
ಆನ್‌ಲೈನ್‌ನಲ್ಲಿ ಉದ್ಯೋಗದ ಆಮಿಷ: ಲಕ್ಷಾಂತರ ರೂ. ವಂಚನೆ
Team Udayavani, Mar 21, 2023, 5:50 AM IST

ಉಡುಪಿ: ಆನ್‌ಲೈನ್‌ನಲ್ಲಿ ಉದ್ಯೋಗದ ಆಮಿಷ ಒಡ್ಡಿ ವ್ಯಕ್ತಿಯೋರ್ವರಿಗೆ ವಂಚಿಸಿದ ಘಟನೆ ನಡೆದಿದೆ.
ಮಾಧವಿ ಅವರು ಉದ್ಯೋಗನ್ವೆಷಣೆಯಲ್ಲಿರುವಾಗ ಮಾ. 15ರಂದು ವಾಟ್ಸ್ ಆ್ಯಪ್‌ನಲ್ಲಿ ಅಪರಿತನೊಬ್ಬ ಆನ್‌ಲೈನ್‌ನಲ್ಲಿ ಪಾರ್ಟ್ ಟೈಮ್ ಕೆಲಸ ಕೊಡಿಸುವುದಾಗಿ ನಂಬಿಸಿ ಮಾ. 15ರಿಂದ ಮಾ. 20ರವರೆಗೆ 2,52,600 ರೂ.ಗಳನ್ನು ಆರೋಪಿಯ ವಿವಿಧ ಖಾತೆಗಳಿಗೆ ಜಮೆ ಮಾಡಿಸಿಕೊಂಡು ಉದ್ಯೋಗ ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇ ಸಿಗರೇಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ವಶಕ್ಕೆ
ಉಡುಪಿ: ಮಣಿಪಾಲದ ಅಂಗಡಿಯೊಂದರಲ್ಲಿ ಇ ಸಿಗರೇಟ್ ಮಾರಾಟ ಮಾಡುತ್ತಿದ್ದ ಗುಂಡಿಬೈಲಿನ ಸುಬ್ರಹ್ಮಣ್ಯ ಪ್ರಭು (43) ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಲವಾರು ಬ್ರ್ಯಾಂಡ್‌ಗಳುಳ್ಳ ಒಟ್ಟು 6,000 ರೂ. ಮೌಲ್ಯದ ಇ ಸಿಗರೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
