ಸ್ವಾತಂತ್ರ್ಯಪೂರ್ವೋತ್ತರದ ಸಾಕ್ಷೀಪ್ರಜ್ಞೆಗೊಂದು ನಮನ

Team Udayavani, Dec 30, 2019, 7:30 AM IST

bg-68

ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನ ಮತ್ತು ಅನಂತರದ ಕಾಲಘಟ್ಟಗಳನ್ನು ಕಣ್ಣಾರೆ ಕಂಡ, ಹಳೆಯ ತಲೆಮಾರಿನ ಕೊಂಡಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಇಹಲೋಕ ತ್ಯಜಿಸಿದ್ದಾರೆ.

ತೀರಾ ಹಿಂದಿನ ಸಂಪ್ರದಾಯಸ್ಥರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಹಿರಿಯ ಮುತ್ಸದ್ದಿ ರಾಜಕಾರಣಿಗಳು, ಹೀಗೆ ಅನೇಕಾನೇಕ ಮಾದರಿ ವ್ಯಕ್ತಿತ್ವದವರನ್ನು ಸ್ವಾಮಿಗಳಾಗಿಯೂ ಕಂಡು ಅವರವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಅಪರೂಪದ ಸಂತರಲ್ಲಿ ಒಬ್ಬರು ಶ್ರೀಗಳು.

ಒಂದೆಡೆ ಸಮಾಜ ಸುಧಾರಕರೂ ಇನ್ನೊಂದೆಡೆ ನಿಷ್ಠಾವಂತ ಸಂಪ್ರದಾಯಸ್ಥರೂ ಹೌದು. 1970ರ ವೇಳೆ ದಲಿತರ ಕಾಲನಿಗಳಿಗೆ ಪಾದಯಾತ್ರೆ ನಡೆಸಿದ್ದು ಕ್ರಾಂತಿಕಾರಿ ಹೆಜ್ಜೆ. ಅದಕ್ಕೆ ಎಷ್ಟೇ ಟೀಕೆಗಳು ಬಂದರೂ ಜಗ್ಗದೆ ತಮ್ಮ ಸಾಮಾಜಿಕ ಬದ್ಧತೆಯನ್ನು ಇಳಿವಯಸ್ಸಿನಲ್ಲಿಯೂ ಮುಂದುವರಿಸಿದವರು. ಅದೇ ವೇಳೆ ಇದುವರೆಗೆ ಯಾರೂ ನಡೆಸದ 38 ಸುಧಾ ಮಂಗಲೋತ್ಸವಗಳನ್ನು ನಡೆಸಿದವರು. ಎಷ್ಟೇ ಪ್ರತಿಭಾವಂತ ವಿದ್ಯಾರ್ಥಿಯಾದರೂ ಆತ ಕೇಳಿದ ಎಲ್ಲ ಸಂಶಯಗಳಿಗೆ ಶಾಸ್ತ್ರೀಯ ಉತ್ತರ ಕೊಡುತ್ತಿದ್ದರು. ಬಸವಾದಿ ಶರಣರ, ಕನಕಪುರಂದರಾದಿ ದಾಸರ ವಿಚಾರಗಳನ್ನೂ ತಿಳಿದುಕೊಂಡಿದ್ದರು. ಗಾಂಧೀಜಿಯವರ ಅಹಿಂಸಾ ಮಾರ್ಗವನ್ನು ಸಾಧ್ಯವಾದಷ್ಟೂ ಅನುಸರಿಸುತ್ತಿದ್ದರು.

ದಲಿತರ ಕೇರಿಗಳಿಗೆ ಹೋಗಿ ವಿಚಾರವಾದಿಗಳಿಂದ ಟೀಕೆಗೆ ಗುರಿಯಾದರೆ, ಐದನೆಯ ಪರ್ಯಾಯದಲ್ಲಿ ಮುಸ್ಲಿಮರಿಗೆ ಈದ್‌ ಉಪಾಹಾರ ಕೂಟ ಏರ್ಪಡಿಸಿ ಕಟ್ಟಾ ಹಿಂದುತ್ವವಾದಿಗಳಿಂದ ಟೀಕೆಗೆ ಗುರಿಯಾದರು. “ಈದ್‌ ಉಪಾಹಾರದಂತಹ ಉಪಕ್ರಮಗಳಿಂದ ಗೋಹತ್ಯೆಯಂತಹ ಸಮಸ್ಯೆಗಳು ಕೊನೆಯಾದಾವು’ ಎಂಬುದು ಶ್ರೀಗಳ ದೂರಗಾಮಿ ಚಿಂತನೆಯಾಗಿತ್ತು.

ಎರಡು ತೀವ್ರವಾದ ವೈಚಾರಿಕ ಸಂಘರ್ಷ ಏರ್ಪಟ್ಟಾಗ ಅವ ರದ್ದು ಮಧ್ಯಮ ಮಾರ್ಗ. ಇದಕ್ಕೆ ಉತ್ತಮ ಉದಾಹರಣೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಎದ್ದ ಮಡ ಮಡೆಸ್ನಾನ. ಇದರ ಬದಲು ದೇವರ ನೈವೇದ್ಯವನ್ನು ಬಡಿಸಿ ಅದರ ಮೂಲಕ ಎಡೆ ಸ್ನಾನ ಮಾಡಬಹುದು ಎಂಬ ಸಲಹೆ ನೀಡಿದ್ದರು.

