ನಿವೃತ್ತ ಎಎಸ್‌ಐ ತಿಮ್ಮಪ್ಪ ಗೌಡ ನಿಧನ
Team Udayavani, May 5, 2021, 3:23 PM IST
ಉಡುಪಿ : ಅಂಬಾಗಿಲು ನಿವಾಸಿ, ಡಿವೈಎಸ್‌ಪಿ ಕಚೇರಿಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ತಿಮ್ಮಪ್ಪ ಗೌಡ (66) ಅವರು ಮೇ 4ರಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಕಾಪು ಠಾಣೆಯ ಕಾನ್‌ಸ್ಟೆಬಲ್ ಮೋಹನ್ ಚಂದ್ರ ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ. ಅವರು ಮಣಿಪಾಲ, ಬೈಂದೂರು, ಶಿರ್ವ, ಮಲ್ಪೆ, ಮಂಗಳೂರಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.