ಲೋಕ ಕಲ್ಯಾಣಾರ್ಥಕ್ಕಾಗಿ ಚಂಡಿಕಾ ದುರ್ಗಾಪರಮೇಶ್ವರಿ ದೇಗುಲದಲ್ಲಿ ಧನ್ವಂತರಿ ಜಪ
Team Udayavani, May 7, 2021, 12:16 PM IST
ತೆಕ್ಕಟ್ಟೆ : ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇಗುಲದಲ್ಲಿ ಶೃಂಗೇರಿ ಶ್ರೀ ಭಾರತೀ ತೀರ್ಥ ಮಾಹಾ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ, ದೇವಳದ ಆಡಳಿತ ಧರ್ಮದರ್ಶಿ ದೇವರಾಯ ಮಂಜುನಾಥ ಶೇರೆಗಾರ ಅವರ ಸಮ್ಮುಖದಲ್ಲಿ, ದೇವಳದ ಪ್ರಧಾನ ಅರ್ಚಕ ಅನಂತ ಪುರಾಣಿಕ್ ಅವರ ಮಾರ್ಗದರ್ಶನದಲ್ಲಿ ಲೋಕ ಕಲ್ಯಾಣಾರ್ಥಕ್ಕಾಗಿ ಲಕ್ಷ ಧನ್ವಂತರಿ ಜಪವು ಕೋವಿಡ್ ನಿಯಮಾನುಸಾರವಾಗಿ ಮೇ.7 ರಂದು ಚಾಲನೆ ನೀಡಲಾಯಿತು.
ದೇವಳ ಅರ್ಚಕ ವೃಂದದವರು ಸಹಕಾರದೊಂದಿಗೆ ನವಾಕ್ಷರಿ ಜಪ, ಗಾಯತ್ರಿ ಜಪ ಹಾಗೂ ಶ್ರೀ ಸೂಕ್ತಪಾರಾಯಣ ಹಾಗೂ ಧನ್ವಂತರಿ ಯಾಗಗಳು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಲೋಕ ಕಲ್ಯಾಣರ್ಥಕ್ಕಾಗಿ ನಿರಂತರವಾಗಿ ನಡೆಯಲಿದೆ.
ಕೋವಿಡ್ ನಿಂದ ಜನರು ಬಳಲುತ್ತಿದ್ದು, ಜನರಿಗೆ ಬಂದಿರುವ ಆಪತ್ತನ್ನು ನಿವಾರಣೆ ಮಾಡುವಂತೆ ದೇವರಲ್ಲಿ ಬೇಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ರಾಜಶೇಖರ ಹೆಗ್ಡೆ, ಮೋಹನ್‌ದಾಸ್ ಶೇರೆಗಾರ್, ಗಂಗಾಧರ ಹೊಸ್ಮನೆ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.