ಕಟಪಾಡಿ-ಮಣಿಪುರ ಸಂಪರ್ಕ ರಸ್ತೆ; ಮೇಲ್ಸೇತುವೆ ಬಳಿ ತಡೆಬೇಲಿ ಅಳವಡಿಕೆ

Team Udayavani, Aug 8, 2022, 3:56 PM IST

12

ಕಟಪಾಡಿ: ಮಣಿಪುರ- ಕಟಪಾಡಿ ಸಂಪರ್ಕದ ಪ್ರಮುಖ ರಸ್ತೆಯೊಂದರ ಮಣಿಪುರ ಹೊಳೆಯ ಮೇಲ್ಸೇತುವೆ ಬಳಿ ಸುರಕ್ಷತೆಗಾಗಿ ಲೋಕೋಪಯೋಗಿ ಇಲಾಖೆಯು ಒಂದು ಪಾರ್ಶ್ವದಲ್ಲಿ ತಡೆಬೇಲಿ (ಕ್ರಾಸ್‌ ಬ್ಯಾರಿಯರ್‌) ಅಳವಡಿಸಿದೆ.

2 ಕೋಟಿ ರೂ. ಅನುದಾನದಲ್ಲಿ ಪೇವರ್‌ ಫಿನಿಶಿಂಗ್‌ ಕಂಡಿದ್ದ ಕಟಪಾಡಿ, ಮಣಿಪುರ, ದೆಂದೂರುಕಟ್ಟೆ ಸಹಿತ ಇತರೇ ಪ್ರಮುಖ ಊರುಗಳನ್ನು ಸಂಪರ್ಕಿಸುವ ಈ ರಸ್ತೆಯು ಸದಾ ವಾಹನ ನಿಬಿಡ, ಜನ ಸಂಚಾರ ದಟ್ಟಣೆ ಹೊಂದಿದೆ. ಪ್ರಯಾಣಿಕರ ಬಸ್‌ ಕೂಡ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಮಣಿಪುರ ಹೊಳೆಯ ಮೇಲ್ಸೇತುವೆ ಬಳಿಯಲ್ಲಿ ಇಳಿಜಾರು ಪ್ರದೇಶವಾಗಿದ್ದು, ಅಪಾಯಕಾರಿ ತಿರುವು ಕೂಡ ಹೊಂದಿತ್ತು. ಹೊಳೆಯ ಭಾಗಕ್ಕೆ ರಸ್ತೆಯು ತೆರೆದುಕೊಂಡಂತಿತ್ತು.

ಅಗಲ ಕಿರಿದಾದ ಈ ಸೇತುವೆಯ ಪ್ರದೇಶದಲ್ಲಿ ವೇಗವಾಗಿ ವಾಹನಗಳು ಸಂಚರಿಸುವ ಸಂದರ್ಭ ವಾಹನಗಳು ಎದುರು ಬದುರಾದ ಸಮಯದಲ್ಲಿ ಆಕಸ್ಮಿಕವಾಗಿ ಸ್ವಲ್ಪ ಆಯ ತಪ್ಪಿದರೂ ಹೊಳೆಯ ಭಾಗದ ಪ್ರಪಾತಕ್ಕೆ ಅಥವಾ ಹೊಳೆಗೆ ಉರುಳಿ ಬೀಳುವ ಅಪಾಯ ಹೆಚ್ಚಿದೆ. ಪಾದಚಾರಿಗಳು ಇದೇ ಇಕ್ಕಟ್ಟಿನಲ್ಲಿ ಸಿಲುಕಿಕೊಂಡರೂ ಮತ್ತಷ್ಟು ಹೆಚ್ಚಿನ ಅಪಾಯದ ಸಾಧ್ಯತೆ ಇದೆ ಎಂದು ಉದಯವಾಣಿಯು 2021ರ ಅ. 1ರಂದು ಜನಪರ ಕಾಳಜಿಯ ವರದಿಯನ್ನು ಪ್ರಕಟಿಸಿತ್ತು.