ಅವರನ್ನು ಸಮಾರಂಭಗಳಲ್ಲಿ ಎಷ್ಟೇ ಹೊಗಳಿದರೂ “ನಾನು ಏನೆಂದು ನನಗೆ ನಿಮಗಿಂತ ಹೆಚ್ಚಿಗೆ ಗೊತ್ತು. ನಾನು ಇನ್ನಷ್ಟು ಕೆಲಸಗಳನ್ನು ಮಾಡಬೇಕಾಗಿದೆ’ ಎಂದು ಹೇಳುತ್ತಿದ್ದುದು ಅವರ ಸಾಮಾಜಿಕ ಕಳಕಳಿಗೆ ಅತ್ಯುತ್ಕೃಷ್ಟ ಉದಾಹರಣೆ. ಕೀರ್ತಿ, ಪ್ರಸಿದ್ಧಿಗಳು ಯಾರು ಮಾಡಿದ್ದಾರೋ ಅವರಿಗೇ ಸಿಗಬೇಕೆಂಬ ಪ್ರಾಮಾಣಿಕತೆಯ ಸಂದೇಶವನ್ನು ನೀಡಿದ್ದರು. ಹಿಂದೆ ಶ್ರೀ ನಿತ್ಯಾನಂದ ಸ್ವಾಮಿಗಳು “ಪೇಜಾವರ ಶ್ರೀಗಳವರನ್ನು ದೇವದೂತ, ಕನಕದಾಸರು’ ಎಂದು ಬೇರೆಯವರ ಬಳಿ ಹೇಳಿದ್ದನ್ನು ಅವರ ಗಮನಕ್ಕೆ ತಂದಾಗ ಉಬ್ಬದೆ ಅದೆಲ್ಲ ನಮಗೆ ಗೊತ್ತಿಲ್ಲ. ನಾವು ಸಾಮಾನ್ಯರಲ್ಲಿ ಸಾಮಾನ್ಯ ಎಂಬ ವಿನಯವಂತಿಕೆ ತೋರಿದ್ದರು. ಯಾರೇ ಬಂದು ತಮಗೆ ಮಂತ್ರದೀಕ್ಷೆ ಕೊಡಬೇಕೆಂದಾಗ ಅದನ್ನು ಕೊಟ್ಟು ಅವರನ್ನು ಆಧ್ಯಾತ್ಮಿಕವಾಗಿ ಉದ್ಧರಿಸುವ ಕಾಳಜಿ ಅನ್ಯಾದೃಶವಾದುದು.

ತೀರಾ ಇತ್ತೀಚಿಗೆ ಪೇಜಾವರ ಮಠಕ್ಕೆ ಬಂದ ಯುವ ಸನ್ಯಾಸಿಯೊಬ್ಬರು ಎದ್ದು ನಿಂತು ಪೇಜಾವರ ಶ್ರೀಗಳಿಗೆ ಶಾಲು ಹೊದೆಸಿ ಗೌರವಿಸಿದಾಗ ಪೇಜಾವರ ಶ್ರೀಗಳೂ ಅವರಿಗೆ ಶಾಲು ಹೊದೆಸಿ ಗೌರವಿಸಿದರು. ಆದರೆ ಪೇಜಾವರ ಶ್ರೀಗಳಿಗೆ ಎದ್ದು ನಿಲ್ಲಲು ಆಗಲಿಲ್ಲ. ಆಗ ಸಂಕೋಚಪಟ್ಟು ವಯಸ್ಸಿನ ಕಾರಣ ನನಗೆ ಎದ್ದು ನಿಲ್ಲಲು ಆಗುತ್ತಿಲ್ಲ ಎಂದು ಯುವ ಮಠಾಧಿಪತಿಗೆ ತನ್ನ ಅಸಹಾಯಕತೆಯನ್ನು ತಿಳಿಸಿದ್ದರು. ಅವರ ಈ ಸೌಜನ್ಯಶೀಲಗುಣ, ವಿನಯವಂತಿಕೆ ಪೀಠಾಧೀಶರಿಗೆ, ಅಧಿಕಾರಸ್ಥರಿಗೆ ಆದರ್ಶಪ್ರಾಯವಾದುದು. ತಮಗೆ ಎಷ್ಟೇ ಕಷ್ಟಬಂದರೂ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣ, ಯಾರು ಎಷ್ಟೇ ತಪ್ಪು ಮಾಡಿದರೂ ತಮ್ಮ ತಪ್ಪನ್ನು ಒಪ್ಪಿಕೊಂಡಾಗ ಮನ್ನಿಸುವ ಕ್ಷಮಾಗುಣದಿಂದಲೇ ಅವರು ಇಷ್ಟು ಎತ್ತರಕ್ಕೆ ಏರಿದರು.

ಆದರ್ಶ ಗುಣಗಳ ಪ್ರತಿರೂಪದಂತಿದ್ದ, ವಿವಿಧ ಧರ್ಮ, ಪಂಥಗಳೊಂದಿಗೆ ಸೌಹಾರ್ದ ಸಂಬಂಧವನ್ನು ಇರಿಸಿಕೊಂಡು ಅವರಿಗೂ ಮಾರ್ಗದರ್ಶಕರಂತಿದ್ದರು ಶ್ರೀಗಳು. ಶ್ರೀಗಳ ಉತ್ತಮ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಕಲ್ಯಾಣದಲ್ಲಿ ತೊಡಗುವುದೇ ಅವರಿಗೆ ಸಲ್ಲಿಸಬಹುದಾದ ಗೌರವ.

ಮಣಿಪಾಲ ಸಮೂಹ ಸಂಸ್ಥೆ ಮತ್ತು ಶ್ರೀಗಳ ಮಧ್ಯೆ ಅತ್ಯುತ್ತಮ ಸಂಬಂಧವಿತ್ತು. ಅಂಥ ನಿಜವಾದ ಧರ್ಮಯೋಗಿ, ಕರ್ಮಯೋಗಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ.

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.