ರಸ್ತೆಯ ಇಕ್ಕೆಲಗಳಲ್ಲಿ ಕಸ: ಕಡಿವಾಣಕ್ಕೆ ಆಗ್ರಹ

Team Udayavani, Jun 3, 2020, 5:18 AM IST

ರಸ್ತೆಯ ಇಕ್ಕೆಲಗಳಲ್ಲಿ ಕಸ: ಕಡಿವಾಣಕ್ಕೆ ಆಗ್ರಹ

ಮಲ್ಪೆ: ಸ್ವಚ್ಛತೆಗೆ ಆಡಳಿತ ಹಗಲಿರುಳು ಶ್ರಮಿಸುತ್ತಿದ್ದರೂ, ರಸ್ತೆ ಬದಿ ತ್ಯಾಜ್ಯ ಎಸೆಯುವ, ಎಲ್ಲೆಂದರಲ್ಲಿ ತ್ಯಾಜ್ಯ ಸುರಿದು ಹೋಗುವ ಪ್ರವೃತ್ತಿ ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವುದು ನಗರ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವುದರ ಜತೆಗೆ ಮಳೆಗಾಲದಲ್ಲಿ ರೋಗ ಭೀತಿ ಉಂಟು ಮಾಡಿದೆ.

ಕೊಳೆತ ತ್ಯಾಜ್ಯಗಳನ್ನು ನಾಯಿಗಳು, ಕಾಗೆಗಳು ತಿನ್ನುತ್ತ ಎಲ್ಲೆಡೆ ಎಸೆಯುತ್ತಿವೆ. ಲಾಕ್‌ಡೌನ್‌ ಆರಂಭದಲ್ಲಿ ವಾಹನ ಮತ್ತು ಜನರ ಓಡಾಟ ಕಡಿಮೆ ಇದ್ದಿದ್ದರಿಂದ ರಸ್ತೆ ಬದಿಯಲ್ಲಿ ತ್ಯಾಜ್ಯಗಳು ಎಸೆಯುವಿಕೆ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿತ್ತು. ಲಾಕ್‌ಡೌನ್‌ ಸಡಿಲಿಕೆಯಾದ ದಿನದಿಂದ ಮತ್ತೆ ಕಸದ ರಾಶಿಗಳು ರಾರಾಜಿಸಲಾರಂಭಿಸಿದ್ದು, ರಸ್ತೆ ಬದಿ ಕಸ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆದಿವುಡುಪಿ ಸಂತೆ ಮಾರುಕಟ್ಟೆಯ ಹೊರೆಗೆ, ಪಂದುಬೆಟ್ಟು ಮಸೀದಿ ಎದುರು, ಪಂದುಬೆಟ್ಟುವಿನಿಂದ ಕಲ್ಮಾಡಿ ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ, ಕೊಡವೂರು ಜೇಮ್ಸ್‌ ಕಂಪೌಂಡ್‌-ಪಡ್ಲನೆರ್ಗಿ ಜಂಕ್ಷನ್‌, ಕಿದಿಯೂರು ಮಜ್ಜಿಗೆ ಪಾದೆ ಬಳಿ, ಕನ್ನರ್ಪಾಡಿ ರಸ್ತೆ, ಲಕ್ಷ್ಮೀನಗರ ಮುಖ್ಯ ರಸ್ತೆಯ ಇಕ್ಕೆಲ, ಕೆಳಾರ್ಕಳಬೆಟ್ಟು ಪೊಟ್ಟುಕರೆ ರಸ್ತೆ ಬದಿ ಕಸ ಎಸೆಯಲಾಗುತ್ತಿದೆ.

