Udayavni Special

ಉಡುಪಿ : ಈ ಶಿಕ್ಷಕಿಯ ಶವ ಸಂಸ್ಕಾರಕ್ಕೆ ಬಾರದ ಸಂಬಂಧಿಗಳು


Team Udayavani, May 11, 2021, 1:40 PM IST

trewq

ಉಡುಪಿ : ಇಲ್ಲಿನ ಕುಕ್ಕಿಕಟ್ಟೆ ವಿದ್ಯಾರ್ಥಿ ನಿಲಯದ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಸರೋಜ ಎಂಬುವವರು ಅನಾರೋಗ್ಯದಿಂದ ಸಾವನ್ನಪ್ಪಿದ್ದು,  ಅಂತ್ಯ ಸಂಸ್ಕಾರಕ್ಕೆ ಇವರ ಸಂಬಂಧಿಗಳು ಯಾರಾದರು ಇದ್ದರೆ ಬರುವಂತೆ ಯುವ ಮುಖಂಡ ಅಮೃತ್ ಶೆಣೈ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಫೇಸ್ ಬುಕ್ ನಲ್ಲಿ ಬರೆದುಕೊಂಡಿರು ಅಮೃತ್, ಸರೋಜ‌, ಪ್ರಸ್ತುತ ಉಡುಪಿ ಕುಕ್ಕಿಕಟ್ಟೆ ವಿದ್ಯಾರ್ಥಿನಿ ನಿಲಯದ ಉದ್ಯೋಗಿಯಾಗಿದ್ದರು. ನನಗೆ ದಶಕಗಳ ಪರಿಚಯ , ಒಳಕಾಡು ಶಾಲೆಯಲ್ಲಿ ಅಂಗನವಾಡಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ತನಗೆ ಹಿಂದೆ ಮುಂದೆ ಯಾರೂ ಇಲ್ಲ ವೃದ್ದಾಪ್ಯದಲ್ಲಿ ನನಗೆ ನೀವೇ ಒಂದು ಸಣ್ಣ ಮನೆ ಮಾಡಿಕೊಡಬೇಕು ಎಂದಿದ್ದರು.

ನಾನು, ಸ್ವಲ್ಪ ವರ್ಷ ಹೋಗಲಿ ಏನಾದರೂ ವ್ಯವಸ್ಥೆ ಮಾಡೋಣ ಅನ್ನುತ್ತಿದ್ದೆ.  ನಿವೇಶನ‌ರಹಿತರಿಗೆ ನಿವೇಶನ ನೀಡುವ ಸರಕಾರದ ಯೋಜನೆಯಲ್ಲಿ‌ ಇವರ ಹೆಸರಿನಲ್ಲಿ ಅರ್ಜಿ‌‌ ಹಾಕಿ ತುಂಬಾ ಪ್ರಯತ್ನ ‌ಮಾಡಿದರೂ ಕೊನೆ ಕ್ಷಣದಲ್ಲಿ ತಾಂತ್ರಿಕ ‌ಕಾರಣಗಳಿಂದ ಅಸಾಧ್ಯವಾಯಿತು.

ಕೆಲವು ದಿನಗಳ‌ ಹಿಂದೆ ನನಗೆ ಕರೆ ಮಾಡಿ ತನಗೆ ಸೌಖ್ಯ ಇಲ್ಲಾ , ಡಾಕ್ಟರ್ ‌ಮದ್ದು ಕೊಟ್ಟಿದ್ದಾರೆ ಅಂದಿದ್ದರು ಎರಡು‌ ದಿನಗಳ‌ ಬಳಿಕ‌ ನನಗೆ ಮತ್ತೆ ಕರೆ ಮಾಡಿ ನಿಮ್ಮ ಆರೋಗ್ಯದ ಬಗ್ಗೆ ತಿಳಿಸಿ ಅಂದಿದ್ದೆ. ಸಾಮಾನ್ಯವಾಗಿ ಅವರು ‌ಆರೋಗ್ಯವಾಗಿ‌ ಇರುತ್ತಿದ್ದ‌ ಕಾರಣಕ್ಕೆ ನಾನು ಜಾಸ್ತಿ‌ತಲೆ ಕೆಡಿಸಿಕೊಳ್ಳಲಿಲ್ಲ.

ಇಂದು ಇವರು ನಿಧನರಾಗಿದ್ದಾರೆ. ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇವರ ಶವವನ್ನು ಇಡಲಾಗುವುದು.  ಸಂಪರ್ಕಕ್ಕೆ ಸಿಕ್ಕಿದ ಇವರ ಸಹೋದರಿ‌ ಓರ್ವರು ಕಾರಣಾಂತಗಳಿಂದ ತನಗೆ ಬರಲಾಗುವುದಿಲ್ಲ ಹಾಗೂ ಯಾವುದೇ ಜವಾಬ್ದಾರಿ ವಹಿಸಲಾಗುವುದಿಲ್ಲ ಅಂದಿದ್ದಾರೆ.