2022ರ ಜು. 22ರಂದು ಈ ಭಾಗದಲ್ಲಿ ನಡೆದ ಅಪಘಾತದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದು ದ್ವಿಚಕ್ರ ವಾಹನ, ಸವಾರ ಗಾಯಗೊಳ್ಳುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದ ಬಗ್ಗೆ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹವನ್ನು ಉದಯವಾಣಿಯು ಲೋಕೋಪಯೋಗಿ ಇಲಾಖೆಯ ಎ.ಇ.ಇ. ಹಾಗೂ ಎಂಜಿನಿಯರ್‌ ಅವರ ಗಮನಕ್ಕೆ ತಂದಿದ್ದು, ಜು.25ರಂದು ಕೂಡ ಉದಯವಾಣಿಯು ಸಚಿತ್ರ ವರದಿ ಪ್ರಕಟಿಸಿತ್ತು.

ಇದೀಗ ಎಚ್ಚೆತ್ತ ಇಲಾಖೆಯು ಸೂಕ್ತ ಕ್ರಮ ಕೈಗೊಂಡು ಸುರಕ್ಷತೆಯನ್ನು ಕಲ್ಪಿಸಿದ್ದು, ವಾಹನ ಸವಾರರು, ಸಾರ್ವಜನಿಕರು ಉದಯವಾಣಿ, ಇಲಾಖೆಯ ಅಧಿಕಾರಿ ಗಳಿಗೆ ಕೃತಜ್ಞತೆ ಸಲ್ಲಿಸಿದ್ದು, ಸೇತುವೆಯ ಇನ್ನುಳಿದ ಮೂರು ಪ್ರದೇಶ ದಲ್ಲಿಯೂ ತಡೆಬೇಲಿ ಅಳವಡಿಸಿ ಮತ್ತಷ್ಟು ಸುವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

ನೊಬೆಲ್‌ ಮಾದರಿಯಲ್ಲಿ “ವಿಜ್ಞಾನ ರತ್ನ’ ಪ್ರಶಸ್ತಿ?

ನೊಬೆಲ್‌ ಮಾದರಿಯಲ್ಲಿ “ವಿಜ್ಞಾನ ರತ್ನ’ ಪ್ರಶಸ್ತಿ?