ಎಚ್ಚರಿಕೆಗೆ ಬೆಲೆಯೇ ಇಲ್ಲ
ತ್ಯಾಜ್ಯ ಎಸೆಯುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರೂ, ಕಸವನ್ನು ಎಸೆದು ಹೋಗುತ್ತಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಪ್ರತಿದಿನ ಮನೆ ಮನೆಗೆ ಭೇಟಿ ನೀಡಿ ಕಸ ತೆಗೆದುಕೊಂಡು ಹೋಗುತ್ತಾರೆ. ಆದರೆ ನಗರಸಭೆಗೆ ಹೊಂದಿಕೊಂಡಿರುವ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಕಸ ವಿಲೇಗೆ ಯಾರೂ ಬರುತ್ತಿಲ್ಲ. ಹಾಗಾಗಿ ಅತ್ತ ನಗರಸಭೆಯೂ ಇಲ್ಲ. ಇತ್ತ ಗ್ರಾ.ಪಂ. ಕೂಡ ಇಲ್ಲದೆ ಅತಂತ್ರರಾಗಿದ್ದೇವೆ ಎನ್ನುತ್ತಾರೆ ಅವರು.

ನಿರ್ದಾಕ್ಷಿಣ್ಯ ಕ್ರಮ ಅಗತ್ಯ
ಸಂಬಂಧಪಟ್ಟ ಆಡಳಿತ ಎರಡು ಮೂರು ದಿನಗಳಿಗೆ ಕಸವನ್ನು ತೆರವುಗೊಳಿಸಿದರೂ ಮಾರನೇ ದಿನವೇ ಅಷ್ಟೆ ಎತ್ತರದಲ್ಲಿ ಕಸದ ರಾಶಿ ಪ್ರತ್ಯಕ್ಷವಾಗುತ್ತದೆ. ಕೊಡವೂರು ಜೇಮ್ಸ್‌ ಕೌಂಪೌಂಡ್‌-ಪಡ್ಲನೆರ್ಗಿ ಜಂಕ್ಷನ್‌ ಬಳಿ ಕಣ್ಣೆದುರೆ ರಾಜಾರೋಷವಾಗಿ ಕಸ ಎಸೆದು ಹೋಗುತ್ತಾರೆ. ರಸ್ತೆಗಳು ಕಸ ವಿಲೇವಾರಿ ಸ್ಥಳಗಳಾಗಿ ಮಾರ್ಪಟ್ಟಿವೆ. ಕಸ ಎಸೆಯವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
– ಪ್ರಶಾಂತ್‌ ಸನಿಲ್‌,
ಜೇಮ್ಸ್‌ ಕಂಪೌಂಡ್‌, ಸ್ಥಳೀಯರು