ಇನ್ನು ಯಾರಾದರೂ ಸಂಬಂಧಿಗಳಿದ್ದರೆ ದಯವಿಟ್ಟು ಸಂಪರ್ಕಿಸಿ, ಇಲ್ಲವಾದರೆ ಸಮಾಜ‌ಸೇವಕ ಅನ್ಸರ್ ಅಹಮ್ಮದ್ ಅವರ ತಂಡ ಸರಕಾರಿ‌ ನಿಯಮಾವಳಿಗಳ‌ ಪ್ರಕಾರ ಶವ ಸಂಸ್ಕಾರ ಮಾಡಲಿರುವರು. ಇವರ ಸಾವು ವೈಯಕ್ತಿಕ ವಾಗಿ ನನಗೆ ಅತೀವ ಬೇಸರ ಉಂಟು‌ ಮಾಡಿದೆ. ನನ್ನನ್ನು ತುಂಬಾ ಅಭಿಮಾನದಿಂದ ಕಾಣುತ್ತಿದ್ದ ಇವರು , ನಾನು ಕರೆದಾಗಲೆಲ್ಲಾ ನನಗೂ‌ ಸಣ್ಣ ಪುಟ್ಟ ಸಹಾಯ ಮಾಡುತ್ತಾ ಇದ್ದರು‌. ಸರೋಜಾ‌ ಟೀಚರ್ ಗೆ ಭಾವ ಪೂರ್ಣ  ಶ್ರದ್ದಾಂಜಲಿ ಎಂದು ಅಮೃತ್ ಬರೆದುಕೊಂಡಿದ್ದಾರೆ.  ‌

ಟಾಪ್ ನ್ಯೂಸ್

Untitled-1

ಒಬಿಸಿ ಪಟ್ಟಿ: ರಾಜ್ಯಗಳಿಗೆ ಅಧಿಕಾರ?

Untitled-1

ನಿಯಮ ಪಾಲಿಸದ ಕೇರಳ

2023ಕ್ಕೆ ಮಂದಿರ ಲೋಕಾರ್ಪಣೆ

2023ಕ್ಕೆ ಮಂದಿರ ಲೋಕಾರ್ಪಣೆ

ಸಂಪುಟದಿಂದ  ಹೊರಬಿದ್ದವರು..

ಸಂಪುಟದಿಂದ  ಹೊರಬಿದ್ದವರು..

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆ

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆ

ಮೊದಲ ಬಾರಿ ಸಚಿವರಾದವರು

ಮೊದಲ ಬಾರಿ ಸಚಿವರಾದವರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ರಾಮಾಭಿವೃದ್ಧಿ ಖಾತೆ ಇಷ್ಟ: ಕೋಟ ಶ್ರೀನಿವಾಸ ಪೂಜಾರಿ

ಗ್ರಾಮಾಭಿವೃದ್ಧಿ ಖಾತೆ ಇಷ್ಟ: ಕೋಟ ಶ್ರೀನಿವಾಸ ಪೂಜಾರಿ

ವರ್ಷದಿಂದ ಉದ್ಘಾಟನೆಯಾಗದೆ ಉಳಿದ ಇ-ಗ್ರಂಥಾಲಯ

ವರ್ಷದಿಂದ ಉದ್ಘಾಟನೆಯಾಗದೆ ಉಳಿದ ಇ-ಗ್ರಂಥಾಲಯ

ಉಡುಪಿ : ಆ. 16 ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ : ಜಿಲ್ಲಾಧಿಕಾರಿ ಜಿ.ಜಗದೀಶ್  ಆದೇಶ 

ಉಡುಪಿ : ಆ. 16 ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ : ಜಿಲ್ಲಾಧಿಕಾರಿ ಜಿ.ಜಗದೀಶ್  ಆದೇಶ 

ಕೋವಿಡ್‌ ಪಾಸಿಟಿವ್‌ ಬಂದವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ : ಜಿ.ಜಗದೀಶ್‌ ಆದೇಶ

ಕೋವಿಡ್‌ ಪಾಸಿಟಿವ್‌ ಬಂದವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ : ಜಿ.ಜಗದೀಶ್‌ ಆದೇಶ

ಉಡುಪಿ : ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡ ಪ್ರೊಫೆಸ್ಸರ್

ಉಡುಪಿ : ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡ ಪ್ರೊಫೆಸರ್

MUST WATCH

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

ಹೊಸ ಸೇರ್ಪಡೆ

Untitled-1

ಒಬಿಸಿ ಪಟ್ಟಿ: ರಾಜ್ಯಗಳಿಗೆ ಅಧಿಕಾರ?

ಗ್ರಾಮಾಭಿವೃದ್ಧಿ ಖಾತೆ ಇಷ್ಟ: ಕೋಟ ಶ್ರೀನಿವಾಸ ಪೂಜಾರಿ

ಗ್ರಾಮಾಭಿವೃದ್ಧಿ ಖಾತೆ ಇಷ್ಟ: ಕೋಟ ಶ್ರೀನಿವಾಸ ಪೂಜಾರಿ

ಕಾಸರಗೋಡು : ವಾರಾಂತ್ಯ ಲಾಕ್‌ಡೌನ್‌ ಒಂದೇ ದಿನ

ಕಾಸರಗೋಡು : ವಾರಾಂತ್ಯ ಲಾಕ್‌ಡೌನ್‌ ಒಂದೇ ದಿನ

Untitled-1

ನಿಯಮ ಪಾಲಿಸದ ಕೇರಳ

2023ಕ್ಕೆ ಮಂದಿರ ಲೋಕಾರ್ಪಣೆ

2023ಕ್ಕೆ ಮಂದಿರ ಲೋಕಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.