ದೇವರಿಗೆ ಇಷ್ಟವಾದ ಕೆಲಸ ಎಂದು ಮಾಡುತ್ತೇನೆ ಎಂಬುದು ಆಸಿಫ್ ಅವರ ಮಾತು. ಕೊರೊನಾ ಸೋಂಕಿತ ವ್ಯಕ್ತಿಯ ಶವವನ್ನು ಬಾವಿಯಿಂದ ಮೇಲಕ್ಕೆತ್ತುವುದು ದೊಡ್ಡ ಸವಾಲಾಗಿತ್ತು. ವ್ಯಕ್ತಿ ಸೋಂಕಿತ ಎನ್ನುವುದೇ ಇದಕ್ಕೆ ಕಾರಣವಾಗಿತ್ತು. ಆಗ ಮುಂದೆ ಬಂದವರು ಆಸಿಫ್. ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ತಹಶೀಲ್ದಾರ್‌ ಪುರಂದರ ಹೆಗ್ಡೆ ಅವರ ಸೇವೆಯನ್ನು ಸ್ಮರಿಸಿಕೊಂಡರು.

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.