ಟಾಪ್ ನ್ಯೂಸ್

ಯಮುನೋತ್ರಿ ಹೆದ್ದಾರಿಯ ಸುರಕ್ಷಾ ಗೋಡೆ ಕುಸಿತ: 10 ಸಾವಿರ ಪ್ರವಾಸಿಗರ ಪರದಾಟ

ಯಮುನೋತ್ರಿ ಹೆದ್ದಾರಿಯ ಸುರಕ್ಷಾ ಗೋಡೆ ಕುಸಿತ: 10 ಸಾವಿರ ಪ್ರವಾಸಿಗರ ಪರದಾಟ

ತೀರ್ಥಹಳ್ಳಿ: ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಪೊಲೀಸರ ದಾಳಿ

ತೀರ್ಥಹಳ್ಳಿ: ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಪೊಲೀಸರ ದಾಳಿ

ಸಾಯಿ ಲೇಔಟ್‌ ನಿವಾಸಿಗಳಿಗೆ ಭವಿಷ್ಯದ ಚಿಂತೆ

ಸಾಯಿ ಲೇಔಟ್‌ ನಿವಾಸಿಗಳಿಗೆ ಭವಿಷ್ಯದ ಚಿಂತೆ

5death

ಪ್ರಿಯತಮೆಯ ಆತ್ಮಹತ್ಯೆಯಿಂದ ಮನನೊಂದು ಪ್ರಿಯತಮ ಆತ್ಮಹತ್ಯೆ

ಕಟ್ಟಿಂಗ್ ಶಾಪ್ ಚಿತ್ರವಿಮರ್ಶೆ: ಅಡ್ಡ ಕತ್ತರಿಯಲ್ಲಿ ‘ಸಂಕಲನ’ಕಾರನ ಜೀವನ ಚಿತ್ರಣ

ಕಟ್ಟಿಂಗ್ ಶಾಪ್ ಚಿತ್ರವಿಮರ್ಶೆ: ಅಡ್ಡ ಕತ್ತರಿಯಲ್ಲಿ ‘ಸಂಕಲನ’ಕಾರನ ಜೀವನ ಚಿತ್ರಣ

ಎಚ್. ವಿಶ್ವನಾಥ್

ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ: ಎಚ್. ವಿಶ್ವನಾಥ್

ರೋಣ: ಧಾರಾಕಾರ ಮಳೆಗೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಬೆಣ್ಣಿಹಳ್ಳ; ಪ್ರವಾಹ ಭೀತಿ

ರೋಣ: ಧಾರಾಕಾರ ಮಳೆಗೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಬೆಣ್ಣಿಹಳ್ಳ; ಪ್ರವಾಹ ಭೀತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ

ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ

ನೆರೆಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ನೆರೆಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಉಡುಪಿ: ದೈವಗಳ ಸೊತ್ತು ಕಳವು ಆರೋಪಿ ಬಂಧನ

ಉಡುಪಿ: ದೈವಗಳ ಸೊತ್ತು ಕಳವು ಆರೋಪಿ ಬಂಧನ

ಸಿಆರ್‌ಝಡ್‌ ಮರಳು ಮಾರುವಂತಿಲ್ಲ: ರಾಷ್ಟ್ರೀಯ ಹಸುರು ಪೀಠ ಆದೇಶ

ಸಿಆರ್‌ಝಡ್‌ ಮರಳು ಮಾರುವಂತಿಲ್ಲ: ರಾಷ್ಟ್ರೀಯ ಹಸುರು ಪೀಠ ಆದೇಶ

ವರದಿ ಪಡೆದು ಅಭ್ಯರ್ಥಿ ಆಯ್ಕೆ: ಡಿ.ಕೆ. ಶಿವಕುಮಾರ್‌

ವರದಿ ಪಡೆದು ಅಭ್ಯರ್ಥಿ ಆಯ್ಕೆ: ಡಿ.ಕೆ. ಶಿವಕುಮಾರ್‌

MUST WATCH

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಹೈನುಗಾರಿಕೆ ಯಶಸ್ಸು ಕಾಣಲು ಇಲ್ಲಿದೆ formula!

udayavani youtube

ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ 9 ಮಂದಿ ಸಿಲುಕಿರುವ ಶಂಕೆ

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

ಹೊಸ ಸೇರ್ಪಡೆ

ಯಮುನೋತ್ರಿ ಹೆದ್ದಾರಿಯ ಸುರಕ್ಷಾ ಗೋಡೆ ಕುಸಿತ: 10 ಸಾವಿರ ಪ್ರವಾಸಿಗರ ಪರದಾಟ

ಯಮುನೋತ್ರಿ ಹೆದ್ದಾರಿಯ ಸುರಕ್ಷಾ ಗೋಡೆ ಕುಸಿತ: 10 ಸಾವಿರ ಪ್ರವಾಸಿಗರ ಪರದಾಟ

ತೀರ್ಥಹಳ್ಳಿ: ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಪೊಲೀಸರ ದಾಳಿ

ತೀರ್ಥಹಳ್ಳಿ: ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಪೊಲೀಸರ ದಾಳಿ

fertilizers

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ

ಬೆಣ್ಣೆಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ರಕ್ಷಣೆ

ಬೆಣ್ಣೆಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ರಕ್ಷಣೆ

ಸಾಯಿ ಲೇಔಟ್‌ ನಿವಾಸಿಗಳಿಗೆ ಭವಿಷ್ಯದ ಚಿಂತೆ

ಸಾಯಿ ಲೇಔಟ್‌ ನಿವಾಸಿಗಳಿಗೆ ಭವಿಷ್ಯದ ಚಿಂತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.