ರಸ್ತೆ ತಿರುವಿನಲ್ಲಿ ಬೆಳೆದ ಗಿಡ ಗಂಟಿಗಳು; ಅಪಾಯಕ್ಕೆ ಆಹ್ವಾನ
Team Udayavani, Nov 26, 2020, 3:13 AM IST
ಮಲ್ಪೆ: ಇಲ್ಲಿನ ಮೀನುಗಾರಿಕೆ ಬಂದರಿನ ಬಾಪುತೋಟ 3ನೇ ಹಂತದ ಬಂದರು ಪ್ರದೇಶದಲ್ಲಿ ರಸ್ತೆ ಉದ್ದಕ್ಕೂ ಗಿಡಗಂಟಿಗಳು ಬೆಳೆದು ನಿಂತಿದ್ದು ಸಮಸ್ಯೆಯಾಗಿದೆ. ರಸ್ತೆಯ ತಿರುವಿನಲ್ಲಿ ಸಂಚರಿಸುವ ವಾಹನಗಳಿಗೆ ಎದುರು ಬದಿಯಿಂದ ಬರುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸುತ್ತಿವೆ.
ಮಲ್ಪೆ ಮುಖ್ಯವೃತ್ತದಿಂದ 3ನೇ ಹಂತದ ಬಂದರು ಮತ್ತು ಪಡುಕರೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಪ್ರತಿನಿತ್ಯ ಸಾವಿರಾರು ಜನ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ರಸ್ತೆಯ ತಿರುವಿನಲ್ಲಿ ಗಿಡಗಳು ಬಹಳ ಎತ್ತರಕ್ಕೆ ಬೆಳೆದು ನಿಂತಿರುವುದರಿಂದ ಎದುರು ಬರುವ ವಾಹನಗಳು ಕಾಣಿಸುವುದಿಲ್ಲ. ಇನ್ನು ರಾತ್ರಿ ವೇಳೆ ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಇನ್ನೂ ದುಸ್ತರವಾಗಿದೆ. ಆದರೆ ಸಂಬಂಧಪಟ್ಟ ಇಲಾಖೆಯಾಗಲಿ, ಅಧಿಕಾರಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸ್ಲಿಪ್‌ವೇ ಸುತ್ತಲೂ ಪೊದೆಗಳು
4 ವರ್ಷಗಳ ಹಿಂದೆ ನಿರ್ಮಾಣ ಗೊಂಡಿದ್ದ, ಇಲ್ಲಿಯವರೆಗೂ ಉಪಯೋಗಕ್ಕೆ ಬಾರದೇ ಶಿಥಿಲಾವಸ್ಥೆಗೆ ತಲುಪಿದ ಸ್ಲಿಪ್‌ವೇ ಸುತ್ತಲೂ ಪೊದೆಗಳು ಆವರಿಸಿಕೊಂಡಿವೆ. ಬಿಸಿಲ ತಾಪಕ್ಕೆ ಇದೀಗ ಪೊದೆಗಳು ಕರಟಿ ಹೋಗುತ್ತಿದ್ದು ಯಾವುದೇ ಸಂದರ್ಭದಲ್ಲಿ ಬೆಂಕಿ ಬಿದ್ದಲ್ಲಿ ಕೋಟ್ಯಂತರ ರೂ. ವೆಚ್ಚದ ಯೋಜನೆಯೂ ಹಾನಿಗೀಡಾಗುವ ಸಾಧ್ಯತೆ ಇದೆ. ಕೂಡಲೇ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.
ತೆರವುಗೊಳಿಸಿ
ಮೀನುಗಾರಿಕೆ ಚಟುವಟಿಕೆಗೆ ಸಂಬಂಧಿಸಿದಂತೆ ಮತ್ತು ಪಡುಕರೆ ಬೀಚ್ ಕಡೆಗೆ ತೆರಳುವ ಪ್ರವಾಸಿಗರಿಂದಾಗಿ ಈ ರಸ್ತೆಯಲ್ಲಿ ನಿರಂತರ ವಾಹನಗಳು ಸಂಚರಿಸುತ್ತಿದ್ದು ಗಿಡಗಳು ಬೆಳೆದು ನಿಂತಿರುವುದರಿಂದ ಅಪಾಯದ ತಾಣವಾಗಿದೆ. ಕೂಡಲೇ ಇವುಗಳನ್ನು ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅನುವುಮಾಡಿಕೊಡಬೇಕಿದೆ.
-ಪ್ರದೀಪ್ ಟಿ. ಸುವರ್ಣ, ಸ್ಥಳೀಯ ಮೀನುಗಾರರು
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444