ಮಧುಗಿರಿ: ಆಟೋ ತಲೆ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಸಾವು

ಮಧುಗಿರಿ: ಆಟೋ ತಲೆ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಸಾವು

ಪಿಎಫ್ಐ ಮೇಲೆ ದಾಳಿ: ಜನರ ಮುಂದೆ ದಾಳಿಯ ಸತ್ಯಾಂಶ ಇಡಬೇಕು; ಹೆಚ್.ಡಿ.ಕುಮಾರಸ್ವಾಮಿ

ಪಿಎಫ್ಐ ಮೇಲೆ ದಾಳಿ: ಜನರ ಮುಂದೆ ದಾಳಿಯ ಸತ್ಯಾಂಶ ಇಡಬೇಕು; ಹೆಚ್.ಡಿ.ಕುಮಾರಸ್ವಾಮಿ

ಪುಳಕಿತ್ ರೆಸಾರ್ಟ್ ವೇಶ್ಯಾವಾಟಿಕೆ ಮತ್ತು ಡ್ರಗ್ಸ್ ದಂಧೆಯ ಅಡ್ಡೆಯಾಗಿತ್ತು; ಮಾಜಿ ಉದ್ಯೋಗಿ

ಪುಳಕಿತ್ ರೆಸಾರ್ಟ್ ವೇಶ್ಯಾವಾಟಿಕೆ ಮತ್ತು ಡ್ರಗ್ಸ್ ದಂಧೆಯ ಅಡ್ಡೆಯಾಗಿತ್ತು; ಮಾಜಿ ಉದ್ಯೋಗಿ

ತಾಕತ್ತಿದ್ದರೆ ಕೆಂಪಣ್ಣ ಲೋಕಾಯುಕ್ತಕ್ಕೆ ದೂರು ನೀಡಲಿ: ಕಾರಜೋಳ

ತಾಕತ್ತಿದ್ದರೆ ಕೆಂಪಣ್ಣ ಲೋಕಾಯುಕ್ತಕ್ಕೆ ದೂರು ನೀಡಲಿ: ಕಾರಜೋಳ

Matthew Wade set to be named Australia’s captain for T20 World Cup

ಗಾಯಗೊಂಡ ಫಿಂಚ್; ಟಿ20 ವಿಶ್ವಕಪ್ ಗೆ ಆಸ್ಟ್ರೇಲಿಯಾಗೆ ಹೊಸ ನಾಯಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ : ಎಸೆಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ ಬಂದಿರುವ 51 ಟಾಪರ್‌ಗಳಿಗೆ ಲ್ಯಾಪ್‌ಟಾಪ್‌

ಉಡುಪಿ : ಎಸೆಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ ಬಂದಿರುವ 51 ಟಾಪರ್‌ಗಳಿಗೆ ಲ್ಯಾಪ್‌ಟಾಪ್‌

ಡಿಸೆಂಬರ್‌ನಿಂದ ಅಂಗನವಾಡಿಯಲ್ಲಿ ಎನ್‌ಇಪಿ ಜಾರಿ: ಕಾರ್ಯಕರ್ತೆಯರಿಗೆ ತರಬೇತಿ ಇನ್ನೂ ನೀಡಿಲ್ಲ

ಡಿಸೆಂಬರ್‌ನಿಂದ ಅಂಗನವಾಡಿಯಲ್ಲಿ ಎನ್‌ಇಪಿ ಜಾರಿ: ಕಾರ್ಯಕರ್ತೆಯರಿಗೆ ತರಬೇತಿ ಇನ್ನೂ ನೀಡಿಲ್ಲ

6

ಉಚ್ಚಿಲ ದಸರಾಕ್ಕೆ ಚಾಲನೆ; ನವದುರ್ಗೆಯರು, ಶಾರದಾ ಪ್ರತಿಷ್ಠೆ

4

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

ಕಾಮಾಗಾರಿಗೆ ಅಡಿಗಲ್ಲು ಸಮಾರಂಭ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮಧ್ಯ ಮಾರಮಾರಿ

ಕಾಮಾಗಾರಿಗೆ ಅಡಿಗಲ್ಲು ಸಮಾರಂಭ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮಧ್ಯ ಮಾರಮಾರಿ

ನೊಬೆಲ್‌ ಮಾದರಿಯಲ್ಲಿ “ವಿಜ್ಞಾನ ರತ್ನ’ ಪ್ರಶಸ್ತಿ?

ನೊಬೆಲ್‌ ಮಾದರಿಯಲ್ಲಿ “ವಿಜ್ಞಾನ ರತ್ನ’ ಪ್ರಶಸ್ತಿ?

ಗಂಗಾವತಿ: ಹಿಂದೂ ಧರ್ಮ ಹಾಗೂ ಸಂವಿಧಾನದ ಬಗ್ಗೆ ಅವಹೇಳನ; ಬಿಎ ಪಾಠ ಕೈಬಿಡುವಂತೆ  ಆಗ್ರಹ

ಗಂಗಾವತಿ: ಹಿಂದೂ ಧರ್ಮ ಹಾಗೂ ಸಂವಿಧಾನದ ಬಗ್ಗೆ ಅವಹೇಳನ; ಬಿಎ ಪಾಠ ಕೈಬಿಡುವಂತೆ  ಆಗ್ರಹ

ಮಧುಗಿರಿ: ಆಟೋ ತಲೆ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಸಾವು

ಮಧುಗಿರಿ: ಆಟೋ ತಲೆ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.